ಯುವತಿಯ ನೀರಿನ ಬಾಟಲಿಯಲ್ಲಿ ಮೂತ್ರ ತುಂಬಿಸಿಟ್ಟ ಸಹೋದ್ಯೋಗಿಗಳಾದ ಇಬ್ಬರ ವಿರುದ್ಧ ಕೇಸು

ಕುಂಬಳೆ: ಯುವತಿಯ ನೀರಿನ  ಬಾಟಲಿಯಲ್ಲಿ  ಮೂತ್ರ ತುಂಬಿಸಿಟ್ಟ ಆರೋಪದಂತೆ  ಆಕೆಯ ಸಹೋದ್ಯೋಗಿಗಳಾದ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನೆಕ್ರಾಜೆ ಗ್ರಾಮದಲ್ಲಿ  ವಾಸಿಸುವ 30ರ ಹರೆಯದ ಯುವತಿ ನೀಡಿದ ದೂರಿನಂತೆ  ಮೊಗ್ರಾಲ್‌ನ  ಖಾಸಗಿ ಸಂಸ್ಥೆಯೊಂದರ ನೌಕರನಾದ ವೈಶಾಖ್, ಎಬಿನ್ ಎಂಬಿವರ ವಿರುದ್ಧ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ. ತನಿಖೆಯಂಗವಾಗಿ ಸಂಸ್ಥೆಯ ಸಿಸಿ ಟಿವಿ ಕ್ಯಾಮರಾಗಳನ್ನು ಇಂದು ಪರಿಶೀಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜುಲೈ 25ರಂದು ಸಂಜೆ 5.30ರಿಂದ 27ರಂದು ಬೆಳಿಗ್ಗೆ 9.30ರ ಸಮಯದಲ್ಲಿ ಯುವತಿಯ ನೀರಿನ ಬಾಟಲಿಯಲ್ಲಿ ಮೂತ್ರ ತುಂಬಿಸಿಡಲಾಗಿದೆಯೆಂದು ದೂರಲಾಗಿದೆ. ಯುವತಿ ನೀರು ಕುಡಿಯಲು ಉಪಯೋಗಿಸುವ ಬಾಟಲಿಯನ್ನು ಸಂಸ್ಥೆಯ ಕೊಠಡಿಯೊಳಗೆ ಇರಿಸಲಾಗಿತ್ತು.  ಆ ಬಾಟಲಿಯಲ್ಲಿ ಆಕೆಯ ಸಹೋದ್ಯೋಗಿಗಳಾದ ಇಬ್ಬರು ಸೇರಿ ಮೂತ್ರ ತುಂಬಿಸಿ ಇರಿಸಿದ್ದಾರೆನ್ನ ಲಾಗಿದೆ. ಯುವತಿಯ ಜೀವಕ್ಕೆ ಅಪಾಯವುಂಟುಮಾಡುವ ರೀತಿಯ  ರೋಗಗಳು ಹರಡಲು ಸಾಧ್ಯತೆ ಇದೆಯೆಂಬ ಅರಿವಿನೊಂದಿಗೆ ಆರೋಪಿಗಳು ಈ ಕ್ರೂರ ಕೃತ್ಯ ನಡೆಸಿದ್ದಾರೆಂದು ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.

You cannot copy contents of this page