ಜಲಪಾತ ವೀಕ್ಷಿಸಲು ತಲುಪಿದ ವಿದ್ಯಾರ್ಥಿನಿಯರಿಗೆ ಕಿರುಕುಳ: ಮಂಜೇಶ್ವರದ ಮೂವರು ಯುವಕರು ಬೆಳ್ತಂಗಡಿಯಲ್ಲಿ ಸೆರೆ
ಕಾಸರಗೋಡು: ಕರ್ನಾಟಕದ ಬೆಳ್ತಂಗಡಿ ಸಮೀಪ ದಿಡುಪೆಯಲ್ಲಿ ಜಲ ಪಾತ ವೀಕ್ಷಿಸಲು ತಲುಪಿದ ವಿದ್ಯಾರ್ಥಿ ನಿಯರೊಂದಿಗೆ ಅನುಚಿತವಾಗಿ ವರ್ತಿಸಿ ಅವರಿಗೆ ಕಿರುಕುಳ ನೀಡಿದ ಮೂವರು ಯುವಕರನ್ನು ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಂಜೇಶ್ವರ ನಿವಾಸಿಗಳೆಂದು ಹೇಳಲಾದ ಅಬ್ದುಲ್ ಖಾದರ್ ಅಲ್ತಾಫ್ (36), ಫೈಸಲ್‌ಆದಿಲ್ (27), ಉಸ್ಮಾನ್ ಸಲೀಂ (18) ಎಂಬಿವರು ಬಂಧಿತ ಆರೋಪಿಗಳಾಗಿದಾರೆಂದು ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ. ಮಂಗಳೂರಿನ ಕಾಲೇಜು ವಿದ್ಯಾರ್ಥಿ ನಿಯರಾದ ಮೂವರು ಯುವತಿಯರು ಮೂವರು ಯುವಕರೊಂದಿಗೆ ಜಲಪಾತ ವೀಕ್ಷಿಸಲು ತೆರಳಿದ್ದರು. ಈ ಮಧ್ಯೆ ಅಲ್ಲಿಗೆ ತಲುಪಿದ …