ಬದಿಯಡ್ಕ: ಬದಿಯಡ್ಕ: ಸನಾತನ ವಿಶ್ವಾಸ, ಆಚರಣೆಗಳ ಮೇಲೆ ಈಗೀಗ ನಿರಂತರ ಆಕ್ರಮಣಗಳು ವ್ಯಾಪಕವಾ ಗುತ್ತಿದೆ. ವ್ಯಕ್ತಿಗಳ ಹೆಸರಲ್ಲಿ ನಡೆಸುವ ತೇಜೋವಧೆಗಳ ಮಧ್ಯೆ ದೈವ-ದೇವರುಗಳನ್ನು ಅವಹೇಳ ನಗೈದು ಹಿಂದೂ ಮನಸ್ಸುಗಳಿಗೆ ನೋವ ನ್ನುಂಟುಮಾಡುವ ಕುತ್ಸಿತ ಮನೋ ಭಾವಗಳಿಗೆ ತಕ್ಕ ಉತ್ತರ ನೀಡಬೇಕು. ವ್ಯಕ್ತಿಗಳು ಶಾಶ್ವತರಲ್ಲ. ಆದರೆ ಮೌಲ್ಯ ಗಳನ್ನುಳಿಸಿಕೊಂಡು ನಂಬಿಕೆ, ಆಚರಣೆ, ಸತ್ಕರ್ಮಗಳಿಗೆ ಬೆಂಬಲ ನೀಡಬೇಕು. ಆರಾಧನಾ ಲಯಗಳ ಸಂರಕ್ಷಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದಿ ರಬೇಕು ಎಂದು ಧಾರ್ಮಿಕ ಮುಂ ದಾಳು, ಉದ್ಯಮಿ ಮಧುಸೂದನ ಅಯರ್ ಮಂಗ ಳೂರು ಅಭಿಪ್ರಾಯ ವ್ಯಕ್ತಪಡಿಸಿದರು. ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ನವೀಕರಣದ ಅಂಗವಾಗಿ ಶ್ರೀಮಂದಿರದ ಪರಿಸರದಲ್ಲಿ ನಡೆದ ಬೆಳ್ಳಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾ ಗಿದ್ದು ಅವರು ಮಾತನಾಡಿದರು.
ಪ್ರಥಮ ಬೆಳ್ಳಿ ಸಮರ್ಪಣೆ ಹಾಗೂ ಉದ್ಘಾಟನೆಯನ್ನು ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ನೆರವೇರಿಸಿದರು. ಶ್ರೀ ಅಯ್ಯಪ್ಪ ಸೇವಾ ಸಂಘ ಮಾನ್ಯ ಇದರ ಅಧ್ಯಕ್ಷ ನಾರಾಯಣ ಮಣಿಯಾಣಿ ಮಾನ್ಯ ಅಧ್ಯಕ್ಷತೆ ವಹಿಸಿದ್ದರು.ಶ್ರೀ ಮಂದಿರದ ಪ್ರತಿಷ್ಠ ಗುರುಸ್ವಾಮಿ ಶಂಕರ ದೇವಾಂಗ, ಧರ್ಮದರ್ಶಿ ಗಣೇಶ ಉಳ್ಳೋಡಿ ಉಪಸ್ಥಿತರಿದ್ದರು. ಮಾನ ಮಾಸ್ಟರ್ ಮಾನ್ಯ, ಕುಂಞಪ್ಪು ನಾಯ್ಕ ದೇವರಕೆರೆ, ನಾರಾಯಣ ಗುರುಸ್ವಾಮಿ ನಾರಾಯಣಮಂಗಲ, ನಾರಾಯಣ ಮಾಸ್ಟರ್ ಚರ್ಲಡ್ಕ, ಕುಂಞÂಕಣ್ಣ ಮಣಿಯಾಣಿ, ಗೋಪಾಲಕೃಷ್ಣ ವಾಂತಿಚಾಲ್, ರವಿ ಮರ್ದಂಬೈಲು, ವೇಣುಗೋಪಾಲ ತತ್ವಮಸಿ ಮಾನ್ಯ, ಪಿಎಂ ವೆಂಕಪ್ಪ ನಾಯ್ಕ, ರಾಮ ಕಾರ್ಮಾರು, ಸಂತೋಷ್ ಕುಮಾರ್ ಎಸ್, ನಿತ್ಯಾನಂದ ಎಂಆರ್ ಮಾನ್ಯ ಶುಭಾಶಂಸನೆ ಗೈದರು. ಶ್ರೀ ಅಯ್ಯಪ್ಪ ಸೇವಾ ಸಂಘದ ಕಾರ್ಯದರ್ಶಿ ಕೆ ಶ್ಯಾಮಪ್ರಸಾದ್ ಮಾನ್ಯ ಸ್ವಾಗತಿಸಿ, ಕೋಶಾಧಿಕಾರಿ ಸೋಮಪ್ಪ ನಾಯ್ಕ ಮಾನ್ಯ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು.