ಕೊಡುಂಗಲ್ಲೂರಿನಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಕಾಸರಗೋಡಿನ ವಸತಿಗೃಹದಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಕೊಡುಂಗಲ್ಲೂರಿನಿಂದ ನಾಪತ್ತೆಯಾದ ವಿದ್ಯಾರ್ಥಿ ನಗರದ ವಸತಿಗೃಹದಲ್ಲಿ ಫ್ಯಾನ್ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತೃಶೂರು ಕೊಡುಂಗಲ್ಲೂರು ಅಳಿಕ್ಕೋಡು ತಾಪಿಲ್ನ ಟಿ. ಮೊಹಮ್ಮದ್ ನಸೀರ್ ಎಂಬವರ ಪುತ್ರ ಟಿ.ಎಂ. ಅಬ್ದುಲ್ ನಿಹಾಲ್ ಮೃತವ್ಯಕ್ತಿ ಎಂದು ಪೊಲೀಸರು ನಡೆಸಿದ ತನಿಖೆಯಲ್ಲಿ ಗುರುತಿಸಲಾಗಿದೆ. ಈತ ಅಕ್ಟೋಬರ್ 14ರಂದು ನಾಪತ್ತೆಯಾಗಿರುವುದಾಗಿ ಮನೆಯವರು ಕೊಡುಂಗಲ್ಲೂರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ಶೋಧ ಆರಂಭಿಸಿದ್ದರು. ಈಮಧ್ಯೆ ನಿಹಾಲ್ ಕಾಸರಗೋಡಿಗೆ ಬಂದು ನಗರದ ಬ್ಯಾಂಕ್ ರಸ್ತೆ ಬಳಿಯ …