ಶಾಲೆಯಿಂದ ಹಿಂತಿರುಗುತ್ತಿದ್ದ 11ರ ಬಾಲಕನಿಗೆ ಸಲಿಂಗರತಿ: ವೃದ್ಧನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: 11ರ ಹರೆಯದ ವಿದ್ಯಾರ್ಥಿಯನ್ನು ಸಲಿಂಗರತಿ ದೌರ್ಜನ್ಯಕ್ಕೆ ಒಳಪಡಿಸಿದ ಘಟನೆಯಲ್ಲಿ 62ರ ಹರೆಯದ ವ್ಯಕ್ತಿ ಸೆರೆಯಾಗಿದ್ದಾನೆ. ಪರಪ್ಪ ಕ್ಲಾಯಿಕೋಡ್ ನಿವಾಸಿ ಅಬ್ದುಲ್ ರಜಾಕ್‌ನನ್ನು ಪೋಕ್ಸೋ ಕಾನೂನು ಪ್ರಕಾರ ವಳ್ಳೇರಿಕುಂಡ್ ಸಿ.ಐ. ನಳಿನಾಕ್ಷ ಬಂಧಿಸಿದ್ದಾರೆ. ಕಳೆದ ಆದಿತ್ಯವಾರ ಘಟನೆ ನಡೆದಿದೆ. ಶಾಲೆಗೆ ತೆರಳಿ ಹಿಂತಿರುಗುತ್ತಿದ್ದ ಬಾಲಕನನ್ನು ಜನವಾಸವಿಲ್ಲದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅತಿಕ್ರಮಿಸಿ ದೌರ್ಜನ್ಯಗೈದಿರುವುದಾಗಿ ಕೇಸು ದಾಖಲಿಸಲಾಗಿದೆ. ಹಲವು ಬಾರಿ ಈ ರೀತಿ ವರ್ತಿಸಿರುವುದಾಗಿಯೂ ಹೇಳಲಾಗುತ್ತಿದೆ. ಬಾಲಕ ಮನೆಗೆ ತಲುಪಿ ವಿಷಯ ಹೇಳಿದ ಹಿನ್ನೆಲೆಯಲ್ಲಿ ಹೆತ್ತವರು ಪೊಲೀಸರಿಗೆ ದೂರು …

ಸಚಿವರು ಉದ್ಘಾಟಿಸಿ ಮರಳಿದ ಬೆನ್ನಲ್ಲೇ ಮುಚ್ಚುಗಡೆಗೊಂಡ ಕುಂಬಳೆ ಪಂ.ನ ‘ಟೇಕ್ ಎ ಬ್ರೇಕ್’ ಕಟ್ಟಡ

ಕುಂಬಳೆ: ಸಾರ್ವಜನಿಕರ ಉಪಯೋಗಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ನಿರ್ಮಿಸಿದ ಶೌಚಾಲಯ ಸಹಿತ ವಿಶ್ರಾಂತಿ ಕೇಂದ್ರ (ಟೇಕ್ ಎ ಬ್ರೇಕ್) ಉದ್ಘಾಟನೆಗೊಂಡು ಒಂದೇ ತಿಂಗಳಲ್ಲಿ ಮುಚ್ಚುಗಡೆಗೊಂಡಿದೆ.  ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ 40 ಲಕ್ಷ ರೂ. ವ್ಯಯಿಸಿ ಈ ವಿಶ್ರಾಂತಿ ಕೇಂದ್ರವನ್ನು ನಿರ್ಮಿಸಲಾಗಿತ್ತು. ಕಳೆದ ಅಗೋಸ್ತ್ ೧೪ರಂದು ಇದರ ಉದ್ಘಾ ಟನೆಯನ್ನು ರಾಜ್ಯ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ.ಶಾಜಿ ಉದ್ಘಾಟಿಸಿದ್ದರು. ಉದ್ಘಾಟನೆ ಬಳಿಕ ಒಂದು ತಿಂಗಳು ಮಾತ್ರವೇ ಇದು ಕಾರ್ಯಾಚರಿಸಿದೆ.  ಅನಂತರ  ಇದು ಮುಚ್ಚುಗಡೆಗೊಂಡ ಸ್ಥಿತಿಯಲ್ಲಿದೆ. ಇಲ್ಲಿಗೆ ನೀರಿನ ಸೌಕರ್ಯವಿಲ್ಲದಿ ರುವುದೇ …

ಉದ್ಯೋಗ ವಿಸಾ ನೀಡುವುದಾಗಿ ನಂಬಿಸಿ ಬ್ಯಾಂಕ್ ಖಾತೆಯಿಂದ 1,12,300 ರೂ. ಲಪಟಾವಣೆ

 ಬದಿಯಡ್ಕ: ಫೇಸ್ ಬುಕ್ ಮೂಲಕ ಸಂಪರ್ಕಿಸಿ ಉದ್ಯೋ ಗ ನೀಡುವುದಾಗಿ ತಿಳಿಸಿ ಸೀತಾಂ ಗೋಳಿ ನಿವಾಸಿ ಯೋರ್ವನ   ಬ್ಯಾಂಕ್ ಖಾತೆ ಗಳಿಂದ 1,12,300 ರೂ. ವಂಚಿಸಿದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ಬೇಳ ಸೀತಾಂಗೋಳಿ ಪೀಲಿಪಳ್ಳ ಹೌಸ್‌ನ ರಶಾದ್ ಎ.ಕೆ ಈ ಬಗ್ಗೆ ದೂರು ನೀಡಿದ್ದು ಅದರಂತೆ ಅಪರಿಚಿತ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2025 ಜೂನ್ 1ರಿಂದ  ಜುಲೈ 12ರ ಮಧ್ಯೆ ಉದ್ಯೋಗ ಭರವಸೆ ನೀಡಿ ನನ್ನ ಎರಡು ಬ್ಯಾಂಕ್ …

ಬ್ಯಾಂಕಿಂಗ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡುವ ಸಹಾಯದ ಹೆಸರಲ್ಲಿ ಬ್ಯಾಂಕ್ ಖಾತೆಯಿಂದ ಎರಡು ಲಕ್ಷ ರೂ. ಲಪಟಾವಣೆ, ಪ್ರಕರಣ ದಾಖಲು

ಕುಂಬಳೆ: ಬ್ಯಾಂಕ್ ಆಫ್ ಬರೋಡಾದ ಇಂಟರ್‌ನೆಟ್ ಮೊಬೈಲ್ ಬ್ಯಾಂಕಿಂಗ್ ಡೌನ್‌ಲೋಡ್ ಗೈಯ್ಯಲು ಸಹಾಯ ಮಾಡುವುದಾಗಿ ವಾಟ್ಸಪ್‌ನಲ್ಲಿ ಸಂದೇಶ ಮತ್ತು ಒಟಿಪಿ ಕಳುಹಿಸಿಕೊಟ್ಟ ಬಳಿಕ ಕುಂಬಳೆ ನಿವಾಸಿಯ ಬ್ಯಾಂಕ್ ಖಾತೆಯಿಂದ ಸೈಬರ್ ವಂಚನೆಗಾರರು ಎರಡು ಲಕ್ಷ ರೂ. ವಂಚಿಸಿದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆ ಫೆರಿ ಬಳಿಯ ನಿವಾಸಿ ಎಂ.ಎಸ್. ದೇವರಾಜನ್ ಎಂಬವರ ಬ್ಯಾಂಕ್ ಖಾತೆಯಿಂದ ಅವರಿಗೆ ತಿಳಿಯದೆ  ಈ ರೀತಿ ಹಣ ಎಗರಿಸಲಾಗಿದೆ ಎಂದು ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ …

ಪೋಕ್ಸೋ ಸೇರಿ ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ  ಮೈಸೂರಿನಿಂದ ಸೆರೆ: 26 ಸಿಮ್‌ಕಾರ್ಡ್ ವಶ

ಕಾಸರಗೋಡು: ಪೋಕ್ಸೋ, ದೌರ್ಜನ್ಯ, ವೀಸಾ ವಂಚನೆ ಇತ್ಯಾದಿ ಹಲವು ಪ್ರಕರಣಗಳಲ್ಲಿ ಆರೋಪಿಯಾ ಗಿದ್ದು, ನಂತರ ತಲೆಮರೆಸಿಕೊಂಡಿ ದ್ದಾತನನ್ನು ಮೈಸೂರಿನ ಹುಣಸೂರಿನಲ್ಲಿ ಪೊಲೀಸರು ನಡೆಸಿದ   ಕಾರ್ಯಾಚರಣೆ ಯಲ್ಲಿ ಬಂಧಿಸಿದ್ದಾರೆ. ಚೆರುವತ್ತೂರು ಕಾಡಾಂಗೋಡು ನಿವಾಸಿ ಮುತ್ತಲೀಬ್ ಸಿ.ಎಚ್ (46) ಬಂಧಿತ ಆರೋಪಿ. ಹೊಸದುರ್ಗ ಡಿವೈಎಸ್‌ಪಿ ನೇತೃತ್ವದಲ್ಲಿ ಎಸ್‌ಐ ಸೈಫುದ್ದೀನ್ ನೀಲೇಶ್ವರ, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಶ್ರೀಕಾಂತ್ ಅರವಂಚಾಲ್ ಮತ್ತು ವಿ.ವಿ. ಅಜಯನ್‌ರನ್ನೊಳಗೊಂಡ ಪೊಲೀಸರು ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಕೈಯಿಂದ 26 ಮೊಬೈಲ್ ಸಿಮ್‌ಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ …

ಟೆಂಪೋ ಚಾಲಕ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಟೆಂಪೋ ಚಾಲಕನೋರ್ವ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.  ಹೊಸಂಗಡಿ ಬಳಿಯ ಅಂಗಡಿಪದವು ನಿವಾಸಿಯೂ ಹೊಸಂಗಡಿಯಲ್ಲಿ ಶ್ರೀ ಶಾಸ್ತಾ ಬೇಕರಿ ಮಾಲಕನಾಗಿರುವ  ಸುಂದರ ಬಿ.ಎಂ ಎಂಬವರ ಪುತ್ರ ಮಚ್ಚೇಂದ್ರನಾಥ (48) ಮೃತ ವ್ಯಕ್ತಿ.    ನಿನ್ನೆ ರಾತ್ರಿ  94೦ರ ವೇಳೆ ಘಟನೆ ನಡೆದಿದೆ.  ಮನೆಯ ಕೊಠಡಿಗೆ ತೆರಳಿ  ಬಾಗಿಲು ಹಾಕಿದ್ದ ಮಚ್ಚೇಂದ್ರನಾಥ ದೀರ್ಘ ಹೊತ್ತು ಕಳೆದರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಪತ್ನಿ ಕರೆದಾಗ  ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ …

ಬಿಜೆಪಿ ಪ್ರಜಾಪ್ರಭುತ್ವ ಸಂರಕ್ಷಣಾ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಹಸ್ರಾರುಮಂದಿ: ಮೋಕ್ ಪಾರ್ಲಿಮೆಂಟ್ ನಡೆಸಿ ಕಾಂಗ್ರೆಸ್ ಸ್ವತಃ ಅಪಹಾಸ್ಯಕ್ಕೀಡಾಗಿದೆ-ಪ್ರೊ| ಎಂ. ನಾಗರಾಜ

ಕಾಸರಗೋಡು: ಮೋಕ್ ಪಾರ್ಲಿ ಮೆಂಟ್ ಆಯೋಜಿಸಿ ಮುಖ್ಯ ಚುನಾ ವಣಾ ಆಯುಕ್ತರನ್ನು ಪದಚ್ಯುತಿಗೊಳಿ ಸುತ್ತಿದ್ದೇವೆ ಎಂಬ ಪ್ರಚಾರದ ಮೂಲಕ ಕಾಂಗ್ರೆಸ್ ಸ್ವತಃ ಅಪಹಾಸ್ಯಕ್ಕೀಡಾಗಿದೆ ಮತ್ತು ಕಾಂಗ್ರೆಸ್‌ನ ಶವಪೆಟ್ಟಗೆಗೆ ಮೊಳೆ  ಹೊಡೆಯುವ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸಂಸದ ಪ್ರೊ| ಎಂ.ನಾಗರಾಜ ಹೇಳಿದರು. ಬಿಜೆಪಿ ಜಿಲ್ಲಾ ಸಮಿತಿ ಕಾಸರಗೋಡಿನಲ್ಲಿ ನಿನ್ನೆ ಆಯೋಜಿಸಿದ್ದ  ಪ್ರಜಾಪ್ರಭುತ್ವ ಸಂ ರಕ್ಷಣಾ ಪಾದಯಾತ್ರೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದ ಜನರ  ಹೃದಯದಲ್ಲಿ ಸ್ಥಾನ ಪಡೆದರೆ ಮಾತ್ರ …

ಸುನ್ನಿ ಕಾರ್ಯಕರ್ತ ಬೀರಾನ್ ಪುತ್ತೂರು ನಿಧನ

ಕುಂಬಳೆ: ಮೊಗ್ರಾಲ್ ಪುತ್ತೂರಿನ ಸಕ್ರಿಯ ಸುನ್ನಿ ಕಾರ್ಯಕರ್ತ, ಸಾಧು ಸಂರಕ್ಷಣಾ ಸಮಿತಿಯ ಕೋಶಾಧಿಕಾರಿ ಬೀರಾನ್ ಪುತ್ತೂರು (53) ನಿಧನಹೊಂದಿದರು. ಅಸೌಖ್ಯ  ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ರಮ್ಲ, ಮಕ್ಕಳಾದ ಹಿಬ, ಹನ್ನ, ಅಳಿಯ ಸಾಧಿಕ್ ಮುಳಿಯಾರು ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

ಸಿಟಿ ಗೋಲ್ಡ್ ಉಪ್ಪಳ ಶೋರೂಂಗಳ ಉದ್ಘಾಟನೆ ಇಂದು

ಉಪ್ಪಳ: ಕಳೆದ 22 ವರ್ಷಗಳಿಂದ ಉಪ್ಪಳದಲ್ಲಿ ಕಾರ್ಯಾಚರಿಸುತ್ತಿರುವ ಸಿಟಿ ಗೋಲ್ಡ್ ಆಂಡ್ ಡೈಮಂಡ್ಸ್‌ನ ಇನ್ನಷ್ಟು ವಿಶಾಲವಾದ ನೂತನ ಶೋರೂಂ ಇಂದು ಉದ್ಘಾಟನೆಗೊಳ್ಳಲಿದೆ. ಸಯ್ಯೀದ್ ಅಲಿ ತಂಙಳ್ ಕುಂಬೋಳ್ ಉದ್ಘಾಟನೆ ನೆರವೇರಿಸುವರು. ಲೈಟ್‌ವೈಟ್, ಡೈಲಿವೇರ್ ಆಭರಣಗಳ ಶೋರೂಂ ಆದ ಕೇವಾ ಬೋಕ್ಸ್‌ನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಖ್ಯಾತ ವಯಲಿನಿಸ್ಟ್ ಗೋಕುಲ್‌ಕೃಷ್ಣರ ಲೈವ್ ಪರ್ಫೋರ್ಮೆನ್ಸ್ ಈ ವೇಳೆ ಆಯೋಜಿಸಲಾಗಿದೆ. ಉದ್ಘಾಟನೆಯಂಗವಾಗಿ ಸಿಟಿ ಗೋಲ್ಡ್ ಗ್ರಾಹಕರಿಗಾಗಿ ಪ್ರೀಮಿಯಂ, ವಿಂಟೇಜ್ ಹೊರತುಪಡಿಸಿರುವ ಚಿನ್ನಾಭರಣಗಳಿಗೆ ಮಜೂರಿ 4,9 ಶೇಕಡಾ ಮಾತ್ರವಾಗಿದೆ. ಅಲ್ಲದೆ ಡೈಮಂಡ್ …

ಸಾಮಾಜಿಕ ಜಾಲತಾಣ ಮೂಲಕ ಪರಿಚಯಗೊಂಡು ಹಣ ಪಡೆದು ವಂಚನೆ: ವಾಪಸು ಕೇಳಿದಾಗ ಬೆದರಿಸಿದ ಆರೋಪಿ ಸೆರೆ

ತಿರುವನಂತಪುರ: ಪೇಸ್‌ಬುಕ್ ಮೂಲಕ ಪರಿಚಯಗೊಂಡ ಯುವತಿಯಿಂದ ಹಣ ಪಡೆದುಕೊಂಡ ಮಿಮಿಕ್ರಿ ಕಲಾವಿದ ಸೆರೆಯಾಗಿದ್ದಾನೆ. ತೃಶೂರು ಅರನಾಟುಕರ ನಿವಾಸಿ ಸತೀಶ್ ವಳರಿ ಯಾನೆ ವಿ.ಬಿ. ಸತೀಶ್ (೪೭)ನನ್ನು ಬಂಧಿಸಲಾಗಿದೆ. ಈತನ ಸಹೋದರಿ ವಿರುದ್ಧವೂ ಕೇಸು ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ವಿಳಿಂಞಂ ಕೋಟಪುರಂ ನಿವಾಸಿಯಾದ ಯುವತಿ ನೀಡಿದ ದೂರಿನಂತೆ ಈತನನ್ನು ಬಂಧಿಸಲಾಗಿದೆ. ಕಳೆದ ಡಿಸೆಂಬರ್‌ನಿಂದ ಫೆಬ್ರವರಿಗಿರುವ ಕಾಲಾವದಿಯಲ್ಲಿ ಹಲವು ಬಾರಿಯಾಗಿ 1.25 ಲಕ್ಷ ರೂ. ಯುಪಿಐ ಮೂಲಕ ಪಡೆದಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. 2೦,3೦೦ ರೂ.ಗಳ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳು, ವಿಮಾನ …