ವಿಧಾನಸಭಾ ಚುನಾವಣೆ: ಎಡರಂಗದ ನಾಯಕತ್ವ ಮತ್ತೆ ಪಿಣರಾಯಿ ವಿಜಯನ್‌ಗೆ

ನವದೆಹಲಿ: ಕೇರಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಡರಂಗದ ನಾಯಕತ್ವವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್  ವಹಿಸಲಿದ್ದಾರೆಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ತಿಳಿಸಿದ್ದಾರೆ.  ಇದರಂತೆ ಎಡರಂಗದ ಚುನಾವಣಾ ಪ್ರಚಾರದ ನೇತೃತ್ವವನ್ನು ಪಿಣರಾಯಿ ವಿಜಯನ್‌ರೇ ವಹಿಸಲಿದ್ದಾರೆ.  ಅಲ್ಲದೆ ಅವರು ತಮ್ಮ ಸ್ವ ಕ್ಷೇತ್ರವಾದ ಕಣ್ಣೂರು ಜಿಲ್ಲೆಯ ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ  ಸ್ಪರ್ಧಿಸುವುದು ಖಚಿತಗೊಂಡಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಸಿಪಿಎಂ ಅಭ್ಯರ್ಥಿಗಳ ಯಾದಿಯನ್ನು  ಮಾರ್ಚ್‌ನಲ್ಲಿ ಪ್ರಕಟಿಸಲಾಗುವುದೆಂದು ಎಂ.ಎ. ಬೇಬಿ ತಿಳಿಸಿದ್ದಾರೆ.  ಇದೇ ವೇಳೆ ಪಿಣರಾಯಿ ವಿಜಯನ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ …

ನಾರಾಯಣಮಂಗಲದ ಪದ್ಮನಾಭ ಚೆಟ್ಟಿಯಾರ್ ನಿಧನ

ಕುಂಬಳೆ: ನಾರಾಯಣಮಂಗಲ  ನಿವಾಸಿ  ಎನ್. ಪದ್ಮನಾಭ ಚೆಟ್ಟಿಯಾರ್ (77) ಇಂದು ಬೆಳಿಗ್ಗೆ ಸ್ವ ಗೃಹದಲ್ಲಿ  ನಿಧನಹೊಂದಿದರು. ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಹಿರಿಯ ಸದಸ್ಯನಾದ ಇವರು ಕಾಸರಗೋಡು ಜಿಲ್ಲಾ ವೀವರ್ಸ್ ಕೋ-ಆಪರೇಟಿವ್ ಸೊಸೈಟಿಯ ಮಾಜಿ ನಿರ್ದೇಶಕನೂ ಆಗಿದ್ದರು. ಮೃತರು ಪತ್ನಿ ರಾಜೀವಿ, ಮಕ್ಕಳಾದ ಎನ್. ಶಶಿಧರ, ದಿವಾಕರ, ಗೋಪಾಲಕೃಷ್ಣ, ಜಲಜಾಕ್ಷಿ, ಅಳಿಯ ಅಪ್ಪುಕುಟ್ಟನ್ ಉದುಮ, ಸೊಸೆಯಂದಿರಾದ  ಶ್ವೇತ, ವೀಣಾ, ರಮ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಪುತ್ರ ರಜನೀಕಾಂತ್ ಈ ಹಿಂದೆ  ನಿಧನರಾಗಿದ್ದಾರೆ.

ಶಾಲಾ ಮಕ್ಕಳ ಗೋಡೆ ಹಾರಾಟ ಅಪಾಯಕ್ಕೆ ಸಾಧ್ಯತೆ: ಕುಂಬಳೆ ಮಾವಿನಕಟ್ಟೆಯಲ್ಲಿ ಕಾಲ್ನಡೆ ಮೇಲ್ಸೇತುವೆ ಬೇಕೆಂಬ ಬೇಡಿಕೆ

ಕುಂಬಳೆ: ವಿವಿಧ ಕಡೆಗಳಲ್ಲಿ ಫೂಟ್‌ಓವರ್ ಬ್ರಿಡ್ಜ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವಾಗ, ಅನುಮತಿ ನೀಡುತ್ತಿರುವಾಗ ಮಾವಿನಕಟ್ಟೆಯನ್ನು ಅವಗಣಿ ಸುತ್ತಿರುವುದಾಗಿ ಸ್ಥಳೀಯರು ಸೂಚಿಸಿದ್ದಾರೆ. ಇತ್ತೀಚೆಗೆ ಜಿಲ್ಲೆಯ ತಲಪಾಡಿ- ಚೆಂಗಳ ರೀಚ್‌ನಲ್ಲಿ 10ರಷ್ಟು ಸ್ಥಳಗಳಲ್ಲಿ ಹೊಸತಾಗಿ ಮೇಲ್ಸೇತುವೆ ಮಂಜೂರುಗೊಳಿಸಿ ಸೂಚನೆ ಲಭಿಸಿತ್ತು. ಕುಂಬಳೆ ಮಾವಿನಕಟ್ಟೆಯಲ್ಲಿ ಮಸೀದಿ, ಸಮೀಪದಲ್ಲೇ ಶಿಕ್ಷಣ ಸಂಸ್ಥೆಗಳು ಎಲ್ಲ ಇರುವಾಗ ಇಲ್ಲಿ ಅಂಡರ್ ಪಾಸ್ ಅನಿವಾರ್ಯವಾಗಿತ್ತು. ಇಲ್ಲಿ ಅಂಡರ್‌ಪಾಸ್‌ಗೆ ಸಮಾನ ವಾದ ರೀತಿಯಲ್ಲಿ ಕಲ್ವರ್ಟ್ ನಿರ್ಮಿಸುವಾಗ ಅದು ಕಾಲ್ನಡೆ ಪ್ರಯಾಣಿಕರಿಗೆ ಪ್ರಯೋಜನವಾ ಗುವ ರೀತಿಯಲ್ಲಿ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು. ಆದರೆ …

ಹಗಲು ಹೊತ್ತಿನಲ್ಲಿ ಉರಿಯುತ್ತಿರುವ ಬೀದಿ ದೀಪ: ಭಾರೀ ಪ್ರಮಾಣದಲ್ಲಿ ವಿದ್ಯುತ್ ವ್ಯರ್ಥದಿಂದ ಪಂಚಾಯತ್‌ಗೆ ಆರ್ಥಿಕ ನಷ್ಟ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಬೀದಿ ದೀಪಗಳು ಹಗಲು ಹೊತ್ತಲ್ಲೂ ಉರಿದು ಭಾರೀ ಪ್ರಮಾಣದಲ್ಲಿ ವಿದ್ಯುತ್ ವ್ಯರ್ಥವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಪೆರಿಂಗಡಿ ರಸ್ತೆಯ ಜನಪ್ರಿಯ ಎಂಬಲ್ಲಿ ಸರ್ವೀಸ್ ರಸ್ತೆ ಬದಿ ಹಾಗೂ ಕುಬಣೂರು ರಸ್ತೆಯ ಪುಳಿಕುತ್ತಿ ಸ್ಮಶಾನದ ಬಳಿ ಸ್ಥಾಪಿಸಲಾದ ಲೋಮಾಸ್ಟ್ ಬೀದಿ ದೀಪಗಳು ಕಳೆದ ಒಂದು ತಿಂಗಳಿಂದ ರಾತ್ರಿ ಹಗಲು ಸತತವಾಗಿ ಉರಿಯುತ್ತಿದೆ. ಹಗಲು ಉರಿಯುತ್ತಿರುವ ದೀಪವನ್ನು ನಂದಿಸುವ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯುತ್ ಅನಗತ್ಯವಾಗಿ ವ್ಯರ್ಥವಾಗಿ ಹೋಗುತ್ತಿದೆ ಎಂದು ಇದರಿಂದ ಪಂಚಾಯತ್‌ಗೆ …

ಗ್ಯಾರೇಜ್ ಮಾಲಕ ನಿಧನ

ಮುಳ್ಳೇರಿಯ: ಮುಳ್ಳೇರಿಯ ಪೇಟೆಯಲ್ಲಿ ದುರ್ಗಾ ವರ್ಕ್‌ಶಾಪ್ ಎಂಬ ಗ್ಯಾರೇಜ್‌ನ ಮಾಲಕ ಪಾರ್ಥಕೊಚ್ಚಿ ನಿವಾಸಿ ರಾಮಕೃಷ್ಣ ಆಚಾರ್ಯ (79) ನಿಧನ ಹೊಂದಿದರು. ಮೃತರು ಪತ್ನಿ ಲೀಲಾವತಿ, ಮಕ್ಕಳಾದ ದಿನೇಶ್, ಶಿವಪ್ರಸಾದ್, ಉಷಾ, ಮೌನೇಶ್, ವೇಣುಗೋಪಾಲ, ಚರಣ್‌ರಾಜ್, ಅಳಿಯಂದಿರಾದ ಪ್ರಜೀಶ್, ಹರ್ಷ, ಸೊಸೆಯಂದಿರಾದ ಕಾಂಚನ, ಅಶ್ವಿನಿ, ಬಸ್ವಿತ, ಅನುಷ, ಸಹೋದರಿಯರಾದ ವಾರಿಜ, ಲಲಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಆರ್ಥಿಕ ವರ್ಷ ಕೊನೆಗೊಳ್ಳುವ ವೇಳೆ ಯೋಜನೆ ಪೂರ್ತಿಗೆ ಸಮಸ್ಯೆ: ಬದಿಯಡ್ಕ ಪಂಚಾಯತ್‌ನಿಂದ ಅಧಿಕಾರಿಗಳ ವರ್ಗಾವಣೆ ಮಾಡಬಾರದೆಂದು ಅಧ್ಯಕ್ಷರಿಂದ ಸಚಿವರಿಗೆ ಪತ್ರ

ಬದಿಯಡ್ಕ: ಆರ್ಥಿಕ ವರ್ಷ ಕೊನೆಗೊಳ್ಳುವ ಮಾರ್ಚ್ ತಿಂಗಳಲ್ಲಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಬದಿಯಡ್ಕ ಪಂಚಾಯತ್‌ನಲ್ಲಿ ಸಮಸ್ಯೆ ಸೃಷ್ಟಿಗೆ ಯತ್ನಿಸುತ್ತಿದೆ ಎಂದು ಪಂಚಾಯತ್ ಅಧ್ಯಕ್ಷ ಶಂಕರ ಡಿ. ದೂರಿದ್ದಾರೆ. ಈ ಬಗ್ಗೆ ಸ್ಥಳೀಯಾಡಳಿತ ಇಲಾಖೆ ಸಚಿವರಿಗೆ ಪತ್ರ ಬರೆದ ಅವರು ಮಾರ್ಚ್ ತಿಂಗಳು ಕೊನೆಗೊಳ್ಳುವ ಮೊದಲು ಪಂಚಾಯತ್ ಕಚೇರಿಯಿಂದ ಯಾವುದೇ ಅಧಿಕಾರಿಯನ್ನು ವರ್ಗಾಯಿಸಬಾರದೆಂದು ಒತ್ತಾಯಿಸಿದ್ದಾರೆ. ಪಂಚಾಯತ್‌ನಲ್ಲಿ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿದ್ದ ವೇಳೆ ಕಚೇರಿಯಲ್ಲಿ ೧೦ರಷ್ಟು ಹುದ್ದೆಗಳು ಖಾಲಿಯಾಗಿತ್ತು. ಪಂಚಾಯತ್ ಆಡಳಿತ ನಿರಂತರ ಒತ್ತಾಯದ ಮೇರೆಗೆ …

ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ವಾರ್ಷಿಕ ಮಹೋತ್ಸವ ಆರಂಭ

ಮಲ್ಲ: ಮಲ್ಲ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ   ವಾರ್ಷಿಕ ಮಹೋತ್ಸವಕ್ಕೆ ನಿನ್ನೆ ರಾತ್ರಿ ಧ್ವಜಾರೋಹಣ ನಡೆಸಲಾಯಿತು. ತಂತ್ರಿ ಎಂ. ರಾಧೇಶ್ಯಾಂ ಭಟ್ ಧ್ವಜಾರೋಹಣ ನಡೆಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ಸತ್ಯನಾರಾಯಣ ಭಟ್ ಸಹಿತ ಹಲವರು ಉಪಸ್ಥಿತರಿದ್ದರು. ಇಂದು ಬೆಳಿಗ್ಗೆ ಶ್ರೀ ಭೂತಬಲಿ, ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ರಾತ್ರಿ ೯ಕ್ಕೆ ಶ್ರೀ ಭೂತಬಲಿ, ಪಾಲಕಿಸೇವೆ, ನೃತ್ಯ ನಡೆಯಲಿರುವುದು.  ವಾರ್ಷಿಕ ಮಹೋತ್ಸವ ಮಾರ್ಚ್ 5ರಂದು ಬೆಳಿಗ್ಗೆ ಶ್ರೀ ಧೂಮಾವತಿ ದೈವದ ನೇಮದೊಂದಿಗೆ ಸಮಾಪ್ತಿಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ …

ಜಿಲ್ಲೆಯಲ್ಲಿ 3 ಹೊಸ ಕೈಗಾರಿಕಾ ಪಾರ್ಕ್‌ಗಳಿಗೆ ಅನುಮತಿ

ಕಾಸರಗೋಡು: ಜಿಲ್ಲೆಯಲ್ಲಿ ನೂತನ ಮೂರು ಖಾಸಗಿ ಕೈಗಾರಿಕಾ ಪಾರ್ಕ್‌ಗಳಿಗೆ ರಾಜ್ಯ ಸರಕಾರ ಅನುಮತಿ ನೀಡಿದೆ. ಇದರೊಂದಿಗೆ ಈ ಮೊದಲು ಅನುಮತಿ ಲಭಿಸಿದ ಪಾರ್ಕ್‌ಗಳು ಸಹಿತ ಜಿಲ್ಲೆಯಲ್ಲಿ ಖಾಸಗಿ ಕೈಗಾರಿಕಾ ಪಾರ್ಕ್‌ಗಳ ಸಂಖ್ಯೆ ಆರು ಆಗಿ ಹೆಚ್ಚಳಗೊಂಡಿದೆ. ಕೈಗಾರಿಕಾ ಅಗತ್ಯಗಳಿಗೆ ಹೆಚ್ಚು ಭೂಮಿ ಲಭ್ಯಗೊಳಿಸುವುದಕ್ಕಾಗಿ ರಾಜ್ಯ ಸರಕಾರ ಆವಿಷ್ಕರಿಸಿದ ಯೋಜನೆಯಾಗಿದೆ ಖಾಸಗಿ ಕೈಗಾರಿಕಾ ಪಾರ್ಕ್ ಯೋಜನೆ. ಕನಿಷ್ಠ 10 ಎಕ್ರೆ ಭೂಮಿ ಸ್ವಂತವಾಗಿ ಇರುವ ಖಾಸಗಿ ವ್ಯಕ್ತಿಗಳಿಗೆ, ಗ್ರೂಪ್‌ಗಳಿಗೆ, ಕಂಪೆನಿಗಳಿಗೆ ಕೈಗಾರಿಕಾ ಪಾರ್ಕ್ ಸ್ಥಾಪಿಸುವುದಕ್ಕೆ 3 ಕೋಟಿ ರೂ.ವರೆಗೆ …

ದಿನೇಶ್ ಬೀಡಿ ನೌಕರೆಗೆ ಬೀಳ್ಕೊಡುಗೆ 

ಬದಿಯಡ್ಕ: ದಿನೇಶ್ ಬೀಡಿ ಕಂಪೆನಿಯ ಬದಿಯಡ್ಕ ಶಾಖೆಯಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಓಮನ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ದಿನೇಶ್ ಬೀಡಿ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಖೆಯ ಕಾರ್ಯದರ್ಶಿ ಶ್ರೀಜ ಅವರು ಕಾಲುದೀಪ ನೀಡಿ ಓಮನರನ್ನು ಸನ್ಮಾನಿಸಿದರು. ನೌಕರರಾದ  ಚಂದ್ರನ್, ಸರೋಜಿನಿ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಿದರು. ಓಮನ ೧೯೮೬ರಲ್ಲಿ  ದಿನೇಶ್ ಬೀಡಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು.  ಇವರು ಬದಿಯಡ್ಕದಲ್ಲಿ ಪತ್ರಿಕೆ ವಿತರಣೆ ನಡೆಸುವ  ಬಾಲಕೃಷ್ಣರ ಪತ್ನಿಯಾಗಿದ್ದಾರೆ. ವಿನೋದ್, ಚಿತ್ರ ಎಂಬಿವರು ಮಕ್ಕಳಾಗಿದ್ದಾರೆ.

ಐಲ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಸಂಘದ ಬೆಳ್ಳಿಹಬ್ಬ ಆಚರಣೆ

ಉಪ್ಪಳ: ಐಲ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ, ಸೇವೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಂದ ತೊಡಗಿಸಿಕೊಂ ಡಿದ್ದ ಶ್ರೀ ದುರ್ಗಾ ಪರಮೇಶ್ವರೀ ಮಹಿಳಾ ಸಂಘದ ಬೆಳ್ಳಿಹಬ್ಬ ಇತ್ತೀಚೆಗೆ ಐಲ ಕ್ಷೇತ್ರ ಪರಿಸರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯ ಕ್ರಮ ಗಳಿಂದೊಡಗೂಡಿ ನೆರವೇರಿತು. ಐಲ ಕ್ಷೇತ್ರದಲ್ಲಿ ಬೆಳಿಗ್ಗೆ ಗಣಹೋಮ, ಶ್ರೀ ದುರ್ಗಾ ಪರಮೇಶ್ವರೀ ಮಹಿಳಾ ಸಂಘದಿಂದ, ಕುಕ್ಕಾಡಿ ಶ್ರೀ ಭಗವತೀ ಮಹಿಳಾ ಸಂಘದ ಸದಸ್ಯೆಯರಿಂದ ಭಜನೆ ಸೇವೆ ನಡೆಯಿತು. ವೇದ ಮೂರ್ತಿ …