ಅಸೌಖ್ಯ: ನಿಧನ

ಪೆರ್ಲ: ಸ್ವರ್ಗ ಕೊಡೆಂಕೀರಿ ನಿವಾಸಿ ನಾರಾಯಣ (೫೨) ನಿಧನ ಹೊಂದಿದರು. ಅಸೌಖ್ಯ ತಗಲಿ ಕಳೆದ ನಾಲ್ಕು ತಿಂಗಳಿಂದ ಕಾಸರಗೋಡು ಹಾಗೂ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ನಿನ್ನೆ ಮನೆಯಲ್ಲಿ ನಿಧನ ಸಂಭವಿಸಿದೆ. ಕೂಲಿ ಕಾರ್ಮಿಕನಾಗಿದ್ದರು. ಮೃತರು ಪತ್ನಿ ಸುಮಿತ್ರ, ಮಕ್ಕಳಾದ ಮಮತ, ಮಹೇಶ್, ಚೈತ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲೇ ಸುವೇಂದು ಅಧಿಕಾರಿಯ ಹತ್ಯೆಗೆ ಸ್ಕೆಚ್: ಯತ್ನ ವಿಫಲಗೊಂಡಾಗ ಗುಂಡಿಕ್ಕಿ ಆಪ್ತನ ಕೊಲೆ

ಕೊಲ್ಕತ್ತ: ಪಶ್ಚಿಮಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಂದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಯಾನಕ ರಕ್ತಪಾತದ ಅಧ್ಯಾಯ ಆರಂಭಗೊಂಡಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವ ಈ ಸಮಯದಲ್ಲಿ, ಶನಿವಾರದಂದು ಪಶ್ಚಿಮಬಂಗಾಳದ ಹೊಸ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸುವ ಮೊದಲೇ ಅವರನ್ನು ಹತ್ಯೆಗೈಯ್ಯಲು ದಾಳಿಕೋರರು ಸ್ಕೆಚ್ ಹಾಕಿದ್ದು ಅದು ವಿಫಲಗೊಂಡಾಗ ಅವರ ಆಪ್ತನನ್ನೇ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಈ ಘಟನೆ ರಾಜ್ಯದ ರಾಜಕೀಯ ವಾತಾವರಣವನ್ನು ಇನ್ನಷ್ಟು ಕದಡಿಸುವಂತೆ ಮಾಡಿದೆ. ನಿಯುಕ್ತ ಮುಖ್ಯಮಂತ್ರಿ ಸುವೇಂದು ಅಧಿಕಾರಿಯ ಆಪ್ತ …

ಮುಖ್ಯಮಂತ್ರಿಯ ಆಯ್ಕೆ: ಘಟಕಪಕ್ಷ ನೇತಾರರೊಂದಿಗೂ ಚರ್ಚೆಗೆ ಎಐಸಿಸಿ ನಿರೀಕ್ಷಕರು

ತಿರುವನಂತಪುರ: ಮುಖ್ಯಮಂತ್ರಿ ಯನ್ನು ನಿರ್ಣಯಿಸಲಿರುವ ಕ್ರಮದಂಗವಾಗಿ ರಾಜ್ಯಕ್ಕೆ ಆಗಮಿಸಿದ ಎಐಸಿಸಿ ನಿರೀಕ್ಷಕರು ಕಾಂಗ್ರೆಸ್‌ನ ಹಿರಿಯ ನೇತಾರರರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಕೆ. ಸುಧಾಕರನ್, ವಿ.ಎಂ. ಸುಧೀರನ್, ಕೊಡಿಕುನ್ನಿಲ್ ಸುರೇಶ್ ಸಹಿತ ಪ್ರಮುಖ ನೇತಾರರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ.  ಇನ್ನಷ್ಟು ನೇತಾರರನ್ನು ತಿರುವನಂತಪುರಕ್ಕೆ ಕರೆಸಲಾಗಿದೆ.  ಇದೇ ವೇಳೆ ಯುಡಿಎಫ್‌ನ ಘಟಕ ಪಕ್ಷಗಳ ನೇತಾರರೊಂದಿಗೂ ಅಭಿಪ್ರಾ ಯ ಕೇಳಲು  ಎಐಸಿಸಿ ನಿರೀಕ್ಷಕರು ತೀರ್ಮಾನಿಸಿದ್ದಾರೆ. ಇಂದು ಸಂಜೆ 4.30ಕ್ಕೆ  ಘಟಕ ಪಕ್ಷಗಳ ನೇತಾರ ರೊಂದಿಗೆ ಚರ್ಚೆ ನಡೆಯಲಿದೆ. ಇದಕ್ಕಾಗಿ ಲೀಗ್ ನೇತಾರರ ಸಹಿತ …

ಪಳ್ಳತ್ತಡ್ಕದ ವ್ಯಾಪಾರಿ ನಿಧನ

ಬದಿಯಡ್ಕ: ಪಳ್ಳತ್ತಡ್ಕದಲ್ಲಿ ಹಲವು ವರ್ಷಗಳಿಂದ ವ್ಯಾಪಾರಿ ಯಾಗಿರುವ ಅಬ್ದುಲ್ ಶರೀಫ್ (54) ನಿಧನ ಹೊಂದಿದರು. ಅಸೌಖ್ಯ ತಗಲಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇಂದು ಮುಂಜಾನೆ ನಿಧನ ಸಂಭವಿಸಿದೆ. ದಿ| ಕುಂಞಾಲಿಯವರ ಪುತ್ರನಾಗಿರುವ ಇವರು ಅವಿವಾಹಿತನಾಗಿದ್ದಾರೆ. ಮೃತರು ತಾಯಿ ಆಯಿಷಾ, ಸಹೋದರ ಬಶೀರ್, ಸಹೋ ದರಿಯರಾದ ಫೌಸಿಯಾ, ಸುಬೈದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕ್ಲಿನಿಕ್‌ಗೆ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ-ದೂರು

ಕುಂಬಳೆ: ಡೆಂಟಲ್ ಕ್ಲಿನಿಕ್‌ನಲ್ಲಿ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಇಚ್ಲಂಪಾಡಿ ಕೊಡ್ಯಮ್ಮೆ ಕೋಟೆಕಾರ್‌ನ ವಂದನ (21) ಎಂಬಾಕೆ ನಾಪತ್ತೆಯಾಗಿದ್ದಾ ಳೆನ್ನಲಾಗಿದೆ. ಈ ಬಗ್ಗೆ ಸಹೋದರ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 7.45ರ ವೇಳೆ ಎಂದಿನಂತೆ ಕಾಸರಗೋಡು ಅಣಂಗೂರಿನ ಡೆಂಟಲ್ ಕ್ಲಿನಿಕ್‌ಗೆ ವಂದನ ಕೆಲಸಕ್ಕೆಂದು  ತಿಳಿಸಿ ಹೋಗಿದ್ದು, ಅನಂತರ ಮರಳಿ ಬಂದಿಲ್ಲವೆಂದು ಸಹೋದರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮರಳಿ ಬರುವಳೆಂದು ಭಾವಿಸಿ ದೂರು ನೀಡಲು ತಡ ಮಾಡಿರುವು ದಾಗಿಯೂ …

ಬೀಗ ಜಡಿದ ಮನೆಯಿಂದ ಐದೂವರೆ ಪವನ್ ಚಿನ್ನಾಭರಣ, 40 ಸಾವಿರ ರೂ. ಕಳವು: ತನಿಖೆ ಆರಂಭ

ಹೊಸದುರ್ಗ: ಬೀಗ ಜಡಿದ ಮನೆಗೆ ನುಗ್ಗಿದ ಕಳ್ಳರು ಐದೂವರೆ ಪವನ್ ಚಿನ್ನಾಭರಣ ಹಾಗೂ 4೦,೦೦೦ ರೂಪಾಯಿಗಳನ್ನು ದೋಚಿದ ಘಟನೆಗೆ ಸಂಬಂಧಿಸಿ ನೀಲೇಶ್ವರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.   ಕರಿಂದಳ ಕಾಲಿಚ್ಚಾಮರ ಮೀರ್ಕಾನಂತಟ್ಟ್‌ನ ಕೃಷಿಕ ಇರಟ್ಟ ಮುಂಡಕ್ಕಲ್ ಜೋರ್ಜ್ ಸೆಬಾಸ್ಟಿಯನ್ ಎಂಬವರ ಮನೆಯಿಂದ ನಗ-ನಗದು ಕಳವಿಗೀಡಾಗಿದೆ.  ಸೋಮವಾರ ಸಂಜೆ ೪ರಿಂದ ಮಂಗಳವಾರ ಬೆಳಿಗ್ಗೆ ೬.೩೦ರ ಮಧ್ಯೆ ಕಳವು ನಡೆದಿರು ವುದಾಗಿ ಸಂಶಯಿಸಲಾಗುತ್ತಿದೆ. ಮನೆಯವರು ಬಾಗಿಲು ಮುಚ್ಚಿ ಮಗಳ ಚಿಕಿತ್ಸೆಗಾಗಿ ಆಲುವಾದ ಆಸ್ಪತ್ರೆಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ  ಮನೆಯ ಬಾಗಿಲು ತೆರೆದಿಟ್ಟಿರುವುದನ್ನು …

ಐಕ್ಯರಂಗದ ಇತಿಹಾಸ ಜಯ ಯಾರದ್ದೇ ಸಾಧನೆಯಿಂದ ಲಭಿಸಿದುದಲ್ಲ- ಸುಕುಮಾರನ್ ನಾಯರ್

ಕೋಟ್ಟಯಂ: ಕೇರಳದಲ್ಲಿ ಐಕ್ಯರಂಗಕ್ಕೆ ಲಭಿಸಿದ ಇತಿಹಾಸ ಜಯ ಕೆಲವರ ಸಾಧನೆಯಿಂದ ಲಭಿಸಿದುದಲ್ಲವೆಂದು ಎನ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಜಿ. ಸುಕುಮಾರನ್ ನಾಯರ್ ನುಡಿದರು. ಪಿಣರಾಯಿ ವಿಜಯನ್‌ರ ಆಡಳಿತದಲ್ಲಿ ಜನರು ನಿರಾಶೆಹೊಂದಿ ಬದಲಾವಣೆಗೆ ಬೇಕಾಗಿ ಮತದಾನ ಮಾಡಿದ ಕಾರಣ ಇದು ಸಂಭವಿಸಿದೆ ಎಂದು ಅವರು ನುಡಿದರು. ಜನರಿಗೆ ಸರಕಾರದೊಂದಿಗಿರುವ ಪ್ರತಿಭಟನೆ ಐಕ್ಯರಂಗಕ್ಕೆ ಅನುಕೂಲಕರವಾಗಿ ಪ್ರತಿಫಲಿಸಿತು ಎಂದು ಅವರು ಎನ್‌ಎಸ್‌ಎಸ್ ಕೇಂದ್ರ ಕಚೇರಿ ಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು. ಯುಡಿಎಫ್ ಯಾರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದರೂ ಎನ್‌ಎಸ್‌ಎಸ್‌ಗೆ ತೊಂದರೆಯಿಲ್ಲ ಎಂದು ಅವರು ನುಡಿದರು. …

ಬೀದಿನಾಯಿಗಳ ಕಾಟ: ಉಪ್ಪಳ, ಹೊಸಂಗಡಿ ಪ್ರದೇಶದಲ್ಲಿ ಸಂಚಾರಕ್ಕೆ ಆತಂಕ

ಉಪ್ಪಳ: ವಿವಿಧ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ವ್ಯಾಪಕ ಗೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನುoಟುಮಾಡಿದೆ. ಮಂಗಲ್ಪಾಡಿ, ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಸವಾರಿ ನಡೆಸುತ್ತಿರುವ ಬೀದಿ ನಾಯಿಗಳ ಹಿಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹೊಸಂಗಡಿ, ಉಪ್ಪಳ ಪೇಟೆ ಸಹಿತ ಒಳ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ವ್ಯಾಪಕ ಗೊಂಡಿರುವುದಾಗಿ ದೂರಲಾಗಿದೆ.ಪ್ರತಾಪನಗರದ ಶಿವಶಕ್ತಿ ಮೈದಾನ ಹಾಗೂ ಪರಿಸರ ಪ್ರದೇಶದಲ್ಲಿ ರಾತ್ರಿ ಹಗಲೆನ್ನದೆ 10ರಷ್ಟು ನಾಯಿಗಳು ನಿರಂತರವಾಗಿ ಈ ಪರಿಸರದ ಗಣೇಶ ಮಂದಿರ, ಗಾಯತ್ರಿ ಮಂದಿರ, ಗುಳಿಗ ಬನ ಪರಿಸರದಲ್ಲಿ …

ಅಲ್ಲಲ್ಲಿ ಗುಡುಗು ಸಹಿತ ಮಿಂಚು: ಮೇ 10ರವರೆಗೆ: ಜಾಗ್ರತೆ ಪಾಲಿಸಲು ಕರೆ

ಕಾಸರಗೋಡು: ರಾಜ್ಯದ ಕೆಲವು ಕಡೆಗಳಲ್ಲಿ ಮೇ 10ರವರೆಗೆ ಮಿಂಚು ಸಹಿತದ ಮಳೆ ಹಾಗೂ ಗಂಟೆಗೆ 4೦ರಿಂದ 5೦ ಕಿಲೋ ಮೀಟರ್ ವೇಗದಲ್ಲಿ ಗಾಳಿಗೂ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಜನರು ಜಾಗ್ರತೆ ವಹಿಸಲು ಕರೆ ನೀಡಲಾಗಿದೆ. ಮಿಂಚು ಅಪಾಯಕರವಾಗಿದೆ. ಮನುಷ್ಯರಿಗೆ ಹಾಗೂ ಮೃಗಗಳಿಗೆ ಜೀವ ಹಾಗೂ ವಿದ್ಯುತ್ ವ್ಯವಸ್ಥೆಗಳನ್ನು ಹಾನಿಗೊಳಿಸಲಿರುವ ಸಾಧ್ಯತೆಯು ಇದ್ದು ನಾಶನಷ್ಟ ಸಂಭವಿಸಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ತೀವ್ರ ಗಾಳಿ ಹಾಗೂ ಮಿಂಚಿಗೆ ಸಾಧ್ಯತೆ ಇರುವ …

ಸುಲೋಚನ  ನಿಧನ

ಪಾವೂರು: ಮುಡಿಮಾರು ಕಾಂಜರ ಮನೆತನದ ದಿ| ಶೇಷಪ್ಪ ಪೂಜಾರಿಯವರ ಪತ್ನಿ ಸುಲೋಚನ (62) ನಿಧನ ಹೊಂದಿದರು. ಮೃತರು ಮಕ್ಕಳಾದ ಹರೀಶ್, ಬಬಿತ, ಅಮಿತ, ಅಳಿಯಂದಿರಾದ ದಿನೇಶ್ ಕೋಡಿಕಲ್, ದಿನೇಶ್ ಕಾವೂರು, ಸಹೋದರ ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಜಿಲ್ಲಾ ಸಮಿತಿ ಅಧ್ಯಕ್ಷ ಕೃಷ್ಣ ಶಿವಕೃಪ, ಮುಡಿಮಾರು ಶ್ರೀ ಮಲರಾಯ ದೈವಸ್ಥಾನದ ಅರ್ಚಕ ಚಂದ್ರಹಾಸ ಪೂಜಾರಿ, ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಯತಿರಾಜ್ ಶೆಟ್ಟಿ, ವರ್ಕಾಡಿ ಪಂ. ಸದಸ್ಯ …