ಕರ್ಕಾಟಕ ಅಮವಾಸ್ಯೆ: ಪಿತೃತರ್ಪಣಕ್ಕೆ ಕ್ಷೇತ್ರಗಳಲ್ಲಿ ಸಿದ್ಧತೆ

ಕಾಸರಗೋಡು:  ಕರ್ಕಾಟಕ ಅಮವಾಸ್ಯೆ ಹಿನ್ನೆಲೆಯಲ್ಲಿ ಪಿತೃತರ್ಪಣ ನಡೆಸುವುದಕ್ಕೆ ತೀರ್ಥ ಕ್ಷೇತ್ರಗಳು ಸಿದ್ಧತೆನಡೆಸುತ್ತಿವೆ. ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ತೃಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ಕ್ಷೇತ್ರದಲ್ಲಿ ಬಲಿತರ್ಪಣ 12ರಂದು ಬೆಳಿಗ್ಗೆ 5.30ರಿಂದ ಆರಂಭಗೊಳ್ಳಲಿದೆ. ಅರ್ಚಕ ನವೀನ್‌ಚಂದ್ರ ಕಾಯರ್‌ತ್ತಾಯ, ಪುರೋಹಿತ ರಾಜೇಂದ್ರ ಅರಳಿತ್ತಾಯ ಎಂಬಿವರು ನೇತೃತ್ವ ನೀಡುವರು. ೨೦ರಷ್ಟು ವೈದಿಕರು ಇಲ್ಲಿ ಬಲಿತರ್ಪಣ ನಡೆಸಿಕೊಡುವರು. ಭಕ್ತರಿಗೆ ಕುಡಿಯುವ ನೀರು, ಔಪಹಾರ, ಪೊಲೀಸ್, ಹೆಲ್ತ್ ವಿಭಾಗಗಳ ಸೇವೆ, ಸಾರಿಗೆ ಸೌಕರ್ಯ ಎಂಬಿವುಗಳನ್ನು ಏರ್ಪಡಿಸಲಾಗಿದೆ. ತೃಕ್ಕನ್ನಾಡ್ ಹೊರತಾಗಿ ಚಟ್ಟಂಚಾಲ್ ಶ್ರೀ ಮಹಿಷ ಮರ್ದಿನಿ ಕ್ಷೇತ್ರ ತ್ರಿವೇಣಿ …

ಸರಕಾರ ಹಾಗೂ ಆರೋಗ್ಯ ಸಚಿವ ಬದಲಾವಣೆಯಾಗುತ್ತಿದೆ,ಆದರೆ ಜಿಲ್ಲೆಯ ಆರೋಗ್ಯ ಕೇಂದ್ರಗಳು ಯಥಾಸ್ಥಿತಿ

ಕುಂಬಳೆ: ಸರಕಾರ, ಆರೋಗ್ಯಸಚಿವ ಬದಲಾವಣೆಯಾಗುವುದಲ್ಲದೆ ಜಿಲ್ಲೆಯ ಆರೋಗ್ಯ ಕೇಂದ್ರಗಳಿಗೆ ಯಾವುದೇ ಬದಲಾವಣೆ ಉಂಟಾಗುತ್ತಿಲ್ಲವೆಂದು ಸ್ಥಳೀಯರು ದೂರುತ್ತಾರೆ. ಜಿಲ್ಲೆಯ ಹೆಚ್ಚಿನ ಆರೋಗ್ಯ ಕೇಂದ್ರಗಳು ಕೂಡಾ ವೆಂಟಿಲೇಟರ್, ಐಸಿಯುವಿನಲ್ಲಾಗಿದೆ ಎಂದು ಇವರು ಅಭಿಪ್ರಾಯಪಡುತ್ತಾರೆ. ಜ್ವರ ತಗಲಿ ಆಸ್ಪತ್ರೆಗೆ ತಲುಪುವ ರೋಗಿಗಳನ್ನು ತಪಾಸಣೆ ನಡೆಸಲು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಡಾಕ್ಟರ್‌ಗಳಿಲ್ಲ. ಜಿಲ್ಲೆಯ ಹೆಚ್ಚಿನ ಆರೋಗ್ಯ ಕೇಂದ್ರಗಳಲ್ಲೂ ಡಾಕ್ಟರ್‌ಗಳ ಕುರ್ಚಿ ಖಾಲಿಯಾಗಿವೆ. ಇದನ್ನು ಭರ್ತಿಗೊಳಿಸಲು ಯಾವುದೇ ಕ್ರಮವೂ ಉಂಟಾಗುತ್ತಿಲ್ಲ. ಕುಂಬಳೆಯ ತೀರ ವಲಯದ ಸರಕಾರದ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್ ಕಳೆದೆರಡು ದಶಕಗಳಿಂದ …

ಶತಾಯುಷಿ ನಿಧನ

ಉಪ್ಪಳ :ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯ ಕರ್ತರಾಗಿದ್ದ ಮಂಗಲ್ಪಾಡಿಯ ದಿ| ರಮಾನಾಥ ಶೆಣೈ ಅವರ ಪತ್ನಿ ಶತಾಯುಷಿ ಸೀತಾ ಭಾಯಿ (100) ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ರಾದರು. ಮೃತರು ಮಕ್ಕಳಾದ ಪ್ರಭಾಕರ ಶೆಣೈ, ರಾಜಾರಾಮ ಶೆಣೈ, ಸುದರ್ಶನ ಶೆಣೈ, ಶಿವರಾಯ ಶೆಣೈ, ಗುರುದಾಸ ಶೆಣೈ , ಭಾರತಿ ಶೆಣೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರ ಸಹಿತ ಹಲವು ಮಂದಿ ಗಣ್ಯರು ಭೇಟಿ ನೀಡಿ …

ಸ್ನೇಹಿತೆಯ 16ರ ಹರೆಯದ ಮಗಳಿಗೆ ಕಿರುಕುಳ ನೀಡಿದ ಯುವತಿ ಸೆರೆ: ಆರೋಪಿ ಯುವತಿ ವಿರುದ್ಧ 4ಪೋಕ್ಸೋ ಪ್ರಕರಣಗಳು

ಕಾಸರಗೋಡು: ಸ್ನೇಹಿತೆಯ 16ರ ಹರೆಯದ ಮಗಳಿಗೆ  ಕಿರುಕುಳ ನೀಡಿದ ಪ್ರಕರಣದಲ್ಲಿ ಯುವತಿ ಸೆರೆಗೀಡಾಗಿದ್ದಾಳೆ.  ತಳಿಪರಂಬ ಪುಳಿಪರಂಬ್ ನಿವಾಸಿಯಾದ ಸ್ನೇಹ ಮೆರ್ಲಿ (25) ಎಂಬಾಕೆಯನ್ನು ಮಾತಿಲ್ ಪೊಲೀಸರ ಸಹಾಯ ದೊಂ ದಿಗೆ ಮೇಲ್ಪರಂಬ  ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಪಿ. ರಾಘವನ್ ನೇತೃತ್ವದ ತಂಡ ಬಂಧಿಸಿದೆ. 4 ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾದ ಸ್ನೇಹ ಮೆರ್ಲಿ ಮಾತಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಬಂಧಿಕರ ಮನೆಯಲ್ಲಿ  ವಾಸಿಸುತ್ತಿ ದ್ದಾಳೆಂಬ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ದಾಳಿ ವೇಳೆ ಯುವತಿ ಸೆರೆಗೀಡಾಗಿ ದ್ದಾಳೆ. …

ದಂಪತಿಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಹಲ್ಲೆಗೈದು 12 ಪವನ್ ಚಿನ್ನಾಭರಣ ದರೋಡೆಗೈದ ಆರೋಪಿ ಬಂಧನ

ಕಾಸರಗೋಡು: ಮನೆ ಬಾಡಿಗೆಗೆ ಪಡೆಯಲೆಂಬ ನೆಪದಲ್ಲಿ ತಲುಪಿ ದಂಪತಿಯ ಕಣ್ಣಿಗೆ ಮೆಣಸಿನ ಹುಡಿ ಎರಚಿ  ಹಲ್ಲೆಗೈದ ಬಳಿಕ 12 ಪವನ್ ಚಿನ್ನಾಭರಣ ಗಳನ್ನು ದರೋಡೆಗೈದ ಪ್ರಕರಣದ ಆರೋಪಿ ಸೆರೆಗೀಡಾಗಿದ್ದಾನೆ. ಕಾಞಂಗಾಡ್ ಮಾವುಂಗಾಲ್ ಆನಂದಾಶ್ರಮ ಬಳಿಯ ಏಚಿಕಾನ ನಿವಾಸಿ ಚಾಮ ಕುಟ್ಟಿ ಹೌಸ್‌ನ ರಾಜ್‌ಮೋಹನ್ (42) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕಳೆದ ಸೋಮವಾರ ಮಧ್ಯಾಹ್ನ ೧ ಗಂಟೆ ವೇಳೆ ಆಲಪ್ಪುಳ ಬಳಿಯ ಕಣಿಯಾಂಕುಳಂ ಜಂಕ್ಷನ್ ಸಮೀಪದ ಮನೆಯಲ್ಲಿ ದರೋಡೆ ನಡೆದಿದೆ. ಕೈದವನ ಕಣಿಯಾಂ …

ಅರಣ್ಯದಲ್ಲಿ ಜೀರ್ಣಿಸಿದ ಸ್ಥಿತಿಯಲ್ಲಿ ಗಂಡಸಿನ ರುಂಡವಿಲ್ಲದ ಮೃತದೇಹ ಪತ್ತೆ

ಕಾಸರಗೋಡು: ಅರಣ್ಯದಲ್ಲಿ ಅಪರಿಚಿತ ಗಂಡಸಿನ ರುಂಡ ಬೇರ್ಪಟ್ಟ ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ರಾಜಪುರಂಗೆ ಸಮೀಪದ ವಟ್ಟಕಯಂ ಎನ್‌ಎಸ್‌ಎಸ್ ಎಸ್ಟೇಟಿಗೆ ಸಮೀಪದ ಕರಿಂಕೋಲ್‌ನ ಅರಣ್ಯದಲ್ಲಿ ಮೃತದೇಹ ಪತ್ತೆಯಾಗಿದೆ. ಅಣಬೆ ಸಂಗ್ರಹಿಸಲೆಂದು ನಿನ್ನೆ ಈ ಕಾಡಿಗೆ ಹೋದವರು ಮೊದಲು ಈ ಮೃತದೇಹ ಕಂಡಿದ್ದು, ನಂತರ ಅವರು ನೀಡಿದ ಮಾಹಿತಿಯಂತೆ ರಾಜಪುರಂ ಪೊಲೀಸರು ಮತ್ತು ಪನತ್ತಡಿ ಸೆಕ್ಷನ್ ಅರಣ್ಯಾಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮಾತ್ರವಲ್ಲ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿ ಅಗತ್ಯದ ಮಾಹಿತಿಗಳನ್ನು …

ಕುಂಬಳೆ ಭಾಸ್ಕರನಗರದಲ್ಲಿ ಕಾರು ಅಪಘಾತ: ಪ್ರಯಾಣಿಕರು ಅಪಾಯದಿಂದ ಪಾರು

ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಭಾಸ್ಕರ ನಗರದಲ್ಲಿ ಮತ್ತೆ ವಾಹನ ಅಪಘಾತ ಸಂಭವಿಸಿದೆ.   ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಜಲಪ್ರಾಧಿಕಾರದ ಪೈಪಿಗೆ ಢಿಕ್ಕಿ ಹೊಡೆ ದಿದೆ. ಇದರಿಂದ  ಕಾರಿನ ಮುಂಭಾಗ ಪೂರ್ಣವಾಗಿ ಹಾನಿಗೀಡಾಗಿದೆ. ಕಾರಿ ನಲ್ಲಿದ್ದ  ಮುಳ್ಳೇರಿಯ ನಿವಾಸಿಗಳಾದ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ಮಧ್ಯಾಹ್ನ ವೇಳೆ ಅಪ ಘಾತವುಂಟಾಗಿದೆ. ಮುಳ್ಳೇರಿಯದಿಂದ  ಕುಂಬಳೆ ಭಾಗಕ್ಕೆ ತೆರಳುತ್ತಿದ್ದ ಕಾರು ಭಾಸ್ಕರ ನಗರಕ್ಕೆ ತಲುಪುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ಅಪ ಘಾತಕ್ಕೀಡಾಗಿದೆ.  ಈ ಹಿಂದೆಯೂ ಇದೇ ಸ್ಥಳದಲ್ಲಿ ಹಲವು …

ಲಾರಿಯಲ್ಲಿ ಸಾಗಿಸುತ್ತಿದ್ದ 7 ಸಾವಿರ ಲೀಟರ್ ಸ್ಪಿರಿಟ್ ವಶ

ಕಣ್ಣೂರು: ಲಾರಿಯಲ್ಲಿ ಸಾಗಿಸುತ್ತಿದ್ದ 7 ಸಾವಿರ ಲೀಟರ್ ಸ್ಪಿರಿಟ್ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ   ಓರ್ವನನ್ನು ಸೆರೆಹಿಡಿ ಯ ಲಾಗಿದೆ. ಅಡೂರ್ ನಿವಾಸಿ ಅಖಿಲ್ ಎಂಬಾತ  ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ಪೆರುಂಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಯ್ಯನ್ನೂರು ಅಬಕಾರಿ ರೇಂಜ್ ಇನ್‌ಸ್ಪೆಕ್ಟರ್  ವೈಶಾಖ್‌ರ ನೇತೃತ್ವದ ತಂಡ ನಡೆಸಿದ ಕಾರ್ಯಾ ಚರಣೆ ವೇಳೆ ಸ್ಪಿರಿಟ್ ಹೇರಿದ ಲಾರಿ ಆಗಮಿಸಿತ್ತು.  ಮಂಗಳೂರಿನಿಂದ ಅಡೂರ್‌ನತ್ತ ತೆರಳುತ್ತಿದ್ದ   ಲಾರಿಯನ್ನು ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ೨೦೦ ಕ್ಯಾನ್‌ಗಳಲ್ಲಾಗಿ ಸ್ಪಿರಿಟ್ ತುಂಬಿಸಿಟ್ಟಿ ರುವುದು ಪತ್ತೆಯಾಗಿದೆ.  ಓಣಂ …

ಕಾಸರಗೋಡು ಎಸ್‌ಎಂಎಸ್ ಡಿವೈಎಸ್‌ಪಿಯಾಗಿ ಉತ್ತಮ್‌ದಾಸ್ ಅಧಿಕಾರ ಸ್ವೀಕಾರ

ಕಾಸರಗೋಡು: ಜಿಲ್ಲಾ ಸ್ಪೆಷಲ್ ಮೊಬೈಲ್ ಸ್ಕ್ವಾಡ್ ಡಿವೈಎಸ್‌ಪಿ ಆಗಿ ಟಿ. ಉತ್ತಮ್‌ದಾಸ್ ಅಧಿಕಾರ ಸ್ವೀಕರಿಸಿದರು. ಕಲ್ಲಿಕೋಟೆ ರೂರಲ್ ನಾರ್ಕೋಟಿಕ್ ಸೆಲ್ ಆಂಡ್ ಜೆಂಟರ್ ಜಸ್ಟೀಸ್ ವಿಭಾಗ ಡಿವೈಎಸ್‌ಪಿಯಾಗಿರು ವಾಗ ಅವರಿಗೆ ಕಾಸರಗೋಡಿಗೆ ವರ್ಗಾವಣೆ ಲಭಿಸಿದೆ. ಬೇಕಲ, ವಿದ್ಯಾನಗರ, ಕಾಸರಗೋಡು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಿನ್ಸಿಪಲ್ ಎಸ್‌ಐ ಆಗಿಯೂ, ಬೇಡಡ್ಕ, ಮೇ ಲ್ಪರಂಬ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಆಗಿಯೂ, ಜಿಲ್ಲಾ ಕ್ರೈಮ್ ಬ್ರಾಂಚ್ ಡಿವೈಎಸ್‌ಪಿ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. 2025ರಲ್ಲಿ ಮುಖ್ಯ ಮಂತ್ರಿಯ ಪೊಲೀಸ್ ಮೆಡಲ್, ಡಿಜಿಪಿಯ ಬ್ಯಾಡ್ಜ್ ಆರ್ಡರ್ …

ಸಾರಿಗೆ ಪರಿಷ್ಕರಣೆ: ಪೊಲೀಸ್, ಎಂವಿಡಿ ವಿರುದ್ಧ ಕುಂಬಳೆ ಪಂ. ಅಧ್ಯಕ್ಷರಿಂದ ಗೃಹ ಸಚಿವರಿಗೆ ದೂರು; ಕುಂಬಳೆಯಲ್ಲಿ ವಿವಾದ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಪಂಚಾಯತ್ ಆಡಳಿತ ಸಮಿತಿಯ ಸಾರಿಗೆ ಪರಿಷ್ಕಾರವನ್ನು ಪೊಲೀಸ್ ಹಾಗೂ ಮೋಟಾರು ವಾಹನ ಇಲಾಖೆ ಸೇರಿ ಬುಡಮೇಲುಗೊಳಿಸು ತ್ತಿದೆಯೆಂದು ತಿಳಿಸಿ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ ಹಾಗೂ ಆಡಳಿತ ಸಮಿತಿ ಗೃಹಖಾತೆ ಸಚಿವ ರಮೇಶ್ ಚೆನ್ನಿತ್ತಲರಿಗೆ ದೂರು ನೀಡಿರುವುದು ಕುಂಬಳೆಯಲ್ಲಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ದೂರು ಸ್ವೀಕರಿಸಿದ ತಕ್ಷಣ ಸಚಿವ ರಮೇಶ್ ಚೆನ್ನಿತ್ತಲ ಎಸ್‌ಪಿಗೆ ಕರೆ ಮಾಡಿ ಸಮಸ್ಯೆಯಲ್ಲಿ ಮಧ್ಯಸ್ಥಿಕೆ ವಹಿಸುವಂತೆ ನಿರ್ದೇಶಿಸಿ ರುವುದಾಗಿ ಹೇಳಲಾಗುತ್ತಿದೆ. ಆದರೂ ಕ್ರಮ ಉಂಟಾಗಿಲ್ಲವೆನ್ನಲಾಗುತ್ತಿದೆ.   ಖಾಸಗಿ …