ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಪೆರ್ಮುದೆ ಪಳ್ಳದಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ೧೮೦ ಮಿಲ್ಲಿಯ ೧೬ ಪ್ಯಾಕೆಟ್ ಕರ್ನಾಟಕ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಿದೂರು ಕಳತ್ತೂರು ಪಂಜಿಕ್ಕಲ್‌ನ ಜೋನ್ ಪೋಲ್ ಡಿ (೩೬) ಎಂಬಾತನನ್ನು ಸೆರೆಹಿಡಿ ಯ ಲಾಗಿದೆ. ನಿನ್ನೆ ಸಂಜೆ ಕುಂಬಳೆ ರೇಂಜ್ ಅಬಕಾರಿ ಪ್ರಿವೆಂಟೀವ್ ಆಫೀಸರ್ ಮನಾಫ್ ಕೆ.ವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪೆರ್ಮುದೆ ಪಳ್ಳ ಸಹಿತ ಪರಿಸರ ಪ್ರದೇಶಗಳಲ್ಲಿ ವ್ಯಾಪಕವಾಗಿ ಕರ್ನಾಟಕ ಮದ್ಯ ಮಾರಾಟವಾಗು ತ್ತಿದೆಯೆಂಬ ದೂರಿನ ಹಿನ್ನೆಲೆಯಲ್ಲಿ  ಕಾರ್ಯಾ ಚರಣೆ ನಡೆಸ ಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page