ತಳಂಗರೆ ಗ್ರಾಮ ಕಚೇರಿಯಲ್ಲಿ ಕಳವಿಗೆತ್ನ: ಆರೋಪಿ ಸೆರೆ

ಕಾಸರಗೋಡು: ತಳಂಗರೆ ಗ್ರಾಮ ಕಚೇರಿಯಲ್ಲಿ ನಡೆದ ಕಳವು ಯತ್ನ ಪ್ರಕರಣದ ಆರೋಪಿಯನ್ನು ಕಾಸರ ಗೋಡು ಪೊಲೀಸರು ಬಂಧಿಸಿದ್ದಾರೆ.

ಪತ್ತನಂತಿಟ್ಟ ಮಲಂಪುಳ ಕಲ್ಲೂರು ಹೌಸ್‌ನ ವಿಷ್ಣು (32) ಬಂಧಿತ ಆರೋಪಿ. ಕಳೆದ ಶನಿವಾರ ರಾತ್ರಿ ಗ್ರಾಮ ಕಚೇರಿಯಲ್ಲಿ ಕಳವು ಯತ್ನ ನಡೆದಿತ್ತು.  ಈತ ವಿವಿಧ ಪ್ರಕರಣಗಳಲ್ಲಿ ಆರೋಪಿ ಯಾಗಿ ದ್ದಾನೆ. ನಗ-ನಗದನ್ನು ಮಾತ್ರವೇ ಈತ ಹೆಚ್ಚಾಗಿ ಕಳವುಗೈಯ್ಯುತ್ತಿದ್ದಾನೆ.

ಕಾಸರಗೋಡು, ಕಣ್ಣೂರು ಹಾಗೂ ಇತರ ಹಲವು ಜಿಲ್ಲೆಗಳಲ್ಲಿ ಈತನ ವಿರುದ್ಧ ಹಲವು ಕೇಸುಗಳಿವೆ.  ಒಂದು ಜಿಲ್ಲೆಯಲ್ಲಿ ಕಳವು ನಡೆಸಿದ ಬಳಿಕ ಇನ್ನೊಂದು ಜಿಲ್ಲೆಗೆ   ಹೋಗಿ ಅಲ್ಲಿ ಕೆಲವು ದಿನ ಉಳಿದುಕೊಂಡು ಕಳವು ನಡೆಸುವುದು ನಂತರ ಬೇರೊಂದು ಜಿಲ್ಲೆಗೆ ಹೋಗಿ ಕಳವು ನಡೆಸುವುದು ಈತನ ಕಳವು ರೀತಿಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.ತಳಂಗರೆ ಗ್ರಾಮ ಕಚೇರಿಯ ಬಾಗಿಲ ಬೀಗ ಒಡೆದು ಒಳನುಗ್ಗಿ ಅಲ್ಲಿನ ಕಪಾಟಿನೊಳಗಿದ್ದ ಸಾಮಗ್ರಿಗಳ ನ್ನೆಲ್ಲವನ್ನು ಎಳೆದು ಚೆಲ್ಲಾಪಿಲ್ಲಿಗೊ ಳಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲಿ ಲ್ಯಾಪ್ ಟಾಪ್‌ಗಳಿದ್ದು ಅದು ಹಾಗೆಯೇ ಉಳಿದುಕೊಂಡಿತ್ತು.

RELATED NEWS

You cannot copy contents of this page