ಬಿರುಸಿನ ಮಳೆ: ಜಿಲ್ಲಾ ವಿಕೋಪ ನಿವಾರಣಾ ಪ್ರಾಧಿಕಾರ ಸಭೆಯಲ್ಲಿ ಸ್ಥಿತಿಗತಿಗಳ ಅವಲೋಕನ

ಕಾಸರಗೋಡು: ಜಿಲ್ಲಾ ವಿಕೋಪ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್‌ರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಕೋಪ ನಿವಾರಣಾ ಪ್ರಾಧಿಕಾರ ಸಭೆ ಸೇರಿ ಮಳೆಗಾಲಕ್ಕೆ ಸಂಬಂಧಿಸಿದ ಜಿಲ್ಲೆಯ ಸ್ಥಿತಿಗತಿಗಳ ಮೌಲೀಕರಣ ನಡೆಸಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಅಧಿಕಾರಿಗಳು ಫೀಲ್ಡ್‌ನಲ್ಲಿ ಇದ್ದರು ಎಂದು ಎಲ್ಲಾ ಚಟುವಟಿಕೆಗಳನ್ನು ಸೂಕ್ತವಾಗಿ ಸಂಯೋಜಿಸಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇನ್ನೆರಡು ದಿನ ಕೂಡಾ ಜಾಗ್ರತೆಯೊಂದಿಗೆ ಕಾರ್ಯಾಚರಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಎಬ್ರಹಾಂ, ಎಡಿಎಂ ಪಿ. ಉದಯಕುಮಾರ್, ಕಾಞಂಗಾಡ್ ಆರ್‌ಡಿಒ …

ಕಡಲ್ಕೊರೆತದಿಂದ ಹಾನಿಯಾದ ಉಪ್ಪಳ ಶಾರದಾನಗರ ಪ್ರದೇಶಕ್ಕೆ ಬಿಜೆಪಿ ತಂಡ ಭೇಟಿ

ಉಪ್ಪಳ: ಬಿಜೆಪಿ ತಂಡ ಜಿಲ್ಲಾಧಿಕಾರಿಗೆ ದೂರು ನೀಡಿದ ಬೆನ್ನಲ್ಲೇ, ಗ್ರಾಮ ಅಧಿಕಾರಿ ಮತ್ತು ತಹಶೀಲ್ದಾರ್ ಸ್ಥಳಕ್ಕೆ ತಲುಪಿದರು. ಬಿಜೆಪಿ ತಂಡ ಮಂಗಲ್ಪಾಡಿ ಪಂಚಾಯತ್, ಶಾರದನಗರ, ಮೂಸೋಡಿ ಮತ್ತು ಮಣಿಮುಂಡದಲ್ಲಿ ಕಡಲ್ಕೊರೆತ ತೀವ್ರವಾಗಿದ್ದ ಪ್ರದೇಶಗಳಿಗೆ ಭೇಟಿ ನೀಡಿದೆ. ಮನೆಗಳು ಸಮುದ್ರದಲ್ಲಿ ಮುಳುಗುವ ಹಂತದಲ್ಲಿರುವ ಈ ಪ್ರದೇಶಗಳಿಗೆ ಶಾಸಕರು ಅಥವಾ ಪಂಚಾಯತ್ ಸದಸ್ಯರು ಈ ಮೊದಲು ಭೇಟಿ ನೀಡದಿರುವುದನ್ನು ಬಿಜೆಪಿ ಖಂಡಿಸಿದೆ. ಈ ಸಮಯದಲ್ಲಿ ಜನರ ಜೀವ, ಆಸ್ತಿ ಮತ್ತು ವಸತಿ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಬಿಜೆಪಿ ಕುಂಬಳೆ …

ಕೃಷಿಕ ನಿಧನ 

ಉಪ್ಪಳ: ಬಾಯಾರು ತಲೆಂಗಳ ನಿವಾಸಿ ಪ್ರಗತಿಪರ ಕೃಷಿಕ, ಸಾಯಿ ಭಕ್ತ ಕೃಷ್ಣ ಭಟ್ (88) ಶುಕ್ರವಾರ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಟ್ರಸ್ಟಿಗಳಲ್ಲಿ ಓರ್ವರಾಗಿದ್ದರು. ಬಾಯಾರು ಸತ್ಯಸಾಯಿ ಸೇವಾ ಸಮಿತಿಯ ಹಿರಿಯ ಸದಸ್ಯರಾಗಿದ್ದರು. ಮೃತರು ಪತ್ನಿ ಸುಶೀಲ, ಮಕ್ಕಳಾದ ಶ್ರೀರಾಮ ಭಟ್ (ನಿವೃತ್ತ ಡಿ.ವೈ.ಎಸ್.ಪಿ ಕೇರಳ ಪೊಲೀಸ್), ಶ್ರೀಹರಿ ಭಟ್, ಶ್ರೀದೇವಿ, ಸೊಸೆಯಂದಿರಾದ ಗಾಯತ್ರಿ, ಗೀತಾ, ಅಳಿಯ ರಮೇಶ್ ಭರಣ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಯುವಕ ಮನೆಯ ಸಿಟೌಟ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಯುವಕನೋರ್ವ ಮನೆಯ ಸಿಟೌಟ್‌ನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ಕಾಸರಗೋಡು ಅಶೋಕನಗರ  ಅಪ್ಪಯ್ಯ ನಿವಾಸ್‌ನ ದಿ| ವಾಮನ ಎಂಬವರ ಪುತ್ರ ಕೆ. ನಂದಿತ್ (45) ಸಾವಿಗೀಡಾದ ವ್ಯಕ್ತಿ.  ನಿನ್ನೆ  ರಾತ್ರಿ 10.30ರ ವೇಳೆ  ಇವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸಿ ದರೂ ಜೀವ  ರಕ್ಷಿಸಲಾಗಲಿಲ್ಲ.  ಮೃತರು ತಾಯಿ ಮಹಾಲಕ್ಷ್ಮಿ, ಸಹೋದರ ರವಿಕಾಂತ್, ಸಹೋದರಿ ಅಶ್ವಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 

ಪತ್ವಾಡಿಯಲ್ಲಿ ಮನೆಯಿಂದ ಎಂಡಿಎಂಎ, ಗಾಂಜಾ ವಶಪಡಿಸಿದ ಪ್ರಕರಣ: ಇನ್ನೋರ್ವ ಆರೋಪಿ ಬಂಧನ

ಉಪ್ಪಳ:  ಮನೆಯಿಂದ ಮಾರಕ ಮಾದಕವಸ್ತುವಾದ 3.407 ಕಿಲೋ  ಎಂಡಿಎಂಎ ಹಾಗೂ 642 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣ ದಲ್ಲಿ ತಲೆಮರೆಸಿಕೊಂಡಿದ್ದ  9ನೇ ಆರೋಪಿಯನ್ನು ಬಂಧಿಸಲಾಗಿದೆ. ಕಾಸರಗೋಡು ತಳಂಗರೆ ಬಾಂಗೋಡ್‌ನ ಶಬೀಬಬಾಗ್ ಹೌಸ್‌ನ ಮುಹಮ್ಮದ್ ಲಿಸಾನ್ ಅಲಿ (32) ಎಂಬಾತನನ್ನು ಕಾಸರಗೋಡು ಎಎಸ್‌ಪಿ ಅಶೋಕ್ ಅಚ್ಯುತನ್‌ರ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಪಿ.ಕೆ. ಜಿಜೀಶ್ ಹಾಗೂ ತಂಡ ಬಂಧಿಸಿದೆ. ಆರೋಪಿ ಕರ್ನಾಟಕದ ಮಡಿಕೇರಿ ಬಳಿಯ ಕುಶಾಲನಗರದಲ್ಲಿ ತಲೆಮರೆಸಿ ಕೊಂಡು ವಾಸಿಸುತ್ತಿದ್ದನು. ಅಲ್ಲಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು …

19 ಕೆ.ಜಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ದರ 202 ರೂ. ಇಳಿಕೆ

ನವದೆಹಲಿ: ದೇಶದ ಜನತೆಗೆ ತಿಂಗಳ ಮೊದಲ ದಿನವೇ ಸಿಹಿ ಸುದ್ದಿ ಸಿಕ್ಕಿದ್ದು 19 ಕೆ.ಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದೆ.  ಈ ಹೊಸ ಪರಿಷ್ಕರಣೆಯಲ್ಲಿ 19 ಕೆ.ಜಿ ತೂಕದ ವಾಣಿಜ್ಯ ಬೆಲೆಯನ್ನು 202 ರೂ.  ಇಳಿಸಲಾಗಿದೆ. ಆದರೆ ಗೃಹ ಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಉಂಟಾಗಿದೆ. ವಾಣಿಜ್ಯ ಸಿಲಿಂಡರ್ ದರ ಇಳಿಕೆಯಿಂದ 19 ಕೆಜಿ ಸಿಲಿಂಡರ್ ಬೆಲೆ ಈಗ 2872.50 ಪೈಸೆಯಾಗಿದೆ. ಇತರ ರಾಜ್ಯಗಳಲ್ಲಿ   ತೆರಿಗೆ ಮತ್ತು ಸಾಗಾಟ …

ಬೈಕ್‌ನಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಯುವಕ ಸೆರೆ

ಕುಂಬಳೆ: ಬೈಕ್‌ನಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಯುವಕನನ್ನು ಸೆರೆಹಿಡಿಯಲಾಗಿದೆ. ಬದಿಯಡ್ಕ ನೀರ್ಚಾಲು ಬಳಿಯ ಮೆಣಸಿನಪಾರೆ ನಿವಾಸಿ ಮುಹಮ್ಮದ್ ರಫೀಕ್ (23) ಎಂಬಾತನನ್ನು ಕುಂಬಳೆ  ಠಾಣೆ  ಎಸ್‌ಐಗಳಾದ ಪಿ.ವಿ.ಮನು, ಕೆ.ಪಿ. ಗಣೇಶ್ ಎಂಬಿವರ ನೇತೃತ್ವದಲ್ಲಿ ಬಂಧಿಸಲಾಗಿದೆ. ಈತನ ಕೈಯಿಂದ 60.95 ಗ್ರಾಂ ಗಾಂಜಾ ವಶಪಡಿಸ ಲಾಗಿದೆ. ನಿನ್ನೆ ಅಪರಾಹ್ನ 3 ಗಂಟೆ ವೇಳೆ ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್‌ಗಿರುವ ರಸ್ತೆಯಲ್ಲಿ  ಬೈಕ್‌ನಲ್ಲಿ ಸಂಚರಿಸುತ್ತಿದ್ದ ಈತನನ್ನು ಸಂಶಯದ ಮೇರೆಗೆ   ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.

ಗೃಹಿಣಿ ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಗೃಹಿಣಿಯೋರ್ವೆ ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತೃಕ್ಕರಿಪುರ ವಡಕ್ಕೇಕೊವ್ವಲ್ ಎಂಬಲ್ಲಿ ನಡೆದಿದೆ.  ಮಾಜಿ ಡಿಸಿಸಿ ಅಧ್ಯಕ್ಷ ಕೆ.ವೆಳ್ತಂಬುರ ಪುತ್ರ ವಲ್ಸರಾಜ್‌ರ ಪತ್ನಿ ಬಿಂದು (52) ಮೃತಪಟ್ಟ ಮಹಿಳೆ. ಇಂದು ಬೆಳಿಗ್ಗೆ ಇವರ ತರವಾಡು ಮನೆಯ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಅಗ್ನಿಶಾಮಕದಳ ಹಾಗೂ ಚಂದೇರ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಮೇಲಕ್ಕೆತ್ತಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಕಾಞಂಗಾಡ್ ಕಲ್ಯಾಣ್‌ರೋಡ್ ನಿವಾಸಿಯಾದ ನಿವೃತ್ತ ತಹಶೀಲ್ದಾರ್ ಕೆ.ವಿ.ರಾಘವನ್ ಹಾಗೂ ಸರೋಜಿನಿ ದಂಪತಿಯ …

17ರ ಹರೆಯದ ಹುಡುಗಿಯನ್ನು ತಡೆದು ನಿಲ್ಲಿಸಿ ಕಿರುಕುಳ ನೀಡಿದ ಪ್ರಕರಣ: ಆರೋಪಿಗೆ ಸಜೆ, ದಂಡ

ಕಾಸರಗೋಡು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 17ರ ಹರೆಯದ ಬಾಲಕಿಯನ್ನು ತಡೆದು ನಿಲ್ಲಿಸಿ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯ (ಪೋಕ್ಸೋ)ದ ನ್ಯಾಯಾಧೀಶ ಪಿ.ಎಂ. ಸುರೇಶ್ ಅವರು ಒಂದು ವರ್ಷ ಸಜೆ ಮತ್ತು 1೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಮುನ್ನಾಡು ಚೆಡಿಮೊಟ್ಟ ತಟ್ಟುಮ್ಮಲ್ ವೀಟಿಲ್‌ನ ಕಬೀರ್ (35) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾ ಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. …

ಸಿವಿಲ್ ಸ್ಟೇಶನ್ ಗೇಟ್ ಬಳಿ ಕಟ್ಟಿ ನಿಲ್ಲುವ ಕೊಳಚೆ ನೀರು: ಅಧಿಕಾರಿಗಳ ಮೌನದಿಂದ ಸಾರ್ವಜನಿಕರಿಗೆ ಸಮಸ್ಯೆ

ವಿದ್ಯಾನಗರ: ಜಿಲ್ಲೆಯ ಆಡಳಿತ ನಿರ್ವಹಣೆಯ ಪ್ರಧಾನ ಕೇಂದ್ರವಾದ ಸಿವಿಲ್ ಸ್ಟೇಷನ್ ಪರಿಸರ ಅವ್ಯವಸ್ಥೆಗಳ ಆಗರದಂತಾದರೂ ಅಧಿಕಾರಿಗಳು ಇದನ್ನು ನೋಡದಂತಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ. ಕಲೆಕ್ಟ್ರೇಟ್‌ಗೆ ಪ್ರವೇಶಿಸುವ ಗೇಟ್ ಬಳಿ ಮಳೆ ಸುರಿಯುವ ವೇಳೆ ನೀರು ಕಟ್ಟಿ ನಿಲ್ಲುತ್ತಿದ್ದು, ದಿನಂಪ್ರತಿ ವಿವಿಧ ಕಚೇರಿಗಳಿಗೆ ಬರುವ ಸಾರ್ವಜನಿಕರು, ಸಿವಿಲ್ ಸ್ಟೇಶನ್ ನೌಕರರಿಗೆ ಬಹಳ ಸಮಸ್ಯೆಯಾಗುತ್ತಿದೆ. ಸಿವಿಲ್ ಸ್ಟೇಶನ್ ಎದುರಿನ ರಸ್ತೆ ಯಾವತ್ತೂ ವಾಹನಗಳು ಹಾಗೂ ಜನಸಂದಣಿಯಿಂದ ಕೂಡಿರುತ್ತದೆ. ಈ ರಸ್ತೆ ಬದಿ ಕೊಳಕು ನೀರು ತಂಗಿ ನಿಲ್ಲುತ್ತಿದ್ದು, ವಾಹನ ಸಾಗುವಾಗ …