ತೋಟಕ್ಕೆ ಹೋದ ಗೃಹಿಣಿ ನಾಪತ್ತೆ

ಅಡೂರು: ತೋಟಕ್ಕೆ ತೆರಳಿದ ಗೃಹಿಣಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಅಡೂರು ಬಳಿಯ ಮಲ್ಲಂಪಾರೆ ತಿಮ್ಮನಗುಂಡಿ ನಿವಾಸಿ ದಿ| ಚೋಮಣ್ಣ ನಾಯ್ಕ್‌ರ ಪತ್ನಿ ಗುಲಾಬಿ ಬಾ (68) ನಾಪತ್ತೆಯಾಗಿದ್ದಾರೆ. ನಿನ್ನೆ ಸಂಜೆ ಅಡಿಕೆ ಹೆಕ್ಕಲೆಂದು ಇವರು ತೋಟಕ್ಕೆ ತೆರಳಿದ್ದಾರೆನ್ನಲಾಗಿದೆ. ಅನಂತರ ಮರಳಿ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ತೋಟಕ್ಕೆ ತೆರಳಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಇದೇ ವೇಳೆ ತೋಟದ ಬದಿಯ ತೋಡಿನ ಸಮೀಪ ಗುಲಾಬಿಯವರ ಚಪ್ಪಲಿ ಕಂಡು ಬಂದಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಅಗ್ನಿಶಾಮಕ ದಳ ತಲುಪಿ ಹುಡುಕಾಡಿದರೂ …

ಯುವಕನಿಗೆ ಹೆಲ್ಮೆಟ್‌ನಿಂದ ಹೊಡೆದು ಇರಿದು ಕೊಲೆಗೈಯ್ಯಲೆತ್ನ: ಓರ್ವ ಆರೋಪಿ ಕಸ್ಟಡಿಗೆ

ಉಪ್ಪಳ: ಮದ್ರಸದಿಂದ ಮನೆಗೆ ನಡೆದು ಹೋಗುತ್ತಿದ್ದ ಬಾಲಕಿಯನ್ನು ಬೆದರಿಸಿದ ಬಗ್ಗೆ ವಿಚಾರಿಸಲು ಹೋದ ಯುವಕರಿಗೆ ಹೆಲ್ಮೆಟ್‌ನಿಂದ ಹೊಡೆದು ಬಳಿಕ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಆರೋಪಿಯನ್ನು ಕಸ್ಟಡಿಗೆ ತೆಗೆಯಲಾಗಿದೆ. ಹಲವು ಪ್ರಕರಣಗಳಲ್ಲಿ ಆರೋಪಿಯಾದ ಸೈಫುದ್ದೀನ್ ಯಾನೆ ಪೂಚ ಸೈಫು(30) ಎಂಬಾತನನ್ನು ಮಂಜೇಶ್ವರ ಎಸ್‌ಐ ಕೆ.ಪಿ. ಶರತ್‌ರ ನೇತೃತ್ವದಲ್ಲಿ ಕಸ್ಟಡಿಗೆ ತೆಗೆಯಲಾಗಿದೆ. ಈ ಪ್ರಕರಣದಲ್ಲಿ ಇತರ ಆರೋಪಿಗಳಾದ ಬಡಾಜೆ ಮೊರತ್ತಣೆಯ ರಾಸಿಕ್ (30), ಕಡಂಬಾರ್‌ನ ರಾಫಿ (೨೮), ಶಫೀಫ್ (30) ಎಂಬಿವರಿಗಾಗಿ ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬಡಾಜೆ ಕಡಂಬಾರ್ …

ಬದಿಯಡ್ಕದ ವ್ಯಾಪಾರಿ ನಿಧನ

ಬದಿಯಡ್ಕ: ಕೆಡೆಂಜಿ ನಿವಾಸಿಯೂ, ಬದಿಯಡ್ಕ ಪೇಟೆಯಲ್ಲಿ ವ್ಯಾಪಾರಿಯಾಗಿರುವ  ಮೋಹನ್ ನಾಯ್ಕ್ (65) ನಿಧನ ಹೊಂದಿದರು. ಇವರು ಬದಿಯಡ್ಕ ಪೇಟೆಯಲ್ಲಿ ರವಿಕಿರಣ್ ಫೂಟ್ ವೇರ್ ವ್ಯಾಪಾರ ಸಂಸ್ಥೆಯ ಮಾಲಕ ನಾಗಿದ್ದಾರೆ. ನಿನ್ನೆ ಬೆಳಿಗ್ಗೆ ಇವರಿಗೆ ಅಸೌಖ್ಯ ಕಾಣಿಸಿಕೊಂಡಿದ್ದು, ಇದರಿಂದ ಕಾಸರಗೋಡಿನ  ಖಾಸಗಿ ಆಸ್ಪತ್ರೆಯಲ್ಲಿ  ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ೫ ಗಂಟೆಗೆ ನಿಧನ ಸಂಭವಿಸಿದೆ. ಮೃತರು ಪತ್ನಿ ಪುಷ್ಪಾವತಿ, ಮಕ್ಕಳಾದ ಅಕ್ಷಯ, ರವಿಕಿರಣ್, ಅಳಿಯ ರತೀಶ್, ಸಹೋದರ ಗಂಗಾಧರ ನಾಯ್ಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕ್ಷೇತ್ರ ಕಳವು ಯತ್ನ ಮಧ್ಯೆ ಸ್ಥಳೀಯರಿಂದ ಸೆರೆಗೀಡಾದ ಕುಖ್ಯಾತ ಕಳ್ಳ: ಕೇಸು ದಾಖಲು

ಹೊಸದುರ್ಗ: ಅಲಾಮಿಪಳ್ಳಿ ಪೆಟ್ರೋಲ್ ಬಂಕ್ ಸಮೀಪದ ಶ್ರೀ ರಾಜರಾಜೇಶ್ವರಿ ಮೂಕಾಂಬಿಕಾ ಕ್ಷೇತ್ರದಿಂದ ಕಳವು ಯತ್ನ ನಡೆಸಲಾಗಿದೆ. ಕಳ್ಳನನ್ನು ಕಯ್ಯಾರೆ ಸ್ಥಳೀಯರು ಸೆರೆಹಿಡಿದಿದ್ದಾರೆ. ನಿನ್ನೆ ಮುಂಜಾನೆ 2 ಗಂಟೆಗೆ ಘಟನೆ ನಡೆದಿದೆ. ಕುಖ್ಯಾತ ಕಳ್ಳ ಬಳಾಲ್ ನಿವಾಸಿ ಹರೀಶ್ ಕುಮಾರ್ (53) ಸೆರೆಯಾದ ವ್ಯಕ್ತಿ. ಶಂಕಾಸ್ಪದ ರೀತಿಯಲ್ಲಿ ಕ್ಷೇತ್ರ ಪರಿಸರದಲ್ಲಿ ಕಳ್ಳನನ್ನು ಕಂಡ ಹಿನ್ನೆಲೆಯಲ್ಲಿ ಸ್ಥಳೀಯರು ನಿಗಾ ವಹಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗರ್ಭಗುಡಿಯ ಬೀಗ ಮುರಿಯಲು ಯತ್ನಿಸುತ್ತಿದ್ದಾಗ ಸ್ಥಳೀಯರು ತಲುಪಿದ್ದು, ದೃಶ್ಯಗಳನ್ನು ಮೊಬೈಲ್ ಫೋನ್‌ನಲ್ಲಿ ದಾಖಲಿಸಿದ ಬಳಿಕ …

ನಿರ್ಜನ ಹಿತ್ತಿಲಲ್ಲಿ ಬಚ್ಚಿಟ್ಟ 84.400 ಲೀಟರ್ ಆಂಧ್ರ ನಿರ್ಮಿತ ಮದ್ಯ ಪತ್ತೆ

ಕಾಸರಗೋಡು: ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ನಿರ್ಜನ ಹಿತ್ತಿಲಲ್ಲಿ ಬಚ್ಚಿಡಲಾಗಿದ್ದ 84.400 ಲೀಟರ್ ಆಂಧ್ರಪ್ರದೇಶ ನಿರ್ಮಿತ ವಿದೇಶಿ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಕೂಡ್ಲು ಉಳಿಯತ್ತಡ್ಕ-ಚೌಕಿ ರಸ್ತೆಯ ನೇಶನಲ್ ನಗರದಲ್ಲಿರುವ ಗ್ರಾಮ ಕಚೇರಿಗೆ ಸಮೀಪದ ನಿರ್ಜನ ಪ್ರದೇಶದ ಹಿತ್ತಿಲಿನಿಂದ ಪೊಲೀಸರು ಮದ್ಯ ಪತ್ತೆಹಚ್ಚಿದ್ದಾರೆ.  180 ಎಂಎಲ್‌ನ 480 ಬಾಟಲಿ ಮದ್ಯ ಇಲ್ಲಿಂದ ಪತ್ತೆಹಚ್ಚಲಾಗಿದೆ. ಇದನ್ನು 10 ಕಾರ್ಡ್ ಬೋರ್ಡ್ ಪೆಟ್ಟಿಗೆಗಳಲ್ಲಿ ತುಂಬಿಸಿಡಲಾಗಿತ್ತು. ಈ ಮಧ್ಯವನ್ನು  ಹೊರ ರಾಜ್ಯಗಳಿಂದ  ವಾಹನಗಳಲ್ಲಿ  ಇಲ್ಲಿಗೆ ತಂದು ಬಚ್ಚಿಡಲಾಗಿತ್ತೆಂದು ನಂತರ ಅದನ್ನು ಕಿರು …

ಗಾನಮೇಳ ಮಧ್ಯೆ ಘರ್ಷಣೆ: ಪೊಲೀಸರ ಮೇಲೂ ತಂಡದಿಂದ ಹಲ್ಲೆಗೆತ್ನ

ಕಾಸರಗೋಡು: ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಚುಳ್ಳಿಕರೆಯಲ್ಲಿ ಓಣಂ ಆಚರಣೆಗೆ ಸಂಬಂಧಿಸಿ ನಡೆದ ಗಾನಮೇಳ ಮಧ್ಯೆ ಘರ್ಷಣೆ ನಡೆದಿದೆ. ತಡೆಯಲು ತಲುಪಿದ  ಪೊಲೀಸರ ಮೇಲೂ ತಂಡ ಹಲ್ಲೆಗೈದಿದೆ.  ಪೊಲೀಸ್ ವಾಹನವನ್ನು ತಡೆದು ನಿಲ್ಲಿಸಿದ ತಂಡ ಆರೋಪಿಗಳನ್ನು ಬಿಡುಗಡೆಗೊಳಿಸಿ ರುವುದಾಗಿಯೂ ದೂರಲಾಗಿದೆ. ಇಂದು ಮುಂಜಾನೆ 1 ಗಂಟೆಗೆ ಘಟನೆ ನಡೆದಿದೆ. ಗಾನಮೇಳ ನಡೆಯುತ್ತಿದ್ದಂತೆ ಎರಡು ತಂಡಗಳ ಮಧ್ಯೆ ವಾಗ್ವಾದ ನಡೆದಿದ್ದು, ಬಳಿಕ ಅದು ಘರ್ಷಣೆಯಲ್ಲಿ ಕೊನೆಗೊಂಡಿತ್ತು. ಇದನ್ನರಿತು ರಾಜಪುರಂ ಎಸ್‌ಐ ಅಭಿಜಿತ್ ನೇತೃತ್ವದ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಈ …

ಓಣಂ: 771 ಕೋಟಿ ರೂ.ಗಳ ದಾಖಲೆ ಮದ್ಯ ಮಾರಾಟ

ತಿರುವನಂತಪುರ:  ಈ ಬಾರಿ ಓಣಂ ಸಮಯದಲ್ಲಿ ಬಿವರೇಜಸ್ ಮದ್ಯದಂಗಡಿಯಿಂದ ಮಾರಾಟವಾಗುವ  ಮದ್ಯ ದಾಖಲೆಗೇರಿದೆ. ಕಳೆದ ಎಂಟು ದಿನಗಳಲ್ಲಾಗಿ ಈ ಮದ್ಯದಂಗಡಿಗಳಲ್ಲಾಗಿ ಒಟ್ಟು 771.29 ಕೋಟಿ ರೂ.ಗಳ ದಾಖಲೆ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 694.96 ಕೋಟಿ ರೂ.ಗಳ ಮದ್ಯ ಮಾರಾಟವಾಗಿತ್ತು. ಈ ಬಾರಿ ಅದಕ್ಕಿಂತಲೂ  77 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ.

ಕಲ್ಲುಕಟ್ಟುವ ಮೇಸ್ತ್ರಿ ಹೃದಯಾಘಾತದಿಂದ ನಿಧನ

ಕುಂಬಳೆ:  ಕಲ್ಲು ಕಟ್ಟುವ ಮೇಸ್ತ್ರಿಯೊಬ್ಬರು ಹೃದಯಾಘಾ ತದಿಂದ ನಿಧನ ಹೊಂದಿದರು. ಕುಂಬಳೆ ದರ್ಬಾರ್ ಕಟ್ಟೆಯ ಪ್ರಕಾಶ್ (38) ಮೃತ ವ್ಯಕ್ತಿ. ಇಂದು ಬೆಳಿಗ್ಗೆ ಎದ್ದು ಮನೆಯವರೊಂದಿಗೆ ಮಾತನಾಡಿದ ಬಳಿಕ  ಕೊಠಡಿಯಲ್ಲಿ ನಿದ್ರಿಸಿದ್ದರು. ಅಲ್ಪ ಹೊತ್ತಿನ ಬಳಿಕ ಮನೆಯವರು ನೋಡಿದಾಗ ಪ್ರಕಾಶ್ ಅರೆಪ್ರಜಾ ವಸ್ಥೆಯಲ್ಲಿ ಕಂಡುಬಂದಿದ್ದು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಹೃದ ಯಾಘಾತದಿಂದ ಸಾವು ಸಂಭವಿ ಸಿರುವುದಾಗಿ ತಪಾಸಣೆಯಲ್ಲಿ ತಿಳಿದುಬಂದಿದೆ ಮೃತರು ಪತ್ನಿ ಭಾರತಿ, ಪುತ್ರ ಸನ್ವಿತ್, ಸಹೋದರರಾದ ಬಾಬು, ಸದಾನಂದ, …

ಕ್ಷೇತ್ರಕ್ಕೆ ನುಗ್ಗಿದ ಕಳ್ಳ ಕಾಣಿಕೆ ಹುಂಡಿ ಕೊಂಡೊಯ್ಯಲಾಗದೆ ಉಪೇಕ್ಷಿಸಿ ಪರಾರಿ: ಸಿಸಿ ಕ್ಯಾಮರಾ ದೃಶ್ಯ ಕೇಂದ್ರೀಕರಿಸಿ ತನಿಖೆ

ಮುಳ್ಳೇರಿಯ: ದೇವಸ್ಥಾನಕ್ಕೆ ನುಗ್ಗಿದ ಕಳ್ಳ ಕಾಣಿಕೆ ಹುಂಡಿಯನ್ನು ಕಳವುಗೈದರೂ ಅದನ್ನು ಕೊಂಡೊಯ್ಯಲಾಗದೆ ಕ್ಷೇತ್ರ ಪರಿಸರದಲ್ಲೇ ಉಪೇಕ್ಷಿಸಿ ಕಾಲ್ಕಿತ್ತಿದ್ದಾನೆ. ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಈ ತಿಂಗಳ 25ರಂದು ಮುಂಜಾನೆ ಕಳ್ಳ ನುಗ್ಗಿದ್ದಾನೆ. ಸುತ್ತುಗೋಪುರದ ಬಾಗಿಲಿನ ಮೂಲಕ ಕ್ಷೇತ್ರಕ್ಕೆ ನುಗ್ಗಿದ ಕಳ್ಳ ಧ್ವಜಸ್ತಂಭದ ಬಳಿಯಲ್ಲಿದ್ದ ಕಾಣಿಕೆ ಹುಂಡಿಯನ್ನು ಅಪಹರಿಸಿದ್ದನು. ಅದನ್ನು ಬಳಿಕ ಕ್ಷೇತ್ರ ಸಮೀಪದ ರಸ್ತೆ ಬದಿ ಬಿಟ್ಟು  ಪರಾರಿಯಾಗಿದ್ದಾನೆ. ಕಾಣಿಕೆ ಹುಂಡಿಯ ಬೀಗ ಮುರಿಯಲು ಸಾಧ್ಯವಾಗದುದರಿಂದ ಹಣ ದೋಚಲು ಕಳ್ಳನಿಗೆ ಸಾಧ್ಯವಾಗಲಿಲ್ಲ ಮಂಗಳವಾರ ಬೆಳಿಗ್ಗೆ ಕ್ಷೇತ್ರದ ಅರ್ಚಕರು …

ಸಂಭ್ರಮದ ಈದ್‌ಮಿಲಾದ್ ವಿವಿಧೆಡೆಗಳಲ್ಲಿ ಮೆರವಣಿಗೆ

ಮಂಜೇಶ್ವರ: ಪ್ರವಾದಿ ಮುಹ ಮ್ಮದ್ ಪೈಗಂಬರ್‌ರವರ ಜನ್ಮದಿನ ವಾದ ‘ಈದ್ ಮಿಲಾದ್’ ಹಬ್ಬವನ್ನು ಮಂಜೇಶ್ವರ ತಾಲೂಕಿನಾದ್ಯಂತ ಮಂಗಳವಾರದAದು ಸಡಗರ ಹಾಗೂ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಉದ್ಯಾವರ ಸಾವಿರ ಜಮಾಯತ್ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ವಿಶೇಷ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಮಸೀದಿ ಅಧ್ಯಕ್ಷ ಯು.ಕೆ. ಸೈಪುಲ್ಲಾ ತಂಙಳ್, ಕಾರ್ಯದರ್ಶಿ ಇಬ್ರಾಹಿಂ ಬಟರ್‌ಫ್ಲೈ, ಎಸ್.ಎಂ. ಬಶೀರ್, ಇಬ್ರಾಹಿಂ ಉಮ್ಮರ್ ಹಾಜಿ ಸೇರಿದಂತೆ ಹಲವು ಗಣ್ಯರು ಹಾಗೂ ಧಾರ್ಮಿಕ ನೇತಾರರು ಮೆರವಣಿಗೆಗೆ ನೇತೃತ್ವ ವಹಿಸಿದರು. ಮದ್ರಸ ವಿದ್ಯಾರ್ಥಿಗಳು ಹಾಗೂ ಯುವಕರು ಸಾಂಪ್ರದಾಯಿಕ …