ಕೆ.ಎಸ್.ಆರ್.ಟಿ.ಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಉದ್ಘಾಟಿಸಿದ ಮುಖ್ಯಮಂತ್ರಿ: ಕಾಸರಗೋಡು ಜಿಲ್ಲೆಯಲ್ಲಿ 135 ಪ್ರಿಯದರ್ಶಿನಿ ಬಸ್‌ಗಳು

ತಿರುವನಂತಪುರ: ಯುಡಿಎಫ್ ಸರಕಾರದ ಮಹತ್ತರ ಯೋಜನೆಗಳ ಲ್ಲೊಂದಾಗಿರುವ ಕೆಎಸ್‌ಆರ್‌ಟಿಸಿಯ ಆರ್ಡಿನರಿ ಬಸ್‌ಗಳಲ್ಲಿ  ಪ್ರಿಯದರ್ಶಿನಿ ಎಂಬ ನಾಮಧೇಯದಲ್ಲಿ ಮಹಿಳೆಯ ರಿಗಾಗಿರುವ ಉಚಿತ ಪ್ರಯಾಣಕ್ಕೆ  ಇಂದು ಬೆಳಿಗ್ಗೆ ಚಾಲನೆ ನೀಡಿದೆ. ತಿರುವನಂತಪುರದ ತಂಬಾನೂರು ಟರ್ಮಿನಲ್ಲಿ ಇಂದು ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಇಬ್ಬರು ಮಹಿಳೆಯರಿಗೆ ಉಚಿತ ಪ್ರಯಾಣದ ಮೊದಲ ಜೀರೋ ಟಿಕೆಟ್‌ಗಳನ್ನು ನೀಡುವ ಮೂಲಕ  ಈ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಿದರು. ಸಾರಿಗೆ ಸಚಿವ ಸಿ.ಪಿ. ಜೋನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಂಬಾನ್ನೂರಿನಿಂದ ಮೊದಲು ಉಚಿತ ಸೇವೆ …

ಮಂಜೇಶ್ವರದಿಂದ ನಾಪತ್ತೆಯಾಗಿದ್ದ ಮದ್ರಸ ವಿದ್ಯಾರ್ಥಿಗಳಾದ ಇಬ್ಬರು ಬೆಂಗಳೂರಲ್ಲಿ ಪತ್ತೆ: ಹಾಸ್ಟೆಲ್‌ಗಳಿಂದ ನಾಪತ್ತೆಯಾದ ಇಬ್ಬರು ಹೆಣ್ಣು ಮಕ್ಕಳು ಸಂಬಂಧಿಕರ ಮನೆಗೆ ವಾಪಸು

ಕಾಸರಗೋಡು: ಎರಡು ವಿಭಿನ್ನ ಪ್ರಕರಣಗಳಲ್ಲಿ ಮಂಜೇಶ್ವರದಿಂದ ನಾಪತ್ತೆಯಾದ ಇಬ್ಬರು ಬಾಲಕಿಯರು ಸಹಿತ ನಾಲ್ಕು ಮಂದಿ ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ.  ಗಂಡು ಮಕ್ಕಳನ್ನು ಬೆಂಗಳೂರಿನಿಂದ ಪತ್ತೆಹಚ್ಚಿದ್ದರೆ, ಇಬ್ಬರು ಹೆಣ್ಮಕ್ಕಳು ಸುರಕ್ಷಿತರಾಗಿ ಕಾಸರಗೋಡಿನ ಸಂಬಂಧಿಕರ ಮನೆಗೆ ಹಿಂತಿರುಗಿದ್ದಾರೆ. ಕುಂಜತ್ತೂರು, ಸ್ವಾಗತ್ ಹೋಟೆಲ್‌ನ ಸಮೀಪದ 13, 14 ವರ್ಷ ಪ್ರಾಯದ ಮದ್ರಸ ವಿದ್ಯಾರ್ಥಿಗಳಾದ ಇಬ್ಬರು ಗಂಡು ಮಕ್ಕಳು ಶನಿವಾರ ಸಂಜೆ 5.30ರ ವೇಳೆ ಮನೆಯಿಂದ ನಾಪತ್ತೆಯಾಗಿದ್ದರು. ಸಂಬಂಧಿಕರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಕೇರಳ- ಕರ್ನಾಟಕದಲ್ಲಿ ಹುಡುಕಾಟ ನಡೆಸುತ್ತಿದ್ದ ಮಧ್ಯೆ …

ಯುವತಿಯನ್ನು ವಸತಿಗೃಹಕ್ಕೆ ಕರೆದೊಯ್ದು ಕಟ್ಟಿಹಾಕಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು: ಪ್ರಕರಣ ದಾಖಲು

ಕಾಸರಗೋಡು: ಪರಿಚಯ ಹೊಂದಿರುವ ಯುವತಿಯನ್ನು ನಗರದ ವಸತಿಗೃಹವೊಂದಕ್ಕೆ ಕರೆದೊಯ್ದು ಕಟ್ಟಿಹಾಕಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಯುವತಿಯೋರ್ವೆ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಯುವಕನೋರ್ವನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೊನ್ನೆ ಸಂಜೆ ಈ ಘಟನೆ ನಡೆದಿದೆ. ದೂರು ನೀಡಿದ ಯವತಿ ನಗರಕ್ಕೆ ಸಮೀಪದ  ಪಂಚಾಯತ್ ಒಂದರ  ವ್ಯಾಪ್ತಿಗೊಳಪಟ್ಟ ಪ್ರದೇಶವೊಂದರ ನಿವಾಸಿಯಾಗಿದ್ದಾಳೆ. ಆದರೆ ತನಿಖೆಯ ಅಂಗವಾಗಿ ಪೊಲೀಸರು  ಆರೋಪಿಯ ಹೆಸರನ್ನು ಈ ತನಕ ಬಹಿರಂಗಪಡಿಸಿಲ್ಲ. ನಗರಕ್ಕೆ ಬಂದಿದ್ದ ಯುವತಿಯನ್ನು ಕುಟುಂಬ ವಿಷಯದ ಬಗ್ಗೆ …

ಮದ್ರಸ ವಿದ್ಯಾರ್ಥಿಯನ್ನು ದೌರ್ಜನ್ಯಗೈದ ಅಧ್ಯಾಪಕ, ಹಿರಿಯ ವಿದ್ಯಾರ್ಥಿ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: 14 ವರ್ಷದ ಬಾಲಕನಿಗೆ ಸಲಿಂಗರತಿ ದೌರ್ಜ ನ್ಯಗೈದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಬಾಲಕ ಕಲಿಯುತ್ತಿರುವ  ಮದ್ರಸ ಅಧ್ಯಾಪಕನಾದ ಮುಹಮ್ಮದ್ ಎಂಬಾತನ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. 2024ರಿಂದ 2026ರ ವರೆಗಿನ ಸಮಯದಲ್ಲಿ ಹಲವು ಬಾರಿ ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮದ್ರಸ ಅಧ್ಯಾಪಕನ ದೌರ್ಜ ನ್ಯಕ್ಕೆ ತುತ್ತಾದ 14ರ ಹರೆಯದ ಬಾಲಕನ ದೂರಿನಂತೆ ಇನ್ನೊಂದು ಪೋಕ್ಸೋ ಕೇಸು ಬೇಕಲ ಪೊಲೀ ಸರು ನೋಂದಾಯಿಸಿದ್ದಾರೆ. 2024 ರಿಂದ ಹಲವು ಬಾರಿ …

ಗುದದ್ವಾರದಲ್ಲಿರಿಸಿ ಸಾಗಿಸುತ್ತಿದ್ದ 1.87 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ: ಕುಂಬಳೆ ನಿವಾಸಿಗೆ ನ್ಯಾಯಾಂಗ ಬಂಧನ ; ಬಂಧಿತ ಸೈಬರ್ ವಂಚನೆ ಪ್ರಕರಣದಲ್ಲೂ ಆರೋಪಿ

ಕುಂಬಳೆ: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 1.87 ಕೋಟಿ ರೂ. ಮೌಲ್ಯದ 1281.7 ಗ್ರಾಂ ಚಿನ್ನ ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಂಬಳೆ ನಿವಾಸಿ ಅಬ್ದುಲ್ ರಶೀದ್ (24) ಎಂಬಾತನನ್ನು ಕಸ್ಟಮ್ಸ್ ತಂಡ ಬಂಧಿಸಿ ಸಮಗ್ರ ವಿಚಾರಣೆ ನಡೆಸಿದೆ. ಈತ ಶಾರ್ಜಾದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ನಿನ್ನೆ ಮುಂಜಾನೆ ಬಂದಿಳಿದಿದ್ದನು. ಆಗ ಆತನನ್ನು ತಪಾಸಣೆಗೊಳಪಡಿಸಿ ದಾಗ ಮಿಶ್ರಿತ ರೂಪದ ನಾಲ್ಕು ಚಿನ್ನದ ಮಾತ್ರೆಗಳನ್ನು ಆತನ ಗುದದ್ವಾರದಲ್ಲಿ ಬಚ್ಚಿಟ್ಟ ಸ್ಥಿತಿಯಲ್ಲಿ …

ಹೋಟೆಲ್‌ನಲ್ಲಿ ಕಳವು: ಆರೋಪಿ ಗಂಟೆಗಳೊಳಗೆ ಬಂಧನ

ಕಾಸರಗೋಡು: ಕುಂಡಂಗುಳಿಯ ಹೋಟೆಲ್‌ನಿಂದ 65೦೦ ರೂ. ಕಳವುಗೈದ ಪ್ರಕರಣದ ಆರೋಪಿಯನ್ನು ಗಂಟೆಗಳೊಳಗೆ ಬಂಧಿಸಲಾಗಿದೆ.  ಮರುದಡ್ಕ ನಿವಾಸಿ, ಕುಂಡಂಗುಳಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಟಿ.ಕೆ ಹುಸೈನ್ (40) ಎಂಬಾತನನ್ನು ಬೇಡಗಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ಎರಡು ವಾರಗಳ  ರಿಮಾಂಡ್ ವಿಧಿಸಿದೆ. ಶನಿವಾರ ರಾತ್ರಿ  ಕುಂಡಂಗುಳಿಯ ತನಿಮಾ ಹೋಟೆಲ್‌ನಿಂದ ಕಳವು ನಡೆದಿದೆ. ಹೋಟೆಲ್‌ನ ಹಿಂಭಾಗದ ಮೂಲಕ ಒಳಗೆ ನುಗ್ಗಿದ ಕಳ್ಳ ಮೇಜಿನಲ್ಲಿರಿಸಿದ್ದ 6500 ರೂಪಾಯಿ ಕಳವು ನಡೆಸಿದ್ದನೆನ್ನಲಾಗಿದೆ.  ನಿನ್ನೆ ಬೆಳಿಗ್ಗೆ ಹೋಟೆಲ್ ತೆರೆಯಲು ತಲುಪಿದಾಗ ಕಳವು ವಿಷಯ  ಹೋಟೆಲ್‌ನ ಪಾಲುದಾರ  …

ಸ್ನಾನಕ್ಕಾಗಿ ಸಮುದ್ರಕ್ಕಿಳಿದು ನಾಪತ್ತೆಯಾದ ಯುವಕರ ಪತ್ತೆಗಾಗಿ ವ್ಯಾಪಕ ಶೋಧ

ಕಾಸರಗೋಡು:  ಸ್ನಾನಕ್ಕೆಂದು ಸಮುದ್ರಕ್ಕಿಳಿದ ಬಳಿಕ ನಾಪತ್ತೆಯಾದ ಯುವಕರಿಬ್ಬರ ಪತ್ತೆಗಾಗಿ ಪೊಲೀ ಸರು ಮತ್ತು ಕರಾವಳಿ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ. ಚಂಗನಾಶ್ಶೇರಿ ಚಿರಂಚಿರ ವಾಳಪಳ್ಳಿಯ ಬಾಲು ಎಂಬವರ ಪುತ್ರ ಅಂಕಿತ್ (20) ಮತ್ತು ಚಿಂಙವನಂ ಪಾತ್ತಾಮುಟ್ಟತ್ ಎಬ್ರಹಾಂ ಎಂಬವರ ಪುತ್ರ ಅಪ್ಪು ಟಿ. ಎಬ್ರಹಾಂ (20) ಸಮುದ್ರದಲ್ಲಿ ನಾಪತ್ತೆಯಾದ ಯುವಕರಾಗಿದ್ದಾರೆ. ಪಳ್ಳಿಕೆರೆಗೆ ಸಮೀಪದ ಚೇಟುಕುಂಡ್ ಮತ್ತು ಕಲ್ಲಿಂಗಾಲ್ ನಡುವಿನ ಪಳ್ಳಿಕ್ಕರೆಯ ರೆಡ್‌ಮೂನ್ ಬೀಚ್‌ಗೆ ಇವರಿಬ್ಬರು ಇತರ ಇಬ್ಬರು ಸ್ನೇಹಿತರಾದ ಅಲನ್ ಸೋನಿ ಮತ್ತು ಅಲನ್ ದೇವಸ್ಯ ಬೈಜು …

ಆನೆದಂತ ವಶ: ಮಂಜೇಶ್ವರ ನಿವಾಸಿ ಸಹಿತ ಮೂವರ ಸೆರೆ

ಮಂಜೇಶ್ವರ: ಲಕ್ಷಾಂತರ ರೂಪಾಯಿ ಮೌಲ್ಯದ ಆನೆ ದಂತಗಳ ಸಹಿತ ಮಂಜೇಶ್ವರ ನಿವಾಸಿ ಸೇರಿ ಮೂರು ಮಂದಿ ಮಂಗಳೂರಿನಲ್ಲಿ ಸೆರೆಗೀಡಾಗಿ ದ್ದಾರೆ. ಮಂಜೇಶ್ವರದ ಅಬ್ದುಲ್ ಖಾದರ್, ಬೆಳ್ತಂಗಡಿಯ ಶಶಾಂಕ, ಅತ್ತಾವರದ ಪ್ರಭಾಚಂದ್ರ ಎಂಬಿವರನ್ನು ಬೆಂಗಳೂರು- ಮಡಿಕೇರಿ ಫಾರೆಸ್ಟ್ ಎಸ್‌ಪಿ ಪವನ್ ನೆಜ್ಜೂರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಆನೆ ದಂತಗಳನ್ನು ಮಾರಾಟಗೈಯ್ಯಲು ತಂಡವೊಂದು ಮಂಗಳೂರಿನ ಮರೋಳಿಗೆ ಬರುತ್ತಿದೆ ಎಂಬ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತಲುಪಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ …

ವಿಶ್ವಹಿಂದೂ ಪರಿಷತ್ ಕೋಡಿಬೈಲ್ ಉಪಖಂಡ ಸಮಿತಿ ರಚನೆ

ಉಪ್ಪಳ: ವಿಶ್ವ ಹಿಂದೂ ಪರಿಷತ್ ಕೋಡಿಬೈಲ್ ಉಪಖಂಡದ ನೂತನ ಸಮಿತಿ ರಚನೆ ಮತ್ತು ಧರ್ಮ ರಕ್ಷಾ ನಿಧಿ ಸಮರ್ಪಣಾ ಕಾರ್ಯಕ್ರಮ ಜರಗಿತು. ನೂತನ ಅಧ್ಯಕ್ಷರಾಗಿ ನಾರಾಯಣ ತೊಟ್ಟಿ, ಉಪಾಧ್ಯಕ್ಷÀ್ಷರಾಗಿ ರಾಮಚಂದ್ರ ಯಶೋನಂದ ನಗರ, ಕಾರ್ಯದರ್ಶಿ ಯÁಗಿ ರಾಜೇಶ್ ಕೋಡಿಬೈಲ್, ಬಜರಂಗದಳ ಸಂಯೋಜಕ್‌ರಾಗಿ ರಿತೇಶ್ ಯಶೋನಂದ ನಗರ, ವ್ಯವಸ್ಥಾ ಪ್ರಮುಖ್‌ರಾಗಿ ಕಾರ್ತಿಕ್ ಕೋಡಿಬೈಲು, ಮಾತೃಶಕ್ತಿ ಗೌರವ ಅಧ್ಯಕೆÀ್ಷಯÁಗಿ ಸರಸ್ವತಿ ಶೆಟ್ಟಿ ಕೋಡಿಬೈಲ್, ಅಧ್ಯಕೆÀ್ಷಯÁಗಿ ಶಶಿಕಲಾ ಮಜಲು ಮುಳಿಂಜ, ಉಪಾಧ್ಯಕೆÀ್ಷಯರಾಗಿ ಶಾಂತಿ ಕುಮಾರಿ ಯಶೋದನಂದ ನಗರ, ಶೋಭ ಅಶೋಕ ಕೋಡಿಬೈಲ್, …

ಮಧೂರು ಎಸ್.ಸಿ-ಎಸ್.ಟಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕಾಸರಗೋಡು: ಸ್ಮಾರ್ಟ್ ಫೋನ್ ಸಹಿತದ ಆಧುನಿಕ,ತಾಂತ್ರಿಕ ವ್ಯವಸ್ಥೆಗಳನ್ನು  ವಿನೋದಕ್ಕಾಗಿ ಮಾತ್ರವಲ್ಲದೆ ಶಿಕ್ಷಣಕ್ಕಾಗಿಯೂ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳ ಬೇಕೆಂದು,  ತಾಂತ್ರಿಕ ಶಿಕ್ಷಣ ದುರುಪಯೋಗವಾಗುತ್ತಿಲ್ಲವೆಂಬುದನ್ನು ಹೆತ್ತವರು ಖಚಿತಪಡಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಮಧೂರು ಎಸ್‌ಸಿ-ಎಸ್‌ಟಿ ಪಂಚಾಯತ್ ಸಮಿತಿ ಕೂಡ್ಲು ಗೋಪಾಲಕೃಷ್ಣ ಶಾಲೆಯಲ್ಲಿ ಆಯೋಜಿಸಿದ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗಿರುವ ಪುಸ್ತಕ ವಿತರಣೆ ಉದ್ಘಾಟಿಸಿ ಅವರು  ಮಾತನಾಡು ತ್ತಿದ್ದರು.  ಕಳೆದ 12ವರ್ಷದಿಂದ ಶಿಕ್ಷಣ ಸಹಿತದ ಮೂಲಭೂತ ವಲಯದಲ್ಲಿ ಬಹಳ ದೊಡ್ಡ ಸಾಧನೆ ಕೇಂದ್ರ ಸರಕಾರ ನಡೆಸಿದೆ. ಎಸ್‌ಸಿ-ಎಸ್‌ಟಿ ಜನ ವಿಭಾಗಗಳನ್ನು ಆರ್ಥಿಕವಾಗಿ ಸಬಲಗೊಳಿಸುವುದು …