ಕಾಂಗ್ರೆಸ್ ನೇತಾರ ನಿಧನ

ನೀರ್ಚಾಲು: ಹಿರಿಯ ಕಾಂಗ್ರೆಸ್ ನೇತಾರ ಕಿಳಿಂಗಾರು ಬೇರಿಕೆಯ  ನಾರಾಯಣ ರೈ (75) ನಿಧನ ಹೊಂದಿದರು. ಮೃತರು ಪತ್ನಿ ಭಾಗೀರಥಿ, ಮಕ್ಕಳಾದ ಮಂಜುನಾಥ (ಲಾಟರಿ ಏಜೆಂಟ್), ನವೀನ ಕುಮಾರಿ, ಪುಷ್ಪಲತಾ, ಅಳಿಯಂದಿರಾದ ಶೇಖರ, ರಾಧಾಕೃಷ್ಣ, ಸೊಸೆ ಸುಜಾತ, ಸಹೋದರ ಚಂದ್ರಶೇಖರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಶೀನ ರೈ, ಸಹೋದರಿ ಲಲಿತಾ ಈ ಹಿಂದೆ ನಿಧನ ಹೊಂದಿದ್ದಾರೆ.

ಬದಿಯಡ್ಕ: ಕುಟುಂಬಶ್ರೀ ವತಿಯಿಂದ ಜನಪ್ರತಿನಿಧಿಗಳಿಗೆ ಅಭಿನಂದನೆ

ಬದಿಯಡ್ಕ: ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ವತಿಯಿಂದ ಜನಪ್ರತಿನಿಧಿಗಳನ್ನು ಅಭಿನಂದಿಸಲಾ ಯಿತು. ಸಿಡಿಎಸ್ ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸ್ನೇಹವೀಡ್ ಯೋಜನೆ ಯನ್ನು ಪಂಚಾಯತ್ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಉದ್ಘಾಟಿಸಿ ಮಾತನಾಡಿ ದರು.  ಕುಟುಂಬಶ್ರೀ ಜಿಲ್ಲಾಧಿಕಾರಿ ಯಧುರಾಜ್ ಸ್ನೇಹವೀಡ್ ಯೋಜನೆಯ ಮಾಹಿತಿ ನೀಡಿದರು. ಕುಟುಂಬಶ್ರೀ ನೇತೃತ್ವದಲ್ಲಿ ನಡೆಯುವ ಈ ಯೋಜನೆಗೆ ಉಪಾಧ್ಯಕ್ಷೆ ಧನಸಹಾಯ ಹಸ್ತಾಂತರಿಸಿದರು. ಸಿಡಿಎಸ್ ಚೆಯರ್ ಪರ್ಸನ್ ಅನಿತಾ ಕ್ರಾಸ್ತಾ ಸ್ವಾಗತಿಸಿ, ಚೆಯರ್ ಪರ್ಸನ್ ಅನಿತಾ ಕ್ರಾಸ್ತಾ ವಂದಿಸಿದರು.

ಸ್ವದೇಶಿ ವಿಜ್ಞಾನ ಪುರಸ್ಕಾರ ರಾಜ್ಯಪಾಲರಿಂದ ಪ್ರದಾನ

ಕಾಸರಗೋಡು: ವಿಜ್ಞಾನ ತಾಂತ್ರಿಕ ಅಧ್ಯಯನ ವಲಯದಲ್ಲಿ ಉತ್ತಮ ಕೊಡುಗೆಗಳನ್ನು ನೀಡುವ ಕೇರಳೀಯ ವಿಜ್ಞಾನಿಗಳಿಗಿರುವ ಸ್ವದೇಶಿ ಶಾಸ್ತ್ರ ಪುರಸ್ಕಾರವನ್ನು ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನೋ ಲಜಿಯ ಮಾಜಿ ನಿರ್ದೇಶಕ ಡಾ. ಚಂದ್ರಭಾಸ್ ನಾರಾಯಣ, ಇಂಡ್ಯನ್ ನ್ಯಾಶನಲ್ ಸೆಂಟರ್ ಫಾರ್ ಓಷ್ಯನ್ ಇನ್‌ಫರ್ಮೇಶನ್ ಸರ್ವೀಸ್ ನಿರ್ದೇಶಕ ಡಾ. ಟಿ.ಎಂ. ಬಾಲಕೃಷ್ಣನ್ ನಾಯರ್ ಎಂಬಿವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಖರ್ ಪ್ರದಾನ ಮಾಡಿದರು. ಕಂಡೆನ್ಸ್‌ಡ್ ಫಿಸಿಕ್ಸ್, ಭೌತಿಕ- ಜೈವಿಕ ವಿಜ್ಞಾನ ಶಾಖೆಯ ಸಮನ್ವಯಕ್ಕೆ ಆದ್ಯತೆ ನೀಡಿದ ಅಧ್ಯಯನ ಚಟುವಟಿಕೆಗಳು, ಸ್ವದೇಶಿಯತೆಯನ್ನು …

ಮಧೂರು ದೇವಸ್ಥಾನ ಸಂದರ್ಶಿಸಿದ ರಾಜ್ಯಪಾಲ ಅರ್ಲೇಕರ್

ಕಾಸರಗೋಡು: ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನಿನ್ನೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಸಂದರ್ಶಿಸಿ ಪ್ರಾರ್ಥನೆ ನಡೆಸಿದರು. ಮಧ್ಯಾಹ್ನ ಪೂಜೆಯ ವೇಳೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ರಾಜ್ಯಪಾಲರು  ವಿಶೇಷ ಪೂಜೆ ನಡೆಸಿದರು. ಮಾತ್ರವಲ್ಲ ದೇವಸ್ಥಾನದ ಇತಿಹಾಸದ ಬಗ್ಗೆಯೂ ಅವರು ಸಂಬಂಧಪಟ್ಟವರಿಂದ ಕೇಳಿ ತಿಳಿದರು. ಇನ್ನು ಮುಂದೆಯೂ ಶ್ರೀ ಕ್ಷೇತ್ರಕ್ಕೆ ಆಗಮಿಸುವುದಾಗಿ ತಿಳಿಸಿ ಹಿಂತಿರುಗಿದರು. ಈ ಹಿಂದೆ ನಡೆದ ಮಧೂರು ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯಪಾಲರನ್ನು ಆಹ್ವಾನಿಸಲಾಗಿತ್ತಾದರೂ ಕಾರಣಾಂತರಗಳಿಂದ ಅವರು ಆಗಮಿಸಿರಲಿಲ್ಲ. ಶ್ರೀ ಕ್ಷೇತ್ರದ ಪದಾಧಿಕಾರಿಗಳಾದ …

ಇಮಾಮ್ ಶಾಫಿಇ ಜಲ್ಸ ನಾಳೆಯಿಂದ

ಕುಂಬಳೆ: ಕುಂಬಳೆ ಇಮಾಮ್ ಶಾಫಿಇ ಅಕಾಡೆಮಿಯಲ್ಲಿ ಇಮಾಮ್ ಶಾಫಿಇ ಜಲ್ಸ, ವಾರ್ಷಿಕ ಹರಕೆ, ಖತ್‌ಮುಲ್ ಖುರ್‌ಆನ್ ಸದಸ್ಸ್ ನಾಳೆ ಹಾಗೂ ಶನಿವಾರ ಬದರಿಯ ನಗರ ಇಮಾಮ್ ಶಾಫಿಇ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ನಾಳೆ ಬೆಳಿಗ್ಗೆ 9 ಗಂಟೆಗೆ ಖಾಸಿ ಉಸ್ತಾದ್ ಮಖಾಂ ಸಿಯಾರತ್‌ಗೆ ಎಂ.ಪಿ. ಮುಹಮ್ಮದ್ ಸಅದಿ ನೇತೃತ್ವ ನೀಡುವರು. ಅರಬಿ ಹಾಜಿ ಕುಂಬಳೆ ಧ್ವಜಾರೋಹಣಗೈಯ್ಯುವರು. ಖತ್‌ಮುಲ್ ಖುರ್‌ಆನ್ ಸದಸ್ಸ್‌ಗೆ ಮದನಿ ತಂಙಳ್ ಮೊಗ್ರಾಲ್ ನೇತೃತ್ವ ನೀಡುವರು. ಸಂಜೆ 7 ಗಂಟೆಗೆ ಕೆ.ಎಸ್. ಅಲಿ …

ಕೆಎಸ್‌ಟಿಎ ಉಪ್ಪಳ ಯೂನಿಟ್ ಸಮ್ಮೇಳನ

ಉಪ್ಪಳ: ಕೇರಳ ಟೈಲರ್ಸ್ ಅಸೋಸಿ ಯೇಶನ್ ಉಪ್ಪಳ ಯೂನಿಟ್ ಸಮ್ಮೇಳನ ಕೈಕಂಬದಲ್ಲಿರುವ ಪಂಚಮಿ ಹಾಲ್‌ನಲ್ಲಿ ನಡೆಯಿತು. ಯೂನಿಟ್ ಅಧ್ಯಕ್ಷ ದಯಾನಂದ ಎಂ. ಅಧ್ಯಕ್ಷತೆ ವಹಿಸಿದರು. ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಮೋಹನದಾಸ್ ಕುಂಬಳೆ ಉದ್ಘಾಟಿಸಿ ದರು. ಅತಿಥಿಗಳಾಗಿ ಮಾಜಿ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಕರಿಪ್ಪಾರ್, ಮಂಜೇಶ್ವರ ತಾಲೂಕು ಅಧ್ಯಕ್ಷ ರಾಮ ಪೊಯ್ಯಕಂಡ, ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ ಆಚಾರ್ಯ ಶುಭಾಂಶನೆಗೈದರು. ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಕೇಶವ ಮಯ್ಯ, ಶೋಭ ಪೆರಿಂಗಡಿ, ಮೋಹಿನಿ ಐಲ ಇವರನ್ನು …

ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ಇಚ್ಲಂಗೋಡು ನಿವಾಸಿಯ 34 ಲಕ್ಷ ರೂ. ಲಪಟಾಯಿಸಿ ವಂಚನೆ

ಕುಂಬಳೆ: ಆನ್‌ಲೈನ್ ಟ್ರೇಡಿಂಗ್ ಮೂಲಕ ಭಾರೀ ಲಾಭ ಗಳಿಸಬಹುದೆಂಬ ಭರವಸೆಯೊಡ್ಡಿ ಇಚ್ಲಂಗೋಡು ನಿವಾಸಿ ಸುರೇಶ್ ಶೆಟ್ಟಿ (54) ಎಂಬವರ 34,47,777 ರೂಪಾಯಿಗಳನ್ನು ಲಪಟಾಯಿಸಿರುವುದಾಗಿ ದೂರಲಾಗಿದೆ. ಹಣ ನಷ್ಟಗೊಂಡ ಬಗ್ಗೆ ಲಭಿಸಿದ ದೂರಿನಂತೆ ಕಾಸರಗೋಡು ಸೈಬರ್ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2025 ಸೆಪ್ಟಂಬರ್ 2ರಿಂದ ಡಿಸೆಂಬರ್ 30ರವರೆಗಿನ ದಿನಗಳಲ್ಲಿ ವಂಚನೆ ನಡೆಸಲಾಗಿದೆ. ಫೇಸ್‌ಬುಕ್, ವಾಟ್ಸಪ್, ಟೆಲಿಗ್ರಾಂ ಎಂಬಿವುಗಳ ಮೂಲಕ ಸಂದೇಶಗಳನ್ನು ಕಳುಹಿಸಿ ದೂರುದಾತನನ್ನು ವಂಚನೆಯಲ್ಲಿ ಸಿಲುಕಿಸಿರುವುದಾಗಿ ಸೈಬರ್ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ವಿವಿಧ ಖಾತೆಗಳಿಗೆ …

ಶಬರಿಮಲೆಯಿಂದ ಭಾರೀ ಪ್ರಮಾಣದ ಚಿನ್ನ ಲಪಟಾವಣೆಗೆ ಷಡ್ಯಂತ್ರ : ಇ.ಡಿ. ತನಿಖೆಗೆ ಕೇಂದ್ರ ಅನುಮತಿ

ಕೊಚ್ಚಿ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆಗೆ ಎನ್‌ಪೋ ರ್ಸ್‌ಮೆಂಟ್  ಡೈರೆಕ್ಟರೇಟ್ (ಇಡಿ)   ಕೇಂದ್ರ ಸರಕಾರ ಅನುಮತಿ ನೀಡಿದೆ. ಇದರಿಂದಾಗಿ  ಇ.ಡಿ ಕೇಸ್ ಇನ್ ಫರ್ಮೇಶನ್ ವರದಿ ತಯಾರಿಸಿ ತನಿಖೆ ಆರಂಭಿಸಲಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಕಾಳಧನ ವ್ಯವಹಾರ ನಡೆದಿದೆ ಎಂಬ ಸ್ಪಷ್ಟ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಇ.ಡಿ ಪರೋಕ್ಷವಾಗಿ ಈ ಹಿಂದೆಯೇ ತನಿಖೆ ಆರಂಭಿಸಿತ್ತು. ಶಬರಿಮಲೆ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ ಈತನಕ ನಡೆಸಿದ  ತನಿಖಾ ವರದಿಗಳ ಪ್ರತಿಗಳನ್ನು …

ರಾಜ್ಯ ಶಾಲಾ ಕಲೋತ್ಸವ: ಚಿನ್ನದ ಕಪ್ ಮೊಗ್ರಾಲ್‌ನಿಂದ ಪ್ರಯಾಣ ಆರಂಭ

ಕಾಸರಗೋಡು: ರಾಜ್ಯ ಶಾಲಾ ಕಲೋತ್ಸವದ  ಚಿನ್ನದ ಕಪ್ ಪ್ರಯಾಣ ಇಂದು ಬೆಳಿಗ್ಗೆ ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಿಂದ ಆರಂಭಗೊಂಡಿತು.  ಶಾಸಕ ಎ.ಕೆ.ಎಂ.ಅಶ್ರಫ್ ಪ್ಲಾಗ್ ಆಫ್ ನಡೆಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದರು. ಕುಂಬಳೆ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಉಪಾಧ್ಯಕ್ಷೆ ಬಲ್ಕೀಸ್, ಜಿಲ್ಲಾ ಪಂಚಾಯತ್ ಸದಸ್ಯ ಅಸೀಸ್ ಕಳತ್ತೂರು, ಡಿಡಿಇ ಇನ್‌ಚಾರ್ಜ್ ಸತ್ಯಭಾಮ, ಉದಯ ಕುಮಾರಿ, ಬಿಇಒ ಅನಿತಾ, ಪ್ರಾಂಶುಪಾಲ ಬಿನಿ ವಿ.ಎಸ್, ಮುಖ್ಯೋಪಾಧ್ಯಾಯ ಜಯರಾಂ,ವಾರ್ಡ್ ಪ್ರತಿನಿಧಿ  ಜಮೀಲಾ ಹಸನ್, ಪಿಟಿಎ ಅಧ್ಯಕ್ಷ ಲತೀಫ್ …

ಬಸ್‌ಗೆ ಕಲ್ಲೆಸೆತ: ಆರೋಪಿ ಪೊಲೀಸ್ ಕಸ್ಟಡಿಯಲ್ಲಿ

ಉಪ್ಪಳ: ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆದು ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಉಪ್ಪಳ ಮಣ್ಣಂಗುಳಿ ಪಂಡಿಕುಡಿ ಹೌಸ್‌ನ ಹಮೀದ್ ಅಲಿ (65) ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೊನ್ನೆ ರಾತ್ರಿ ೯ ಗಂಟೆ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೇರಳ ರಾಜ್ಯ ಸಾರಿಗೆ ಬಸ್‌ಗೆ ತಲಪಾಡಿಯಲ್ಲಿ ಕಲ್ಲೆಸೆಯಲಾಗಿತ್ತು. ಇದರಿಂದ ಬಸ್‌ನ ಹಿಂಬದಿ ಗಾಜು ನಾಶಗೊಂಡಿದೆ. ಈ ಬಗ್ಗೆ ಬಸ್‌ನ ನೌಕರರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಕೇಸು …