ದೈತೋಟದಲ್ಲಿ ಗುಡ್ಡೆ ಕುಸಿತ : ವಾಹನ ಸಂಚಾರಕ್ಕೆ ಭೀತಿ
ಉಪ್ಪಳ: ಇತ್ತೀಚೆಗೆ ಸುರಿದ ಮಳೆಗೆ ರಸ್ತೆ ಬದಿಯ ಗುಡ್ಡೆ ಕುಸಿದಿದ್ದು ಇದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಸಜಂಕಿಲ-ಆವಳ-ಚೇವಾರು ಸಂಪರ್ಕ ರಸ್ತೆಯ ದೈತೋಟ ಎಂಬಲ್ಲಿ ಗುಡ್ಡೆ ಕುಸಿದುಬಿದ್ದಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಪ್ರಯಾಣಿಕರಿಗೆ ಆತಂಕ ಉಂಟುಮಾಡಿದೆ. ಇದೇ ಸ್ಥಳದಲ್ಲಿ ಕಳೆದ ವರ್ಷ ಮಳೆಗಾಲ ಕೂಡಾ ಗುಡ್ಡೆ ಕುಸಿದಿತ್ತು. ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಗುಡ್ಡೆ ಕುಸಿತ ತಡೆಯಲಿರುವ ಕ್ರಮ ಕೈಗೊಂಡಿಲ್ಲ. ಈ ವರ್ಷವೂ ಮಳೆ ಸುರಿಯುತ್ತಿದ್ದಂತೆ ಗುಡ್ಡೆ ಕುಸಿದಿದ್ದು, ಇದೇ ಸ್ಥಿತಿ ಮುಂದುವರಿದರೆ …