ಶಸ್ತ್ರ ಚಿಕಿತ್ಸೆ ಮಧ್ಯೆ ಮೃತಪಟ್ಟ ಬಾಲಕನ ಮೃತದೇಹ: ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂಗೆ ;ಆಸ್ಪತ್ರೆಗೆ ಡಿವೈಎಫ್‌ಐ ಮಾರ್ಚ್
ಕಾಸರಗೋಡು: ಇಲ್ಲಿನ ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಧ್ಯೆ ಮೃತಪಟ್ಟ ನಾಲ್ಕನೇ ತರಗತಿ ವಿದ್ಯಾರ್ಥಿಯ ಮೃತದೇಹವನ್ನು ತಜ್ಞ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾ ಯಿತು. ಬೇಡಗಂ ತಲೇಕುನ್ನು ನಿವಾಸಿ ಅಶ್ರಫ್ ಸಖಾಫಿ ಎಂಬವರ ಪುತ್ರ ಇಯಾಸ್ (9)ನ ಮೃತದೇಹವನ್ನು ಇಂದು ಬೆಳಿಗ್ಗೆ ಪರಿಯಾರಂಗೆ ಕೊಂಡೊಯ್ಯ ಲಾಗಿದೆ. ಬಾಲಕನ ಸಾವಿಗೆ ಸಂಬಂಧಿಸಿ ವ್ಯಾಪಕ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಪರಿಯಾರಂನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಉದರಸಂಬಂಧ ಅಸೌಖ್ಯ ಬಾಧಿಸಿದ್ದ ಇಯಾಸ್‌ನನ್ನು ನಿನ್ನೆ ಬೆಳಿಗೆ ಜನರಲ್ ಆಸ್ಪತ್ರೆಯಲ್ಲಿ …