ಮಂಜೇಶ್ವರ ತಾಲೂಕು ಆಸ್ಪತ್ರೆಗೆ ಕಟ್ಟಡ ನಿರ್ಮಾಣ ಆಗ್ರಹಿಸಿ ಎನ್‌ಸಿಪಿ(ಎಸ್) ಧರಣಿ

ಉಪ್ಪಳ: ಮಂಜೇಶ್ವರ ತಾಲೂಕಿನ  ಜನಸಾಮಾನ್ಯರಾದ ರೋಗಿಗಳು ಹೆಚ್ಚಾಗಿ ಆಶ್ರಯಿಸುವ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕಿಫ್‌ಬಿ ಫಂಡ್ ಉಪಯೋ ಗಿಸಿ ಕೂಡಲೇ ಕಟ್ಟಡ ನಿರ್ಮಾಣ ಆರಂಭಿಸಬೇಕೆಂದು ಆಗ್ರಹಿಸಿ ಎನ್‌ಸಿಪಿ (ಎಸ್) ಮಂಜೇಶ್ವರ ಬ್ಲೋಕ್ ಸಮಿತಿ ಯ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು. ಪಕ್ಷದ ಜಿಲ್ಲಾ ಅಧ್ಯಕ್ಷ ಕರೀಂ ಚಂದೇರ ಉದ್ಘಾಟಿಸಿ ದರು. ಬ್ಲೋಕ್ ಸಮಿತಿ ಅಧ್ಯಕ್ಷ ಮಹಮ್ಮೂದ್ ಕೈಕಂಬ ಅಧ್ಯಕ್ಷತೆ ವಹಿಸಿದರು. ಸಿ. ಬಾಲನ್, ಟಿ. ನಾರಾ ಯಣನ್, ಉದಿ ನೂರು ಸುಕುಮಾರನ್, ಸುಬೈರ್ ಪಡ್ಪು, ಸಿದ್ದಿಕ್ ಕೈಕಂಬ, ಸೀನತ್, ಸತೀಶನ್, ಹಮೀದ್ ಚೇರಂಗೈ, ಮುಹ ಮ್ಮದ್ ಆನೆಬಾಗಿಲು, ಖದೀಜಾ ಮೊಗ್ರಾಲ್ ಮಾತನಾಡಿದರು. ಹಲವರು ಭಾಗವಹಿಸಿದರು.

You cannot copy contents of this page