ಯುವಕನ ಅಪಹರಣ ಪ್ರಕರಣ: ಆರೋಪಿಯನ್ನು ಸೆರೆಹಿಡಿಯಲು ಉಪ್ಪಳಕ್ಕೆ ತಲುಪಿದ ಪೊಲೀಸರ ಮೇಲೆ ಹಲ್ಲೆ; ಆರೋಪಿ ಸೆರೆ
ಕುಂಬಳೆ: ಕಾಞಂಗಾಡ್ ಮಾಣಿ ಕ್ಕೋತ್ ಕೊಳವಯಲ್ ನಿವಾಸಿ ಯನ್ನು ಅಪಹರಣಗೈದ ಪ್ರಕರಣದಲ್ಲಿ ಆರೋಪಿಯಾದ ಯುವಕನನ್ನು ಸೆರೆಹಿಡಿಯಲು ತಲುಪಿದ ಪೊಲೀಸರ ಮೇಲೆ ಹಲ್ಲೆಗೈದ ಘಟನೆ ನಡೆದಿದೆ. ಇದರಿಂದ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಗಾಯ ಗಂಭೀರವಾಗಿದೆ. ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ತಲುಪಿ ಆರೋಪಿಯಾದ ಉಪ್ಪಳ ಮಣಿಮುಂಡದ ಸುಹೈಲ್ (30)ಎಂಬಾತನನ್ನು ಬಂಧಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಆರೋ ಪಿಯೂ, ಗೂಂಡಾ ನೇತಾರನೂ, ಮಂಗಳೂರಿನಲ್ಲಿ ನಡೆದ ದಾಳಿಯಲ್ಲಿ ಕೊಲೆಗೈಯ್ಯಲ್ಪಟ್ಟ ಖಾಲಿಯಾ ರಫೀಕ್‌ನ ಮಗನಾಗಿದ್ದಾನೆ ಸುಹೈಲ್ ಎಂದು ಪೊಲೀಸರು …