ವಾಹನ ಢಿಕ್ಕಿ ಹೊಡೆದು ರಸ್ತೆ ಬದಿ ಬಿದ್ದಿದ್ದ ಹಸುವಿಗೆ ಚಿಕಿತ್ಸೆ ನೀಡಲು ಹಿಂಜರಿದ ಮೃಗ ವೈದ್ಯ

ಕುಂಬಳೆ: ವಾಹನ ಢಿಕ್ಕಿ ಹೆಡೆದ ಪರಿಣಾಮ ಕಾಲಿಗೆ ಗಂಭೀರ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಹಸುವಿಗೆ ಚಿಕಿತ್ಸೆ ನೀಡಲು ಮೃಗ ವೈದ್ಯ ನಿರಾಕರಿಸಿದ್ದು, ಕೊನೆಗೆ ನಾಗರಿಕರು, ಪಂಚಾಯತ್ ಅಧಿಕಾರಿಗಳು ಹಾಗೂ ಪತ್ರಕರ್ತರು ಮಧ್ಯೆ ಪ್ರವೇಶಿಸಿದುದರಿಂದ ಹಸುವಿಗೆ ಚಿಕಿತ್ಸೆ ಲಭಿಸುವಂತಾಯಿತು.

ನಿನ್ನೆ ಅಪರಾಹ್ನ ೩ ಗಂಟೆ ವೇಳೆ ಕುಂಬಳೆ ಭಾಸ್ಕರನಗರದಲ್ಲಿ ವಾಹನ ಢಿಕ್ಕಿ ಹೊಡೆದು ಹಸುವೊಂದು ಕಾಲಿಗೆ ಗಾಯಗೊಂಡು ರಸ್ತೆ ಬದಿ ಬಿದ್ದಿತ್ತು. ಅದನ್ನು ಕಂಡ ನಾಗರಿಕರು ಕುಂಬಳೆ ಮೃಗಾಸ್ಪತ್ರೆಗೆ ತಲುಪಿಸಿ ಹಸುವಿಗೆ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ವಿನಂತಿಸಿದರು. ಈ ವೇಳೆ ‘ತನ್ನ ಕೆಲಸ ಮುಗಿಯಿತು’ ಎಂದು ತಿಳಿಸಿ ವೈದ್ಯ ಚಿಕಿತ್ಸೆ ನೀಡಲು ಹಿಂಜರಿದಿದ್ದಾರೆ.  ‘ನೀನು ೩ ಗಂಟೆ’ ವರೆಗೆ ಕೆಲಸ ನಿರ್ವಹಿಸಿದರೆ ಸಾಕೆಂದ ಯಾವ ಸರಕಾರ ತಿಳಿಸಿದೆ ಎಂದು ನಾಗರಿಕರು ಪ್ರಶ್ನಿಸಿದಾಗ ವೈದ್ಯ ರೋಷಗೊಂಡು ತಾನೀಗ ಪೊಲೀಸರನ್ನು ಕರೆಯುವು ದಾಗಿ ತಿಳಿಸಿ ಬೆದರಿಕೆಯೊಡ್ಡಿದ್ದಾ ರೆನ್ನಲಾಗಿದೆ.  ಅಲ್ಲದೆ ಚಿಕಿತ್ಸೆ ಬೇಕಾದರೆ ಹಸುವನ್ನು ಲಾರಿಯಲ್ಲಿ ಹತ್ತಿಸಿ ಕಾಸರಗೋಡು ಮೃಗಾಸ್ಪತ್ರೆಗೆ ತಲುಪಿಸುವಂತೆಯೂ ವೈದ್ಯ ನಿರ್ದೇಶಿಸಿದ್ದಾರೆನ್ನಲಾಗಿದೆ. ಇದರಿಂದ ಅನ್ಯ ದಾರಿಯಿಲ್ಲದೆ ನಾಗರಿಕರು ವಿಷಯವನ್ನು ಪತ್ರಕರ್ತರ ಗಮನಕ್ಕೆ ತಂದಿದ್ದಾರೆ. ವಿಷಯ ಪಂಚಾಯತ್ ಅಧ್ಯಕ್ಷರ ಗಮನಕ್ಕೂ ಬಂತು. ಅವರು ನೀರ್ಚಾಲು ಮೃಗಾ ಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ದು, ಅವರು ಚಿಕಿತ್ಸೆ ನೀಡಲು ಮುಂದಾ ಗಿದ್ದಾರೆ.  ಈಮಧ್ಯೆ ಪತ್ರಕರ್ತರು ಕುಂಬಳೆ ಮೃಗಾಸ್ಪತ್ರೆ ವೈದ್ಯರಿಗೆ ಕರೆ ಮಾಡಿದ್ದು, ಈ ವೇಳೆ  ವೈದ್ಯ ಭಾಸ್ಕರನಗರಕ್ಕೆ ತಲುಪಿ ಹಸುವಿಗೆ ಚಿಕಿತ್ಸೆ ನೀಡಿದ್ದರೆಂದು ನಾಗರಿಕರು ತಿಳಿಸಿದ್ದಾರೆ.

RELATED NEWS

You cannot copy contents of this page