ಕಾಸರಗೋಡು ಲೋಕಸಭಾ ಕ್ಷೇತ್ರ: ಒಟ್ಟು 10 ಮಂದಿಯಿಂದ ನಾಮಪತ್ರ ಸಲ್ಲಿಕೆ

ಕಾಸರಗೋಡು: 2024ರ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಐದು ಮಂದಿ ಅಭ್ಯರ್ಥಿಗಳು ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ. ಸಿಪಿಎಂನ ಎಂ.ವಿ. ಬಾಲಕೃಷ್ಣನ್, ಐಕ್ಯರಂಗದ ರಾಜ್ ಮೋಹನ್ ಉಣ್ಣಿತ್ತಾನ್, ಸಿ.ಎಚ್. ಕುಂಞಂಬು, ಕೆ. ಮನೋಹರನ್ (ಸ್ವತಂತ್ರ), ವಿ. ರಾಜೇಂದ್ರನ್ (ಸ್ವತಂತ್ರ) ನಾಮಪತ್ರ ಸಲ್ಲಿಸಿದವರು. ಮೊನ್ನೆ ನಾಮಪತ್ರ ಸಲ್ಲಿಸಿದ್ದ ಟಿ. ಅನೀಶ್ ಕುಮಾರ್ ನಿನ್ನೆ ಪುನಃ ಒಂದು ಪ್ರತಿ ನಾಮಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದ್ದಾರೆ. ಇದರೊಂದಿಗೆ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸುವ 10 ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.

Leave a Reply

Your email address will not be published. Required fields are marked *

You cannot copy content of this page