ಕುಂಬಳೆ: ಕುಂಟಂಗೇರಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷರು ಹಾಗೂ ಸುಮಾರು ೫೪ ವರ್ಷಗಳಿಂದ ಮಂದಿರದಲ್ಲಿ ಪೂಜೆ ನಿರ್ವಹಿಸುತ್ತಿದ್ದ ಕೃಷ್ಣ ಚೆಟ್ಟಿಯಾರ್‌ರನ್ನು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮಂದಿರದ ತಂತ್ರಿವರ್ಯರಾದ ಶ್ರೀ ಯೋಗೀಶ ಕಡಮಣ್ಣಾಯರು ಕೃಷ್ಣ ಚೆಟ್ಟಿಯಾರ್‌ರನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು. ಧಾರ್ಮಿಕ ಮುಂದಾಳು ಕೆ. ಶಂಕರ ಆಳ್ವ ಕೋಟೆಕ್ಕಾರು, ಮಂದಿರದ ಅಧ್ಯಕ್ಷ ವರುಣ್ ಕುಮಾರ್, ಮಹಿಳಾ ಸಮಿತಿ ಅಧ್ಯಕ್ಷೆ ಗುಲಾಬಿ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ, ಕುಂಬಳೆ ಪಂ. ಸದಸ್ಯ ರಮೇಶ್ ಭಟ್ ಸ್ವಾಗತಿಸಿ, ಸಮಿತಿಯ ಸದಸ್ಯೆ ಸರಸ್ವತಿ ವಂದಿಸಿದರು.







