ಜ್ಯೋತಿಷ್ಯಾಲಯದಲ್ಲಿ ಗಾಂಜಾ ಪತ್ತೆ: ಜ್ಯೋತಿಷಿ ಬಂಧನ
ಹೊಸದುರ್ಗ: ಜ್ಯೋತಿಷ್ಯಾಲ ಯದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಪತ್ತೆಯಾಗಿದೆ. ಪಯ್ಯನ್ನೂರು ಬಸ್ ನಿಲ್ದಾಣ ಸಮೀಪ ಕಾರ್ಯಾಚರಿ ಸುವ ಜ್ಯೋತಿಷ್ಯಾಲಯದಿಂದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕೇಸು ದಾಖಲಿಸಿಕೊಂಡ ಪಯ್ಯನ್ನೂರು ಪೊಲೀಸರು ಜ್ಯೋತಿಷ್ಯಾಲಯ ನಡೆಸುತ್ತಿದ್ದ ಜ್ಯೋತಿಷಿ ಕಾಂಕೋಲ್ ವಡಶ್ಶೇರಿಯ ಪಿ. ಶ್ರೀನಾಥ್ (41)ನನ್ನು ಬಂಧಿಸಿದ್ದಾರೆ. ಆಪರೇಶನ್ ತೂಫಾನ್‌ನ ಅಂಗವಾಗಿ ನಿನ್ನೆ ಸಂಜೆ ಎಸ್‌ಐ ಪಿ.ವಿ. ಅನುಶ್ರೀ ನೇತೃತ್ವದಲ್ಲಿ ಡಾನ್ಸಾಪ್ ತಂಡ ಜ್ಯೋತಿಷ್ಯಾಲ ಯದಲ್ಲಿ ತಪಾಸಣೆ ನಡೆಸುವ ವೇಳೆ ಗಾಂಜಾ ಪತ್ತೆಯಾಗಿದೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು …