ಅಕ್ರಮ ಹಣ ವರ್ಗಾವಣೆ ಪ್ರಕರಣ: ಎರಡು ಎಫ್‌ಐಆರ್ ದಾಖಲಿಸಿದ ವಿಜಿಲೆನ್ಸ್ ಪಿಣರಾಯಿ ವಿಜಯನ್ ಒಂದನೇ ಆರೋಪಿ

ತಿರುವನಂತಪುರ: ರಾಜ್ಯದಲ್ಲಿ  ಭಾರೀ ಕೋಲಾಹಲ ಸೃಷ್ಟಿಸಿದ ಸಿಎಂಆರ್‌ಎಲ್  ಮತ್ತು ವೀಣಾ ವಿಜಯನ್ ಮಾಲಕತ್ವದ ಎಕ್ಸಾಲೋಜಿಕ್ ಸೊಲ್ಯೂಶನ್  ಸಂಸ್ಥೆಯ ಮಧ್ಯೆ ನಡೆದಿದೆ ಎನ್ನಲಾಗಿರುವ ಕೋಟಿಗಟ್ಟಲೆ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಮತ್ತು ಕಾಳಧನ ವ್ಯವಹಾರ ಆರೋಪಕ್ಕೆ ಸಂಬಂಧಿಸಿ ರಾಜ್ಯ ವಿಜಿಲೆನ್ಸ್   ಆಂಡ್ ಆಂಟಿ ಕರಪ್ಶನ್ ಬ್ಯೂರೋ   ಎರಡು ಎಫ್‌ಐಆರ್‌ಗಳನ್ನು  ದಾಖಲಿಸಿಕೊಂಡಿದೆ.  ಭ್ರಷ್ಟಾಚಾರ ತಡೆ ಕಾನೂನು ಮತ್ತು ಕಾಳಧನ ವ್ಯವಹಾರ ತಡೆ  ಕಾನೂನು ಪ್ರಕಾರ ಈ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಹೈಕೋರ್ಟ್‌ನ ಏಕ ಸದಸ್ಯಪೀಠ ನೀಡಿದ ನಿರ್ದೇಶ ಪ್ರಕಾರ ಈ …

ಎಸ್‌ಐಆರ್: ಶಾಸಕರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ ಮೆರವಣಿಗೆ

ಕಾಸರಗೋಡು: ಕೇಂದ್ರ ಚುನಾವಣಾ ಆಯೋಗ ಜ್ಯಾರಿಗೊಳಿಸಿದ ಎಸ್‌ಐಆರ್‌ನಲ್ಲಿ ಲೋಪವುಂಟಾಗಿದೆ ಯೆಂದು  ಯುಡಿಎಫ್ ಹಾಗೂ ಎಲ್‌ಡಿಎಫ್ ಆರೋಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ  ಎಸ್‌ಐಆರ್ ಜ್ಯಾರಿಗೊಳಿಸಿದ ಬಳಿಕ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೇರಳದ ಮುಖ್ಯಮಂತ್ರಿ ವಿ.ಡಿ.ಸತೀಶನ್ ಹಾಗೂ ಜಿಲ್ಲೆಯ ಶಾಸಕರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ  ಬಿಜೆಪಿ  ಪ್ರತಿಭಟನೆಗೆ ಚಾಲನೆ ನೀಡಿದೆ. ಇದರ ಮೊದಲ ಹಂತವಾಗಿ ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್‌ರ  ಕಚೇರಿಗೆ ಇಂದು ಬೆಳಿಗ್ಗೆ ಮಾರ್ಚ್ ನಡೆಸಲಾಯಿತು. ಕರಂದಕ್ಕಾಡ್‌ನಲ್ಲಿರುವ ಬಿಜೆಪಿ  ಕಚೇರಿ ಪರಿಸರದಿಂದ  ಮಾರ್ಚ್ ಆರಂಭಗೊಂಡಿತು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ …

ಹಲವು ದ್ವಿಚಕ್ರ ವಾಹನ ಕಳವು: ಆರೋಪಿ ಬೈಕ್ ಸಹಿತ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಹಲವು ದ್ವಿಚಕ್ರ ವಾಹನ ಕಳವುಗೈದ ಪ್ರಕರಣಗಳ ಆರೋಪಿಯನ್ನು ಕಾಸರಗೋಡು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲ ಕಳವುಗೈದ ಬೈಕ್‌ಗಳ ಪೈಕಿ ಒಂದನ್ನು  ಪೊಲೀಸರು  ವಶಪಡಿಸಿದ್ದಾರೆ.  ನೀಲೇಶ್ವರ ಚೆರುಪುರಂ ಅರಿಂಗೀಲ್‌ನ ಸಮೀರ್ (30) ಪೊಲೀಸ್ ಕಸ್ಟಡಿಗೊಳಗಾದ ಆರೋಪಿ. ಆತನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸುತ್ತಿದ್ದು, ಕಳವಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕತೊಡಗಿದ್ದಾರೆ. ಮಾತ್ರವಲ್ಲ ಕದ್ದ ಇತರ ದ್ವಿಚಕ್ರ ವಾಹನಗಳ ಪತ್ತೆಗಾಗಿ  ತೀವ್ರ ಯತ್ನ ಆರಂಭಿಸಿದ್ದಾರೆ. ಈತಿಂಗಳ ೪ರಂದು ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಿಂದ ಎರಡು ಬೈಕ್‌ಗಳನ್ನು ಕಳವುಗೈಯ್ಯಲಾಗಿತ್ತು.  ಚೆಂಗಳ …

ಮಧೂರು ಪಂ.ಸದಸ್ಯ ಮಜೀದ್ ಪಟ್ಲ ನಿಧನ

ಕಾಸರಗೋಡು: ಮಧೂರು ಪಂಚಾಯತ್ ಸದಸ್ಯ ಹಾಗೂ ಮುಸ್ಲಿಂ ಲೀಗ್ ಮುಖಂಡನಾಗಿದ್ದ ಮಜೀದ್ ಪಟ್ಲ (56) ನಿಧನ ಹೊಂದಿದರು. ದಿ| ಎಂ.ಎ. ಮೊಯ್ದೀನ್ ಕುಂಞಿ- ದಿ| ಆಸ್ಯಮ್ಮ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಮೈಮೂನ, ಮಕ್ಕಳಾದ ಮೊಯ್ದೀನ್ ಮಿಸ್ಯಾನ್, ಆಸಿಯಾ ಮಿನ್ನತ್, ಸೊಸೆ ಹವ್ವಾ ಜುಮಾನ, ಸಹೋದರರಾದ ಎಂ.ಎ. ಅಬ್ದುಲ್ಲ, ಎಂ.ಎ. ಅಶ್ರಫ್, ಸಹೋದರಿಯರಾದ ಖದೀಜ, ಆಯಿಷಾ, ಸಫಿಯ, ಫಾಮ್ಸೀನ, ಫೌಸಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಧೂರು ಪಂಚಾಯತ್ ದ್ವಿತೀಯ ವಾರ್ಡ್ ಸದಸ್ಯ, ಮುಸ್ಲಿಂ ಲೀಗ್ ಮಧೂರು …

ಗ್ಯಾರೇಜ್‌ಗೆ ಕಿಚ್ಚು, ತಲವಾರು ಬೀಸಿ ಭೀತಿ ಸೃಷ್ಟಿ : 20 ಪ್ರಕರಣಗಳ ಆರೋಪಿ ಮುಂಬಯಿಯಿಂದ ಸೆರೆ

ಕುಂಬಳೆ: ಗ್ಯಾರೇಜ್‌ಗೆ ಕಿಚ್ಚಿಡುವಿಕೆ ಹಾಗೂ ತಲವಾರು ಬೀಸಿ ಭೀತಿ ಸೃಷ್ಟಿಸಿ ವ್ಯಕ್ತಿಗಳಿಗೆ ಇರಿದು ಗಾಯಗೊಳಿಸಿದ ಪ್ರಕರಣ ಸಹಿತ ೨೦ರಷ್ಟು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾದ ಉಪ್ಪಳದ  ಮೀಸೆ ರೌಫ್ ಯಾನೆ ಪಿ.ಕೆ. ಅಬ್ದುಲ್ ರೌಫ್  (43)ನನ್ನು ಮುಂಬೈಯಿಂದ ಬಂಧಿಸಲಾಗಿದೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಪ್ರತ್ಯೇಕ ತನಿಖಾ ತಂಡ ಹಾಗೂ ಕುಂಬಳೆ ಪೊಲೀಸರು ಸಂಯುಕ್ತವಾಗಿ ನಡೆಸಿದ  ಬೃಹತ್ ಕಾರ್ಯಾಚರ ಣೆಯಲ್ಲಿ ಆರೋಪಿಯನ್ನು ಸೆರೆಹಿಡಿಯಲು ಸಾಧ್ಯವಾಗಿದೆ. ಕಾಸರಗೋಡು, ವಿದ್ಯಾನಗರ, ಮಂಜೇಶ್ವರ,ಕುಂಬಳೆ ಪೊಲೀಸ್ ಠಾಣೆಗಳಲ್ಲಾಗಿ ಈತನ ವಿರುದ್ಧ 20ರಷ್ಟು ಕ್ರಿಮಿನಲ್ ಪ್ರಕರಣಗಳು …

ಹೊಳೆಯಲ್ಲಿ ನೀರು ಪಾಲಾದ ಯುವಕ ಇನ್ನೂ ನಾಪತ್ತೆ

ಬಂದಡ್ಕ: ಬೇಡಡ್ಕ ಪಾಂಡಿಕಂಡದಲ್ಲಿ ಹೊಳೆಗೆ ಸ್ನಾನಕ್ಕಿಳಿದ ಯುವಕ ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಮೂನಾಡ್ ಮನ್ನಡ್ಕ ನಿವಾಸಿ ಮಾಧವನ್‌ರ ಪುತ್ರ ಅರ್ಜುನನ್ (26) ನೀರಿನಲ್ಲಿ ನಾಪತ್ತೆಯಾದ ಯುವಕ. ಗೆಳೆಯರ ಜೊತೆ ಪಯಸ್ವಿನಿ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಸುಳಿಯಲ್ಲಿ ಸಿಲುಕಿ ಮುಳುಗಿರುವುದಾಗಿ ಶಂಕಿಸಲಾಗಿದೆ. ನಿನ್ನೆ ಮಧ್ಯಾಹ್ನ ಪಾಂಡಿಕಂಡಂ ರೆಗ್ಯುಲೇಟರ್ ಕಂ ಬ್ರಿಡ್ಜ್ ಸಮೀಪದಲ್ಲಿ ಘಟನೆ ನಡೆದಿದೆ. ಮಾಹಿತಿ ತಿಳಿದು ಕುತ್ತಿಕ್ಕೋಲ್‌ನಿಂದ ಅಗ್ನಿಶಾಮಕ ದಳ ಹಾಗೂ ಕಾಸರಗೋಡಿನಿಂದ ಸ್ಕೂಬಾ ತಂಡ ತಲುಪಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಇಂದು ಬೆಳಿಗ್ಗಿನವರೆಗೆ ಪತ್ತೆಹಚ್ಚಲು …

ಕುಂಬಳೆ ಕೆಎಸ್‌ಟಿಪಿ ರಸ್ತೆಯಲ್ಲಿ ಸ್ಥಾಪಿಸಿದ ಡಿವೈಡರ್‌ಗಳನ್ನು ಇಂದು ರಾತ್ರಿಯೊಳಗೆ ತೆರವುಗೊಳಿಸದಿದ್ದಲ್ಲಿ ತೀವ್ರ ಪ್ರತಿಭಟನೆಗೆ ಬಸ್ ಮಾಲಕ, ನೌಕರರ ನಿರ್ಧಾರ

ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ  ಕುಂಬಳೆ ಜಿಲ್ಲಾ  ಸಹಕಾರಿ ಆಸ್ಪತ್ರೆ ಸಮೀಪ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಸೃಷ್ಟಿಸುವ   ರೀತಿಯಲ್ಲಿ ಇರಿಸಲಾದ ಡಿವೈಡರ್ ಗಳನ್ನು ಇಂದು ರಾತ್ರಿಯೊಳಗೆ ತೆರವುಗೊ ಳಿಸ ಬೇಕೆಂದೂ ಇಲ್ಲದಿದ್ದಲ್ಲಿ ಅನಿರ್ಧಿ ಷ್ಟಾವಧಿ ಮುಷ್ಕರ ನಡೆಸಲಾಗುವುದೆಂದು  ಕುಂಬಳೆಯಲ್ಲಿ ನಿನ್ನೆ ನಡೆದ ಬಸ್ ಮಾಲಕರ ಹಾಗೂ ನೌಕರರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.  ಈ ನಿರ್ಧಾರವನ್ನು  ಪೊಲೀಸರಿಗೆ ತಿಳಿಸಲಾ ಗಿದೆ.  ಡಿವೈಡರ್‌ಗಳನ್ನು ತೆರವುಗೊಳಿಸ ದಿದ್ದಲ್ಲಿ ಕಾಸರಗೋಡು-ತಲಪ್ಪಾಡಿ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಪ್ರಮಾಣಿಕರನ್ನು …

ಚಿಪ್ಪಾರು ಕುರುಡಪದವು ಭಾಗದ ಜನರಿಗೆ: ಸಂಚಾರ ಸಮಸ್ಯೆ: ಶೀಘ್ರ ಪರಿಹರಿಸಲು ಆಗ್ರಹ

ಪೈವಳಿಕೆ: ಚಿಪ್ಪಾರು, ಕುರುಡಪದವು, ಖಂಡಿಗೆ, ಸುಂಕದಕಟ್ಟೆ, ಗೋಳಿಕಟ್ಟೆ ಮೊದಲಾದ ಪ್ರದೇಶದ ಜನರು ಬಸ್ ಸೌಕರ್ಯದ ಕೊರತೆಯಿಂದ ಸಂಕಷ್ಟಕ್ಕೀಡಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ವಿಟ್ಲ- ಬೇಡಗುಡ್ಡೆ, ಉಪ್ಪಳ- ಕುರುಡಪದವು ರೂಟ್‌ನಲ್ಲಿ ಬಸ್ ಸಂಚಾರ ಸರಿಯಾಗಿ ಇಲ್ಲದಿರುವ ಕಾರಣ ಈ ಭಾಗದ ಜನರ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ವಿಟ್ಲದಿಂದ ಆಗಮಿಸುವ ಬಸ್‌ಗಳು ಕೆಲವೊಮ್ಮೆ ಲಾಲ್‌ಭಾಗ್‌ನಿಂದಲೇ ಟ್ರಿಪ್ ಮೊಟಕುಗೊಳಿಸಿ ಸಂಚರಿಸುತ್ತಿರು ವುದಾಗಿಯೂ ದೂರಲಾಗಿದೆ. ಬೆಳಿಗ್ಗಿನ ಹೊತ್ತು ಬೇಡಗುಡ್ಡೆಯಿಂದ ಒಂದು ಬಸ್ ವಿಟ್ಲಕ್ಕೆ ತೆರಳುತ್ತಿದ್ದು, ಇದು ಕೊನೆಯ ಟ್ರಿಪ್ ರಾತ್ರಿ ವೇಳೆ …

ಬಾಡೂರು ಎಸ್‌ಸಿ ಉನ್ನತಿಯಲ್ಲಿ 1 ಕೋಟಿ ರೂ. ವೆಚ್ಚದ ಯೋಜನೆ ಪೂರ್ತೀಕರಣ: ಶಾಸಕ ಉದ್ಘಾಟನೆ

ಬಾಡೂರು: ಪುತ್ತಿಗೆ ಪಂ.ನ ಬಾಡೂರು ಎಸ್‌ಸಿ ಉನ್ನತಿಯ ನಿವಾಸಿಗಳ ದೀರ್ಘ ಕಾಲದ ಕನಸು ಸಾಕಾರಗೊಂಡಿದೆ. ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಯಲ್ಲಿ ಒಳಪಡಿಸಿ ಒಂದು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಪೂರ್ತಿಗೊಳಿಸಿ ಲೋಕಾರ್ಪಣೆಗೈಯ್ಯಲಾಯಿತು. ಬಾಡೂರು ನಗರದ ಉನ್ನತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಕೆಎಂ ಅಶ್ರಫ್ ಯೋಜನೆಗಳ ಪೂರ್ತೀಕರಣ ಉದ್ಘಾಟಿಸಿದರು. ಶಾಸಕ ಎಕೆಎಂ ಅಶ್ರಫ್‌ರ ಶಿಫಾರಸು ಪ್ರಕಾರ ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಯಲ್ಲಿ ಬಾಡೂರು ನಗರವನ್ನು ಸೇರಿಸಲಾಗಿತ್ತು.  ಯೋಜ ನೆಯ ಅಂಗವಾಗಿ ಬಾಡೂರು …

ಸೇವಾ ಸಂಕಲ್ಪ ಅಭಿಯಾನ: ಕುಂಬಳೆಯಲ್ಲಿ ವೈದ್ಯಕೀಯ ಶಿಬಿರ

ಕುಂಬಳೆ: ಬಿಜೆಪಿ ಕುಂಬಳೆ ಮಂಡಲ ಸಮಿತಿ ವತಿಯಿಂದ ಸೇವಾ ಸಂಕಲ್ಪ ಅಭಿಯಾನ ಮೋದಿ 25ರ ಅಂಗವಾಗಿ ಆಯೋಜಿಸಲಾದ ಸೇವಾ ಸೇತು ಅಭಿಯಾನ ಕಾರ್ಯಕ್ರಮ ಕುಂಬಳೆ ಜಯಮಾರುತಿ ವ್ಯಾಯಾಮ ಶಾಲೆಯಲ್ಲಿ ನಡೆಯಿತು.ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇ± Àದಿಂದ ಆಯೋಜಿಸಲಾದ ಈ ಕಾರ್ಯ ಕ್ರಮದಲ್ಲಿ ಉಚಿತ ವೈದ್ಯಕೀಯ ತಪಾ ಸಣಾ ಶಿಬಿರ, ನೇತ್ರ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ ಹಾಗೂ ರಕ್ತ ತಪಾಸಣೆ ನಡೆಸಲಾ ಯಿತು. ಡಾ| ಸಾಗರ್ ನೇತ್ರ ತಪಾಸಣೆ ನಡೆಸಿದರು. ಕೇರಳ ಆಯುರ್ವೇದಿಕ್ ಸಂಸ್ಥೆಯ ಡಾ| …