ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿ: ೫೦೦ ಮಂದಿ ಬಲಿ

ಗಾಜಾಪಟ್ಟಿ: ಇಸ್ರೇಲ್-ಹಮಾಸ್ ನಡುವಿನ ಯುದ್ಧ ಇಂದಿಗೆ ೧೨ನೇ ದಿನಕ್ಕೆ ಕಾಲಿರಿಸಿದೆ. ಈಮಧ್ಯೆ ಇಸ್ರೇಲ್ ಸೇನೆ ಪ್ಯಾಲೆಸ್ತಿನ್ ಆಸ್ಪತ್ರೆ ಮೇಲೆ ವಾಯು ದಾಳಿ ನಡೆಸಿದ ಪರಿಣಾಮ ೫೦೦ ಮಂದಿ ಸಾವನ್ನಪ್ಪಿ ದ್ದಾರೆಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಅದನ್ನು ಇಸ್ರೇಲ್ ಸೇನೆ ಬಲವಾಗಿ ನಿರಾಕರಿಸಿದೆ.

ಕ್ಷಿಪಣಿ ದಾಳಿಗೊಳಗಾದ ಆಸ್ಪತ್ರೆಯಲ್ಲಿ  ರೋಗಿಗಳು ಮತ್ತು ನಿರಾಶ್ರಿತರೂ ಒಳಗೊಂಡಂತೆ ಸುಮಾರು ೪೫೦೦ ಮಂದಿ  ಇದ್ದರು. ಆಸ್ಪತ್ರೆಯ ಒಂದು ಭಾಗ ಕ್ಷಿಪಣಿ ದಾಳಿಯಿಂದ ಪೂರ್ಣವಾಗಿ ನಾಶಗೊಂಡಿದೆ.

ಆದರೆ, ನಾವು ಆಸ್ಪತ್ರೆ ಮೇಲೆ ದಾಳಿ ನಡೆಸಿಲ್ಲ. ಇದು ಹಮಾಸ್ ಉಗ್ರರು  ನಡೆಸಿದ ರಾಕೆಟ್ ದಾಳಿ ಗುರಿತಪ್ಪಿ (ಮಿಸ್ ಫಯರ್) ಆಗಿ ಆಸ್ಪತ್ರೆ ಮೇಲೆ ಬಿದ್ದು ಅದು ಧ್ವಂಸಗೊಂಡಿದೆಯೆಂದು  ಎಂದು ಇದೇ ವೇಳೆ  ಇಸ್ರೇಲ್ ಸೇನೆ ತಿಳಿಸಿದೆ. ಇದರ ಜೊತೆಗೆ ಇಸ್ರೇಲ್ ಈ ಘಟನೆಯ ವೀಡಿಯೋವನ್ನು ಬಿಡುಗಡೆಮಾಡಿ, ನಮ್ಮ ಮೇಲೆ ಆರೋಪಿಸುವ ಮೊದಲು ಈ ವೀಡಿಯೋವನ್ನು ಸರಿಯಾಗಿ ವೀಕ್ಷಿಸಿ ಎಂದು ಜಾಗತಿಕ ಮಾಧ್ಯಮಗಳಿಗೆ ಕರೆ ನೀಡಿದೆ.

ನಿನ್ನೆ ಸಂಜೆ ಇಸ್ರೇಲ್ ಸಮಯ ೬.೫೯ಕ್ಕೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಲು ಹಾರಿಬಿಟ್ಟ ರಾಕೆಟ್  ಗುರಿತಪ್ಪಿ  ಆಸ್ಪ ತ್ರೆ ಮೇಲೆ ಬಿದ್ದು ಅದು ಸ್ಫೋಟಗೊಂ ಡಿದೆ. ಈ ಕೃತ್ಯವನ್ನು ನಾವು ಮಾಡಿಲ್ಲ ವೆಂದೂ ಇಸ್ರೇಲ್ ಸ್ಪಷ್ಟಪಡಿಸಿದೆ.

ಆದರೆ, ಇದು ಇಸ್ರೇಲ್‌ನದ್ದೇ ಕೃತ್ಯವೆಂದು ಹಮಾಸ್ ಉಗ್ರರು ಆರೋಪಿಸಿದ್ದಾರೆ. ಮಾತ್ರವಲ್ಲ ಗಾಜಾ ಪಟ್ಟಿಯಲ್ಲಿ  ಇಸ್ರೇಲ್ ಹತ್ಯಾಕಾಂಡ ಮುಂದುವರಿಸುತ್ತಿದೆಯೆಂದೂ ಹಮಾಸ್ ಆರೋಪಿಸಿದೆ. ಕ್ಷಿಪಣಿ ದಾಳಿಯಿಂದ ಕುಸಿದುಬಿದ್ದ ಆಸ್ಪತ್ರೆಯ ಅವಶೇಷ ಗಳಡಿ ಇನ್ನೂ ಹಲವು ಮಂದಿ ಸಿಲುಕಿಕೊಂ ಡಿರುವುದಾಗಿ ತಿಳಿಯ ಲಾಗಿದೆ. ಅವರನ್ನು ಹೊರತೆಗೆಯುವ ರಕ್ಷಾ ಕಾರ್ಯಾಚರಣೆ ಈಗಲೂ ಮುಂದು ವರಿಯುತ್ತಿದೆ. ವಿಶೇಷವೇನೆಂದರೆ ಈ ಪ್ರದೇಶವನ್ನು ದಾಳಿಮುಕ್ತ ಪ್ರದೇಶವ ನ್ನಾಗಿ ಈ ಹಿಂದೆಯೇ ಘೋಷಿಸ ಲಾಗಿತ್ತು. ೫೦೦ ಮಂದಿಯನ್ನು ಬಲಿ ತೆಗೆದುಕೊಂಡ ಕ್ಷಿಪಣಿ ದಾಳಿಯಿಂದ ಎಲ್ಲೆಡೆಗಳಿಂದ ಭಾರೀ ಆಕ್ರೋಶವೂ ಭುಗಿದೇಳುವಂತೆ ಮಾಡತೊಡಗಿದೆ.

Leave a Reply

Your email address will not be published. Required fields are marked *

You cannot copy content of this page