ಬೀರಮೂಲೆಯಲ್ಲಿ ಕಾಟಿಗಳ ಹಿಂಡು ರೈತರಿಗೆ ಆತಂಕದ ದಿನಗಳು
ಬೆಳ್ಳೂರು: ಬೆಳ್ಳೂರು ಪಂಚಾಯತ್ ವ್ಯಾಪ್ತಿಯ ಕುಳದಪಾರೆ ಬೀರಮೂಲೆ ಯಲ್ಲಿ ಕಾಟಿಗಳ ಹಿಂಡು ಸ್ಥಳೀಯ ಕೃಷಿಕರ ನಿದ್ದೆಗೆಡಿಸುತ್ತಿದೆ. ಬೀರಮೂಲೆ ಯ ಕೃಷಿಕ ಸೂರ್ಯನಾರಾಯಣ ಭಟ್‌ರ ತೆಂಗಿನ ತೋಟದಲ್ಲಿ ಕಾಟಿಗಳ ದೊಡ್ಡ ಹಿಂಡು ಕಂಡುಬಂದಿದೆ. ಕುಳದಪಾರೆ, ಈಂದುಮೂಲೆ ಗಡಿ ಪ್ರದೇಶದಲ್ಲಿ ಆಗಾಗ ಕಾಟಿಗಳು ಕಾಣಿಸಿಕೊಳ್ಳುತ್ತಿದ್ದರೂ ಸುಮಾರು ೧೦ರಷ್ಟು ಸಂಖ್ಯೆಯಲ್ಲಿ ಕಂಡುಬಂದಿ ರುವುದು ಇದೇ ಮೊದಲೆಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಇದುವರೆಗೂ ಎಲ್ಲೂ ಕೃಷಿಗೆ ಹಾನಿಗೊಳಿಸಿದ ವರದಿಯಾಗದಿದ್ದರೂ ಕೃಷಿಕರ ಭೀತಿ ತೊಲಗಲಿಲ್ಲ. ಅರಣ್ಯ ಗಡಿ ಪ್ರದೇಶಗಳಿಂದ ಕೃಷಿ ಭೂಮಿಗೆ ಕಾಡುಪ್ರಾಣಿಗಳು ನುಗ್ಗುವುದನ್ನು …