ಟ್ರಾಫಿಕ್ ಪರಿಷ್ಕಾರ ಸಮಾಲೋಚನೆ ನಡೆಸಿ ಕೈಗೊಂಡ ತೀರ್ಮಾನ ವ್ಯಾಪಾರಿಗಳ ಆರೋಪ ಹುರುಳಿಲ್ಲದ್ದು- ಕುಂಬಳೆ ಪಂ. ಆಡಳಿತ ಸಮಿತಿ
ಕುಂಬಳೆ: ಕುಂಬಳೆ ಪೇಟೆಯ ಸಮಗ್ರ ಅಭಿವೃದ್ಧಿ ಮುಂದಿಟ್ಟು ಎಲ್ಲರೊಂದಿಗೆ ಚರ್ಚಿಸಿದ ಬಳಿಕ ಪಂಚಾಯತ್ ಆಡಳಿತ ಸಮಿತಿ ಕುಂಬಳೆಯಲ್ಲಿ ಟ್ರಾಫಿಕ್ ಪರಿಷ್ಕಾರ ಜ್ಯಾರಿಗೊಳಿಸಿರುವುದಾಗಿಯೂ ಈ ಬಗ್ಗೆ ಆಧಾರರಹಿತ ಆರೋಪವನ್ನು ಅಲ್ಲಗಳೆದು ಆಡಳಿತ ಸಮಿತಿ ಸದಸ್ಯರು ಸುದ್ಧಿಗೋಷ್ಠಿ ನಡೆಸಿದರು. ರಾಜಕೀಯ ಪಕ್ಷ, ವ್ಯಾಪಾರಿ ಮೋಟಾರು ಕಾರ್ಮಿಕರ ಪ್ರತಿನಿಧಿಗಳು ಭಾಗವಹಿಸಿದ ಸಭೆಯ ತೀರ್ಮಾನ ಪ್ರಕಾರ ಈಗ ಪರಿಷ್ಕಾರ ಜ್ಯಾರಿಗೊಳಿಸಲಾಗಿದೆ. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಖಂಡರಾದ ರಾಜೇಶ್ ಮನಯತ್, ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ, ಕೋಶಾಧಿಕಾರಿ ಅನ್ವರ್ ಸಿಟಿ ಸಹಿತದವರು ಭಾಗವಹಿಸಿದ ಸಭೆಯಲ್ಲಿ …