ಶಾಲೆಯಿಂದ ಅಕ್ಕಿ, ಪಾತ್ರೆಗಳ ಕಳವು: 180 ಮಕ್ಕಳಿಗೆ ಮಧ್ಯಾಹ್ನದೂಟ ಮೊಟಕು

ತೃಶೂರು: ಶಾಲೆಗೆ ನುಗ್ಗಿದ ಕಳ್ಳ ಮಕ್ಕಳಿಗೆ  ಮಧ್ಯಾಹ್ನದೂಟ ಕ್ಕಾಗಿರಿಸಿದ್ದ ಅಕ್ಕಿ ಹಾಗೂ ಪಾತ್ರೆಗಳ ಸಹಿತ ಸಾಮಗ್ರಿಗಳನ್ನು ಲಪಟಾಯಿಸಿದ್ದಾನೆ. ಇದರಿಂದಾಗಿ 180ರಷ್ಟು ಮಕ್ಕಳ ಮಧ್ಯಾಹ್ನದೂಟ ಮೊಟಕುಗೊಂಡಿತು. ಕೊಡುಂಗಲ್ಲೂರು ಕೋತಪರಂಬ್ ವಾಸುದೇವ ವಿಳಾಸ ಎಲ್‌ಪಿ ಶಾಲೆಯಲ್ಲಿ ಕಳವು ನಡೆದಿದೆ. ನಿನ್ನೆ ಬೆಳಿಗ್ಗೆ ನೌಕರರು ತಲುಪಿದಾಗ ಕಳವಿನ ಬಗ್ಗೆ ತಿಳಿದು ಬಂದಿದೆ. ಬಾಗಿಲನ್ನು ಮುರಿದು ಒಳನುಗ್ಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಶಾಲೆಗೆ ಹೊಂದಿಕೊಂಡಿರುವ ಅಡುಗೆ ಕೊಠಡಿ, ಸ್ಟೋರ್ ರೂಮ್ ಬಾಗಿಲನ್ನು ಕೂಡಾ ಮುರಿದಿದ್ದು, ಐದು ಕಿಲೋ ಅಕ್ಕಿ, ಪದಾರ್ಥಕ್ಕಿರುವ ಮಸಾಲೆಗಳು, ಪಾತ್ರೆಗಳು, …

ಕಾಸರಗೋಡು ನಿವಾಸಿಯ ಮಾಹಿತಿ ಕೇಳಿ ತಲುಪಿದ  ವ್ಯಕ್ತಿ ವೃದ್ದೆಯ ಚಿನ್ನದ ಸರ ಅಪಹರಿಸಿ ಪರಾರಿ

ಕಣ್ಣೂರು: ಕಾಸರಗೋಡು ನಿವಾಸಿಯ ಬಗ್ಗೆ ಮಾಹಿತಿ ಕೇಳಿ ತಲುಪಿದ ವ್ಯಕ್ತಿ ಸಿಪಿಎಂ ನೇತಾರನ ಸಹೋದರಿಯ ಕುತ್ತಿಗೆಯಿಂದ ಚಿನ್ನದ ಸರವನ್ನು ಅಪಹರಿಸಿ ಪರಾರಿಯಾಗಿದ್ದಾನೆ. ತಳಿಪರಂಬ್ ಪೂಮಂಗಲತ್ ಎಂಬಲ್ಲಿ ಘಟನೆ ನಡೆದಿದೆ. ಸಿಪಿಎಂ ತಳಿಪರಂಬ್ ಏರಿಯಾ ಸಮಿತಿ ಸದಸ್ಯ ಕೆ. ನಾರಾಯಣನ್‌ರ ಹಿರಿಯ ಸಹೋದರಿ ಪಾವಳತ್ ಕೋಳಿಯನ್ ಕಲ್ಯಾಣಿ (೮೦)ರ ಚಿನ್ನದ ಸರವನ್ನು ಅಪಹರಿಸಲಾಗಿದೆ. ೨೭ ವರ್ಷದಿಂದ ಇವರು ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಇವರ ಮನೆಯ ಸಮೀಪದಲ್ಲೇ ಕಾಸರಗೋಡು ನಿವಾಸಿಗಳಾದ ದಂಪತಿ ವಾಸ ಮಾಡುತ್ತಿದ್ದಾರೆ. ಇವರ ಬಗ್ಗೆ ಮಾಹಿತಿ ಕೇಳಿ ತಲುಪಿದ …

ಮಧೂರಿಗೆ ಕೆಎಸ್‌ಆರ್‌ಟಿಸಿ ಬಸ್ ಮಂಜೂರು ಮಾಡಲು ವ್ಯಾಪಾರಿ ಸಮಿತಿ ಮಧೂರು ಘಟಕ ಆಗ್ರಹ

ಮಧೂರು: ಪ್ರಸಿದ್ಧ ದೇವಸ್ಥಾನವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರಕ್ಕೆ ದಿನಂಪ್ರತಿ ಸಾವಿರಾರು ಮಂದಿ ತಲುಪುತ್ತಿದ್ದು, ಈ ಪ್ರದೇಶದಲ್ಲೇ ಇತರ ಹಲವಾರು ಕ್ಷೇತ್ರಗಳು, ಮಸೀದಿಗಳು, ಸರಕಾರಿ ಶಾಲೆಗಳು, ಆಸ್ಪತ್ರೆಗಳು, ಪಂಚಾಯತ್ ಕಚೇರಿ, ವಿಲ್ಲೇಜ್ ಕಚೇರಿ ಮೊದಲಾದ ಸರಕಾರಿ ಕಚೇರಿಗಳು ನೆಲೆಗೊಂಡಿವೆ. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಕೆಎಸ್‌ಆರ್‌ಟಿಸಿ ಬಸ್ ಆರಂಭಿಸಬೇ ಕೆಂದು ಕೇರಳ ರಾಜ್ಯ ವ್ಯಾಪಾರಿ ವ್ಯವಸಾಯಿ ಸಮಿತಿ ಮಧೂರು ಘಟಕ ಸಂಬಂಧಪಟ್ಟವರಲ್ಲಿ ಆಗ್ರಹಿಸಿದೆ. ದಿನಂಪ್ರತಿ ವಿವಿಧ ಅಗತ್ಯಗಳಿಗಾಗಿ ಸಾವಿರಾರು ಮಂದಿ ಸಂಚರಿಸುವ ಈ ರೂಟ್‌ನಲ್ಲಿ ಈಗ ಖಾಸಗಿ …

 ಪಿಣರಾಯಿ ಸರಕಾರದ ಹಾದಿಯಲ್ಲೇ ವಿ.ಡಿ. ಸತೀಶನ್‌ರ ಪೊಲೀಸರೂ ಸಾಗುತ್ತಿದ್ದಾರೆ-ಎಂ.ಎಲ್.ಅಶ್ವಿನಿ

ಕಾಸರಗೋಡು: ಕೇರಳದಲ್ಲಿ ಪ್ರಸ್ತುತ  ವಿ.ಡಿ ಸತೀಶನ್ ಅವರ ಪೊಲೀಸರು ಕೂಡಾ ಈ ಹಿಂದೆ ಪಿಣರಾಯಿ ವಿಜಯನ್ ಸರಕಾರ ಇದ್ದಾಗ ಸಾಗಿದ  ಹಾದಿಯಲ್ಲೇ  ಸಾಗುತ್ತಿದ್ದಾರೆ ಎಂದು  ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಆರೋಪಿಸಿದ್ದಾರೆ.  ಉಗ್ರಗಾಮಿಗಳಿಗೆ, ಮಾವೋವಾದಿಗಳಿಗೆ ಕೇರಳವು ಸುರಕ್ಷಿತ ತಾಣವಾಗಿ  ಮಾರ್ಪಟ್ಟಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವಮೋರ್ಛಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎನ್.ಐ.ಎ ಕೊಚ್ಚಿಯಿಂದ ಇಬ್ಬರು ಆರೋಪಿಗಳನ್ನು ಬಂಧಿಸಿರುವುದೇ ಇದಕ್ಕೆ ಉದಾಹರಣೆ ಯಾಗಿದೆ.  ಪ್ರವೀಣ್ ನೆಟ್ಟಾರು ಕೊಲೆ ನಡೆದು ನಾಲ್ಕು ವರ್ಷಗಳು ಕಳೆದರೂ ಆರೋಪಿಗಳು …

ದಂಬಯ್ಯ ಮೂಲ್ಯ ನಿಧನ

ಮೀಂಜ: ಮೀಯಪದವು ನಿವಾಸಿ ದಂಬಯ್ಯ ಮೂಲ್ಯ(70) ನಿಧನಹೊಂದಿದರು. ಅಸೌಖ್ಯ ಬಾಧಿಸಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಸಂಜೆ ನಿಧನ ಸಂಭವಿಸಿದೆ. ಇವರು ಈ ಹಿಂದೆ ಬಡಗಿ ವೃತ್ತಿ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಸುಲೋಚನ, ಮಕ್ಕಳಾದ ಶಿವಪ್ರಸಾದ್, ಚೇತನ, ಅಳಿಯ ರಮೇಶ್, ಸೊಸೆ ವಿಮಲ, ಸಹೋದರ-ಸಹೋದರಿಯರಾದ ಬಾಬು, ಸುರೇಶ (ಮೀಯಪದವಿನಲ್ಲಿ ‘ಕಾರವಲ್’ ಏಜೆಂಟ್), ವಿಶಾಲಾಕ್ಷಿ, ಮಮತ, ಹರಿಣಿ, ಹರಿಣಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಕೇಶವ ಎಂಬವರು ಈ ಹಿಂದೆ ನಿಧನರಾಗಿದ್ದಾರೆ.

ಅಸೌಖ್ಯ: ಔಷಧಿ ಅಂಗಡಿ ನೌಕರ ನಿಧನ

ಪೈವಳಿಕೆ: ಚಿಪ್ಪಾರುಗುತ್ತು ಸೊಣಾಜೆ ನಿವಾಸಿ ರವೀಂದ್ರ ರೈ (62) ಮಂಗಳವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೃಷಿಕರಾಗಿದ್ದು, ಬಾಯಾರುಪದವು ವಿಶ್ವ ಮೆಡಿಕಲ್‌ನಲ್ಲಿ ಹಲವಾರು ವರ್ಷಗಳಿಂದ ನೌಕರನಾಗಿದ್ದು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಮೃತರು ತಾಯಿ ಅಕ್ಕಮ್ಮ, ಪತ್ನಿ ಶಶಿಕಲಾ, ಮಕ್ಕಳಾದ ನಿಶಾನ್, ಶರವಿ, ಸಹೋದರಿಯರಾದ ಮನೋರಮ ಶೆಟ್ಟಿ ಕುರಿಯ, ಪ್ರಭಾವತಿ ರೈ ತೊಟ್ಲ, ಸುಧಾ ರೈ, ಸರಸ್ವತಿ ಹಾಗೂ ಅಪಾರ ಬಂಧು -ಬಳಗವನ್ನು ಅಗಲಿದ್ದಾರೆ. ಮನೆಗೆ ಪೈವಳಿಕೆ ಪಂಚಾಯತ್ ಸದಸ್ಯೆ ಯಶೋದ, ಬ್ಲೋಕ್ ಪಂಚಾಯತ್ ಸದಸ್ಯೆ ಚಂದ್ರಾವತಿ …

ಜಿಲ್ಲೆಯ ಅತ್ಯಂತ ಹಿರಿಯ ಮತದಾರ ಎಂಕಪ್ಪು ನಾಯ್ಕ್ ನಿಧನ

ಕಾಸರಗೋಡು: ಜಿಲ್ಲೆಯ ಅತ್ಯಂತ ಹೆಚ್ಚು ಪ್ರಾಯದ ಮತದಾರರಾದ ಪನತ್ತಡಿಯ ಶತಾಯುಷಿ ಎಂಕಪ್ಪು ನಾಯ್ಕ್ (107) ನಿಧನ ಹೊಂದಿದರು. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿ ಭಾಗವಹಿಸಿ ಇವರು ಗಮನ ಸೆಳೆದಿದ್ದರು. ಚುನಾವಣಾ ಆಯೋಗ ಏರ್ಪಡಿಸಿದ ‘ಮನೆಯಲ್ಲಿ ಮತ’ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ತನ್ನ ಮತದಾನ ಹಕ್ಕನ್ನು ವಿನಿಯೋಗಿಸಿದ್ದರು. ಜಿಲ್ಲಾಧಿಕಾರಿ ಇವರನ್ನು ಗೌರವಿಸಿದ್ದರು. ಪನತ್ತಡಿಯ ಉತ್ತಮ ಕೃಷಿಕನಾಗಿಯೂ ಆಯ್ಕೆಯಾಗಿದ್ದರು. ನಿನ್ನೆ ಬೆಳಿಗ್ಗೆ ಮನೆ ಹಿತ್ತಿಲಲ್ಲಿ ಅಂತ್ಯ ಸಂಸ್ಕಾರ ನಡೆದಿದೆ. ಇವರ ಪತ್ನಿ ಅಕ್ಕುಬಾಯಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ತಿಮ್ಮು …

ಮನೆಯ ಹೊರಗೆ ಇರಿಸಿದ್ದ ಕೀಲಿ ಕೈ ಬಳಸಿ ಬಾಗಿಲು ತೆರೆದು 110 ಗ್ರಾಂ ಚಿನ್ನಾಭರಣ, 20 ಸಾವಿರ ರೂ. ಕಳವು

ಉಪ್ಪಳ:  ದಂಪತಿ ಕ್ಷೇತ್ರ ದರ್ಶನಕ್ಕೆ ಹಾಗೂ ಮಕ್ಕಳು ಶಾಲೆ,ಕಾಲೇಜಿಗೆ ಹೋದ ಸಮಯದಲ್ಲಿ  ಮನೆಯಿಂದ 110 ಗ್ರಾಂ ಚಿನ್ನಾಭರಣ ಮತ್ತು 20 ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಪೈವಳಿಕೆ ಕುರುಡಪದ ವಿನ ಸುಬ್ರಾಯ ಸಾಯ ಎಂಬವರ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 2026 ಮಾರ್ಚ್ 9ರಿಂದ 23ರ ಮಧ್ಯೆಗಿನ ದಿನಗಳಲ್ಲಿ ಕಳವು ನಡೆದಿರುವುದಾಗಿ ಸಂಶಯಿಸಲಾ ಗುತ್ತಿದೆ. ಸುಬ್ರಾಯ ಹಾಗೂ ಪತ್ನಿ ಮಾರ್ಚ್ ೯ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದರ್ಶನಕ್ಕಾಗಿ ತೆರಳಿದ್ದರು.  ಈ ವೇಳೆ ಮನೆಯಲ್ಲಿ ಮಕ್ಕಳು ಮಾತ್ರವೇ …

ಪರೀಕ್ಷಾ ಹಾಲ್‌ನಲ್ಲಿ ಮೊಬೈಲ್ ಫೋನ್ ಉಪಯೋಗಿಸಿ ಉತ್ತರ ಬರೆದ ಪೈವಳಿಕೆ ನಿವಾಸಿ ಬಂಧನ : ಉತ್ತರ ಕಳುಹಿಸಿ ಕೊಟ್ಟಾತನಿಗಾಗಿ ಶೋಧ

ಪೈವಳಿಕೆ:  ಪರೀಕ್ಷಾ ಹಾಲ್ ನಲ್ಲಿ ಮೊಬೈಲ್ ಫೋನ್ ಉಪ ಯೋಗಿಸಿ ಉತ್ತರ ಬರೆದ ಪೈವಳಿಕೆ ನಿವಾಸಿ ಸೆರೆಗೀಡಾಗಿದ್ದಾನೆ. ಪೈವಳಿಕೆ  ಕುರುಡಪದವು ಬಳಿಯ ಸಾದಂU ಯ ನಿವಾಸಿ ಎಸ್. ಜನಾರ್ದನ (36) ಎಂಬಾತನನ್ನು ಕೂತುಪರಂಬ ಎಸಿಪಿ ಸಿಬಿ ಟೋಂ ನೇತೃತ್ವದಲ್ಲಿ ಬಂಧಿಸಲಾಗಿದೆ. ಎಸ್. ಜನಾರ್ದನ ಕೆಎಸ್‌ಇಬಿ ವರ್ಕಾಡಿ ಸೆಕ್ಷನ್‌ನಲ್ಲಿ ತಾತ್ಕಾಲಿಕ ನೌಕರನಾಗಿದ್ದಾನೆ. ಜುಲೈ ೧ರಂದು ಮಟ್ಟನ್ನೂರು ಪಾಲಿಟೆಕ್ನಿಕ್‌ನಲ್ಲಿ ನಡೆದ ಕೇರಳ ಗವ. ಸರ್ಟಿಫಿಕೇಟ್ ಎಕ್ಸಾಮಿನೇಶನ್ (ಕೆಜಿಸಿಇ)ಗೆ ಮೊಬೈಲ್ ಫೋನ್ ಉಪಯೋಗಿಸಿ ಈತ ಪರೀಕ್ಷೆ ಬರೆದಿದ್ದಾನೆ. ತಾತ್ಕಾ ಲಿಕ ನೌಕರನಾದ …

ಆಟೋ ರಿಕ್ಷಾಗಳಿಂದ ಹಣ ಕಳವು ನಡೆಸುತ್ತಿದ್ದಾತ ಸೆರೆ

ಕಾಸರಗೋಡು:  ನಿಲ್ಲಿಸಿದ್ದ ಆಟೋ ರಿಕ್ಷಾಗಳಿಂದ ಕಳವು ನಡೆಸುತ್ತಿದ್ದಾತನನ್ನು ಪೊಲೀಸರು ಕೈಯಾರೆ ಸೆರೆಹಿಡಿದಿದ್ದಾರೆ.  ಚಿಟ್ಟಾರಿಕ್ಕಲ್ ನಿವಾಸಿಯಾದ ಶೈಜು ಜೋಸೆಫ್ (34) ಎಂಬಾತನನ್ನು ತಲಶ್ಶೇರಿ ಪೊಲೀಸರು ಬಂಧಿಸಿದ್ದಾರೆ.  ಆಟೋ ರಿಕ್ಷಾಗಳನ್ನು ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿ ಚಾಲಕರು ಚಹಾ ಕುಡಿಯಲೋ ಅಥವಾ ಇತರ ಅಗತ್ಯಗಳಿಗೆ ತೆರಳಿದ ಸಂದರ್ಭದಲ್ಲಿ ವಾಹನಗಳಿಂದ ಹಣ ಮೊದಲಾದವು ಗಳನ್ನು ಶೈಜು ಜೋಸೆಫ್   ಕಳವು ನಡೆಸುತ್ತಿದ್ದನೆನ್ನಲಾಗಿದೆ. ಕಳವು ಬಗ್ಗೆ ಹಲವರಿಂದ ದೂರು ಲಭಿಸಿದ ಹಿನ್ನೆಲೆ ಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಜುಲೈ ೮ರಂದು ತಲಶ್ಶೇರಿ  ಹಳೆ ಬಸ್ ನಿಲ್ದಾಣ ಸಮೀಪ …