ಮದುವೆ ಸಿದ್ಧತೆಯಲ್ಲಿದ್ದ ಯುವತಿ ಕುಸಿದುಬಿದ್ದು ಮೃತ್ಯು

 ಕಣ್ಣೂರು:  ಮುಂದಿನ ಆದಿತ್ಯವಾರ ಮದುವೆ ನಡೆಯಬೇಕಿದ್ದ ಯುವತಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಶ್ರೀಕಂಠಾಪುರ ಕೊಟ್ಟೂರಿನ ಸಿ.ಪಿ. ಪೋಕರ್ ಎಂಬವರ ಪುತ್ರಿ ಫಾತಿಮತ್ ರಾನ (23) ಮೃತ ಯುವತಿ. ಈಕೆ  ಮಾಂಙಾಟ್ ಪರಂಬ್ ಕ್ಯಾಂಪಸ್ ನಲ್ಲಿ  ಬಿ.ಎಡ್ ವಿದ್ಯಾರ್ಥಿನಿಯಾಗಿದ್ದಳು.  ಅಧ್ಯಾಪಕ ತರಬೇತಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಂತೆ  ನಿನ್ನೆ ಮುಂಜಾನೆ  ಯುವತಿ ಕುಸಿದು ಬಿದ್ದಿದ್ದಳು. ಕೂಡಲೇ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತಳು ತಾಯಿ ಕೆ.ವಿ. ರಮೀಸ,  ಸಹೋದರ ಮುಹಮ್ಮದ್ ರಾಸಿ ಮೊದಲಾದವರನ್ನು ಅಗಲಿದ್ದಾಳೆ

RELATED NEWS

You cannot copy contents of this page