­­ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ :ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ಶ್ರದ್ಧಾಭಕ್ತಿಯ ಹಸಿರುವಾಣಿ ಮೆರವಣಿಗೆ

ಬದಿಯಡ್ಕ: ಸಹಸ್ರಾರು ಮಂದಿ ಭಗವದ್ಬಕ್ತರ ಶ್ರದ್ಧಾ ಭಕ್ತಿಯ ಪಾಲ್ಗೊಳ್ಳುವಿಕೆಯೊಂದಿಗೆ ಅದ್ದೂರಿಯ  ಹಸಿರುವಾಣಿ ಮೆರವಣಿಗೆ  ಆಗಮಿಸುವು ದರೊಂದಿಗೆ  ಪೆರಡಾಲ ಶ್ರೀ ಉದನೇ ಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಯಿತು. ನಿನ್ನೆ ಮುಂ ಜಾನೆ ಶ್ರೀ ಕ್ಷೇತ್ರದಲ್ಲಿ ಗಣಪತಿ ಹೋಮ,  ಉಗ್ರಾಣ ಮುಹೂರ್ತ ನಡೆಯಿತು.  ಬಳಿಕ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಆನೆಮಜಲು ದೀಪ ಬೆಳಗಿಸಿದರು. ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನ ದಲ್ಲಿ  ಭಗವದ್ಭಕ್ತರು ಒಟ್ಟುಗೂಡಿ ಪ್ರಾರ್ಥನೆ ಸಲ್ಲಿಸಿ ಹಸಿರುವಾಣಿ …

ಶ್ರೀಕೃಷ್ಣ ಚಿಕನ್ ಕುಳಿಮಂದಿ ಸೇವಿಸುವ ರೀತಿಯ ಚಿತ್ರದೊಂದಿಗೆ ವಿಷುಶುಭಾಶಯ: ಹೋಟೆಲ್ ಮಾಲಕ ಸೆರೆ

ಆಲಪ್ಪುಳ: ಭಗವಾನ್ ಶ್ರೀಕೃಷ್ಣ ‘ಚಿಕನ್ ಕುಳಿಮಂದಿ’ ಸೇವಿಸುವ ರೀತಿಯ ಚಿತ್ರದೊಂದಿಗೆ ವಿಷು ಶುಭಾಶಯ ತಿಳಿಸಿದ ಹೋಟೆಲ್ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚೇರ್ತಲದ ಮೆಹರ್‌ಮಂದಿ ರೆಸ್ಟೋರೆಂಟ್‌ನ ಮಾಲಕನಾದ ಅರ್ಷಾದ್ ಎಂಬಾತನನ್ನು  ಬಂಧಿಸಲಾ ಗಿದೆ. ಗಲಭೆ ಸೃಷ್ಟಿಸುವ ಉದ್ದೇಶ ದೊಂದಿಗೆ  ಮನಃಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ತಿಳಿಸಿ ಭಾರತೀಯ ನ್ಯಾಯ ಸಂಹಿತೆಯ ಕಾಯ್ದೆ ಪ್ರಕಾರ ಕೇಸು ದಾಖಲಿಸಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಂದು ವರ್ಷ ವರೆಗೆ ಶಿಕ್ಷೆ ಲಭಿಸಬಹುದಾದ ಕಾಯ್ದೆಯಂತೆ ಕೇಸು ದಾಖಲಿಸಲಾಗಿದೆ. ತಣ್ಣೀರ್ ಮುಕ್ಕಂ ನಿವಾಸಿಯಾದ ನ್ಯಾಯವಾದಿ …

ಅಖಿಲ ಕೇರಳ ಮೆಲಕುಡಿ- ಕುಡಿಯ ಸೇವಾ ಸಂಘದ ವಾರ್ಷಿಕ ಸಮ್ಮೇಳನ, ಅಂಬೇಡ್ಕರ್ ಜಯಂತಿ ಆಚರಣೆ

ಬಾಯಾರು: ಅಖಿಲ ಕೇರಳ ಮೆಲಕುಡಿ- ಕುಡಿಯ ಸೇವಾ ಸಂಘ ಧರ್ಮತಡ್ಕ ಇದರ 23ನೇ ವಾರ್ಷಿಕ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ ಇತ್ತೀಚೆಗೆ ಬೆರಿಪದವು ವಿದ್ಯಾರಣ್ಯ ಎ.ಎಲ್.ಪಿ ಶಾಲೆಯಲ್ಲಿ ನಡೆಯಿತು. ನಿವೃತ ಬ್ಯಾಂಕ್ ಮೆನೇಜರ್ ಕರಿಯ ಕುಡಿಯ ದೀಪ ಬೆಳಗಿಸಿ, ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಶಂಕರ ಕುಡಿಯ ಅಧ್ಯಕ್ಷತೆ ವಹಿಸಿದರು. ಸಮಾರಂಭದಲ್ಲಿ 80 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಐದು ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹ ಧನ ವಿತರಣೆ, …

ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ, ಗಾಂಜಾ ಸಹಿತ ಇಬ್ಬರ ಸೆರೆ

ಬದಿಯಡ್ಕ: ಕಾರಿನಲ್ಲಿ ಮಾದಕವಸ್ತುಗಳಾದ ಗಾಂಜಾ ಹಾಗೂ ಎಂಡಿಎಂಎ ಸಹಿತ ಪ್ರಯಾಣಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  ಬದಿಯಡ್ಕ ಚೆನ್ನಾರಕಟ್ಟೆ ನಿವಾಸಿ ರಂಜಿತ್ ರೈ (36), ಸುಳ್ಯ ಆಲೆಟ್ಟಿ ಸಂಗಂ ನಿಲಯದ  ಪೂಜಿತ್ ಸಾಗರ್ ಎಸ್.ವಿ (29) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ನಿನ್ನೆ ಸಂಜೆ 6.30ಕ್ಕೆ  ಬದಿಯಡ್ಕ-ಮುಳ್ಳೇರಿಯ ರಸ್ತೆಯಲ್ಲಿ ಕನ್ಯಾನ ಕನ್ವೆನ್ಶನ್ ಹಾಲ್‌ನ ಮುಂಭಾಗದ ರಸ್ತೆಯಲ್ಲಿ ಬದಿಯಡ್ಕ ಇನ್‌ಸ್ಪೆಕ್ಟರ್ ಅನೂಪ್ ಕೃಷ್ಣ ಆರ್.ಪಿ ನೇತೃತ್ವದಲ್ಲಿ ಕಾರು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ 0.36 ಗ್ರಾಂ ಎಂಡಿಎಂಎ  ಹಾಗೂ 95.89 ಗ್ರಾಂ …

ಇಲಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಎ.ಸಿ ಮೆಕ್ಯಾನಿಕ್ ಮೃತ್ಯು

ಬದಿಯಡ್ಕ: ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು.  ಕುಂಬ್ಡಾಜೆ ಉಬ್ರಂಗಳ ಪಡುಮೂಲೆ ನಿವಾಸಿ ಬಾಲಕೃಷ್ಣ ಪೂಜಾರಿ ಎಂಬವರ ಪುತ್ರ  ಅಕ್ಷಿತ್ (21) ಮೃತಪಟ್ಟ ಯುವಕನಾಗಿದ್ದಾರೆ. ಇವರು ಎ.ಸಿ ಮೆಕ್ಯಾನಿಕ್ ಆಗಿದ್ದರ. ಈ ತಿಂಗಳ 6ರಂದು ಮನೆಯಲ್ಲಿ  ಇಲಿವಿಷ ಸೇವಿಸಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಅಕ್ಷಿತ್ ಪತ್ತೆಯಾಗಿದ್ದರ.  ಇದರಿಂದ ಕೂಡಲೇ ಇವರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆದರೆ  ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಿದರೂ ಫಲಕಾರಿ ಯಾಗದೆ ನಿನ್ನೆ ಮಧ್ಯಾಹ್ನ ಇವರು …

ಗಾಯಗೊಂಡು ಆಸ್ಪತ್ರೆಗೆ ತಲುಪಿದ ಬೈಕ್ ಕಳವು ಪ್ರಕರಣದ ಆರೋಪಿ ಸೆರೆ: ಪೊಲೀಸ್ ಕಾವಲಿನಲ್ಲಿ ಚಿಕಿತ್ಸೆ

ಕುಂಬಳೆ: ಹೋಟೆಲ್‌ನ ಮುಂಭಾಗದಿಂದ ಬೈಕ್ ಕಳವು ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಬ್ರಾಣದ ರವಿ ಯಾನೆ ಡಬ್ಬಿ ರವಿ ಎಂಬಾತ ಬಂಧಿತ ಆರೋಪಿ. ಕುಂಬಳೆ ಕಂಚಿಕಟ್ಟೆಯ ಅಜಿತ್ ಕುಮಾರ್‌ರ ಪಲ್ಸರ್ ಬೈಕ್ ಕಳವುಗೈದ ಪ್ರಕರಣದಲ್ಲಿ ಡಬ್ಬಿ ರವಿಯನ್ನು ಬಂಧಿಸಲಾಗಿದೆ. ಕಳೆದ ಮಾರ್ಚ್ 28ರಂದು ಅಜಿತ್ ಕುಮಾರ್ ಕುಂಬಳೆ ಪೇಟೆಯ ಬಸ್ ನಿಲ್ದಾಣ  ಹಿಂಭಾಗದಲ್ಲಿರುವ ಹೋಟೆಲ್‌ವೊಂದರ ಬಳಿ ನಿಲ್ಲಿಸಿ ಆಹಾರ ಸೇವಿಸಲು ತೆರಳಿದ್ದರು. ಬಳಿಕ ಮರಳಿ ಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕೇಸು …

ಕಳತ್ತೂರು: ಮಹಿಳೆ ಸಾವಿಗೆ ಕಾರಣ ಹೃದಯಾಘಾತ

ಕುಂಬಳೆ: ಕಳತ್ತೂರಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಗೃಹಿಣಿ ಮೃತಪಟ್ಟಿರುವುದು ಹೃದಯಾಘಾತದಿಂದಾಗಿದೆಯೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಕಳತ್ತೂರು ಅಮೆರಿಕ ರಸ್ತೆಯ  ಅಬೂಬಕ್ಕರ್ ಎಂಬವರ ಪತ್ನಿ ಆಮಿನ (70) ಮೊನ್ನೆ ಬೆಳಿಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯಿಂದ ದುರ್ನಾತ ಬೀರುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.   ಪೊಲೀಸರು ತಲುಪಿ ಪರಿಶೀಲಿಸಿದಾಗ  ಮನೆಯೊಳಗೆ ಮಂಚದಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು. ಮನೆಯ ಮುಂಭಾಗ ಹಾಗೂ ಹಿಂಭಾಗದ ಬಾಗಿಲುಗಳು ತೆರೆದಿಟ್ಟ ಸ್ಥಿತಿಯಲ್ಲಿದ್ದುದು ಸಂಶಯಕ್ಕೆ ಕಾರಣವಾಗಿತ್ತು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ  …

ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

ಮಂಜೇಶ್ವರ: ಕುಂಡುಕೊಳಕೆ ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಮೃತದೇಹ ನಿನ್ನೆ ಸಂಜೆ ಪತ್ತೆಯಾಗಿದೆ. ಮಂಜೇಶ್ವರ ಚೌಕಿ ನಿವಾಸಿ ಉಮರುಲ್ ಫಾರೂಕ್ ಎಂಬವರ ಪುತ್ರ ಮೊಹಮ್ಮದ್ ಸೈನುಲ್ ಆಬಿದ್ (18)ನ ಮೃತದೇಹವನ್ನು ಮೀನು ಕಾರ್ಮಿಕರು ಪತ್ತೆಹಚ್ಚಿ ದಡಕ್ಕೆ ತಲುಪಿಸಿದ್ದಾರೆ. ಮೊನ್ನೆ ಸಂಜೆ ಕುಂಡು ಕೊಳಕೆ ಬೀಚ್‌ಗೆ ಸಂಬಂಧಿಕರೊಂದಿಗೆ ಬಂದಿದ್ದ ಮೊಹ್ಮದ್ ಸೈನುಲ್ ಆಬಿದ್ ಸಮುದ್ರ ಕಿನಾರೆಯಲ್ಲಿ ನಿಂತಿದ್ದ ವೇಳೆ ಬಲವಾದ ಅಲೆಯಲ್ಲಿ ಸಿಲುಕಿ ನಾಪತ್ತೆ ಯಾಗಿದ್ದನು. ಮಂಜೇಶ್ವರ ಪೊಲೀಸ್, ಅಗ್ನಿಶಾಮಕದಳ ಹಾಗೂ ಕರಾವಳಿ ಪೊಲೀಸರು ತಕ್ಷಣ ಶೋಧ ನಡೆಸಿ ದರೂ  …

ಹೃದಯಾಘಾತ: ಮಹಿಳೆ ನಿಧನ

ಉಪ್ಪಳ: ಹಲ್ಲಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ಮಹಿಳೆಗೆ ಹೃದಯಾಘಾತ ಉಂಟಾಗಿ ನಿಧನ ಹೊಂದಿದ ಘಟನೆ ನಡೆದಿದೆ. ಉಪ್ಪಳ ಸಮೀಪದ ಕೋಡಿಬೈಲು ನಿಡುಮದಿ ನಿವಾಸಿ ದಿ| ಬೋಜರ ಪತ್ನಿ ಸಾವಿತ್ರಿ (55) ನಿಧನ ಹೊಂದಿದವರು. ನಿನ್ನೆ ಸಂಜೆ ಇವರು ಉಪ್ಪಳದ ಖಾಸಗಿ ಆಸ್ಪತ್ರೆಗೆ ಹಲ್ಲಿನ ಚಿಕಿತ್ಸೆಗೆಂದು ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಉಂಟಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಿ ನಿಧನ ಹೊಂದಿದ್ದಾರೆ. ಮೃತರು ತಾಯಿ ಸುಶೀಲ, ಮಕ್ಕಳಾದ ರೂಪೇಶ್, ರೂಪಿಕ, ಅಳಿಯ ರಂಜಿತ್, ಸಹೋದರಿಯರಾದ ಚಂದ್ರಾ …

ಆಟವಾಡುತ್ತಿದ್ದ ಬಾಲಕನಿಗೆ ಸೂರ್ಯಾಘಾತ: ರಾಜ್ಯದ 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್: ಎರಡು ದಿನ ಕಟ್ಟೆಚ್ಚರ

ಕಾಸರಗೋಡು: ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದ ಬಾಲಕ ಸೂರ್ಯಾಘಾತಕ್ಕೊಳಗಾಗಿ ಸುಟ್ಟು ಗಾಯಗೊಂಡ ಘಟನೆ ನಡೆದಿದೆ. ಹೊಸದುರ್ಗ ಇಟ್ಟುಮ್ಮಲ್‌ನ ರಹ್ಮಾನ್ ಪಾತ್ತೂರು-ಜುವೈರಿಯಾ ದಂಪತಿ ಪುತ್ರ ಮೊಹಮ್ಮದ್  ಜುಬೈರ್ (13) ಸೂರ್ಯಾಘಾತ ಕ್ಕೊಳಗಾದ ಬಾಲಕ. ಈತ ಸ್ನೇಹಿತ ರೊಂದಿಗೆ  ಸುಡು ಬಿಸಿಲಲ್ಲಿ ಫುಟ್ಬಾಲ್‌ಆಟವಾಡುತ್ತಿದ್ದ ವೇಳೆ ತಾಪಾಘಾತಕ್ಕೊಳಗಾಗಿದ್ದು ಆತನನ್ನು ಅಜಾನೂರು ಕುಟುಂಬ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ತಾಪಮಾನ ಮಟ್ಟ ಗರಿಷ್ಠ ಮಟ್ಟಕ್ಕೇರಿದ್ದು, ಇದರಿಂದ ಕಾಸರಗೋಡು ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತಾಪಮಾನ …