ರಾಜ್ಯದಲ್ಲಿ ಉಷ್ಣತೆ ಮುಂದುವರಿಕೆ

ಕಾಸರಗೋಡು: ರಾಜ್ಯದ ೧೦ ಜಿಲ್ಲೆಗಳಲ್ಲಿ ಈ ತಿಂಗಳ ೨೫ರ ವರೆಗೆ ಗರಿಷ್ಠ ಉಷ್ಣತೆ ಅನುಭವಗೊಳ್ಳಲಿ ದೆಯೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಪಾಲಕ್ಕಾಡ್‌ನಲ್ಲಿ ಉಷ್ಣತೆ ೪೦ ಡಿಗ್ರಿ ವರೆಗೆ ತಲುಪಲಿದೆ. ಕಳೆದ ದಿನಗಳಲ್ಲಿ ಪಾಲಕ್ಕಾಡ್‌ನಲ್ಲಿ ೩೯ ಡಿಗ್ರಿ, ಕೊಲ್ಲಂನಲ್ಲಿ ೩೮ ಡಿಗ್ರಿ, ಪತ್ತನಂತಿಟ್ಟ, ಕೋಟ್ಟಯಂ, ಆಲಪ್ಪುಳ, ತೃಶೂರು ಜಿಲ್ಲೆಗಳಲ್ಲಿ  ೩೭ ಡಿಗ್ರಿ, ಕಾಸರಗೋ ಡು, ಕಣ್ಣೂರು, ಕಲ್ಲಿಕೋಟೆ, ತಿರುವನಂತಪುರ ಜಿಲ್ಲೆಗಳಲ್ಲಿ  ೩೬ ಡಿಗ್ರಿ ವರೆಗೆ ಉಷ್ಣತೆ ಇರಬಹುದೆಂದು  ಕೇಂದ್ರ ವಾತಾವರಣ ಅಧ್ಯಯನ ಕೇಂದ್ರ ಮೂಲಗಳು ತಿಳಿಸಿವೆ. ವಿವಿಧ ಪ್ರದೇಶಗಳಲ್ಲಿ ಇಂದು ಸಂಜೆ ವರೆಗೆ ಮಳೆ ಸುರಿಯಬಹುದಾಗಿದ್ದರೂ ಉಷ್ಣತೆಯಲ್ಲಿ ಯಾವುದೇ  ಬದಲಾವಣೆ ಉಂಟಾಗಲಾರದು. ಉಷ್ಣತೆ ಹೆಚ್ಚುವುದರೊಂದಿಗೆ ರಾಜ್ಯದಲ್ಲಿ  ವಿದ್ಯುತ್ ಬಳಕೆಯಲ್ಲೂ ಏರಿಕೆಯಾಗಿದೆ.  ಈವಾರದಲ್ಲಿ  ವಿದ್ಯುತ್ ಬಳಕೆ  ೧೦೦  ದಶಲಕ್ಷ ಯೂನಿಟ್‌ಗಿಂತಲೂ ಹೆಚ್ಚಿದೆ.  ವಿದ್ಯುತ್ ಬಳಕೆಯಲ್ಲಿ ಹೆಚ್ಚಳ ಉಂಟಾಗುವುದರೊಂದಿಗೆ ವೋಲ್ಟೇಜ್ ಕ್ಷಾಮವೂ ತಲೆದೋರಿದೆ.

Leave a Reply

Your email address will not be published. Required fields are marked *

You cannot copy content of this page