ಕೃಷಿಕ ಕೆರೆಗೆ ಹಾರಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಮುಳ್ಳೇರಿಯ: ಕಾರಡ್ಕ ಬಳಿಯ ಕೊಟ್ಟಂಗುಳಿಯಲ್ಲಿ ಕೃಷಿಕನೋರ್ವ ಕೆರೆಗೆ ಹಾರಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆರೆಗೆ ಹಾರುವ ಮೊದಲು ಕೈಯ ನರ ಕತ್ತರಿಸಿರುವು ದಾಗಿಯೂ ಸಂಶಯಿಸಲಾಗುತ್ತಿದೆ. ಕೊಟ್ಟಂಗುಳಿಯ ಕುಂಞಂಬು ನಾಯರ್‌ರ ಪುತ್ರ ಅಜಿತ್ ಕುಮಾರ್ (43) ಮೃತ ವ್ಯಕ್ತಿಯಾಗಿದ್ದಾರೆ. ಇಂದು ಬೆಳಿಗ್ಗೆ ಅಜಿತ್ ಕುಮಾರ್ ಮನೆಯಲ್ಲಿ ಕಾಣದ ಹಿನ್ನೆಲೆಯಲ್ಲಿ ನಡೆಸಿದ ಹುಡು ಕಾಟ ವೇಳೆ ಮನೆ ಸಮೀಪದ ಅಡಿಕೆ ತೋಟದ ಕೆರೆಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಮೇಲಕ್ಕೆತ್ತಿ ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಈ …