ಹಾಡಹಗಲೇ ಆಟೋಚಾಲಕನ ಮನೆಯಿಂದ ಚಿನ್ನಾಭರಣ ಕಳವು

ಮುಳ್ಳೇರಿಯ: ಹಾಡಹಗಲೇ ಮನೆಯ ಬಾಗಿಲು ಮುರಿದು ಒಳನುಗ್ಗಿ ಕಳ್ಳರು ಏಳೂವರೆ ಪವನ್ ಚಿನ್ನಾಭರಣ ದೋಚಿದ್ದಾರೆ. ಆದೂರು ಬಳ್ಳಕ್ಕಾಡ್‌ನ ಆಟೋಚಾಲಕ ಸದಾನಂದ ಎಂಬವರ ಮನೆಯಿಂದ ನಿನ್ನೆ ಹಾಡಹಗಲೇ ಕಳವು ನಡೆದಿದೆ. ಸದಾನಂದ ಆಟೋರಿಕ್ಷಾದಲ್ಲಿ ಬಾಡಿಗೆಗೆ ತೆರಳಿದ್ದರು.  ದಾದಿಯಾಗಿರುವ ಇವರ ಪತ್ನಿ ಆಸ್ಪತ್ರೆಗೆ, ಪುತ್ರ ತರಗತಿಗೆ ತೆರಳಿದ್ದ ವೇಳೆ ಮನೆಗೆ ಕಳ್ಳರು ನುಗ್ಗಿದ್ದಾರೆ. ಸದಾನಂದ ಮನೆಗೆ ತಲುಪಿದಾಗಲೇ ಮನೆಯಿಂದ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟು ಮುರಿದು ಅದರಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದಾರೆ. …

ವಿಮಾನದಲ್ಲಿ ತಲುಪಿ ಬೈಕ್‌ಗಳಲ್ಲಿ ಸುತ್ತಾಡಿ ದರೋಡೆ: ಉತ್ತರಪ್ರದೇಶ ತಂಡ ಬಂಧನ; ದರೋಡೆಗೆ ಬಳಸುತ್ತಿರುವ ಬೈಕ್‌ಗಳನ್ನು ತರುವುದು ರೈಲಿನಲ್ಲಿ

ಕಾಸರಗೋಡು: ವಿಮಾನಗಳಲ್ಲಿ ಬಂದಿಳಿದು ಬೈಕ್‌ಗಳಲ್ಲಿ ಸುತ್ತಾಡಿ ದರೋಡೆ ನಡೆಸುತ್ತಿರುವ ಉತ್ತರಪ್ರದೇ ಶದ ೬ ಮಂದಿಯನ್ನು ರಾಜ್ಯದ ವಿವಿಧೆಡೆಗಳಲ್ಲಾಗಿ ಪೊಲೀಸರು ನಡೆಸಿದ ಕಾರ್ಯಾಚ ರಣೆಯಲ್ಲಿ ಬಂಧಿಸಿದ್ದಾರೆ. ಕಣ್ಣೂರು, ಕಳಮಶ್ಶೇರಿ, ತೃಶೂರು ಎಂಬೆಡೆಗಳಲ್ಲಾಗಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇವರನ್ನು ಸೆರೆಹಿಡಿಯಲಾಗಿದೆ. ತೃಶೂರಿನಲ್ಲಿ ಕಳವು ಯತ್ನದ ವೇಳೆ ಈ ತಂಡದ ಮುಖ್ಯಸ್ಥ ನಾದ ಉತ್ತರಪ್ರದೇಶ ಬಾಗ್‌ಪೇಟ್ ನಿವಾಸಿ ರಿಹಾನ್ (20) ಎಂಬಾತನನ್ನು ಮೊದಲು ತೃಶೂರು ಪೊಲೀಸರು ಬಂಧಿಸಿದ್ದರು. ಆತನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ವಿಮಾನದಲ್ಲಿ ಬಂದಿಳಿದು ದರೋಡೆ ನಡೆಸುವ ತಂಡವೊಂದು …

ಬರಿದಾಗುತ್ತಿರುವ ಹೊಳೆ: ಕೃಷಿಕರು ಆತಂಕದಲ್ಲಿ; ಕುಡಿಯುವ ನೀರಿಗೂ ತತ್ವಾರ ಸಾಧ್ಯತೆ

ಉಪ್ಪಳ: ಮಳೆಗಾಲದಲ್ಲಿ ಹೊಳೆಯಲ್ಲಿ ನೀರು ಉಕ್ಕಿ ಹರಿಯ ಬೇಕಾದ ಈ ವೇಳೆ ಬಿಸಿಲಿನ ತಾಪ ಹೆಚ್ಚಾಗಿ ನೀರಿನ ಮಟ್ಟ ಕುಸಿತಗೊಂಡು ಜನರಲ್ಲಿ ಆತಂಕವನ್ನುAಟು ಮಾಡಿದೆ. ಮಳೆ ತೀರಾ ಕಡಿಮೆಗೊಂಡು ಹೊಳೆ ಸಹಿತ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ನೀರಿನ ಮಟ್ಟ ಇಳಿಕೆಯಾಗಿರುವುದರಿಂದ ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ವರ್ಕಾಡಿ ಮೊದಲಾದ ಪಂಚಾಯತ್ ವ್ಯಾಪ್ತಿಯ ವಿವಿಧೆಡೆಯ ಕೃಷಿಕರಲ್ಲಿ ಆತಂಕ ಉಂಟು ಮಾಡಿದೆ. ಈಗಾಗಲೇ ಭತ್ತದ ಕೃಷಿ ಮಾಡಿರುವ ಕೃಷಿಕರು ಮಳೆಯಿಲ್ಲದೆ ಇರುವುದರಿಂದ ಗದ್ದೆಗೆ ಕೆರೆಯಿಂದ ನೀರನ್ನು ಬಿಡುವ ಅವಸ್ಥೆ …

ಬೇಕೂರು ಶಾಲೆಯಲ್ಲಿ ರ‍್ಯಾಗಿಂಗ್ 14 ಪ್ಲಸ್‌ಟು ವಿದ್ಯಾರ್ಥಿಗಳ ಅಮಾನತು

ಉಪ್ಪಳ: ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್‌ವನ್ ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ನಡೆಸಿದ ಆರೋಪದಂತೆ ಪ್ಲಸ್‌ಟು ವಿದ್ಯಾರ್ಥಿಗಳಾದ 14 ಮಂದಿಯನ್ನು ಅಮಾನತುಗೊಳಿಸಲಾಗಿದೆ.  ಈ ತಿಂಗಳ 17ರಂದು ಮಧ್ಯಾಹ್ನ 2 ಗಂಟೆಗೆ ಶಾಲಾ ಆವರಣದೊಳಗೆ ಪ್ಲಸ್ ವನ್ ವಿದ್ಯಾರ್ಥಿಗಳಾದ ಐದು ಮಂದಿ ಮೇಲೆ ಪ್ಲಸ್‌ಟು ವಿದ್ಯಾರ್ಥಿಗಳಾದ ೧೪ ಮಂದಿ ರ‍್ಯಾಗಿಂಗ್ ನಡೆಸಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಓರ್ವ ವಿದ್ಯಾರ್ಥಿ ನೀಡಿದ ದೂರಿನಂತೆ ಆಂಟಿ ರ‍್ಯಾಗಿಂಗ್ ಸ್ಕ್ವಾಡ್ ತನಿಖೆ ನಡೆಸಿ ಪ್ರಾಂಶುಪಾಲರಿಗೆ ವರದಿ ನೀಡಿತ್ತು. ಇದರಂತೆ ಪ್ರಾಂಶುಪಾಲರು ಮಂಜೇಶ್ವರ …

ವಾಹನ ಸಂಚಾರಕ್ಕೆ ಅಡಚಣೆಯಾದ ರಸ್ತೆ ಕ್ಲಬ್ ಕಾರ್ಯಕರ್ತರಿಂದ ದುರಸ್ತಿ

ಕುಂಬಳೆ: ಹೊಂಡಗಳಿಂದ ತುಂಬಿಕೊಂಡು ಜನ ಸಂಚಾರಕ್ಕೆ ತೊಡಕಾಗಿದ್ದ ರಸ್ತೆಯನ್ನು ಕ್ಲಬ್‌ನ ಕಾರ್ಯಕರ್ತರು ದುರಸ್ತಿಗೊಳಿಸಿ ಮಾದರಿಯಾಗಿದ್ದಾರೆ. ಕುಂಬಳೆಯಿಂದ ಕೋಟೆಕಾರು ಸಹಿತ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೋಟೆಕಾರ್‌ನ ವಿನಾಯಕ ಕ್ಲಬ್ ಕಾರ್ಯಕರ್ತರು ಮನೋಜ್‌ರ ನೇತೃತ್ವದಲ್ಲಿ ದುರಸ್ತಿಗೊಳಿಸಿದರು. ರಸ್ತೆಯಲ್ಲಿದ್ದ ಹೊಂಡಗಳಿಗೆ ಕಾಂಕ್ರೀಟ್ ತುಂಡುಗಳನ್ನು ತುಂಬಿಸಿ ಮಣ್ಣು ಹಾಕಿ ಸಮತಟ್ಟುಗೊಳಿಸಲಾಗಿದೆ. ಇದರಿಂದ ಸುಗಮ ವಾಹನ ಸಂಚಾರಕ್ಕೆ ಸಹಕಾರಿಯಾಗಿದೆ. ಹಲವು ಕಾಲದಿಂದ ಈ ಪಂಚಾಯತ್ ರಸ್ತೆಯ ಕೋಟೆಕಾರ್‌ನಲ್ಲಿ ಹೊಂಡಗಳು ತುಂಬಿಕೊಂಡು ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ನಾಗರಿಕರು …

ತಲೆಗೆ ಹೊಡೆದು ಕರ್ನಾಟಕ ಕಾರ್ಮಿಕನನ್ನು ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಸಜೆ, ಜುಲ್ಮಾನೆ

ಕಾಸರಗೋಡು: ಅಂಗಡಿ ಆವರಣದಲ್ಲಿ ಸ್ನೇಹಿತನನ್ನು ತಲೆಗೆ ಹೊಡೆದು ಕೊಲೆಗೈದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ರಜಿತ್ ಡಿ.ಎಚ್ ಜೀವಾವಧಿ ಸಜೆ ಹಾಗೂ 5೦ ಸಾವಿರ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕರ್ನಾಟಕ ಬಾಗಲಕೋಟೆ ನಿವಾಸಿ ಉಮೇಶ್ ಗೌಡ ನರಸಾಪುರ (4೦) ಎಂಬಾತನಿಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಕೋಟಿಕುಳಂನಲ್ಲಿ 2021 ಎಪ್ರಿಲ್ ೧೪ರಂದು ಮುಂಜಾನೆ 2 …

ರಾಜ್ಯ ಶಾಲಾ ಗೇಮ್ಸ್ ಸಮಾರೋಪ :ಗಂಡುಮಕ್ಕಳ ಸೀನಿಯರ್ ಕಬಡ್ಡಿಯಲ್ಲಿ ಕಾಸರಗೋಡು ಜಿಲ್ಲೆ ಚಾಂಪ್ಯನ್

ಹೊಸದುರ್ಗ: ರಾಜ್ಯ ಶಾಲಾ ಗೇಮ್ಸ್ ಸಮಾರೋಪದಂದು ನಡೆದ ಕೊನೆಯ ಸ್ಪರ್ಧೆಯಾದ ಗಂಡು ಮಕ್ಕಳ ಸೀನಿಯರ್ ಕಬಡ್ಡಿಯಲ್ಲಿ ಕಾಸರಗೋ ಡು ಜಿಲ್ಲೆ ಚಾಂಪ್ಯನ್ ಪಟ್ಟ ಗಳಿಸಿದೆ. ಫೈನಲ್‌ನಲ್ಲಿ ಕಲ್ಲಿಕೋಟೆ ಜಿಲ್ಲೆಯನ್ನು ಸೋಲಿಸಿ ಈ ಸಾಧನೆ ಮಾಡಿದೆ. ಮಲಪ್ಪುರಂ ಜಿಲ್ಲೆ ತೃತೀಯ ಸ್ಥಾನ ಗಳಿಸಿದೆ. ಕಬಡ್ಡಿಯಲ್ಲಿ ಕಾಸರಗೋಡಿನ ಎಂ. ಶ್ರೀರಾಘ್ ಉತ್ತಮ ಪಟು ಹಾಗೂ ಕಲ್ಲಿಕೋಟೆಯ ಡಿ.ಎಲ್. ಹರಿದೇವ್ ಪ್ರಾಮಿಸಿಂಗ್ ಪಟುವಾಗಿ ಆಯ್ಕೆಯಾ ದರು. ಸೀನಿಯರ್ ಹೆಣ್ಮಕ್ಕಳ ಸ್ಪರ್ಧೆ ಯಲ್ಲಿ ತೃಶೂರ್ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ. ಕಲ್ಲಿಕೋಟೆ ದ್ವಿತೀಯ, …

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ   ಅಕಾಡೆಮಿಯ ಸಾಧಕಾಭಿವಂದನಂ ನಾಳೆ

ನೀರ್ಚಾಲು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ವತಿಯಿಂದ ಸಾಧಕಾಭಿವಂದನಂ ಅಭಿಯಾನದಂಗವಾಗಿ  ನಾಳೆ ಬೆಳಿಗ್ಗೆ ೯ ಗಂಟೆಗೆ ಕನ್ನೆಪ್ಪಾಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಗಡಿನಾಡ ಕನ್ನಡಿಗ, ದೆಹಲಿಯ ಕೇರಳ ಹೌಸ್‌ನಲ್ಲಿ ಕೇರಳ ಸರಕಾರದ ಹೆಚ್ಚುವರಿ ಕಾರ್ಯ ದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಮುಹಮ್ಮದ್ ಕುಂಞಿ ಕನ್ನೆಪ್ಪಾಡಿ ಯವರನ್ನು ಸನ್ಮಾನಿಸಲಾಗುವುದು. ಪಂಚಾಯತ್ ಅಧ್ಯಕ್ಷ ಡಿ. ಶಂಕರ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕೆ.ಆರ್. ಸುಬ್ಬಯ್ಯ ಕಟ್ಟೆ ಅಭಿನಂದಿಸುವರು. …

ಕಾಸರಗೋಡು ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನ ನವೀಕೃತ ಶೋರೂಂ ಉದ್ಘಾಟನೆ

ಕಾಸರಗೋಡು :ಕಾಸರಗೋಡಿನ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ನ ನವೀಕರಿಸಿದ ಶೋರೂಂ ಉದ್ಘಾಟನೆಯನ್ನು ಪ್ರಸಿದ್ಧ ಗಾಯಕ ಹನಾನ್ ಶಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಅಬ್ದುಲ್ ರಹೂಫ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಬ್ದುಲ್ ರಹೀಂ, ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಅಝೀಝ್ ಎ.ಎ, ಮುನ್ಸಿಪಲ್ ಕೌನ್ಸಿಲರ್ ರಾಜೇಶ್ ಅಮೈ, ಕಾಸರಗೋಡು ಶಾಪ್ ಡೈರೆಕ್ಟರ್ ಅಶ್ರಫ್ ಅಲಿ ಮೂಸಾ, ಬ್ರಾಂಚ್ ಮ್ಯಾನೇಜರ್ ಮುಬಿನ್ ಹೈದರ್, ಕಾರ್ಪೊರೇಟ್ ಮ್ಯಾನೇಜರ್ ಅನ್ಸಾರ್ ಮೊದಲಾದವರು ಪಾಲ್ಗೊಂಡಿದ್ದರು.

ಪೊಲೀಸ್ ವಲಯದ ಸ್ತುತ್ಯರ್ಹವಾದ  ಸೇವೆಯ ಬಳಿಕ ಬಡ್ಡಿ, ಕ್ಯಾಮಿಗೆ ನಿವೃತ್ತಿ

ಕಾಸರಗೋಡು: ಬಡ್ಡಿ ಹಾಗೂ ಕ್ಯಾಮಿ ಇಂದಿನಿಂದ ವಿಶ್ರಾಂತಿ ಜೀವನದತ್ತ ತೆರಳಲಿವೆ. ಹಲವು ವರ್ಷಗಳ ಸ್ತುತ್ಯರ್ಹವಾದ ಸೇವೆಯ ಬಳಿಕ ಈ ಜೋಡಿ ಶ್ವಾನಗಳು ಕೆಲಸದಿಂದ ನಿವೃತ್ತಿ ಹೊಂದುತ್ತಿವೆ. ಇವುಗಳ ಬಗ್ಗೆ ಒಂದಿಷ್ಟು… ಜಿಲ್ಲಾ ಪೊಲೀಸ್ ಕೆ-೯ ಡಾಗ್ ಸ್ಕ್ವಾಡ್‌ನ ಸದಸ್ಯರಾಗಿವೆ ಈ ಶ್ವಾನಗಳು. ಇವುಗಳಿಗಾಗಿ ಕಾಸರಗೋಡು ಪೊಲೀಸ್ ಹೆಡ್ ಕ್ವಾರ್ಟರ್ಸ್‌ನಲ್ಲಿ ಇಂದು ಬೆಳಿಗ್ಗೆ   ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ತೃಶೂರ್‌ನ ಡಾಗ್ ಟ್ರೈನಿಂಗ್ ಸೆಂಟರ್‌ನಿಂದ ೯ ತಿಂಗಳ ತರಬೇತಿ ಪೂರ್ತಿಗೊಳಿಸಿ ೨೦೧೬ರಂದು ಬಡ್ಡಿ ಎಂಬ ನಾಯಿ ಕಾಸರಗೋಡು ಕೆ -9 …