ಮಾರ್ಪನಡ್ಕದಲ್ಲಿ ಬ್ಯಾಂಕ್ ಸೆಕ್ಯೂರಿಟಿ ನೌಕರನನ್ನು ಇರಿದು ಕೊಲೆಗೈದ ಇಬ್ಬರು ಆರೋಪಿಗಳ ಬಂಧನ: ಕೊಲೆಗೆ ಬಳಸಿದ ಚಾಕು ಪತ್ತೆಗಾಗಿ ಪೊಲೀಸರು ಪುತ್ತೂರಿಗೆ

ಬದಿಯಡ್ಕ: ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಸೆಕ್ಯೂರಿಟಿ ನೌಕರನೂ, ಮಾರ್ಪನಡ್ಕ ಬೆದ್ರಕೂಡ್ಲು ನಿವಾಸಿಯಾದ ಸುರೇಶ್ (42) ಎಂಬವರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಂಬ್ಡಾಜೆ ಮೈಲ್ತೊಟ್ಟಿಯ ಕಿರಣ್ (30), ಕರುವತ್ತಡ್ಕದ ಅಖಿಲೇಶ್ (25) ಎಂಬಿವರನ್ನು  ಕಾಸರಗೋಡು ಎಎಸ್‌ಪಿ ಅಚ್ಯುತ್ ಅಶೋಕ್, ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ ಅನೂಪ್‌ಕೃಷ್ಣನ್ ಎಂಬಿವರ ನೇತೃತ್ವದಲ್ಲಿ  ಸೆರೆಹಿಡಿಯಲಾಗಿದೆ.  ಕೊಲೆ ಕೃತ್ಯದಬಳಿಕ  ಆರೋಪಿಗಳು ಕರ್ನಾಟಕಕ್ಕೆ ಪರಾರಿಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಿಂದ ಕೂಡಲೇ ಪೊಲೀಸರು ಕಾರ್ಯಾಚರಣೆ …

ಬೈಕ್-ಸ್ಕೂಟರ್ ಢಿಕ್ಕಿ ಹೊಡೆದು ಪ್ಲಸ್‌ಟು ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಉಳಿಯತ್ತಡ್ಕ-ಚೌಕಿ ರಸ್ತೆಯ  ಆಜಾದ್‌ನಗರದಲ್ಲಿ  ಸ್ಕೂಟರ್ ಹಾಗೂ ಬೈಕ್  ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ  ಪ್ಲಸ್‌ಟು ವಿದ್ಯಾರ್ಥಿ  ಮೃತಪಟ್ಟ ದಾರುಣ ಘಟನೆ ನಡೆದಿದೆ. ನೆಕ್ರಾಜೆ ನಿವಾಸಿಯೂ, ಚೌಕಿ ಆಜಾದ್‌ನಗರದಲ್ಲಿ ವಾಸಿಸುವ ಗಲ್ಫ್ ಉದ್ಯೋಗಿ ರಫೀಕ್ ಎಂಬವರ ಪುತ್ರ ಶಹಬಾಸ್ ಅಸರ್ (17) ಮೃತಪಟ್ಟ ದುರ್ದೈವಿಯಾಗಿದ್ದಾನೆ.  ಈತನ ಜೊತೆಗಿದ್ದ ಇನ್ನೋರ್ವ ಹಾಗೂ ಬೈಕ್‌ನಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಇವರನ್ನು  ಮಂಗಳೂರು ಹಾಗೂ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ನಿನ್ನೆ ರಾತ್ರಿ 10.45ರ ವೇಳೆ ಅಪಘಾತ ಸಂಭವಿ ಸಿದೆ. ರಫೀಕ್-ಅಲ್ಫೀನ ದಂಪತಿಯ …

ಅವಯವ ವಂಚನೆ ಪ್ರಕರಣ: ನಜೀಬ್ ಕಲ್ಲಟ್ರ, ಪತ್ನಿಯನ್ನು ಮತ್ತೆ ಕಸ್ಟಡಿಗೆ ತೆಗೆಯಲು ಪೊಲೀಸ್ ಕ್ರಮ

ಕೊಚ್ಚಿ: ಎರ್ನಾಕುಳಂ ಕೇಂದ್ರೀ ಕರಿಸಿ ನಡೆದ ಅವಯವ ವಂಚನೆ ಪ್ರಕರಣದಲ್ಲಿ ಸೆರೆಗೀಡಾದ ಮುಖ್ಯ ಆರೋಪಿ  ಕಾಸರಗೋಡು ಕಳನಾಡು ಚಳಿಯಂಗೋಡ್‌ನ ಮುಹಮ್ಮದ್ ನಜೀಬ್ ಕಲ್ಲಟ್ರ (53)  ಹಾಗೂ ಈತನ ಪತ್ನಿ ರಶೀದಾಳನ್ನು ಇನ್ನೊಮ್ಮೆ ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಲು ಕೊಚ್ಚಿ ಸಿಟಿ ಪೊಲೀಸರು ನಿರ್ಧರಿಸಿದ್ದಾರೆ. ಆರೋಪಿಗಳನ್ನು ರೂರಲ್ ಪೊಲೀಸರು ಐದು ದಿನಗಳ ಕಾಲ ಕಸ್ಟಡಿಗೆ  ತೆಗೆದಿ ದ್ದರು. ಕಸ್ಟಡಿ ಕಾಲಾವಧಿ ನಿನ್ನೆ ಕೊನೆ ಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸ ಲಾಗಿತ್ತು. ಆರೋಪಿಗಳನ್ನು ಇನ್ನಷ್ಟು ತನಿಖೆಗೊಳಪಡಿಸುವ ಉದ್ದೇಶದಿಂದ ಅವರನ್ನು ಇನ್ನೊಮ್ಮೆ …

ಉಪ್ಪಳ ಸೋಂಕಾಲಿನಲ್ಲಿ  ಮಾದಕವಸ್ತು ಬೇಟೆ: ಮುಖ್ಯ ಆರೋಪಿಯನ್ನು ಸಾಹಸಿಕವಾಗಿ ಸೆರೆಹಿಡಿದ ಪೊಲೀಸ್

ಕುಂಬಳೆ:  ಉಪ್ಪಳ ಸೋಂಕಾಲಿ ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 53.580 ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಮುಖ್ಯ ಆರೋಪಿಗಳ ಲ್ಲೋರ್ವನಾದ  ಯುವಕನನ್ನು ಪೊಲೀ ಸರು ಸಾಹಸಿಕವಾಗಿ ಸೆರೆಹಿಡಿದಿದ್ದಾರೆ. ಕಲ್ಲಿಕೋಟೆ ನಿವಾಸಿ ಗೋಡ್ವಿನ್ ಚಾಕೊ (33) ಎಂಬಾತನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್, ಎಸ್‌ಐ ಅನಂತಕೃಷ್ಣನ್ ಆರ್ ಮೆನೋನ್ ಎಂಬಿವರ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಕಲ್ಲಿಕೋಟೆ ತಿರುವಂಬಾಡಿ ಪೊನ್ನಮಂಗಲ ನಿವಾಸಿಯಾದ ಗೋಡ್ವಿನ್ ಚಾಕೊ ಈಗ ಕರ್ನಾಟಕದ ಮಂಡ್ಯದಲ್ಲಿ …

ತಂದೆಯ ಮಧುಮೇಹದ ಮಾತ್ರೆಗಳನ್ನು ಅಪರಿಮಿತವಾಗಿ ಸೇವಿಸಿದ ಪುತ್ರ ಮೃತ್ಯು

ಕಾಸರಗೋಡು: ತಂದೆ ಮಧುಮೇಹಕ್ಕೆ ಸೇವಿಸುತ್ತಿದ್ದ ಮಾತ್ರೆಗಳನ್ನು ಅಪರಿಮಿತವಾಗಿ ಸೇವಿಸಿದ ಪುತ್ರ ಮೃತಪಟ್ಟನು. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ವೆಸ್ಟ್‌ಎಳೇರಿ, ಪುಂಙಚ್ಚಾಲ್ ಕಾಞಿರುತ್ತುಂಗಾಲ್ ನಿವಾಸಿ ರಾಜು ಕುರ್ಯನ್‌ರ ಪುತ್ರ ಜಿನ್ಸ್‌ರಾಜ್ (28) ಮೃತಪಟ್ಟ ಯುವಕ. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಮೇ 18ರಂದು ಜಿನ್ಸ್‌ರಾಜ್‌ನನ್ನು ಮನೆಯೊಳಗೆ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಮಾಹಿತಿ ತಿಳಿದು ತಲುಪಿದ ಸಂಬಂಧಿಕರು ವೆಳ್ಳೆರಿಕುಂಡ್‌ನ ಆಸ್ಪತ್ರೆಗೆ ತಲುಪಿಸಿ ಸ್ಥಿತಿ ಗಂಭೀರವಾದ ಕಾರಣ ಕೂಡಲೇ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿ …

ಐಕ್ಯರಂಗ ಸರಕಾರ ಆಡಳಿತಕ್ಕೆ: ಮಂಜೇಶ್ವರ ತಾಲೂಕು ಆಸ್ಪತ್ರೆಗೆ ಜಿ.ಪಂ. ಸದಸ್ಯೆಯಿಂದ 10 ಲಕ್ಷ ರೂ.ಗಳ ಮೆಶೀನ್ ಕೊಡುಗೆ

ಉಪ್ಪಳ: ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಪ್ರಮಾಣವಚನಗೈದ ಹಿನ್ನೆಲೆಯಲ್ಲಿ ಸಂತೋಷವನ್ನು ಹಂಚಿಕೊಂಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್ ಮಂಜೇಶ್ವರ ತಾಲೂಕು ಆಸ್ಪತ್ರೆಗೆ ಕ್ಯಾನ್ಸರ್ ಡಿಟಾಕ್ಷನ್ ಹಾರ್ಮೋನ್ ಮೆಶೀನ್‌ನ್ನು ಉಚಿತವಾಗಿ ನೀಡಿ ಮಾದರಿಯಾದರು. 10 ಲಕ್ಷ ರೂ. ಮೌಲ್ಯದ ಈ ಅತ್ಯಾಧುನಿಕ ಕ್ಯಾನ್ಸರ್ ನಿರ್ಣಯ ಮೆಶೀನ್‌ನಲ್ಲಿ ಹಲವಾರು ಹಾರ್ಮೋನ್ ಟೆಸ್ಟ್‌ಗಳನ್ನು ನಿಮಿಷಗಳೊಳಗೆ ಮಾಡಲು ಸಾಧ್ಯವಿದೆ. ಥೈರಾಯ್ಡ್, ಗರ್ಭಕಾಲದ ಸ್ತ್ರೀಯರಿಗೆ ಮಾಡುವ ಹಾರ್ಮೋನ್ ಟೆಸ್ಟ್‌ಗಳು, ಕ್ಯಾನ್ಸರ್ ಟೆಸ್ಟ್‌ಗಳ ಸಹಿತ ಹಲವಾರು ಟೆಸ್ಟ್‌ಗಳನ್ನು ಇದರಲ್ಲಿ ಮಾಡಬಹುದಾಗಿದೆ. …

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಾರೆಕಟ್ಟೆ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಛೇಂಬರ್

ಮಧೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳದ ಮುಖಾಂತರ ಮಧೂರು ಗ್ರಾಮ ಪಂಚಾಯತ್ ನ ಪಾರೆಕಟ್ಟೆ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಛೇಂಬರ್ ಒದಗಿಸುವುದರ ಬಗ್ಗೆ ಮಂಜೂರಾತಿ ಪತ್ರವನ್ನು ನೀಡಲಾಯಿತು.  ಕಾರ್ಯಕ್ರಮದಲ್ಲಿ ಪಂಚಾಯತ್  ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದರು.  ತಾಲೂಕು ಯೋಜನಾಧಿಕಾರಿ  ದಿನೇಶ್, ಕಾಸರಗೋಡು ವಲಯ ಮೇಲ್ವಿಚಾರಕ ಗೋಪಾಲಕೃಷ್ಣ,  ಕಾಸರಗೋಡು ವಲಯ ಜನಜಾಗೃತಿ ಅಧ್ಯಕ್ಷ  ಕಿರಣ್ ಪ್ರಸಾದ್ ಕೂಡ್ಲು, ಕೇಂದ್ರ ಒಕ್ಕೂಟದ ಅಧ್ಯಕ್ಷ  ಜ್ಞಾನೇಶ್ ಆಚಾರ್ಯ, ಸೇವಾ ಪ್ರತಿನಿಧಿ ಜ್ಯೋತಿ, ಜನಜಾಗೃತಿ ಸದಸ್ಯ ರವೀಂದ್ರ ರೈ, …

ಸ್ಕೂಟಿಗೆ ಕಾರು ಢಿಕ್ಕಿ ಹೊಡೆದು ಯುವತಿ ಮೃತ್ಯು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಮಾವುಂಗಾಲ್, ಕಲ್ಯಾಣ್ ರಸ್ತೆ ಕ್ರೈಸ್ಟ್ ಶಾಲೆಯ ಸಮೀಪ ಸಂಭವಿಸಿದ ಅಪಘಾತದಲ್ಲಿ ಯುವತಿ ಮೃತಪಟ್ಟರು. ಮಾವುಂಗಾಲ್ ನೆಲ್ಲಿಕ್ಕಾಟ್ ಪೈರಡ್ಕದ ವೇಣುಗೋಪಾಲರ ಪತ್ನಿ ಕೆ. ರಜನಿ (38) ಮೃತಪಟ್ಟವರು. ಇವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಪುತ್ರ ಅದ್ವೈತ್ (11) ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ. ನಿನ್ನೆ ಸಂಜೆ 6.3೦ರ ವೇಳೆ ಇನ್ನೋವ ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬಳಿಕ ನಿಲ್ಲಿಸದೆ ಪರಾರಿಯಾದ ಕಾರನ್ನು ರಾತ್ರಿ 8 ಗಂಟೆ ವೇಳೆ ಹೊಸದುರ್ಗ ಪೊಲೀಸರು ಪತ್ತೆಹಚ್ಚಿದ್ದಾರೆ.

ಮೊಗ್ರಾಲ್ ಮಖಾಂ ಉರೂಸ್: ಕ್ಷೇತ್ರಕ್ಕೆ ತಲುಪಿ  ಆಮಂತ್ರಣ ನೀಡಿದ ಮಸೀದಿ ಪದಾಧಿಕಾರಿಗಳಿಗೆ ಸ್ವಾಗತ

ಮೊಗ್ರಾಲ್: ಮೊಗ್ರಾಲ್ ಮಖಾಂ ಉರೂಸ್ ನಾಳೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಉರೂಸ್ ಸಮಿತಿ ಪದಾಧಿಕಾರಿಗಳು ಗಾಂಧಿನಗರ ಶ್ರೀ ಕೋಡ್ದಬ್ಬು ದೈವಸ್ಥಾನಕ್ಕೆ ತಲುಪಿ ಕ್ಷೇತ್ರ ಸಮಿತಿ ಪದಾಧಿಕಾರಿಗಳನ್ನು ಉರೂಸ್‌ಗೆ ಆಹ್ವಾನಿಸಿದರು. ಹಲವು ಕಾಲಗಳಿಂದ ಇಲ್ಲಿ ಕಾಯ್ದುಕೊಂಡಿರುವ ಒಗ್ಗಟ್ಟಿನ ಪ್ರದರ್ಶನವಾಗಿದೆ ಇದು. ಜಿಲ್ಲೆಯ ವಿವಿಧ ಭಾಗಗಳಿಂದ ಕಾಣಿಕೆ ಸಹಿತ ಜನರು ಒಂದಾಗಿ ಉರೂಸ್‌ಗಾಗಿ ಮಸೀದಿ ಅಂಗಣಕ್ಕೆ ತಲುಪುತ್ತಾರೆ. ಅವರನ್ನು ಉರೂಸ್ ಸಮಿತಿ ಪದಾಧಿಕಾರಿಗಳು ಸ್ವಾಗತಿಸುತ್ತಿದ್ದಾರೆ. ಕೋಡ್ದಬ್ಬು ದೈವಸ್ಥಾನಕ್ಕೆ ತಲುಪಿದ ಮಸೀದಿ ಸಮಿತಿ ಪದಾಧಿಕಾರಿಗಳಾದ ಹಾದಿ ತಂಙಳ್, ಬಿ.ಎನ್. ಮೊಹಮ್ಮದಲಿ, ಇಬ್ರಾಹಿಂ …

ಕೊಲೆಗೀಡಾದ ಬಿ.ಕೆ. ಸುರೇಶ್‌ರಿಗೆ  ನಾಡಿನ ಅಂತಿಮ ನಮನ

ಮಾರ್ಪನಡ್ಕ: ಕುಂಬ್ಡಾಜೆ ಬೆದ್ರಕೂಡ್ಲು ನಿವಾಸಿ, ಎಸ್‌ಸಿ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ, ಎಸ್‌ಸಿ ಮೋರ್ಚಾ ಬದಿಯಡ್ಕ ಮಂಡಲ ಮಾಜಿ ಅಧ್ಯಕ್ಷ ಬಿ.ಕೆ. ಸುರೇಶ್‌ರಿಗೆ ಭಾರೀ ಜನಸಂದಣಿಯ ಮೂಲಕ ಬಿಜೆಪಿ ಜಿಲ್ಲಾ ಸಮಿತಿ ಅಂತಿಮ ನಮನ ಸಲ್ಲಿಸಿದೆ. ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಎಂ. ಸಂಜೀವ ಶೆಟ್ಟಿ, ಆರ್‌ಎಸ್‌ಎಸ್ ಕಾಸರಗೋಡು ಜಿಲ್ಲಾ ಸಂಘ ಚಾಲಕ್ ಪ್ರಭಾಕರನ್, ಜಿಲ್ಲಾ ಕಾರ್ಯವಾಹ್ ಪವಿತ್ರನ್ ಕೆ.ಕೆ.ಪುರ, ಬಿಜೆಪಿ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ …