ಕೊಲೆ ಪ್ರಕರಣದ ಆರೋಪಿ ಸಹಿತ ಇಬ್ಬರು ಎಂಡಿಎಂಎ ಸಾಗಾಟ ವೇಳೆ ಸೆರೆ

ಮುಳ್ಳೇರಿಯ: ಎಂಡಿಎಂಎ ಸಾಗಾಟ ಪ್ರಕರಣದಲ್ಲಿ ಇಬ್ಬರನ್ನು ಸೆರೆ ಹಿಡಿಯಲಾಗಿದ್ದು, ಇವರಲ್ಲಿ ಓರ್ವ ಕೊಲೆ ಪ್ರಕರಣದ ಆರೋಪಿಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಮುಂಜಾನೆ 5.30 ವೇಳೆ ಆದೂರು ಸಂಕದ ಬಳಿ ನಾರ್ಕೋಟಿಕ್ ಡಾನ್ಸಾಪ್ ತಂಡ ಹಾಗೂ ಪೊಲೀಸರು ನಡೆಸಿದ ತಪಾಸಣೆ ವೇಳೆ  ಸ್ಕೂಟಿಯಲ್ಲಿ ಇಬ್ಬರು ಮಾದಕ ಪದಾರ್ಥ ಸಾಗಿಸುತ್ತಿರುವ ಬಗ್ಗೆ ತಿಳಿದು ಬಂದಿತ್ತು. ಇದರಿಂದ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು 18 ಗ್ರಾಂ ಎಂಡಿಎಂಎ ವಶಪಡಿಸಿ ಆರೋಪಿಗಳನ್ನು ಕಸ್ಟಡಿಗೆ ತೆಗೆದಿದ್ದಾರೆ. ಬೇಕೂರು ನಿವಾಸಿ ರಿಯಾಸ್, ನೆಲ್ಲಿಕಟ್ಟೆ ಚೂರಿಮೂಲೆ ನಿವಾಸಿ ರಫೀಕ್ …

ವಂದೇ ಮಾತರಂ 150ನೇ ವಾರ್ಷಿಕ, ದ್ವಿದಿನ ರಾಷ್ಟ್ರೀಯ ವಿಚಾರಗೋಷ್ಠಿ ಆರಂಭ: ಕೇಂದ್ರೀಯ ವಿ.ವಿ.ಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ, ಉದ್ರಿಕ್ತ ಪರಿಸ್ಥಿತಿ ನಿರ್ಮಾಣ

ಕಾಸರಗೋಡು: ವಂದೇ ಮಾತರಂನ 150ನೇ ವಾರ್ಷಿಕದಂಗವಾಗಿ ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ ದ್ವಿದಿನ ರಾಷ್ಟ್ರೀಯ ವಿಚಾರಗೋಷ್ಠಿ ಆರಂಭಗೊಂಡಂತೆಯೇ ಅದನ್ನು ಪ್ರತಿಭಟಿಸಿ ನಾಲ್ಕು ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ಆರಂಭಿಸಿದ್ದು, ಇದು ಅಲ್ಲಿ ಬಿಗು ಪರಿಸ್ಥಿತಿ ನಿರ್ಮಾಣಗೊಳ್ಳುವಂತೆ ಮಾಡಿದೆ. ಕೆಎಸ್‌ಯು, ಎಸ್‌ಎಫ್‌ಐ, ಎಐಎಸ್‌ಎಫ್ ಮತ್ತು ಎಂಎಸ್‌ಎಫ್ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿ.ವಿ. ಮುಂದೆ ಇಂದು ಬೆಳಿಗ್ಗೆ ಭಾರೀ ಸಂಖ್ಯೆಯಲ್ಲಿ  ಜಮಾಯಿಸಿದರು. ದ್ವಿದಿನ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಬರುವ ಪ್ರಜ್ಞಾಪ್ರವಾಹ್ ರಾಷ್ಟ್ರೀಯ …

ಯುವಕನಿಗೆ ಇರಿದು, ಕಬ್ಬಿಣದ ಸರಳಿನಿಂದ ಹೊಡೆದು ಕೊಲೆಗೈಯ್ಯಲೆತ್ನ: ಆರೋಪಿ ಪೊಲೀಸ್ ಕಸ್ಟಡಿಯಲ್ಲಿ

ಪೆರ್ಲ: ರಬ್ಬರ್ ಟ್ಯಾಪಿಂಗ್‌ಗೆ ಸಂಬಂಧಪಟ್ಟ ತರ್ಕ ಹಾಗೂ ಪೂರ್ವದ್ವೇಷದಿಂದ ಯುವಕನಿಗೆ ಇರಿದು ಹಾಗೂ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆಗೈಯ್ಯಲೆತ್ನಿಸಿದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ಕೊಂಡು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ತೃಶೂರು ಚೇಲಕ್ಕರ ಮುಚ್ಚಿಕ್ಕಲ್ ನಿವಾಸಿ ಎಂ.ಎಂ. ವಿಜಯನ್ (44) ಇರಿತದಿಂದ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಈ ಸಂಬಂಧ ಎಣ್ಮಕಜೆ ಬೇಂಗಪದವು ಪೂವನಡ್ಕದಲ್ಲಿ ವಾಸಿಸುವ  ಅಜಿ ಕುಮಾರ್ (43) ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ 7 ಗಂಟೆಗೆ  ಘಟನೆ ನಡೆದಿದೆ. …

ಮಣ್ಣಂಗುಳಿಯಲ್ಲಿ ಅಪರಿಚಿತ ಪ್ರಾಣಿ ಪ್ರತ್ಯಕ್ಷ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಮಣ್ಣಂಗುಳಿಯಲ್ಲಿ ಅಜ್ಞಾತ ಪ್ರಾಣಿಯೊಂದು ಕಂಡುಬಂ ದಿರುವುದಾಗಿ ವರದಿಯಾಗಿದೆ.  ಚಿರತೆಯಾಗಿದೆಯೆಂದು ಸಂಶಯಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜಾಗ್ರತಾ ನಿರ್ದೇಶ ನೀಡಿದ್ದಾರೆ. ಮಂಗಲ್ಪಾಡಿ, ಕರವೂರು ರಸ್ತೆಯಲ್ಲಿ  ಇಂದು ಬೆಳಿಗ್ಗೆ ೬.೩೦ಕ್ಕೆ ಅಜ್ಞಾತ ಪ್ರಾಣಿ ರಸ್ತೆಗೆ ಅಡ್ಡವಾಗಿ ಓಡಿ ಸಮೀಪದ ಕಾಡಿಗೆ ನುಗ್ಗಿರುವುದಾಗಿ ಹೇಳಲಾಗುತ್ತಿದೆ.  ಪುತ್ರಿಯನ್ನು   ಮದ್ರಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಕರವೂರಿನ ರಫೀಕ್ ಎಂಬವರು ಅಜ್ಞಾತ ಪ್ರಾಣಿಯನ್ನು ಕಂಡಿದ್ದಾರೆ. ಅವರು ನೀಡಿದ ಮಾಹಿತಿಯಂತೆ ಸ್ಥಳೀಯರು ತಲುಪಿ ಹುಡುಕಾಡಿದರೂ ಪ್ರಾಣಿಯನ್ನು ಪತ್ತೆಹಚ್ಚಲಾಗಲಿಲ್ಲ. ಪ್ರಾಣಿ ಚಿರತೆಯಂತೆ ಕಾಣುತ್ತಿತ್ತೆಂದು ರಫೀಕ್ …

ನಿಲ್ಲಿಸಿದ್ದ ಕಾರಿನೊಳಗೆ ವಿದ್ಯಾರ್ಥಿನಿಗೆ ಕಿರುಕುಳ: ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡ ಯುವಕನ ವಿರುದ್ಧ ಪೋಕ್ಸೋ ಕೇಸು

ಕುಂಬಳೆ: ಕುಂಬಳೆ ರೈಲು ನಿಲ್ದಾಣ ಸಮೀಪದ  ನಿರ್ಜನ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ 16ರ ಹರೆಯದ ಬಾಲಕಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬಾಲಕಿ ನೀಡಿದ ದೂರಿನಂತೆ  ಕಾಸರಗೋಡು ನಗರ  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಅಹಮ್ಮದ್ ಅಪ್ಸಲ್ ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ.  ಕಾಸರಗೋಡು ಪೊಲೀಸ್  ಸಬ್ ಡಿವಿಶನ್ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿ  ಪ್ಲಸ್‌ವನ್ ವಿದ್ಯಾರ್ಥಿನಿ ಯಾಗಿದ್ದಾಳೆ. ಅಸಹನೀಯ ಹೊಟ್ಟೆ ನೋವು ಅನುಭವಗೊಂಡ ಹಿನ್ನೆಲೆಯಲ್ಲಿ ಬಾಲಕಿ   ವೈದ್ಯರಲ್ಲಿ ತಪಾಸಣೆ ನಡೆಸಿದಾಗ  ಆಕೆ …

ಬೇವಿಂಜದಲ್ಲಿ 3 ಲಕ್ಷ ರೂ. ಮೌಲ್ಯದ ವಿದ್ಯುತ್ ವಯರ್ ಸಾಗಾಟ: ಹಲವು ಕಾಲದಿಂದ ಬೈಕ್‌ಗಳಲ್ಲಿ ಸಂಚರಿಸಿದ ಕಳವು: ಇಬ್ಬರು ಸೆರೆ

ಕಾಸರಗೋಡು: ಚೆರ್ಕಳ, ಬೇವಿಂಜದಲ್ಲಿ ನಿರ್ಮಾಣದಲ್ಲಿರುವ ಮನೆಯಿಂದ ಮೂರು ಲಕ್ಷ ರೂ. ಮೌಲ್ಯದ ವಿದ್ಯುತ್ ವಯರ್‌ಗಳನ್ನು ಸಾಗಿಸಿದ ಪ್ರಕರಣದಲ್ಲಿ ಇಬ್ಬರು ಸೆರೆಯಾಗಿದ್ದಾರೆ. ಬೇಕಲ, ಪಳ್ಳಿಕ್ಕೆರೆ, ತೊಟ್ಟಿ, ಕಿಳಕ್ಕೇಕರದ  ರತೀಶ್ (36), ಶ್ರುತಿ ನಿವಾಸ್‌ನ ಕರುಣಾಕರನ್ (64)ನನ್ನು ವಿದ್ಯಾನಗರ ಪೊಲೀಸರು ಸೆರೆ ಹಿಡಿದಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆಪ್ಟಂಬರ್ 17ರಂದು ರಾತ್ರಿ ಹಾಗೂ ೧೮ರ ಬೆಳಿಗ್ಗೆ ಮಧ್ಯೆ ಕಳವು ನಡೆಸಲಾಗಿದೆ. ಬೇವಿಂಜದ ಎಂ.ಟಿ ಅಬ್ದುಲ್ ಕಬೀರ್ ಎಂಬವರು ನಿರ್ಮಿಸುತ್ತಿರುವ ಮನೆಯಿಂದ ಕಳವು ನಡೆಸಲಾಗಿದೆ. ಬೈಕ್‌ನಲ್ಲಿ ತಲುಪಿದ ತಂಡ ಮನೆಯೊಳಗಿನಿಂದ ವಯರ್‌ಗಳನ್ನು …

ವಸತಿಗೃಹದಲ್ಲಿ ತಿಗಣೆ ಕಡಿತ: ಕುಟುಂಬಕ್ಕೆ 30,000 ರೂ. ದಂಡ

ಕಾಸರಗೋಡು: ವಸತಿಗೃಹದಲ್ಲಿ ಕೊಠಡಿ ಪಡೆದುಕೊಂಡಿದ್ದ ಕುಟುಂಬ ತಿಗಣೆಗಳ ಕಡಿತಕ್ಕೊಳಗಾದ ದೂರಿನಂತೆ ಪ್ರಸ್ತುತ ವಸತಿಗೃಹದವರು ಆ ಕುಟುಂಬಕ್ಕೆ 30,000 ರೂ. ನಷ್ಟ ಪರಿಹಾರ ನೀಡುವಂತೆ ನಿರ್ದೇಶಿಸಿ ಕಾಸರಗೋಡು ಗ್ರಾಹಕರ ದೂರು ಪರಿಹಾರ ಆಯೋಗ ತೀರ್ಪು ನೀಡಿದೆ. ಇದರಂತೆ ಚೆರುವತ್ತೂರಿನ ವಾಸುದೇವ ಕೊಣ್ಣುರಾಯರ ಕುಟುಂಬಕ್ಕೆ ತಿರುವನಂತಪುರದ ರೂಪ್ ಮಹಲ್ ಎಂಬ ಹೆಸರಿನ ವಸತಿಗೃಹ ಈ ನಷ್ಟ ಪರಿಹಾರ ನೀಡಬೇಕಾಗಿದೆ. ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ಕ್ಷೇತ್ರದರ್ಶನ ಹಾಗೂ ಸಂಬಂಧಿಕರೋರ್ವರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು 2024 ಆಗಸ್ಟ್ 26ರಂದು ವಾಸುದೇವ ಮತ್ತು …

289 ಕುಟುಂಬಗಳಿಗೆ ಸಚಿವರಿಂದ ಭೂಹಕ್ಕುಪತ್ರ ವಿತರಣೆ

ಕಾಸರಗೋಡು: ರಾಜ್ಯ ಸರಕಾರದ 1೦೦ ದಿನಗಳ ಕ್ರಿಯಾ ಯೋಜನೆ ಕಾರ್ಯಕ್ರಮದಂತೆ ಜಿಲ್ಲೆಯ ಭೂರಹಿತರಾದ 289 ಕುಟುಂಬಗಳಿಗೆ ಲ್ಯಾಂಡ್ ಟ್ರಿಬ್ಯೂನಲ್ ಭೂಹಕ್ಕುಪತ್ರಗಳು ಹಾಗೂ ಎರಡು ಮುನಿಸಿಪಲ್ ಭೂಹಕ್ಕುಪತ್ರ ಸೇರಿದಂತೆ ಒಟ್ಟು ೨೮೯ ಭೂಹಕ್ಕುಪತ್ರಗಳನ್ನು ರಾಜ್ಯ  ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿ ನಿನ್ನೆ  ಕಾಸರಗೋಡು ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು. ಭೂರಹಿತರಾದ ಕುಟುಂಬಗಳನ್ನು ಗುರುತಿಸಿ ಅವರಿಗೆ ಭೂಹಕ್ಕು ಖಾತರಿಪಡಿಸಲು ರಾಜ್ಯ ಸರಕಾರ ಕಟಿಬದ್ಧವಾಗಿದೆ. ಇದು ಸರಕಾರದ ಅತೀ ದೊಡ್ಡ ಹೊಣೆಗಾರಿಕೆಗಳಲ್ಲೊಂ ದಾಗಿದೆ.  ಸ್ವಂತವಾಗಿ ನಿವೇಶನವಿಲ್ಲದವರು  ಮನೆ …

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಬದಿಯಡ್ಕದಲ್ಲಿ ಸಿದ್ಧತೆ: ಸಂಘಟನಾ ಸಮಿತಿ ರಚನೆ

ಬದಿಯಡ್ಕ:  ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಸಂಘಟನಾ ಸಮಿತಿ ರಚನಾ ಸಭೆ ನಿನ್ನೆ ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಸಭಾಂಗಣದಲ್ಲಿ ನಡೆಯಿತು. ಬ್ಲೋಕ್ ಪಂ. ಅಧ್ಯಕ್ಷ  ಅಬ್ದುಲ್ಲ ಕುಂಞಿ ಚೆರ್ಕಳ ಉದ್ಘಾಟಿಸಿ ಮಾತನಾಡಿ ಶಾಲಾ ಕಲೋತ್ಸವಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಅನಾವರಣಗೊಳಿಸಲು ಅತ್ಯುತ್ತಮ ವೇದಿಕೆಯಾಗಿದೆ.  ಕಲೆ ಮತ್ತು ಸಾಹಿತ್ಯವು  ವಿದ್ಯಾರ್ಥಿಗಳ ಸರ್ವತೋ ಮುಖ ಬೆಳವಣಿಗೆಗೆ ಪೂರಕವಾಗಿದ್ದು, ಈ ಬಾರಿಯ ಉಪಜಿಲ್ಲಾ ಕಲೋತ್ಸವವನ್ನು ಯಶಸ್ವಿಯಾಗಿ ನಡೆಸಲು ಜನಪ್ರತಿನಿಧಿ ಗಳು, ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು …

ಕಾಸರಗೋಡು-ಮಂಗಳೂರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕೆಲವು ಜನ ವಿರುದ್ಧ ನೀತಿ ಆರೋಪ

ಕುಂಬಳೆ: ಕಾಸರಗೋಡು-ಮಂಗಳೂರು ರೂಟ್‌ನಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ನೌಕರರಿಗೆ ಈಗಲೂ ಪ್ರಜ್ಞೆ ಉಂಟಾಗಿಲ್ಲವೆಂದೂ ಸಮಾಜ ಸೇವಕ ಮೂಸ ಅಡ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಯಾಣಿಕರೊಂದಿಗೆ ಯುದ್ಧ ಘೋಷಣೆ ನಡೆಸುವ ಈ ರೀತಿಯ ನೌಕರರಿಗೆ ಮೂಗುದಾರ ಹಾಕಬೇಕಾಗಿದೆಯೆಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ. ಕಳೆದ ಶನಿವಾರ ಸಂಜೆ ಗೆಳೆಯರ ಜೊತೆ ಕುಂಬಳೆಯಿಂದ ಮಂಗಳೂರಿಗೆ ಹೋಗಲು ಎ. ೦೯೮೬ ಬಸ್‌ಗೆ ಹತ್ತಲು  ಯತ್ನಿಸುತ್ತಿದ್ದ ಮಧ್ಯೆ ಬಾಗಿಲನ್ನು ಮುಚ್ಚಲಾಯಿತು. ಇದರಿಂದ ಕೈಗೆ ಗಾಯ ಉಂಟಾಯಿತು. ಅದರ ಮುಂಚಿತ ಕೈಗೂಸು ಸಹಿತ ಬಸ್‌ಗೆ …