ಕಿದೂರಿನಲ್ಲಿ ಕೋಳಿ ಅಂಕ : ಮೂವರ ಸೆರೆ; ಹಣ, ಕೋಳಿಗಳ ವಶ
ಕುಂಬಳೆ: ಕಿದೂರು ಶ್ರೀ ಮಹಾದೇವ ಕ್ಷೇತ್ರ ಸಮೀಪದ ಹಿತ್ತಿಲಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಕುಂಬಳೆ ಪೊಲೀಸರು ದಾಳಿ ನಡೆಸಿ ಮೂರು ಮಂದಿಯನ್ನು ಬಂಧಿಸಿದ್ದಾರೆ. ಅವರ ಕೈಯಿಂದ 2 ಕೋಳಿಗಳನ್ನು ಹಾಗೂ ೧೦೩೦ ರೂಪಾಯಿ ವಶಪಡಿಸಲಾಗಿದೆ. ಬೇಳ ಚೌಕಾರಿನ ಅಕ್ಷಯ್ (34), ಕಿದೂರು ಶಾಲೆ ಬಳಿಯ ಜನಾರ್ದನ (35), ಮೀಯಪದವು ಅಡ್ಕತ್ತಗುರಿ ಯ ಗಂಗಾಧರ ಮೂಲ್ಯ (63) ಎಂಬಿವರನ್ನು ಕುಂಬಳೆ ಎಸ್‌ಐ ಕೆ.ಪಿ. ಗಣೇಶನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯ ಹಿನ್ನೆಲೆಯಲ್ಲಿ …