ಮದುವೆ ನಿಶ್ಚಿತಾರ್ಥ ನಡೆದ ಯುವಕ ಬೈಕ್ ಅಪಘಾತದಲ್ಲಿ ಮೃತ್ಯು: ಯುವತಿ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಮದುವೆ ನಿಶ್ಚಿತಾರ್ಥ ನಡೆದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆಯಿಂದ ಮನನೊಂದಿದ್ದ ಯುವತಿ ಮನೆಯೊಳಗೆ ಫ್ಯಾನ್‌ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕಿದೂರು ಕುಂಟಂಗೇರಡ್ಕದ ಬಿ. ಜಯಾನಂದರ ಪುತ್ರಿ ಪ್ರಪುಲ್ಲ (26) ಸಾವಿಗೀಡಾದ ಯುವತಿ ಯಾಗಿದ್ದಾಳೆ. ನಿನ್ನೆ ಸಂಜೆ ವೇಳೆ ಈಕೆಯ ಮೃತದೇಹ ಮನೆ ಯೊಳಗೆ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ವೇಳೆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಮನೆಯವರು ಜಯ ನಂದರ ಸಹೋದರಿಯ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. …