ಕುಂಬಳೆ ಪಂಚಾಯತ್ ಬಸ್ ತಂಗುದಾಣದಲ್ಲಿ ನೀರು ತಂಗಿ ನಿಂತು ಸಮಸ್ಯೆ
ಕುಂಬಳೆ: ಕುಂಬಳೆ ಪಂಚಾಯತ್ ಬಸ್ ತಂಗುದಾಣ ಶೆಲ್ಟರ್‌ನಲ್ಲಿ ನೀರು ತುಂಬಿಕೊಂಡಿರುವುದಾಗಿ ಸ್ಥಳೀಯರು, ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ತಂಗುದಾಣದಲ್ಲಿ ನೀರು ತಂಗಿನಿಲ್ಲುವ ಕಾರಣ ಪ್ರಯಾಣಿಕರಿಗೆ ಬಸ್‌ಗೆ ಹತ್ತಲು, ಇಳಿಯಲು ಸಮಸ್ಯೆಯಾಗು ತ್ತಿದೆ. ಜನರು ಅಂಟು ರೋಗ ಬೆದರಿಕೆ ಭೀತಿಯಲ್ಲಿರುವ ಮಧ್ಯೆ ಕೆಸರು ನೀರು ತಂಗಿ ನಿಲ್ಲುತ್ತಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ. ಶೀಘ್ರವೇ ಇದಕ್ಕೊಂದು ಪರಿಹಾರ ಕಾಣಬೇಕೆಂದು ಬಿಜೆಪಿ ಕುಂಬಳೆ ಸಮಿತಿ, ಪಂಚಾಯತ್ ಸದಸ್ಯರು ಆಗ್ರಹಿಸಿದ್ದಾರೆ. ಜಂಟಿಯಾಗಿ ಜರಗಿದ ಸಭೆಯಲ್ಲಿ ಈ ಅಭಿಪ್ರಾಯ ಕೇಳಿಬಂದಿದೆ. ಈ ಬಗ್ಗೆ ಪಂಚಾಯತ್ ಅಧ್ಯಕ್ಷ, ಕಾರ್ಯದರ್ಶಿಗೆ …
Read more “ಕುಂಬಳೆ ಪಂಚಾಯತ್ ಬಸ್ ತಂಗುದಾಣದಲ್ಲಿ ನೀರು ತಂಗಿ ನಿಂತು ಸಮಸ್ಯೆ”