ಕಾರಿನಲ್ಲಿ ಸಾಗಿಸುತ್ತಿದ್ದ 31ಕಿಲೋ ಗಾಂಜಾ ವಶ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ಕಾಸರಗೋಡು: ಹೋಂಡಾ ಸಿಟಿ ಕಾರಿನಲ್ಲಿ ಸಾಗಿಸುತ್ತಿದ್ದ 31 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರ ಣದಲ್ಲಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಾಞಂಗಾಡ್ ಅಧಿಂಞ್ಞಾಲ್ ತೆಕ್ಕೇಪುರದ ಟಿ.ಎಂ. ಶಮೀರ್ (40), ನೀಲೇಶ್ವರ ಬಂಗಳಂ ಸೆಂಚುರಿ ಹೌಸ್‌ನ ಟಿ. ಶಂಸೀರ್ (32) ಎಂಬಿವರನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್ ನೇತೃತ್ವದಲ್ಲಿ  ಬಂಧಿಸಲಾಗಿದೆ. ಗಾಂಜಾ ಸಾಗಾಟ ಪ್ರಕರಣದಲ್ಲಿ ಮುಖ್ಯ ಆರೋಪಿಗಳಾದ ಬೇಕಲ ಪಳ್ಳಿಕ್ಕೆರೆ ಬಿಲಾಲ್‌ನಗರ ಸಮೀರ ಮಂಜಿಲ್‌ನ ಕಬೀರ್ ಯಾನೆ ಲಾಲಾ ಕಬೀರ್ (40), ಕಾಞಂಗಾಡ್ ಕೊವ್ವಲ್  ಆವಿಕ್ಕರದ ಸಜಿನಾ …

ಬಿಜೆಪಿ ಕಾರ್ಯಕರ್ತ, ರೇಶನ್ ಅಂಗಡಿ ಮಾಲಕ ನಿಧನ

ಕುಂಬ್ಡಾಜೆ:  ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಮಾರ್ಪನಡ್ಕ  ಜಯನಗರದಲ್ಲಿರುವ ರೇಶನ್ ಅಂಗಡಿ ಮಾಲಕನೂ ಆದ  ಗುಲುಗುಂಜಿ ನಿವಾಸಿ   ಅಶೋಕ್ ಭಟ್  (52) ನಿಧನ ಹೊಂ ದಿದರು. ಅಸೌಖ್ಯ ನಿಮಿತ್ತ ಇವರನ್ನು ಚೆಂಗಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ನಿಧನ ಸಂಭವಿಸಿದೆ. ಕುಂಬ್ಡಾಜೆ ಪಂಚಾಯತ್‌ನಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತ ನಾಗಿದ್ದ ಇವರು ಸಮಾಜಸೇವಕನೂ ಆಗಿದ್ದರು. 1992 ರಲ್ಲಿ ನಡೆದ ಅಯೋಧ್ಯೆ ಕರಸೇವೆಯಲ್ಲಿ ಇವರು ಪಾಲ್ಗೊಂಡಿದ್ದರು. ಮೃತದೇಹವನ್ನು ನಿನ್ನೆ ಸಂಜೆ ಮಾರ್ಪನಡ್ಕದಲ್ಲಿರುವ  ಕುಂಬ್ಡಾಜೆ ಪಂಚಾಯತ್ ಕಚೇರಿ ಮುಂದೆ …

ಹಿರಿಯ ಬಸ್ ಮಾಲಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಸರಗೋ ಡಿನ ಹಿರಿಯ ಬಸ್ ಮಾಲಕರ ಪೈಕಿ ಒಬ್ಬರಾದ ಗೋಡ್‌ಫ್ರೇ ಡಿ’ಸೋಜಾ (78) ವಾಸಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಚೆಂಗಳ ಸಂತೋಷ್‌ನಗರದ ಖಾದರ್ ಹಾಜಿ ಕ್ವಾರ್ಟರ್ಸ್‌ನಲ್ಲಿ ಇವರು ವಾಸಿಸುತ್ತಿದ್ದರು. ನಿನ್ನೆ ಸಂಜೆ ೬ ಗಂಟೆ ವೇಳೆ ಕ್ವಾರ್ಟರ್ಸ್‌ನ ಬೆಡ್‌ರೂಂನ  ಮಂಚದಲ್ಲಿ ಇವರು ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂ ದಿದ್ದರು. ಕೂಡಲೇ ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಹಲವು ವರ್ಷ ಗಳಿಂದ ಇವರು ಏಕಾಂಗಿಯಾಗಿ ವಾಸಿಸುತ್ತಿದ್ದರು. ಇವರ ಪತ್ನಿ ಪೌಲಿನ್ ಈ ಹಿಂದೆ ನಿಧನರಾಗಿ ದ್ದಾರೆ. ಪುತ್ರ …

ಮನೆಯಿಂದ ಕಾಣೆಯಾದ ಐದು ಪವನ್ ಚಿನ್ನಾಭರಣ: ಪೊಲೀಸರ ತಪಾಸಣೆ ವೇಳೆ ಮನೆ ಪರಿಸರದಲ್ಲೇ ಪತ್ತೆ

ಕುಂಬಳೆ:  ಕಯ್ಯಾರಿನ ಮನೆಯಿಂದ ಕಾಣೆಯಾದ ಚಿನ್ನಾಭರಣ ಮನೆ ಸಮೀಪವೇ ಪತ್ತೆಯಾಗಿದೆ.  ಪಾಲಕ್ಕಾಡ್‌ನಲ್ಲಿ ಹೋಟೆಲ್ ವ್ಯಾಪಾರಿಯಾಗಿರುವ ಕಯ್ಯಾರಿನ ಯೂಸಫ್ ಎಂಬವರ ಮನೆಯಿಂದ ಆದಿತ್ಯವಾರ ರಾತ್ರಿ 5 ಪವನ್ ಚಿನ್ನಾಭರಣ ಕಳವಿಗೀಡಾಗಿ ರುವುದಾಗಿ ದೂರಲಾಗಿತ್ತು. ಯೂಸಫ್‌ರ ಪತ್ನಿ ಹಾಗೂ ಮೂವರು ಮಕ್ಕಳು ಮಾತ್ರವೇ ಮನೆಯಲ್ಲಿ ವಾಸಿಸುತ್ತಿ ದ್ದಾರೆ. ಇವರು  ಆದಿತ್ಯವಾರ ರಾತ್ರಿ ಕಯ್ಯಾರು ಮಸೀದಿಗೆ ಸ್ವಲಾತ್‌ಗಾಗಿ ತೆರಳಿದ್ದರು. ರಾತ್ರಿ 8.30ರ ವೇಳೆ ಮರಳಿ ಬಂದಾಗ  ಮನೆಗೆ ಕಳ್ಳರು ನುಗ್ಗಿರುವುದು ಅರಿವಿಗೆ ಬಂದಿತ್ತು. ಬೆಡ್‌ರೂಂನ ಕಪಾಟು ತೆರೆದಿಟ್ಟ ಸ್ಥಿತಿಯಲ್ಲಿದ್ದು, ಅದನ್ನು ಪರಿಶೀಲಿಸಿ …

ಯುವತಿಯ ಮೃತದೇಹ ಮನೆಯಲ್ಲಿ ಪತ್ತೆ:  ಗೆಳೆಯ ಕಸ್ಟಡಿಯಲ್ಲಿ

ಪತ್ತನಂತಿಟ್ಟ: ಯುವತಿ ಮನೆಯೊ ಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿ ಯಲ್ಲಿ ಪತ್ತೆಯಾಗಿದ್ದಾಳೆ. ಅಡೂರು ಕೋಟಮುಗಲ್ ನಿವಾಸಿ ಶೆಹನ (31) ಮೃತಪಟ್ಟ ಯುವತಿ. ಈಕೆ ಆತ್ಮಹತ್ಯೆ ನಡೆಸುವ ವೇಳೆ ಮನೆಯಲ್ಲಿ ಈಕೆಯ ಗೆಳೆಯ ಏಳಾಂಕುಳಂ ನಿವಾಸಿಯೋರ್ವ ನಿದ್ದು, ಈತನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಪತಿಯೊಂದಿಗೆ ವಿರಸಗೊಂಡು ಏಕಾಂಗಿಯಾಗಿ ಯುವತಿ ವಾಸವಾಗಿದ್ದಳು. ನಿನ್ನೆ ರಾತ್ರಿ 7 ಗಂಟೆಗೆ ಘಟನೆ ನಡೆದಿದೆ. ಶೆಹನಳ ಮನೆಯಿಂದ ಬೊಬ್ಬೆ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಕೌನ್ಸಿಲರ್‌ಗೆ ಮಾಹಿತಿ ತಿಳಿಸಿದ್ದು, ಅವರು ಮನೆಗೆ ಬಂದು ನೋಡಿದಾಗ …

ಸಮಾಜದ್ರೋಹಿಗಳ ಅಟ್ಟಹಾಸ: ಕೊಡ್ಯಮ್ಮೆ ಶಾಲೆಯ ಕಿಟಿಕಿ ಗಾಜುಗಳು ನಾಶ

ಕುಂಬಳೆ: ಕೊಡ್ಯಮ್ಮೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಭಾಗವಾಗಿರುವ ಯುಪಿ ಶಾಲೆಯಲ್ಲಿ ಸಮಾಜದ್ರೋಹಿಗಳು ಅಟ್ಟಹಾಸ ಮೆರೆದಿದ್ದಾರೆ.  ಶಾಲೆಯ ಕಿಟಿಕಿ ಗಾಜು ಗಳನ್ನು ಕಲ್ಲೆಸೆದು ಪುಡಿಗೈಯ್ಯಲಾಗಿದೆ. ಯು.ಪಿ ವಿಭಾಗ  ತರಗತಿ ಕೊಠಡಿಗಳ ಕಿಟಿಕಿ ಗಾಜುಗಳನ್ನು ಸಮಾಜದ್ರೋ ಹಿಗಳು ಹಾನಿಗೊಳಿಸಿದ್ದು ಅಲ್ಲದೆ ಕೊಠಡಿಯಲ್ಲಿ   ಸಂಗ್ರಹಿಸಿಟ್ಟಿದ್ದ ಹಳೆಯ ವಸ್ತುಗಳನ್ನು ನಾಶಗೊಳಿಸಿದ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದೆ. ಮೊನ್ನೆ ರಾತ್ರಿ ಸಮಾಜದ್ರೋಹಿಗಳು ಈ ಕೃತ್ಯವೆಸಗಿದ್ದಾರೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಮುಖ್ಯೋಪಾಧ್ಯಾಯ ಪ್ರದೀಪ್, ಪಿಟಿಎ ಅಧ್ಯಕ್ಷ ಅಬ್ಬಾಸ್ ಅಲಿ ಕೊಡ್ಯಮ್ಮೆ ನೀಡಿದ ದೂರಿನಂತೆ  ಕುಂಬಳೆ ಪೊಲೀಸರು …

ಉಚಿತ ಪ್ರಯಾಣ: ಖಾಸಗಿ ಬಸ್‌ಗಳ ಸಂಕಷ್ಟ ಬಗ್ಗೆ  ಅಧ್ಯಯನ ನಡೆಸಲು ಸಮಿತಿ ರಚನೆ

ತಿರುವನಂತಪುರ: ಕೆಎಸ್‌ಆರ್‌ಟಿಸಿ  ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿರುವು ದರಿಂದ ಖಾಸಗಿ ಬಸ್‌ಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅಧ್ಯಯನ ನಡೆಸಲು ರಾಜ್ಯ ಸರಕಾರ ತಜ್ಞರ ಸಮಿತಿಗೆ ರೂಪು ನೀಡಿದೆ. ಮಾಜಿ ಸಾರಿಗೆ ಆಯುಕ್ತ ಕೆ. ಪದ್ಮಕುಮಾರ್‌ರನ್ನು  ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ. ನಾಟ್‌ಪಾಕ್‌ನ ಮಾಜಿ ನಿರ್ದೇಶಕಿ ಬಿ.ಜಿ. ಶ್ರೀದೇವಿ, ಸಾರಿಗೆ ಇಲಾಖೆ ಯ ಹೆಚ್ಚುವರಿ ಕಾರ್ಯದರ್ಶಿ ಕೆ.ಎಸ್. ವಿಜಯಶ್ರೀ, ಜಂಟಿ ಸಾರಿಗೆ ಆಯುಕ್ತ ಕೆ. ಮನೋಜ್ ಕುಮಾರ್ ಮತ್ತು ನಾಟ್‌ಪಾಕ್ ವಿಜ್ಞಾನಿ ಡಾ. ಸಂಜಯ್ ಎಂಬಿವರನ್ನು ಸಮಿತಿಯ …

ವಿವಿಧೆಡೆ ಮುಂದುವರಿಯುತ್ತಿರುವ ಕಡಲ್ಕೊರೆತ: ಮಂಗಲ್ಪಾಡಿ ಪಂ. ವ್ಯಾಪ್ತಿಯ ತೀರ ನಿವಾಸಿಗಳು ಆತಂಕದಲ್ಲಿ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶÀಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು ಸ್ಥಳೀಯರು ಆತಂಕದಲ್ಲಿದ್ದಾರೆ. ಮುಸೋಡಿ, ಮಣಿಮುಂಡ, ಹನುಮಾನ್ ನಗರ, ಐಲ ಶಿವಾಜಿನಗರ, ಪೆರಿಂಗಡಿ, ಕುದುಪುಳು ಸಹಿತ ವಿವಿಧ ಪ್ರದೇಶಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು ಹಲವಾರು ಮನೆಗಳು ಅಪಾಯದಂಚಿನಲ್ಲಿದೆ. ಐಲ ಶಿವಾಜಿನಗರದಲ್ಲಿ ಕಳೆದ ವರ್ಷ ಮೀನುಗಾರರು ಬಲೆಗಳನ್ನು ದುರಸ್ತಿಗೊಳಿಸುವ ಶೆಡ್ಡ್ ಕಡಲ್ಕೊರೆತಕ್ಕೆ ಸಿಲುಕಿ ಕುಸಿದು ಬಿದ್ದಿತ್ತು. ಇದರಿಂದ ಈ ಪ್ರದೇಶದ ಮೀನು ಕಾರ್ಮಿಕರು ಸಮಸ್ಯೆಗೀಡಾಗಿದ್ದರು. ಈ ವರ್ಷವೂ ಕಡಲ್ಕೊರೆತ ಮುಂದುವರಿಯುತ್ತಿದ್ದು, ಈ ಪರಿಸರದಲ್ಲಿರುವ ರುದ್ರಭೂಮಿಯ ಶೆಡ್ಡ್, ರಸ್ತೆ ಸಮುದ್ರ ಪಾಲಗುವ …

ಗಣೇಶಗಿರಿಯಲ್ಲಿ ನೂತನ ಶ್ರೀ ಗಣೇಶಮಂದಿರ ಲೋಕಾರ್ಪಣೆ, ಆಮಂತ್ರಣ ಪತ್ರ ಬಿಡುಗಡೆ

ಬಾಯಾರು: ಮುಳಿಗದ್ದೆ ಗಣೇಶಗಿರಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಗಣೇಶ ಮಂದಿರದ ಲೋಕಾರ್ಪಣೆ ಮತ್ತು 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರÀವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನೆರವೇರಿಸಿದರು. ಬಳಿಕ ಆಶೀರ್ವಚನ ನೀಡಿದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಊರಿನ ಗಣ್ಯರು, ಭಕ್ತಾಧಿಗಳು, ಸಮಿತಿಯ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಾಯಾರು ಮುಳಿಗದ್ದೆ ಇದರ ವತಿಯಿಂದ ಧನ್ಯವಾದ ಅರ್ಪಿಸಲಾಯಿತು.

ಪುದುಕೋಳಿ ಸೇತುವೆ ಬಳಿ ನಿರಂತರ ತ್ಯಾಜ್ಯ ಉಪೇಕ್ಷೆ: ಸ್ಥಳೀಯರಿಂದ ಪ್ರತಿಭಟನೆ ನಿರ್ಧಾರ

ಬದಿಯಡ್ಕ: ನೀರ್ಚಾಲು- ಮಾನ್ಯ ರಸ್ತೆಯ ಪುದುಕೋಳಿ ಸೇತುವೆ ಬಳಿ ನಿರಂತರ ಶೌಚಾಲಯ ತ್ಯಾಜ್ಯ ಸಹಿತ ಮಾಲಿನ್ಯಗಳನ್ನು ತಂದೆಸೆಯುತ್ತಿದ್ದು, ಇದರ ವಿರುದ್ಧ ವಾರ್ಡ್ ಪ್ರತಿನಿಧಿಯ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಗ್ಗೆ ಪುದುಕೋಳಿ ಈಶ್ವರ ಭಟ್ ಅವರ ಮನೆಯಲ್ಲಿ ಸೇರಿದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ, ಪೊಲೀಸರಿಗೆ ದೂರು ನೀಡುವುದು, ನಾಗರಿಕರ ನೇತೃತ್ವದಲ್ಲಿ ರಾತ್ರಿ ಗಸ್ತು ಮೊದಲಾದ ವಿಷಯಗಳಲ್ಲಿ ಚರ್ಚೆ ನಡೆಯಿತು. ವಾರ್ಡ್ ಪ್ರತಿನಿಧಿ ರಜನಿ ಸಂದೀಪ್ ಉಪಸ್ಥಿತರಿದ್ದರು. ಸುಮ ಈಶ್ವರ …