ಮನೆಯಲ್ಲಿ ನಿದ್ರಿಸುತ್ತಿದ್ದ ವ್ಯಕ್ತಿಯನ್ನು ಎಬ್ಬಿಸಿ ಇರಿದು ಗಂಭೀರ ಗಾಯ: ಕಾಪಾ ಪ್ರಕರಣದ ಆರೋಪಿಗಾಗಿ ಶೋಧ
ಕುಂಬಳೆ: ಮನೆಯಲ್ಲಿ ನಿದ್ರಿಸುತ್ತಿದ್ದ ಮನೆಯೊಡೆಯನನ್ನು ಮುಂಜಾನೆ 1 ಗಂಟೆ ವೇಳೆ ಕರೆದು ಎಬ್ಬಿಸಿ ಅವರಿಗೆ ವ್ಯಕ್ತಿಯೋ ರ್ವ ಇರಿದು ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ. ಪಚ್ಚಂಬಳ ಸಫಾನಗರ ಎಂಬಲ್ಲಿನ ಮುಹಮ್ಮದ್ (63) ಎಂಬವರು ಇರಿತಕ್ಕೊಳಗಾದ ವ್ಯಕ್ತಿಯಾಗಿದ್ದಾರೆ. ಗಂಭೀರ ಗಾಯಗೊಂಡ ಇವರನ್ನು ಮಂಗ ಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಫಾ ನಗರದ ಇರ್ಷಾದ್ ಯಾನೆ ಲುಟಾಪಿ ಎಂಬಾತ ಇರಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಈತ ತಲೆಮರೆಸಿಕೊಂಡಿದ್ದಾನೆ. ಇಂದು ಮುಂಜಾನೆ 1 ಗಂಟೆ ವೇಳೆ ಮನೆಯೊಳಗೆ ನಿದ್ರಿಸುತ್ತಿದ್ದ ಮುಹಮ್ಮದ್ ರನ್ನು ಇರ್ಷಾದ್ ಕರೆದು …