ಪೆರ್ಲ-ಸ್ವರ್ಗ ಅಂತಾರಾಜ್ಯ ರಸ್ತೆ ಅಭಿವೃದ್ಧಿಗೆ ಒಟ್ಟಾಗಿ ಹೋರಾಟ ಮಾಡಲು ಜಿ.ಪಂ. ಸದಸ್ಯ ಸೋಮಶೇಖರ ಜೆ.ಎಸ್. ಕರೆ
ಪೆರ್ಲ: ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧ ಮರೆತು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಸರಕಾರ, ಅಧಿಕಾರಿ ಗಳಿಗೆ ಕೇವಲ ಮನವಿ ಸಲ್ಲಿಸಿದರೆ ಮಾತ್ರ ನಮ್ಮ ಜವಾಬ್ದಾರಿ ಮುಗಿಯದು. ರಸ್ತೆ ಹೀನಾಯ ಸ್ಥಿತಿಯನ್ನು ಸರಕಾರಕ್ಕೆ ಗಮನಕ್ಕೆ ತಂದು ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸಿದರೂ ಪ್ರಯೋಜನ ವಾಗದಿದ್ದರೆ ಬೀದಿಗಿಳಿದು ಹೋರಾಟ ನಡೆಸಲು ಸಜ್ಜಾಗಬೇಕೆಂದು ಜಿಲ್ಲಾ ಪಂ. ಸದಸ್ಯ ಸೋಮಶೇಖರ್ ಜೆ.ಎಸ್. ನುಡಿದರು. ಪೆರ್ಲ-ಸ್ವರ್ಗ ಅಂತಾರಾಜ್ಯ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದೊಂದಿಗೆ ನಡೆದ ನಾಗರಿಕ ಕ್ರಿಯಾ ಸಮಿತಿ ರಚನೆ ಸಭೆಯಲ್ಲಿ ಅವರು …