ಕರ್ನಾಟಕದಿಂದ ಶೌಚಾಲಯ ತ್ಯಾಜ್ಯ ತಂದು ಸಾರ್ವಜನಿಕ ಸ್ಥಳದಲ್ಲಿ ಉಪೇಕ್ಷೆ: ನೆಮ್ಮದಿ ಕಳೆದುಕೊಂಡ ಸ್ಥಳೀಯರು

ಮಂಜೇಶ್ವರ: ಕರ್ನಾಟಕದಿಂದ ಶೌಚಾಲಯ ತ್ಯಾಜ್ಯವನ್ನು ಟ್ಯಾಂಕರ್ ಮೂಲಕ ತಂದು ಕೇರಳದ ಗಡಿ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಉಪೇಕ್ಷಿಸುವ ಕೃತ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊನ್ನೆ ರಾತ್ರಿ ಮಂಜೇಶ್ವರದ ಬಡಾಜೆ ಚೌಕಿಯ ಸಾರ್ವಜನಿಕ ಸ್ಥಳದಲ್ಲಿ ಟ್ಯಾಂಕರ್ ಲಾರಿ ಮೂಲಕ ತಂದ ಶೌಚಾಲಯ ತ್ಯಾಜ್ಯವನ್ನು ಸುರಿಯಲÁಗಿದೆ. ಇದರಿಂದ ದುರ್ಗಂಧ ಹರಡಿದ್ದು, ಸ್ಥಳೀಯರ ನೆಮ್ಮದಿ ಕೆಡಿಸಿದೆ. ಈ ರಸ್ತೆಯ ಮೂಲಕ ಶಾಲಾ, ಕಾಲೇಜು ಮಕ್ಕಳ ಸಹಿತ ದಿನ ನಿತ್ಯ ನೂರಾರು ಜನರು ನಡೆದು ಹೋಗುತ್ತಿದ್ದಾರೆ. ತ್ಯಾಜ್ಯದಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುವ ಸಾಧ್ಯತೆಯಿದ್ದು, …

ಅಂಗಡಿಯಿಂದ ಕಳವುಗೈದ ಪ್ರಕರಣ:ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಕುಂಬಳೆ: ಎಂಟು ವರ್ಷಗಳ ಹಿಂದೆ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಅಡ್ಕ ವಳಯಂ ರಸ್ತೆಯಲ್ಲಿರುವ ಅಂಗಡಿಯಿಂದ ಕಳವು ನಡೆಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆಗೀಡಾಗಿದ್ದಾನೆ. ಬೆಂಗಳೂರು ಪಗಳಡ್ಕ ಬೀಜಾರು ನಿವಾಸಿ  ಮುಹಮ್ಮದ್ ಅಸಾಸ್  ಯಾನೆ ಅಸರ್ (3೦) ಎಂಬಾತನನ್ನು ಕುಂಬಳೆ ಪೊಲೀಸರು ನಿನ್ನೆ ಮಂಗಳೂರಿನಿಂದ ಬಂಧಿಸಿದ್ದಾರೆ. ಕುಂಬಳೆ ಸಿ.ಐ ಆರ್.ಪಿ ಅನೂಪ್‌ಕೃಷ್ಣರ ನಿರ್ದೇಶ ಪ್ರಕಾರ  ಎಸ್‌ಎಚ್‌ಒ ಎಸ್.ಅನೂಪ್, ಎಸ್‌ಐ ಶಶಿ, ಸಿಪಿಒಗಳಾದ ವಸಂತನ್, ಸುಧೀಶ್ ಎಂಬಿವರು  ಸೇರಿ ಆರೋಪಿಯನ್ನು ಸೆರೆಹಿಡಿದಿದ್ದಾರೆ. 2018 ಜನವರಿ 29ರಂದು ರಾತ್ರಿ    ಶಿರಿಯ …

ಉಕ್ಕಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆಯ ಒ.ಪಿ ಸೇವೆಗಳು ಕಾಸರಗೋಡು ಜನರಲ್ ಆಸ್ಪತ್ರೆಗೆ ಸ್ಥಳಾಂತರ

ಕಾಸರಗೋಡು: ಉಕ್ಕಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆಯ ಒ.ಪಿ ಸೇವೆಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸ ಲಾಗುವುದು. ಮೆಡಿಕಲ್ ಕಾಲೇಜಿನ ಒ.ಪಿ ಸೇವೆಗಳನ್ನು ಜನರಲ್ ಆಸ್ಪತ್ರೆಗೆ  ಸ್ಥಳಾಂತರಿಸುವುದಾಗಿ  ತಿಳಿಸಿ ಪ್ರಾಂಶುಪಾಲರು ಕಾಲೇಜಿನ ಗೋಡೆಯ ಮೇಲೆ ನಿನ್ನೆ ಕನ್ನಡ ಹಾಗೂ ಮಲೆಯಾಳದಲ್ಲಿ ಮುದ್ರಿತ ನೋಟೀಸು ಅಂಟಿಸಿದ್ದಾರೆ. ಮೆಡಿಕಲ್ ಕಾಲೇಜಿನ  ಒ.ಪಿ ಸೇವೆಗಳನ್ನು  ಸ್ಥಳಾಂತರಿಸುವುದಿಲ್ಲ ವೆಂದು ಕಳೆದವಾರ  ಮೆಡಿಕಲ್ ಕಾಲೇಜಿಗೆ  ಮೊಟ್ಟಮೊದಲ ಬಾರಿ  ಭೇಟಿ ನೀಡಿದ ಆರೋಗ್ಯ ಸಚಿವ ಜನರಿಗೆ ಭರವಸೆ ನೀಡಿದ್ದರು.  ಇದೀಗ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸುವುದಾಗಿ ಅಧಿಕಾರಿಗಳು ತಿಳಿಸುತ್ತಿದ್ದಾರಾದರೂ …

ಉಪ್ಪಳ ವಲಯ ಸಂಯುಕ್ತ ಜಮಾಯತ್ ಖಾಝಿಯಾಗಿ  ಕೊಯ್ಯೋಡ್ ಉಮ್ಮರ್ ಮುಸ್ಲಿಯಾರ್ ಪದಗ್ರಹಣ ನಾಳೆ

ಉಪ್ಪಳ: ಸಮಸ್ತ ಕೇರಳ ಜಂಇಯತ್ತುಲ್ ಉಲಮ ಪ್ರಧಾನ ಕಾರ್ಯದರ್ಶಿ ಕೊಯ್ಯೋಡ್ ಪಿ.ಪಿ. ಉಮ್ಮರ್ ಮುಸ್ಲಿಯಾರ್ ಉಪ್ಪಳ ವಲಯ ಸಂಯುಕ್ತ ಜಮಾಯತ್ ಖಾಝಿಯಾಗಿ ಅಧಿಕಾರ ಸ್ವೀಕರಿಸುವರು. ಪದಗ್ರಹಣ ಕಾರ್ಯಕ್ರಮ ನಾಳೆ ಬೆಳಿಗ್ಗೆ 1೦ ಗಂಟೆಗೆ ಅಹ್ಲೆ ಸುನ್ನತ್ ಹನಫಿ ಜಾಮಿಅ ಮಸೀದಿ ಅಂಗಣದ ಕೆ. ಆಲಿಕುಟ್ಟಿ ಉಸ್ತಾದ್ ನಗರದಲ್ಲಿ ನಡೆಯಲಿದೆ. ಸಮಸ್ತ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್, ಸಂಯುಕ್ತ ಜಮಾಯತ್ ಗೌರವಾಧ್ಯಕ್ಷ ಕೆ.ಎಸ್ ಅಲಿ ತಂಙಳ್ ಕುಂಬೋಳ್, ಪಾಣಕ್ಕಾಡ್ ಸಯ್ಯೀದ್ ಅಬ್ಬಾಸಲಿ ಶಿಹಾಬ್ ತಂಙಳ್, ಸಯ್ಯೀದ್ …

ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಕೂಡ್ಲು ಶಾಲೆಗೆ ಯಕ್ಷಗಾನದಲ್ಲಿ ಸತತ 4ನೇ ಬಾರಿ ಎ ಗ್ರೇಡ್

ಕಾಸರಗೋಡು:ಚೆರ್ಕಳ ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ಕಾಸರಗೋಡು ಉಪಜಿಲ್ಲಾ ಶಾಲಾಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ ಪಡೆದು ಸತತ ನಾಲ್ಕನೇ ಬಾರಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ತಂಡದ ತರಣಿಸೇನ ಕಾಳಗದ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು. ಖ್ಯಾತ ಯಕ್ಷಗಾನ ಕಲಾವಿದ ನಾಟ್ಯಗುರು ರಂಜಿತ್ ಗೋಳಿಯಡ್ಕ ನಿರ್ದೇಶಿಸಿದ ತಂಡದಲ್ಲಿ ಶ್ರೀರಾಮನಾಗಿ ಕೃಪಾನಿಧಿ, ಲಕ್ಷ್ಮಣನಾಗಿ ದ್ವಿತಿ, ಹನುಮಂತನಾಗಿ ಶರಣ್ ಪಾಯಿಚ್ಚಾಲು, ವಿಭೀಷಣನಾಗಿ ಮನ್ವಿತ್, ರಾವಣನಾಗಿ ಅದ್ವಿತ್, ತರಣಿಸೇನನಾಗಿ ಯಶ್ವನ್ ಶೆಟ್ಟಿ, ಸರಮೆಯಾಗಿ ಧನ್ವಿ ಅತ್ಯುತ್ತಮ ಪ್ರದರ್ಶನ …

ಬದಿಯಡ್ಕ: ಕೆ.ವಿ.ವಿ.ಇ.ಎಸ್. ಅಭಿನಂದನ ಸಭೆ

ಬದಿಯಡ್ಕ : ಕೆ.ವಿ.ವಿ.ಇ.ಎಸ್ ಬದಿಯಡ್ಕ ಘಟಕದ ಆಶ್ರಯದಲ್ಲಿ ನೂತನ ಮಹಿಳಾ ವಿಂಗ್ ಹಾಗೂ ಯೂತ್ ವಿಂಗ್ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಸಮನ್ವಯ ಸಮಿತಿಗೆ ಬೆನ್ನೆಲುಬಾಗಿ ಕಾರ್ಯನಿರ್ವ ಹಿಸಲು ಈ ಎರಡೂ ಸಮಿತಿಗಳಿಗೆ ಸಾಧ್ಯವಾಗಲಿ ಎಂದು ಜಿಲ್ಲಾ ಕಾರ್ಯ ದರ್ಶಿ ಕುಂಜಾರ್ ಮುಹಮ್ಮದ್ ಕುಂಞÂ ಹಾಜಿ ಅಭಿನಂದನಾ ಉದ್ಘಾಟಿಸಿ ಶುಭ ಹಾರೈಸಿದರು.ಘಟಕದ ಅಧ್ಯಕ್ಷ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರವಿ ನವಶಕ್ತಿ ಸ್ವಾಗತಿಸಿದರು. ಕೋಶಾಧಿಕಾರಿ ಜ್ಞಾನದೇವ ಶೆಣೈ, ಉಪಾಧ್ಯಕ್ಷ ರಾಜು ಸ್ಟೀಫನ್, ಕಾರ್ಯದರ್ಶಿ ಉದಯಶಂಕರ್, ಯೂತ್ ವಿಂಗ್ ಅಧ್ಯಕ್ಷ …

ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ  ಏಕಾಹ ಭಜನೆ ಸಮಾಪ್ತಿ : 52ದಿನಗಳ ಅನ್ನ ಸಂತರ್ಪಣೆ ಆರಂಭ

ಉಪ್ಪಳ: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ ಏಕಾಹ ಭಜನೆ ವಿವಿಧ ಕಾರ್ಯಕ್ರಮಗಳೊಂದಿಗೆ ನಿನ್ನೆ ನಡೆ ಯಿತು. ಬೆಳಿಗ್ಗೆ ಗಣಪತಿ ಹೋಮ, ದೀಪ ಪ್ರತಿಷ್ಠೆ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಏಕಾಹ ಭಜನೆಯ ದೀಪ ಪ್ರಜ್ವಲನೆ ಗೊಳಿಸಿದರು. ಮಧ್ಯಾಹ್ನ ಮಹಾಪೂಜೆ, ಸಂಜೆ ಮಂಗಳಾಚರಣೆಯೊAದಿಗೆ ಏಕಾಹ ಭಜನೆ ಸಮÁಪ್ತಿಗೊಂಡಿತು. ಮಂದಿರದಲ್ಲಿ ನಿನ್ನೆ ಆರಂಭಗೊAಡ ಅನ್ನ ಸಂತರ್ಪಣೆ ಜನವರಿ ೬ರ ತನಕ ಮುಂದುವರಿಯಲಿದೆ. ಈ ವೇಳೆ ಪ್ರತೀ ದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 12.3೦ರ ತನಕ ಭಜನಾ ಸಂಕೀರ್ತನೆ, ನಡೆಯಲಿದೆ.

ವರ್ಕಾಡಿ ಪಂಚಾಯತ್‌ನಲ್ಲಿ ಆಶಾ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಅವ್ಯವಹಾರ- ಬಿಜೆಪಿ ಆರೋಪ

ಮಜೀರ್‌ಪಳ್ಳ: ವರ್ಕಾಡಿ ಪಂಚಾ ಯತ್‌ನಲ್ಲಿ ಆಶಾ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಅವ್ಯವಹಾರ ಹಾಗೂ ಸ್ವಜನ ಪಕ್ಷಪಾತ ನಡೆಯುತ್ತಿದ್ದು ಬಿಜೆಪಿ ಕಾನೂನು ಕ್ರಮಕ್ಕೆ ಮುಂದಾಗಿದೆ. ಸರಕಾರದ ಆದೇಶ ಪ್ರಕಾರ ನೂತನ ಎರಡು ವಾರ್ಡ್ಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರೋಗ್ಯಾಧಿಕಾರಿ ಹಾಗೂ ಪಂಚಾಯತ್ ಪ್ಯಾನಲ್ ನಡೆಸಬೇಕು. ಆದರೆ ಪಂಚಾಯತ್‌ನಲ್ಲಿ ಆಶಾ ಕಾರ್ಯಕರ್ತೆಯರ ನೇಮಕಾತಿ ಯಲ್ಲಿ ಆಡಳಿತ ಸಮಿತಿ ಸರಕಾರ ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿAದ ಬಿಜೆಪಿ ಇದರ ವಿರುದ್ಧ ದೂರು ಸಲ್ಲಿಸಿದೆ. ವಾರ್ಡ್ ೧೬ರಲ್ಲಿನ ಆಶಾ ಕಾರ್ಯಕರ್ತೆ ಹುದ್ದೆಗೆ ಅದೇ ವಾರ್ಡ್ನ ನಿವಾಸಿಗಳು ಸಂದರ್ಶನಕ್ಕೆ …