ಗಣೇಶಗಿರಿಯಲ್ಲಿ ನೂತನ ಶ್ರೀ ಗಣೇಶಮಂದಿರ ಲೋಕಾರ್ಪಣೆ, ಆಮಂತ್ರಣ ಪತ್ರ ಬಿಡುಗಡೆ

ಬಾಯಾರು: ಮುಳಿಗದ್ದೆ ಗಣೇಶಗಿರಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಗಣೇಶ ಮಂದಿರದ ಲೋಕಾರ್ಪಣೆ ಮತ್ತು 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರÀವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನೆರವೇರಿಸಿದರು. ಬಳಿಕ ಆಶೀರ್ವಚನ ನೀಡಿದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಊರಿನ ಗಣ್ಯರು, ಭಕ್ತಾಧಿಗಳು, ಸಮಿತಿಯ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಾಯಾರು ಮುಳಿಗದ್ದೆ ಇದರ ವತಿಯಿಂದ ಧನ್ಯವಾದ ಅರ್ಪಿಸಲಾಯಿತು.

ಪುದುಕೋಳಿ ಸೇತುವೆ ಬಳಿ ನಿರಂತರ ತ್ಯಾಜ್ಯ ಉಪೇಕ್ಷೆ: ಸ್ಥಳೀಯರಿಂದ ಪ್ರತಿಭಟನೆ ನಿರ್ಧಾರ

ಬದಿಯಡ್ಕ: ನೀರ್ಚಾಲು- ಮಾನ್ಯ ರಸ್ತೆಯ ಪುದುಕೋಳಿ ಸೇತುವೆ ಬಳಿ ನಿರಂತರ ಶೌಚಾಲಯ ತ್ಯಾಜ್ಯ ಸಹಿತ ಮಾಲಿನ್ಯಗಳನ್ನು ತಂದೆಸೆಯುತ್ತಿದ್ದು, ಇದರ ವಿರುದ್ಧ ವಾರ್ಡ್ ಪ್ರತಿನಿಧಿಯ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಗ್ಗೆ ಪುದುಕೋಳಿ ಈಶ್ವರ ಭಟ್ ಅವರ ಮನೆಯಲ್ಲಿ ಸೇರಿದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ, ಪೊಲೀಸರಿಗೆ ದೂರು ನೀಡುವುದು, ನಾಗರಿಕರ ನೇತೃತ್ವದಲ್ಲಿ ರಾತ್ರಿ ಗಸ್ತು ಮೊದಲಾದ ವಿಷಯಗಳಲ್ಲಿ ಚರ್ಚೆ ನಡೆಯಿತು. ವಾರ್ಡ್ ಪ್ರತಿನಿಧಿ ರಜನಿ ಸಂದೀಪ್ ಉಪಸ್ಥಿತರಿದ್ದರು. ಸುಮ ಈಶ್ವರ …

ಸಿ.ಕೆ. ಚಿಪ್ಪಾರ್ ಅವರ 15ನೇ ವಾರ್ಷಿಕ ಸಂಸ್ಮರಣೆ

ಪೈವಳಿಕೆ: ಸಿಪಿಐ ಹಿರಿಯ ಮುಂದಾಳು ಹಾಗೂ ಜನಪರ ಹೋರಾಟಗಾರ ಸಿ.ಕೆ. ಚಿಪ್ಪಾರ್ ಅವರ 15ನೇ ವಾರ್ಷಿಕ ಸಂಸ್ಮರಣೆ ಇಂದು ಬೆಳಿಗ್ಗೆ ನಡೆಯಿತು. ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಅವರು ಮಾತನಾಡಿ ಸಿ.ಕೆ. ಚಿಪ್ಪಾರ್ ಅವರ ಹೋರಾಟಮಯ ಜೀವನ, ಮಾನವೀಯ ಮೌಲ್ಯಗಳು ಹಾಗೂ ಪಕ್ಷದ ಬೆಳವಣಿಗೆಗೆ ಅವರು ಸಲ್ಲಿಸಿದ ಕೊಡುಗೆಯನ್ನು ಸ್ಮರಿಸಿದರು. ಅವರ ಆದರ್ಶ ಇಂದಿನ ಯುವ ಪೀಳಿಗೆಗೆ ಪ್ರೇರಣೆ ಎಂದು ಅವರು ನುಡಿದರು. ಸಮದ್ ಬಿ.ಎ. ಅಧ್ಯಕ್ಷತೆ ವಹಿಸಿದರು. ಲಾರೆನ್ಸ್ ಡಿಸೋಜ  ಧ್ವಜಾರೋಹಣ …

ಕನ್ನಟಿಕಾನ ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವುಗೊಳಿಸಲು ಆಗ್ರಹ

ಪೆರ್ಲ: ಪೆರ್ಲದಿಂದ ಕನ್ನಟಿಕಾನ- ಸ್ವರ್ಗ ದಾರಿಯಾಗಿ ಪುತ್ತೂರಿಗೆ ತೆರಳುವ ಪೆರ್ಲ-ಸೂರಂಬೈಲು ರಸ್ತೆ ಹೊಂಡಗಳಿಂದ ಕೂಡಿ ಸಮಸ್ಯೆಯಲ್ಲಿರುವ ವೇಳೆ ಈ ರಸ್ತೆಯ ಎರಡೂ ಬದಿಗಳಲ್ಲಿ ಒಣಗಿ ನಿಂತಿರುವ ಮರಗಳು ಇನ್ನಷ್ಟು ಸಂಕಷ್ಟ ತಂದಿರಿಸುತ್ತಿದೆ. ಕನ್ನಟಿಕಾನದಲ್ಲಿ ರಸ್ತೆ ಅಂಚಿಗೆ ಒಣಗಿ ನಿಂತಿರುವ ಮರವೊಂದು ಯಾವುದೇ ಸಮಯದಲ್ಲಿ ತುಂಡಾಗಿ ಬೀಳುವ ಅಪಾಯ ಕಂಡು ಬರುತ್ತಿದೆ. ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಹಲವಾರು ಮಂದಿ ಈ ದಾರಿಯಾಗಿ ಸಂಚರಿಸುತ್ತಿದ್ದು, ಅಲ್ಲದೆ ಬಸ್‌ಗಾಗಿ ಕಾದು ನಿಲ್ಲಲು ಈ ಪ್ರದೇಶವನ್ನೇ ಬಳಸಿಕೊಳ್ಳುತ್ತಿದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿರುವ ಮರದ …

ಮಂಜೇಶ್ವರದಲ್ಲಿ ರೆವನ್ಯೂ ಟವರ್, ಜಿಲ್ಲೆಯ ಗ್ರೂಪ್ ವಿಲ್ಲೇಜ್  ಕಚೇರಿಗಳ ಸಮಸ್ಯೆಗಳಿಗೆ ಪರಿಹಾರ ಕಾಣುವುದಾಗಿ ಸಚಿವ ಎ.ಪಿ. ಅನಿಲ್ ಕುಮಾರ್

ಕಾಸರಗೋಡು: ಮಂಜೇಶ್ವರದಲ್ಲಿ ಕಂದಾಯ ಟವರ್ ನಿರ್ಮಿಸುವುದಾಗಿಯೂ, ಜಿಲ್ಲೆಯ ಗ್ರೂಪ್ ವಿಲ್ಲೇಜ್ ಕಚೇರಿಗಳ ಸಮಸ್ಯೆಗಳಿಗೆ ಪರಿಹಾರ ಕಾಣುವುದಾಗಿಯೂ ಇಲಾಖೆ ಸಚಿವ ಎ.ಪಿ. ಅನಿಲ್ ಕುಮಾರ್ ನುಡಿದರು. ಕಲೆಕ್ಟ್ರೇಟ್‌ನ ಮಿನಿ ಕಾನ್ಫರೇನ್ಸ್ ಹಾಲ್‌ನಲ್ಲಿ ನಡೆದ ರಾಜ್ಯ ಕಂದಾಯ ಇಲಾಖೆಯ ಮೊದಲ ಜಿಲ್ಲಾಮಟ್ಟದ ಅವಲೋಕನ ಸಭೆಯಲ್ಲಿ ಸಚಿವರು ಮಾತನಾಡುತ್ತಿದ್ದರು. ಕಂದಾಯ ಇಲಾಖೆಯ ಮುಖವನ್ನಾಗಿ ಕಾಣುವ ವಿಲ್ಲೇಜ್ ಕಚೇರಿಗಳನ್ನು ಜನ ಸೌಹಾರ್ದವನ್ನಾಗಿ ಮಾಡಲಾಗುವುದು. ಮಾದರಿ ಪೊಲೀಸ್ ಠಾಣೆಯಂತೆಯೇ ಪ್ರಾಮುಖ್ಯವಿರುವುದಾಗಿದೆ ಗ್ರಾಮ ಕಚೇರಿಗಳು ಕೂಡಾ ಎಂದು ಅವರು ನುಡಿದರು. ರಾಜ್ಯದಲ್ಲಿ ಭೂಮಿ ಸ್ತರ ವಿಂಗಡಣಗೆ …

ಮನೆಯವರು ಮಸೀದಿಗೆ ತೆರಳಿ ಮರಳುವಷ್ಟರಲ್ಲಿ ಕಳ್ಳರ ದಾಳಿ: ಕಪಾಟಿನಲ್ಲಿದ್ದ 5 ಪವನ್ ಚಿನ್ನಾಭರಣ ಕಳವು

ಕುಂಬಳೆ : ಮನೆಯವರು ಹೊರಗೆ ತೆರಳಿ  ಮರಳಿ ತಲುಪುವುದರೊಳಗೆ ಕಳ್ಳರು ಅಲ್ಲಿಗೆ ತಲುಪಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕಯ್ಯಾರಿನಲ್ಲಿ ನಿನ್ನೆ ರಾತ್ರಿ ಈ ಕಳವು ನಡೆದಿದ್ದು, ಆರೋಪಿಗಳ ಪತ್ತೆಗಾಗಿ ಕುಂಬಳೆ ಪೊಲೀಸರು ಶೋಧ ಆರಂಭಿಸಿದ್ದಾರೆ. ಪಾಲಕ್ಕಾಡ್‌ನಲ್ಲಿ ಹೋಟೆಲ್ ವ್ಯಾಪಾರಿಯಾಗಿರುವ ಕಯ್ಯಾರಿನ ಯೂಸಫ್ ಎಂಬವರ ಮನೆಯಿಂದ ನಿನ್ನೆ ರಾತ್ರಿ 7.30-8.30ರ ಮಧ್ಯೆ ಕಳವು ನಡೆದಿದೆ. ಯೂಸಫ್‌ರ ಪತ್ನಿ ಮೈಮೂನ ಹಾಗೂ ಮೂವರು ಮಕ್ಕಳು ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರು ನಿನ್ನೆ ರಾತ್ರಿ 7.30ರ …

ಟ್ಯೂಶನ್‌ಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ದೂಡಿಹಾಕಿ ಕೈ ಎಲುಬು ಮುರಿದ ಪ್ರಕರಣ: ಯುವತಿ ವಿರುದ್ಧ ಜಾಮೀನು ರಹಿತ ಕೇಸು

ಕುಂಬಳೆ: ಆರನೇ ತರಗತಿ ವಿದ್ಯಾರ್ಥಿನಿಯನ್ನು ದೂಡಿಹಾಕಿ ಕೈಯ ಎಲುಬು ಮುರಿದ ಪ್ರಕರಣಕ್ಕೆ ಸಂಬಂಧಿಸಿ ಯುವತಿ ವಿರುದ್ಧ ಕುಂಬಳೆ ಪೊಲೀಸರು ಜಾಮೀನು ರಹಿತ ಕೇಸು ದಾಖಲಿಸಿಕೊಂಡಿದ್ದಾರೆ. ಶೇಡಿಕಾವು ನಿವಾಸಿಯಾದ 11ರ ಹರೆಯದ ಬಾಲಕಿ ನೀಡಿದ ದೂರಿನಂತೆ ಕಣಿಪುರ ಕ್ಷೇತ್ರ ಸಮೀಪದ  ಓರ್ವೆ ಯುವತಿ ವಿರುದ್ಧ ಕೇಸು ದಾಖಲಿಸ ಲಾಗಿದೆ. ಶುಕ್ರವಾರ ಸಂಜೆ 5 ಗಂಟೆ ವೇಳೆ  ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಶಾಲೆಯ ತರಗತಿ ಮುಗಿದು ಕಣಿಪುರ ಕ್ಷೇತ್ರ ಸಮೀಪದ ಟ್ಯೂಶನ್ ಅಧ್ಯಾಪಿಕೆಯ ಮನೆಗೆ  ಟ್ಯೂಶನ್‌ಗಾಗಿ ವಿದ್ಯಾರ್ಥಿನಿ ತೆರಳುತ್ತಿದ್ದಳು. …

ಯುವಮೋರ್ಛಾ ನೇತಾರ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಸೆರೆ

ಕೊಚ್ಚಿ: ದಕ್ಷಿಣಕನ್ನಡ ಜಿಲ್ಲೆಯ ಯುವಮೋರ್ಛಾ ನೇತಾರ ಪ್ರವೀಣ್ ನೆಟ್ಟಾರು (32) ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರನ್ನು ಎನ್‌ಐಎ ಬಂಧಿಸಿದೆ. ಕೊಡಗು ಸೋಮವಾರಪೇ ಟೆಯ ಅಬ್ದುಲ್ ನಾಸಿರ್ (41), ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಯ್ಯೆಗುಡ್ಡೆ ನಿವಾಸಿ ನೌಶಾದ್ (32) ಬಂಧಿತ ಆರೋಪಿಗಳು. ಎನ್‌ಐಎಯ ಬೆಂಗಳೂರು ಮತ್ತು ಕೊಚ್ಚಿ ಘಟಕ ಅಧಿಕಾರಿಗಳ ತಂಡ ನಡೆಸಿದ ಜಂಟಿ ಕಾರ್ಯಾಚರಣೆ ಯಲ್ಲಿ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಅಬ್ದುಲ್ ನಸೀರ್‌ನನ್ನು ಕೊಚ್ಚಿ ಪಳ್ಳುರುತ್ತಿ ಯಿಂದ …

ಪುತ್ತಿಗೆ: ಜನಗಣತಿ ಕರ್ತವ್ಯ ಮಧ್ಯೆ ಅಧ್ಯಾಪಿಕೆಗೆ ಸಾಕುನಾಯಿ ಕಚ್ಚಿ ಗಾಯ

ಕಾಸರಗೋಡು: ಜನಗಣತಿ ಕರ್ತವ್ಯದ ಮಧ್ಯೆ ಸಾಕುನಾಯಿ ಕಚ್ಚಿ ಅಧ್ಯಾಪಿಕೆ ಗಾಯಗೊಂಡಿದ್ದಾರೆ. ಪುತ್ತಿಗೆ ಐಡೆಡ್ ಜ್ಯೂನಿಯರ್ ಬೇಸಿಕ್ ಶಾಲಾ ಅಧ್ಯಾಪಿಕೆ ಹಾಗೂ ಇರಿಯಣ್ಣಿ ನಿವಾಸಿ ಇ. ಶ್ರೀಜ (40) ಗಾಯಗೊಂಡವರು. ನಿನ್ನೆ ಸಂಜೆ 6 ಗಂಟೆಗೆ ಪುತ್ತಿಗೆ ಹೆಡ್ಡರಕಟ್ಟೆ ಉನ್ನತಿಯಲ್ಲಿ ನಾಯಿ ಕಚ್ಚಿದೆ. ಅಧ್ಯಾಪಿಕೆ ಸೆನ್ಸಸ್‌ಗಾಗಿ ತಲುಪಿದಾಗ ಕಟ್ಟಿಹಾಕಿದ್ದ ನಾಯಿ ಸಂಕೋಲೆ ತುಂಡುಮಾಡಿ ಓಡಿ ಬಂದು ಕಚ್ಚಿದೆ ಎನ್ನಲಾಗಿದೆ. ಕೂಡಲೇ ಕಾಸರ ಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ತಿಂಗಳ ೩ರಂದು ತೃಕರಿಪುರ ಉಡುಂಬುಂದಲ ಜಿಎಲ್‌ಪಿ ಶಾಲೆಯ ಅಧ್ಯಾ …

ಸಮುದ್ರ ಕಿನಾರೆಯಲ್ಲಿ ರುಂಡವಿಲ್ಲದ ಮೃತದೇಹ ಪತ್ತೆ ಪ್ರಕರಣ: ಮುಂದುವರಿದ ನಿಗೂಢತೆ

ಕಾಸರಗೋಡು: ಕಾಸರಗೋಡು ಲೈಟ್ ಹೌಸ್‌ಬಳಿಯ ಸಮುದ್ರ ಕಿನಾರೆಯಲ್ಲಿ ರುಂಡವಿಲ್ಲದ  ಗಂಡಸಿನ ಮೃತದೇಹ ಪತ್ತೆಯಾದ ಘಟನೆಗೆ ಸಂಬಂಧಿಸಿ ನಿಗೂಢತೆಗಳು ಮುಂದು ವರಿಯುತ್ತಿದೆ. ಮೃತಪಟ್ಟ ವ್ಯಕ್ತಿ ಯಾರೆಂದು ತಿಳಿಯದ ಹಿನ್ನೆಲೆಯಲ್ಲಿ ಸಾವಿನ ಕುರಿತಾದ ತನಿಖೆ ಮುಂದು ವರಿಸಲು ತೊಡಕಾಗಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದೂವರೆ ತಿಂಗಳ ಹಿಂದೆ ಮೃತ ಪಟ್ಟ ವ್ಯಕ್ತಿಯ ದೇಹ ಇದಾಗಿದೆ ಯೆಂದು ಸಂಶಯಿಸಲಾಗುತ್ತಿದ್ದು ಆದರೆ ತಲೆ ಮಾತ್ರ  ಬೇರ್ಪಟ್ಟಿರು ವುದು ನಿಗೂಢತೆಗೆ ಕಾರಣವಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದ ಲ್ಲಿರಿಸಿದ್ದು, ಮೃತ ವ್ಯಕ್ತಿ ಯಾರೆಂದು …