ಕಟ್ಟಡ ನಿರ್ಮಾಣ ಕಾರ್ಮಿಕ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಟ್ಟಡ ನಿರ್ಮಾಣ ಕಾರ್ಮಿಕ ಮನೆ ಯೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಪುಲ್ಲೂರಿನ ವಿ. ಸಜಿತ್ (42) ಮೃತಪಟ್ಟ ಕಾರ್ಮಿಕ. ನಿನ್ನೆ ಸಂಜೆ ೪ ಗಂಟೆ ವೇಳೆ ಕಿಟಿಕಿಯ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಜಿತ್‌ರ ಮೃತದೇಹ ಪತ್ತೆಯಾಗಿದೆ. ಅಂಬಲತ್ತರ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ವಿ. ನಾರಾಯಣನ್ ಮೇಸ್ತ್ರಿ- ಕೆ.ಕೆ. ನಾರಾಯಣಿ ದಂಪತಿ ಪುತ್ರನಾದ ಇವರು ಪತ್ನಿ ಪ್ರತಿಭಾ ಪೆರ್ಲ, ಮಕ್ಕಳಾದ ಆದಿದೇವ್, ಆರಾಧ್ಯ, ಸಹೋದರರಾದ ವಿ. ಸುನಿಲ್ ಕುಮಾರ್, ವಿ. …

ಪೆರ್ಲ- ಸೀತಾಂಗೋಳಿ ರಸ್ತೆಯಲ್ಲಿ ಅಪಾಯ ಆಹ್ವಾನಿಸುವ ಮೋರಿ ಸಂಕದ ಉಬ್ಬು ತಗ್ಗು

ಪುತ್ತಿಗೆ: ಸುಂದರವಾದ ರಸ್ತೆ ಎಂಬ ನೆಲೆಯಲ್ಲಿ ವಾಹನಗಳು ಹೆಚ್ಚಿನ ವೇಗದಲ್ಲಿ ಸಂಚರಿಸುವಾಗ ಜಾಗ್ರತೆ ವಹಿಸಬೇಕಾದ ಸ್ಥಳವೊಂದು ಪೆರ್ಲ- ಸೀತಾಂಗೋಳಿ ರಸ್ತೆಯಲ್ಲಿದೆ. ಪುತ್ತಿಗೆ ಸಮೀಪದ ಮುಖಾರಿಕಂಡ ಬಸ್ ತಂಗುದಾಣದ ಸಮೀಪವೇ ಮೋರಿಯೊಂದಿಗೆ. ಇಲ್ಲಿಗೆ ತಲುಪುವಾಗ ವಾಹನಗಳೆಲ್ಲ ಅಪಘಾತಕ್ಕೀಡಾಗುತ್ತಿದ್ದು, ಕಾಂಕ್ರೀಟ್‌ನ ಉಬ್ಬು ತಗ್ಗುಗಳು ಇದಕ್ಕೆ ಕಾರಣವಾಗಿದೆ. ಮೋರಿಯ ಕಾಂಕ್ರೀಟ್ ಹಾಗೂ ರಸ್ತೆ ಮಧ್ಯೆ ಅಂತರವಿದ್ದು, ವೇಗದಿಂದ ಚಲಿಲುವ ವಾಹನಗಳು ಕಾಂಕ್ರೀಟ್‌ಗೆ ಗುದ್ದಿ ಕೆಲವೊಮ್ಮೆ ರಸ್ತೆ ಬಿಟ್ಟು ಬದಿಗೆ ಅಪ್ಪಳಿಸುವುದು ಕಂಡು ಬರುತ್ತಿದೆ. ಚಾಲಕರಿಗೆ ಗೋಚರವಾಗದ ಈ ಅಪಾಯಕರ ಗಂಟೆಯಿಂದ ಅಪಘಾತ …

ಕಾರಿಗೆ ಕಿಚ್ಚಿಟ್ಟು ಸಾಮೂಹಿಕ ಆತ್ಮಹತ್ಯಾ ಯತ್ನ: ಸಾವಿಗೆ ಮುಂಚಿತ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗೊಂಡ ವೀಡಿಯೋ ಬಗ್ಗೆ ಪೊಲೀಸ್ ತನಿಖೆ

ಮಾನಂತವಾಡಿ: ಕುಟುಂಬ ಸಹಿತ ಸಂಚರಿಸುತ್ತಿದ್ದ ಕಾರಿಗೆ ಕಿಚ್ಚಿರಿಸಿ ಸಾಮೂಹಿಕ ಆತ್ಮಹತ್ಯೆಗೈಯ್ಯಲಿರುವ ಪತಿಯ ಯತ್ನ ಗಮನಕ್ಕೆ ಬ ರಲಿಲ್ಲವೆಂದು ಮೃತಪಟ್ಟ ಸಜೀರ್‌ರ ಪತ್ನಿ ನಜ್ಮತ್ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಕೋಟದಲ್ಲಿ ವ್ಯಾಪಾರಿಯಾದ ಕಣ್ಣೂರು ನಿವಾಸಿ ಸಜೀರ್ ಹಾಗೂ ಕುಟುಂಬ ಊರಿಗೆ ಮರಳುತ್ತಿದ್ದ ಪ್ರಯಾಣ ಮಧ್ಯೆ ಮಾನಂತವಾಡಿಯಲ್ಲಿ ಕಾರಿಗೆ ಪೆಟ್ರೋಲ್ ಸುರಿದು ಕಿಚ್ಚಿರಿಸಲಾಗಿದೆ. ಸಜೀರ್ ಘಟನಾ ಸ್ಥಳದಲ್ಲೇ ಮೃತಪಟ್ಟರು. ತೀವ್ರ ಗಾಯಗೊಂಡ ಪತ್ಮಿ ನಜ್ಮತ್‌ರ ಹೇಳಿಕೆ ದಾಖಲಿಸುತ್ತಿದ್ದ ಮಧ್ಯೆ ಆಕೆ ಈ ವಿಷಯ ಪೊಲೀಸರಲ್ಲಿ ತಿಳಿಸಿ ದ್ದಾರೆ. ಕಣ್ಣೂರಿಗೆ …

ಕುಂಬಳೆಯಲ್ಲಿ ಐಕ್ಯರಂಗದ ನವಯುಗ ಯಾತ್ರೆಗೆ ಅದ್ಧೂರಿ ಚಾಲನೆ: ಐಕ್ಯರಂಗ ಅಧಿಕಾರಕ್ಕೇರಿದರೆ ದೇವಸ್ಥಾನ ಕಳ್ಳರನ್ನು ಸೆರೆ ಹಿಡಿಯಲಾಗುವುದು- ಕೆ.ಸಿ. ವೇಣುಗೋಪಾಲನ್

ಕುಂಬಳೆ: ವಿಧಾನಸಭಾ ಚುನಾವಣೆ ಯಲ್ಲಿ ಐಕ್ಯರಂಗ ಅಧಿಕಾರಕ್ಕೇರಿದರೆ ದೇವಸ್ಥಾನ ಕಳ್ಳರನ್ನು ಸೆರೆ ಹಿಡಿಯುವುದೇ ಪ್ರಥಮ ಕಾರ್ಯವೆಂದು ಎಐಸಿಸಿ ಜನರಲ್ ಸೆಕ್ರೆಟರಿ, ಸಂಸದ ಕೆ.ಸಿ. ವೇಣುಗೋಪಾಲ್ ನುಡಿದರು.  ಕುಂಬಳೆಯಲ್ಲಿ ಐಕ್ಯರಂಗದ ನವಯುಗ ಯಾತ್ರೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಾಥಾ ನಾಯಕ ವಿ.ಡಿ. ಸತೀಶನ್‌ರಿಗೆ ಐಕ್ಯರಂಗದ ಘಟಕ ಪಕ್ಷಗಳ ಪತಾಕೆಗಳು ಒಳಗೊಂಡ ಧ್ವಜವನ್ನು ಹಸ್ತಾಂತರಿಸಿ ಅವರು ಉದ್ಘಾಟನೆ ನೆರವೇರಿಸಿದರು. ಯಾತ್ರೆ ಮಾರ್ಚ್ 7ರಂದು ತಿರುವನಂತಪುರದಲ್ಲಿ ಸಮಾಪ್ತಿಗೊಳ್ಳುವಾಗ ರಾಜ್ಯದ ಎಡರಂಗ ಸರಕಾರ ಹೊರ ಹೋಗುವುದರ ರಣಕಹಳೆ ಮೊಳಗಲಿದೆ. ಪಿಣರಾಯಿ ವಿಜಯನ್ ಸರಕಾರ …

ಬಿಸಿಲಲ್ಲಿ ಬೆವರಿಳಿಸಿ ಬಸ್‌ಗಾಗಿ ಕಾಯಬೇಕಾಗುತ್ತಿದೆ ಹೊಸಂಗಡಿಯಲ್ಲಿ ತಂಗುದಾಣವಿಲ್ಲದೆ ಸಮಸ್ಯೆ

ಮಂಜೇಶ್ವರ: ಕಾಸರಗೋಡಿ ನಿಂದ ಮಂಗಳೂರು ಕಡೆಗೆ ತೆರಳುವ ಸರ್ವೀಸ್ ರಸ್ತೆಯಲ್ಲಿ ಹೊಸಂಗಡಿ ಯಲ್ಲಿ ಬಸ್ ತಂಗುದಾಣ ನಿರ್ಮಿಸದೇ ಇರುವುದರಿಂದ ಪ್ರಯಾಣಿಕರು ಬಿಸಿ ಲಲ್ಲೇ ಬಸ್‌ಗೆ ಕಾಯುವ ಪರಿಸ್ಥಿತಿ ಉಂಟಾಗಿದೆ. ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದರೂ ಹೊಸಂಗಡಿ ಪೇಟೆಯಲ್ಲಿ ಮಂ ಗಳೂರು ಭಾಗಕ್ಕೆ ತೆರಳುವ ಸರ್ವೀಸ್ ರಸ್ತೆಯಲ್ಲಿ ಇನ್ನೂ ಬಸ್ ತಂಗುದಾಣ ನಿರ್ಮಿಸದಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಆನೆಕಲ್ಲು, ಮೀಯಪದವು, ಬಂಗ್ರಮAಜೇಶ್ವರ ಮೊದಲಾದ ಪ್ರದೇಶಗಳಿಂದ ದಿನನಿತ್ಯ ನೂರಾರು ಮಂದಿ ಮಂಗಳೂರಿಗೆ ತೆರ ಳಲು ಬಸ್‌ಗಾಗಿ …

ನಿವೃತ್ತ ಅಧ್ಯಾಪಕ ನಿಧನ

ನೀರ್ಚಾಲು: ಮಾನ್ಯ ಕಾರ್ಮಾರು ನಿವಾಸಿ ನಿವೃತ್ತ ಅಧ್ಯಾಪಕ, ಕೃಷಿಕ ಕಾರಿಂಜ ವೆಂಕಪ್ಪ ಶೆಟ್ಟಿ (94) ನಿಧನ ಹೊಂದಿದರು. ಎಡನೀರು, ಕಡಂಬಳ ಸಹಿತ ಹಲವಾರು ಶಾಲೆಗಳಲ್ಲಿ ಅಧ್ಯಾಪಕನಾಗಿದ್ದರು. ಇವರ ಪತ್ನಿ ರತ್ನಾವತಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ವಿಶಾಲಾಕ್ಷಿ, ವಿನುತ, ವಿನೋದಿನಿ, ಅಳಿಯಂದಿರಾದ ಮಹಾಬಲ, ಪ್ರಸನ್ನ, ಸುಧೀರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಆಟೋರಿಕ್ಷಾ ಮಜ್ದೂರ್ ಸಂಘ ಚೌಕಿ ಯೂನಿಟ್ ಸಮ್ಮೇಳನ

ಕಾಸರಗೋಡು: ಆಟೋ ರಿಕ್ಷಾ ಮಜ್ದೂರ್ ಸಂಘ ಬಿಎಂಎಸ್ ಚೌಕಿ ಘಟಕ ಸಮ್ಮೇಳನ ಕಾವುಗೋಳಿ ಶ್ರೀ ಶಿವದೇವಸ್ಥಾನದಲ್ಲಿ ನಡೆಯಿತು. ಯೂನಿಟ್ ಅಧ್ಯಕ್ಷ ದಯಾನಂದ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಮಧೂರು ಮಂಡಲ ಅಧ್ಯಕ್ಷ ವಸಂತ ನಾಯ್ಕ್ ಕೊರುವೈಲು ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಗುರುದಾಸ್ ಮಧೂರು ಶುಭ ಕೋರಿದರು. ಆಟೋರಿಕ್ಷಾ ಮಜ್ದೂರ್ ಸಂಘದ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಪ್ರಸ್ತಾವಿಸಿದರು. ಮಧೂರು ಪಂಚಾಯತ್ ೨೪ನೇ ವಾರ್ಡ್‌ನಿಂದ ಪಂ. ಸದಸ್ಯನಾಗಿ ಆಯ್ಕೆಯಾದ ಆಟೋಚಾಲಕ ನವನೀತ್ ರೈ ಕಜೆ ಅವರನ್ನು …

ಸಮಸ್ತದ 100ನೇ ವಾರ್ಷಿಕಾಚರಣೆ: ನಾಳೆ ಜಿಲ್ಲೆಯಲ್ಲಿ ಸಾರಿಗೆ ಸಂಚಾರದಲ್ಲಿ ವ್ಯತ್ಯಯ

ಕಾಸರಗೋಡು: ಸಮಸ್ತದ 100ನೇ ವಾರ್ಷಿಕಾಚರಣೆ ಯಂಗವಾಗಿ ನಾಳೆ ಕಾಸರಗೋಡು ಜಿಲ್ಲೆಯಲ್ಲಿ ಸಾರಿಗೆ ವ್ಯತ್ಯಯ ಏರ್ಪಡಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಕಣ್ಣೂರು ಭಾಗದಿಂದ ಕಾಸರಗೋಡು ಭಾಗಕ್ಕೆ ಆಗಮಿಸುವ ಹೆವಿ ವಾಹನಗಳು ತಳಿಪರಂಬ ಮೂಲಕ ಮಲೆನಾಡು ಹೆದ್ದಾರಿಯಲ್ಲಾಗಿ ಸಾಗಬೇಕಾಗಿದ್ದು, ಮಂಗಳೂರಿನಿಂದ ಬರುವ ವಾಹನಗಳು ಕುಂಬಳೆ ಭಾಗದಿಂದ ಮಲೆನಾಡು ಹೆದ್ದಾರಿ ಮೂಲಕ ಸಾಗಬೇಕಾಗಿದೆ. ಕಾರ್ಯಕ್ರಮಕ್ಕೆ ತೆರಳುವ ವಾಹನಗಳು ಪೆರಿಯ, ಪೊಯಿನಾಚಿ ಎಂಬೆಡೆಗಳಿಂದ ಸರ್ವೀಸ್ ರಸ್ತೆ ಮೂಲಕ ಬಂದು ಜನರನ್ನು ಇಳಿಸಿ ಪಾರ್ಕಿಂಗ್ ಏರಿಯಾಕ್ಕೆ ತೆರಳಬೇಕಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ವ್ಯಕ್ತಿಗಳು ಸರ್ವೀಸ್ …

ಅಂಗನವಾಡಿಯಿಂದ ಕಳವುಗೈದ ಆರೋಪಿ ಮಂಜೇಶ್ವರ ಪೊಲೀಸರಿಂದ ಬಂಧನ: ಇಂದು ನ್ಯಾಯಾಲಯಕ್ಕೆ

ಉಪ್ಪಳ: ಮಣ್ಣಂಗುಳಿ ಮೈದಾನ ಸಮೀಪದ ಅಂಗನವಾಡಿಗೆ ನುಗ್ಗಿ ಹಲವಾರು ಸಾಮಗ್ರಿಗಳನ್ನು ಕಳವುಗೈದ ಪ್ರಕರಣದಲ್ಲಿ ಓರ್ವನನ್ನು ದೂರು ಲಭಿಸಿದ 24 ಗಂಟೆಗಳೊಳಗೆ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಕರ್ನಾಟಕ ನೆಲ್ಯಾಡಿ ಕೊಕ್ಕಡ ನಿವಾಸಿ, ಪ್ರಸ್ತುತ ಮಣ್ಣಂಗುಳಿ ಪರಿಸರದಲ್ಲಿ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸವಾಗಿರುವ ಅಶ್ರಫ್ (55)ನನ್ನು ನಿನ್ನೆ ಸಂಜೆ ಉಪ್ಪಳದಿಂದ ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಈತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈತನ ವಿರುದ್ಧ ಮಂಜೇಶ್ವರ  ಠಾಣೆಯಲ್ಲಿ ೩ ಹಾಗೂ ಕುಂಬಳೆ ಠಾಣೆಯಲ್ಲಿ ಒಂದು ಕಳವುಕೇಸು ದಾಖಲಾಗಿದೆ. 2025 ಮೇ ತಿಂಗಳಲ್ಲಿ …

ಯುವ ನಟಿ ಅಂಜುಕೃಷ್ಣ  ಸಹಿತ ಎಂಟು ಮಂದಿ ಮಾದಕಪದಾರ್ಥದೊಂದಿಗೆ ಸೆರೆ

ಚೆನ್ನೈ: ಯುವ ನಟಿ ಅಂಜು ಕೃಷ್ಣ ಹಾಗೂ ಸಹಾಯಕ ನಿರ್ದೇಶಕ ವಿನ್ಸಿ ನಿವೇದ್ ಸಹಿತದ 8 ಮಂದಿ ಚೆನ್ನೈಯಲ್ಲಿ ಮಾದಕಪದಾರ್ಥ ದೊಂದಿಗೆ ಸೆರೆಯಾಗಿದ್ದಾರೆ. ಚೆನ್ನೈ ಪೊಲೀಸರ ಆಂಡ್ ನಾರ್ಕೋ ಟಿಕ್ ಇಂಟೆಲಿಜೆನ್ಸ್ ಘಟಕ ನಡೆಸಿದ  ಕಾರ್ಯಾಚರಣೆಂiiಲ್ಲಿ ತಂಡ ಸೆರೆಯಾಗಿದೆ. ಮೆಥಾಫೆಟಾ ಮಿನ್, ಎಲ್‌ಎಸ್‌ಡಿ ಸ್ಟ್ಯಾಂಪ್ ಗಳು, ಗಾಂಜಾ ಮೊದಲಾದ ಮಾದಕಪದಾ ರ್ಥಗಳು ಇವರ ಕೈವಶವಿತ್ತೆಂದು ಆಂಟಿ ನಾರ್ಕೋಟಿಕ್ ಇಂಟೆಲಿಜೆನ್ಸ್ ಘಟಕ ತಿಳಿಸಿದೆ. ನೆಶಪ್ಪಾಕಂ ನಿವಾಸಿ ವಿಘ್ನೇಶ್ವರನ್ ಎಂಬಾತನನ್ನು  ಮಾದಕಪದಾರ್ಥ ದೊಂದಿಗೆ ಪ್ರಥಮವಾಗಿ ಸೆರೆಹಿಡಿಯಲಾಗಿತ್ತು. ಈತನನ್ನು ಪ್ರಶ್ನಿಸಿದಾಗ ನಟಿ …