ಕೆಲಸಕ್ಕೆಂದು ತಿಳಿಸಿ ಹೋದ ಬಿಜೆಪಿ ಕಾರ್ಯಕರ್ತ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟ ಬಿಜೆಪಿ ಕಾರ್ಯಕರ್ತ  ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. ಉಪ್ಪಳ ಕೊಂಡೆವೂರು ನಿವಾಸಿ ದಿ| ನೇಮಿ ರಾಜ್ ಶೆಟ್ಟಿಯವರ ಪುತ್ರ ಸಂದೀಪ್ ಶೆಟ್ಟಿ ಯಾನೆ  ಅಣ್ಣು (44) ಎಂಬವರ ಮೃತದೇಹ  ಮನೆ ಸಮೀಪದ ತೋಟ ದಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದೆ.  ಸಂದೀಪ್ ಶೆಟ್ಟಿ  ಉಪ್ಪಳ ಶಾರದಾನಗರ ದಲ್ಲಿರುವ  ತಂಪುಪಾನೀಯ  ತಯಾರಿ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದರು. ಎಂದಿನಂತೆ  ನಿನ್ನೆ ಬೆಳಿಗ್ಗೆ  ಕೆಲಸಕ್ಕೆಂದು ತಿಳಿಸಿ ಇವರು ಮನೆಯಿಂದ ಹೊರಟಿದ್ದರು. ಮಧ್ಯಾಹ್ನ  ವರೆಗೆ ಇವರನ್ನು ಕಾಣದ ಹಿನ್ನೆಲೆಯಲ್ಲಿ   …

ಕೆಲಸ ನಷ್ಟಗೊಳ್ಳಬಹುದೆಂಬ ಆತಂಕ: ಕೆಎಸ್‌ಆರ್‌ಟಿಸಿ ತಾತ್ಕಾಲಿಕ ಕಂಡಕ್ಟರ್ ನೇಣು ಬಿಗಿದು ಆತ್ಮಹತ್ಯೆ

ಕಾಸರಗೋಡು: ಕೆಲಸ ನಷ್ಟಗೊಳ್ಳಬಹುದೆಂಬ ಆತಂಕದಿಂದ  18 ವರ್ಷಗಳಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಾತ್ಕಾಲಿಕ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಯುವಕ ನೇಣುಬಿಗಿದು ಆತ್ಮಹತ್ಯೆಗೈದ  ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮುಳಿಯಾರು ಮಜಕ್ಕಾರಿನ ದಿ| ಮಹಾಲಿಂಗ ಪಾಟಾಳಿಯವರ ಪುತ್ರ ಯೋಗೀಶ್ ಕುಮಾರ್ (4೦) ಮೃತಪಟ್ಟ ವ್ಯಕ್ತಿ.  ನೂತನವಾಗಿ ನಿರ್ಮಿಸಿದ ಮನೆಯ ಶೆಡ್‌ನಲ್ಲಿ ಇವರ ಮೃತದೇಹ ಪತ್ತೆಯಾಗಿದೆ.  ಕಾಸರಗೋಡು-ಸುಳ್ಯ ರೂಟ್‌ನಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯೋಗೀಶ್ ಕುಮಾರ್ ಕಂಡಕ್ಟರ್ ಆಗಿದ್ದರು. ನಿನ್ನೆ ಬೆಳಿಗ್ಗೆ ಕೆಲಸ ಮುಗಿಸಿ ಮನೆಗೆ ಮರಳಿದ್ದರು. ಯೋಗೀಶ್ ಹಾಗೂ ತಾಯಿ  ಬೇಬಿ …

ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮೊತ್ತ ಕಡಿತ: ಎಡರಂಗದಿಂದ ಮಂಜೇಶ್ವರ ಪಂ. ಕಚೇರಿ ಮಾರ್ಚ್

ಮಂಜೇಶ್ವರ: ಪಂಚಾಯತ್, ನಗರ ಸಭೆಗಳಲ್ಲಿ ಹೊಸ ಆರ್ಥಿಕ ವರ್ಷದ ಅಭಿವೃದ್ಧಿ ಯೋಜನೆಗಳಿಗೆ ಹಣ ಕಡಿತಗೊಳಿಸಿದ ಯು ಡಿ ಎಫ್ ಸರಕಾರ ವಂಚಿಸುತ್ತಿದೆ. ಇದರಿಂದ ಹೊಸ ಯೋಜನೆಗಳ ನಿರ್ವಹಣೆಗೆ ಮಾತ್ರವಲ್ಲದೆ ಹಲವಾರು ಕ್ಷೇಮ ಪಿಂಚಣಿ ಯೋಜನೆಗಳು ಬಡಮೇಲು ಗೊಂಡಿದೆ. ಕಾರುಣ್ಯ, ಕುಟುಂಬ ಆರೋಗ್ಯ ಕೇಂದ್ರಗಳಲ್ಲಿರುವ ಡಾಕ್ಟರ್ ಸೇವೆಗೆ, ಅಂಗನವಾಡಿ, ಬಡ್ಸ್ ಶಾಲೆಗಳ ಚಟುವಟಿಕೆಗಳಿಗೆ ಹಣ ಕೊಡದ ಹಿನ್ನೆಲೆಯಲ್ಲಿ ಎಡರಂಗ ಪ್ರತಿಭಟಿಸಿದೆ.ಮಾತ್ರವಲ್ಲದೆ ಲೈಫ್ ಪದ್ಧತಿ, ಕಳೆದ ಎಡರಂಗ ಸರಕಾರ ಮಹಿಳೆಯರಿಗೆ ಕೊಡುವ ೧೦೦೦ ರೂ ಪಿಂಚಣಿಯಾದ ಸ್ತ್ರೀ ಸುರಕ್ಷಾ ಪಿಂಚಣಿ …

ವಾನಂದೆ ಬಯಲು ಪ್ರದೇಶದಲ್ಲಿ ಕೈಗೆಟಕುವ ರೀತಿಯಲ್ಲಿ ವಿದ್ಯುತ್ ತಂತಿ: ಸ್ಥಳೀಯ ಕೃಷಿಕರಲ್ಲಿ ಭೀತಿ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಶಿರಿಯ ವಾನಂದೆ ಬಯಲು ಪ್ರದೇಶದಲ್ಲಿ ಕೈಗೆಟುವ ರೀತಿಯಲ್ಲಿ ಹಾಗೂ ಹಳೆಯ ಕಾಲದ ವಿದ್ಯುತ್ ತಂತಿ ಆತಂಕವನ್ನುAಟುಮಾಡುತ್ತಿದೆ. ಶಿರಿಯ ಟ್ರಾನ್ಸ್ ಫಾರ್ಮರ್‌ನಿಂದ ಬಯಲು ಪ್ರದೇಶದಿಂದ ಹಾದು ಹೋದ ತಂತಿ ಕೈಗೆ ಎಟಕುವ ಸ್ಥಿತಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ತುಂಡಾಗಿ ಬೀಳುವ ಆತಂಕ ಕೃಷಿಕರನ್ನು ಕಾಡುತ್ತಿದೆ.ಈ ಮೊದಲು ಈ ವಿದ್ಯುತ್ ತಂತಿ ಹಲವು ಬಾರಿ ಮುರಿದು ಬಿದ್ದು ಉದ್ಯೋಗಸ್ಥರು ತಲುಪಿ ದುರಸ್ಥಿ ಮಾಡಿದ್ದರು. ಆದರೆ ಈ ತಂತಿಯನ್ನು ಬದಲಾಯಿಸಲು ಸ್ಥಳೀಯ ಕೃಷಿಕರು ಹಲವು ಬಾರಿ ತಿಳಿಸಿದರೂ ವಿದ್ಯುತ್ …

ಬದಿಯಡ್ಕ ಪಂಚಾಯತ್‌ಗೆ ಎಡರಂಗ ಮಾರ್ಚ್

ಬದಿಯಡ್ಕ: ಸ್ಥಳೀಯಾಡಳಿತ ಸಂಸ್ಥೆಗಳ ಅಭಿವೃದ್ಧಿ ಮೊತ್ತ ಕಡಿತಗೊಳಿಸಿದ, ರಾಜ್ಯ ಸರಕಾರದ ಜನವಿರುದ್ಧ ನೀತಿ ಆರೋಪಿಸಿ ಎಲ್‌ಡಿಎಫ್ ಬದಿಯಡ್ಕ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಲಾಯಿತು. ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಸಿಪಿಐ ಬದಿಯಡ್ಕ ಲೋಕಲ್ ಕಾರ್ಯದರ್ಶಿ ಸುಧಾಕರ ವಿದ್ಯಾಗಿರಿ ಅಧ್ಯಕ್ಷತೆ ವಹಿಸಿದರು. ಕುಂಬಳೆ ಏರಿಯಾ ಸಮಿತಿ ಸದಸ್ಯ ಪಿ. ರಂಜಿತ್ ಸ್ವಾಗತಿಸಿದರು. ರಾಜ್ಯದಲ್ಲಿ ಯುಡಿಎಫ್ ಅಧಿಕಾರಕ್ಕೇರಿದ ಬಳಿಕ ಮಹಿಳಾ ಸುರಕ್ಷಾ ಪಿಂಚಣಿ ವಿತರಣೆ ಮೊಟಕುಗೊಂಡಿದ್ದು, ತೀವ್ರ ಮಳೆಗೆ ವಿವಿಧ …

ಹಿಂದೂ ಸಾರ್ವಜನಿಕ ರುದ್ರಭೂಮಿಗಳ ಸಂರಕ್ಷಣೆ ಖಚಿತಪಡಿಸಬೇಕು- ರವೀಶ ತಂತ್ರಿ ಕುಂಟಾರು

ವರ್ಕಾಡಿ: ಕಾಸರಗೋಡು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಾಗಿ ಬದಲಾಗುತ್ತಿರುವ ಹಿಂದೂ ಸಮಾಜಕ್ಕೆ ಅಂತ್ಯಕ್ರಿಯೆಗಳನ್ನು ನಿರ್ವಹಿಸಲು ಕೂಡಾ ಸ್ಥಳ ಹಾಗೂ ಹಕ್ಕು ನಿಷೇಧಿಸಲ್ಪಡುವ ಸನ್ನಿವೇಶವಿದೆಯೆಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ನುಡಿದರು. ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ವರ್ಕಾಡಿ ಪಂಚಾಯತ್ ಕಚೇರಿಗೆ ನಡೆಸಿದ ಪ್ರತಿಭಟನಾ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಿಂದೂ ಸಾರ್ವಜನಿಕ ಸ್ಮಶಾನಗಳ ಸಂರಕ್ಷಣೆಯಲ್ಲಿ, ಪರಿಪಾಲನೆಯಲ್ಲಿ ವಿವಿಧ ಪಂಚಾಯತ್ ಆಡಳಿತ ಸಮಿತಿಗಳು ತೀವ್ರ ಅನಾಸಕ್ತಿ ತೋರಿಸುತ್ತಿದೆ ಎಂದು ಅವರು ಆರೋಪಿಸಿದರು. ಹಲವು ಸ್ಥಳಗಳಲ್ಲಿ ಸಾರ್ವಜನಿಕ ಸ್ಮಶಾನಗಳನ್ನು …

ಎರಡು ಕ್ವಿಂಟಾಲ್ ಸುಲಿದ ಅಡಿಕೆ ಕಳವು

ಮುಳ್ಳೇರಿಯ: ಮನೆ ಬಳಿ ದಾಸ್ತಾನು ಕೊಠಡಿಯಲ್ಲಿರಿಸಿದ್ದ ಎರಡು ಕ್ವಿಂಟಾಲ್ ಸುಲಿದ ಅಡಿಕೆ ಕಳವಿಗೀ ಡಾಗಿದೆ. ಮುಳ್ಳೇರಿಯ ಬೇಂಗತ್ತಡ್ಕ, ನಾವುಂಗಾಲ್‌ನ ಎನ್. ಬಾಲಕೃಷ್ಣನ್ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು  ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜುಲೈ ೧೯ರಿಂದ ೨೯ರ ಮಧ್ಯೆಗಿನ ಯಾವುದೋ ದಿನ  ಅಡಿಕೆ ಕಳವಿಗೀಡಾಗಿರುವುದಾಗಿ ಸಂಶಯಿಸ ಲಾಗುತ್ತಿದೆ. ಅಡಿಕೆ ಸಂಗ್ರಹಿಸಿಡಲು ಪ್ರತ್ಯೇಕ ಸಿದ್ಧಪಡಿಸಿದ್ದ ದಾಸ್ತಾನು ಕೊಠಡಿಯಲ್ಲಿ ಮೂರು ಗೋಣಿ ಚೀಲಗಳಲ್ಲಿ ಅಡಿಕೆ ತುಂಬಿಸಿಡಲಾಗಿತ್ತು. ಸುಮಾರು ಒಂದು ಲಕ್ಷ ರೂಪಾಯಿಗಳ ಅಡಿಕೆ ಕಳವಿಗೀಡಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಯುವತಿಯ ನೀರಿನ ಬಾಟಲಿಯಲ್ಲಿ ಮೂತ್ರ ತುಂಬಿಸಿಟ್ಟ ಸಹೋದ್ಯೋಗಿಗಳಾದ ಇಬ್ಬರ ವಿರುದ್ಧ ಕೇಸು

ಕುಂಬಳೆ: ಯುವತಿಯ ನೀರಿನ  ಬಾಟಲಿಯಲ್ಲಿ  ಮೂತ್ರ ತುಂಬಿಸಿಟ್ಟ ಆರೋಪದಂತೆ  ಆಕೆಯ ಸಹೋದ್ಯೋಗಿಗಳಾದ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನೆಕ್ರಾಜೆ ಗ್ರಾಮದಲ್ಲಿ  ವಾಸಿಸುವ 30ರ ಹರೆಯದ ಯುವತಿ ನೀಡಿದ ದೂರಿನಂತೆ  ಮೊಗ್ರಾಲ್‌ನ  ಖಾಸಗಿ ಸಂಸ್ಥೆಯೊಂದರ ನೌಕರನಾದ ವೈಶಾಖ್, ಎಬಿನ್ ಎಂಬಿವರ ವಿರುದ್ಧ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ. ತನಿಖೆಯಂಗವಾಗಿ ಸಂಸ್ಥೆಯ ಸಿಸಿ ಟಿವಿ ಕ್ಯಾಮರಾಗಳನ್ನು ಇಂದು ಪರಿಶೀಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಜುಲೈ 25ರಂದು ಸಂಜೆ 5.30ರಿಂದ 27ರಂದು ಬೆಳಿಗ್ಗೆ 9.30ರ ಸಮಯದಲ್ಲಿ ಯುವತಿಯ ನೀರಿನ …

ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ : 13,700 ರೂ.ಸಹಿತ ನಾಲ್ವರ ಸೆರೆ

ಕುಂಬಳೆ: ಕುಂಟಂಗೇರಡ್ಕ ಅಂಗನವಾಡಿ ಸಮೀಪದ ಸಾರ್ವ ಜನಿಕ ಪ್ರದೇಶದಲ್ಲಿ ಹಣವಿರಿಸಿ ಜೂಜಾಟ ನಡೆಸುತ್ತಿದ್ದ ಕೇಂದ್ರಕ್ಕೆ ಕುಂಬಳೆ ಪೊಲೀಸರು ನಿನ್ನೆ ಸಂಜೆ ದಾಳಿ ನಡೆಸಿ  ನಾಲ್ವರನ್ನು ಸೆರೆಹಿಡಿ ದ್ದಾರೆ. ಈ ಕೇಂದ್ರದಿಂದ  13,700 ರೂ. ವಶಪಡಿಸಲಾಗಿದೆ.    ಕುಂಟಂಗೇರಡ್ಕದ ಮುರುಗೇಶ (41), ಅಜಿತ್ (28), ಕಣ್ಣೂರು ಎಡಕ್ಕಾಡ್‌ನ ದಿವೇಶ್ ಎನ್.ಪಿ (36) ಮತ್ತು ಕಲ್ಯಾಶ್ಶೇರಿ ಕಣ್ಣಾಪುರದ ನಾಗೇಶ್(51)ಎಂಬವರು ಬಂಧಿತ ವ್ಯಕ್ತಿಗಳಾಗಿದ್ದಾರೆ.

ಕೊಯಿಪ್ಪಾಡಿಯಲ್ಲಿ ಕಡಲ್ಕೊರೆತ ತೀವ್ರ: ಎರಡು ಕುಟುಂಬಗಳ ಸ್ಥಳಾಂತರ; ರಸ್ತೆ, ವಿದ್ಯುತ್ ಕಂಬಗಳು ಅಪಾಯಭೀತಿಯಲ್ಲಿ

ಕುಂಬಳೆ: ಕೊಯಿಪ್ಪಾಡಿ ಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಸಮುದ್ರ ತಡೆಗೋಡೆ ಸಮುದ್ರಪಾಲಾಗಿದೆ.  20ರಷ್ಟು ತೆಂಗಿನ ಮರಗಳು ಈಗಾಗಲೇ ಸಮುದ್ರದ ಅಲೆಯಲ್ಲಿ ಕೊಚ್ಚಿಹೋಗಿದೆ. ವಿದ್ಯುತ್ ಕಂಬಗಳು  ಧರಾಶಾಹಿ ಯಾಗುವ ಭೀತಿಯಲ್ಲಿದೆ.  ಈ ಪ್ರದೇಶದ ಸವಿತಾ ಹಾಗೂ ವಿಮಲ ಎಂಬಿವರ ಕುಟುಂಬಗಳನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸ ಲಾಗಿದೆ.  ಕೊಯಿಪ್ಪಾಡಿ ಕಡಪ್ಪುರ ದಿಂದ ಕೋಟಿ ರಸ್ತೆಯ ಫಿಶರೀಸ್ ಎಲ್‌ಪಿ ಶಾಲೆಗೆ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಯಾವುದೇ ಕ್ಷಣ ಕುಸಿಯುವ ಭೀತಿಯಲ್ಲಿದೆ. ಇದೇ ವೇಳೆ  ಪ್ರತೀ ವರ್ಷ  ಕೋಟ್ಯಂತರ ರೂಪಾಯಿಗಳ ಕಗ್ಗಲ್ಲುಗಳನ್ನು ಸಮುದ್ರ ಕಿನಾರೆಯಲ್ಲಿರಿಸುತ್ತಿದ್ದು, …