ವಾಹನ ಅಪಘಾತದಲ್ಲಿ ಗಾಯಗೊಂಡಿರುವುದಾಗಿ ತಿಳಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ಮೃತ್ಯು

ಕಾಸರಗೋಡು: ವಾಹನ ಅಪಘಾತದಲ್ಲಿ ಗಾಯಗೊಂಡಿರುವು ದಾಗಿ ತಿಳಿಸಿ ಕಾಸರಗೋಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ.  ಮೂಲತಃ ಕರ್ನಾಟಕದ ಬೆಂಗಳೂರು ನಿವಾಸಿಯೂ, ಪ್ರಸ್ತುತ ಕುಂಬಳೆ ಬಳಿಯ ಕಳತ್ತೂರಿನಲ್ಲಿ ವಾಸಿಸುವ ಅಸ್ಲಾಂ ಭಾಷಾ (39) ಸಾವಿಗೀಡಾದ ಯುವಕನಾಗಿದ್ದಾನೆ. ಎರಡು ದಿನಗಳ ಹಿಂದೆ ಇವರು  ಕಾಲಿಗೆ ಗಾಯಗೊಂಡ ಸ್ಥಿತಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿ ಚಿಕಿತ್ಸೆಗಾಗಿ ದಾಖಲಾಗಿದ್ದರೆನ್ನಲಾಗಿದೆ. ಇದೇ ವೇಳೆ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಬೇಕಾಗಿಲ್ಲವೆಂದೂ ಅಪಘಾತ ಬಗ್ಗೆ  ಕೇಸು ದಾಖಲಿಸುವುದು ಬೇಡವೆಂದು ಅಸ್ಲಾಂ ಭಾಷಾ ಆಸ್ಪತ್ರೆ …

ಮಗಳ ಸ್ನೇಹಿತೆಗೆ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು:  ಮಗಳ ಸ್ನೇಹಿತೆಗೆ  ಅಶ್ಲೀಲ ಸಂದೇಶ ಕಳುಹಿಸಿದ  ವ್ಯಕ್ತಿ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಕೊಂಡಿದ್ದಾರೆ.  ಸೆಬಾಸ್ಟಿ ಯನ್ ಎಂಬ ವ್ಯಕ್ತಿ ವಿರುದ್ಧ  ಚಿಟ್ಟಾರಿಕಲ್    ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿಯ ಮಗಳು ಹಾಗೂ ದೂರುದಾತೆ ಯಾದ ಬಾಲಕಿ 10ನೇ ತರಗತಿ ವಿದ್ಯಾರ್ಥಿನಿಯರಾಗಿದ್ದಾರೆ. ಆರೋಪಿ ಹಾಗೂ ಪುತ್ರಿ ಒಂದೇ ಮೊಬೈಲ್ ಫೋನ್ ಉಪಯೋಗಿ ಸುತ್ತಿದ್ದಾರೆ.  ಈ ಮೊಬೈಲ್‌ನಿಂದ ದೂರುದಾತೆಯ ಮೊಬೈಲ್ ಫೋನ್ ನಂಬ್ರ ಆರೋಪಿಗೆ ಲಭಿ ಸಿದೆಯೆಂದು ಸಂಶಯಿಸಲಾಗುತ್ತಿದೆ. ಆರೋಪಿಯನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದರೆ ಇನ್ನಷ್ಟು …

ವಿದೇಶದಿಂದ ಸಹಿತ ಹರಿದು ಬಂದ ಕೋಟ್ಯಂತರ ರೂ.: ಜಿಲ್ಲೆಯಾದ್ಯಂತ ಪೊಲೀಸ್ ದಾಳಿ; 26 ಪ್ರಕರಣ ದಾಖಲು

ಕಾಸರಗೋಡು: ಆನ್‌ಲೈನ್ ಟ್ರೇಡಿಂಗ್ ಹಾಗೂ ಇತರ ರೀತಿಯ ಆನ್‌ಲೈನ್ ಸೈಬರ್ ವಂಚಕರಿಗೆ ಬಾಡಿಗೆಗೆ ಬ್ಯಾಂಕ್ ಖಾತೆಗಳನ್ನು ನೀಡುವವರನ್ನು ಪತ್ತೆಹಚ್ಚಲು ಪೊಲೀಸರು ನಿನ್ನೆ ಜಿಲ್ಲೆಯಾದ್ಯಂತ ವ್ಯಾಪಕ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಇದರಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ಒಟ್ಟು 26 ಪ್ರಕರಣಗಳು ದಾಖಲಾಗಿವೆ. ಇದರಂತೆ ಮೇಲ್ಪರಂಬ ಠಾಣೆಯಲ್ಲಿ 6, ಕಾಸರಗೋಡು, ವಿದ್ಯಾನಗರ ಠಾಣೆಗಳಲ್ಲಿ ತಲಾ 5, ಹೊಸದುರ್ಗ 4, ಮಂಜೇಶ್ವರ, ಬೇಡಗ, ಚಂದೇರ, ನೀಲೇಶ್ವರ, ವೆಳ್ಳರಿಕುಂಡ್ ಎಂಬೀ ಪೊಲೀಸ್ ಠಾಣೆಗಳಲ್ಲಿ ತಲಾ 1ರಂತೆ ಪ್ರಕರಣ ದಾಖಲಾಗಿದೆ. ಸೈಬರ್ …

ವಾಮಂಜೂರು ವಾಹನ ಅಪಘಾತ: ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು

ಉಪ್ಪಳ: ಬೈಕ್ ಹಾಗೂ ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಪೈವಳಿಕೆ ಚಿಪ್ಪಾರು ಕಡೆಂಕೋಡಿ ಅಡ್ಕತ್ತಿಮಾರ್‌ನ ಬಾಲಕೃಷ್ಣ ಎಂಬವರ ಪುತ್ರ ಕಿರಣ್ ಕುಮಾರ್ (34) ಮೃತಪಟ್ಟ ದುರ್ದೈವಿ. ಮೊನ್ನೆ ಸಂಜೆ ವಾಮಂಜೂರು ಅಬಕಾರಿ ಚೆಕ್ ಪೋಸ್ಟ್ ಸಮೀಪ ಅಪಘಾತ ಸಂಭವಿಸಿತ್ತು.  ಬೈಕ್‌ನಲ್ಲಿದ್ದ ಕಿgಣ್ ಕುಮಾರ್ ಹಾಗೂ ಕೋಡಿಬೈಲು ಬಳಂಕುಡೆಯ ಹರೀಶ್ (40) ಎಂಬಿವರು ಗಾಯಗೊಂಡಿದ್ದರು. ಇವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸ್ಸೆ ಫಲಕಾರಿಯಾಗದೆ …

ಯುವತಿ ನಾಪತ್ತೆ

ಬದಿಯಡ್ಕ: ಯುವತಿ ನಾಪತ್ತೆಯಾದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕುಂಬ್ಡಾಜೆ ಮವ್ವಾರು ವಡಂಬಲ ಹೌಸ್‌ನ ಹರ್ಷಿತ ವಿ. (18) ಎಂಬಾಕೆ ಸೆ. ೫ರಂದು ಬೆಳಿಗ್ಗೆ 11 ಗಂಟೆಗೆ ಮುಳ್ಳೇರಿಯಕ್ಕೆ ಹೋಗುವುದಾಗಿ ಮನೆಯವರಲ್ಲಿ ತಿಳಿಸಿ ಹೊರ ಹೋದ ಆಕೆ ನಂತರ  ಹಿಂತಿರು ಗದೆ ನಾಪತ್ತೆಯಾಗಿರುವುದಾಗಿ ಆಕೆಯ ಸಹೋದರಿ ಆಶಾಲತಾ ವಿ. ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿದ್ದಾರೆ.

ಹೃದಯಾಘಾತದಿಂದ ನಿಧನ ಹೊಂದಿದ ಅಣ್ಣನ ಅಂತ್ಯಕ್ರಿಯೆಗೆ ಸಿದ್ಧತೆ ಮಧ್ಯೆ ತಮ್ಮನೂ ಹೃದಯಾಘಾತಕ್ಕೆ ಬಲಿ: ಗಂಟೆಗಳೊಳಗೆ ಸಹೋದರರ ನಿಧನದಿಂದ ಶೋಕಸಾಗರ

ಬದಿಯಡ್ಕ: ಹೃದಯಾಘಾತ ದಿಂದ ಮೃತಪಟ್ಟ ಅಣ್ಣನ ಅಂತ್ಯ ಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ತಮ್ಮನೂ ಹೃದಯಾಘಾತಕ್ಕೆ ಬಲಿಯಾದ ದಾರುಣ ಘಟನೆ ನಡೆದಿದೆ. ಕೇವಲ ಮೂರು ಗಂಟೆಗಳ ಅಂತರದಲ್ಲಿ ಇಬ್ಬರು ಸಹೋದರರು ನಿಧನ ಹೊಂದಿದ ಘಟನೆ ಸಂಬಂಧಿಕರು ಹಾಗೂ ನಾಡಿನಲ್ಲಿ ಶೋಕಸಾಗರವನ್ನೇ ಸೃಷ್ಟಿಸಿದೆ. ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರ ಬಳಿಯ ನಿವಾಸಿಗಳಾದ ರಾಮಕೃಷ್ಣ  ಭಟ್  (70) ಹಾಗೂ ಕೇಶವ ಭಟ್ (66) ಎಂಬಿವರು ನಿಧನ ಹೊಂದಿದ ಸಹೋದರರಾಗಿದ್ದಾರೆ. ರಾಮಕೃಷ್ಣ ಭಟ್‌ರಿಗೆ ಆದಿತ್ಯವಾರ ರಾತ್ರಿ ೭ ಗಂಟೆಗೆ …

ಅನಧಿಕೃತ ಹೊಯ್ಗೆ ಸಂಗ್ರಹ : ದಾಳಿಗೆ ತಲುಪಿದ ಪೊಲೀಸರನ್ನು ಕಂಡು ಹೊಳೆಗೆ ಹಾರಿದ ಯುವಕ ನಾಪತ್ತೆ; ತೀವ್ರ ಶೋಧ

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ  ಸಂಗ್ರಹ ವಿರುದ್ಧ ಕಾರ್ಯಾಚರಣೆಗಿಳಿದ ಕರಾವಳಿ ಪೊಲೀಸರನ್ನು ಕಂಡು ಹೊಳೆಗೆ ಹಾರಿದ ಯುವಕ ನಾಪತ್ತೆಯಾಗಿದ್ದು, ಆತನಿಗಾಗಿ ಇಂದು ಕೂಡಾ ಶೋಧ ನಡೆಸಲಾಗುತ್ತಿದೆ.  ಆರಿಕ್ಕಾಡಿ ಕಡವತ್ ನಿವಾಸಿ ಇಬ್ರಾಹಿಂ (26) ನಾಪತ್ತೆಯಾಗಿ ರುವುದಾಗಿ ಹೇಳಲಾಗುತ್ತಿದೆ. ನಿನ್ನೆ ರಾತ್ರಿ ೮ ಗಂಟೆ ವೇಳೆ ಶಿರಿಯ ಹೊಳೆಯಿಂದ ಹೊಯ್ಗೆ ಸಂಗ್ರಹಿಸ ಲಾಗುತ್ತಿದೆಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಕರಾವಳಿ ಪೊಲೀಸರು ಅಲ್ಲಿಗೆ ದಾಳಿ ನಡೆಸಿದ್ದರು. ಈ ವೇಳೆ ಹೊಯ್ಗೆ ಸಂಗ್ರಹಿಸುತ್ತಿದ್ದ ಇಬ್ಬರು  ದೋಣಿಯನ್ನು ಉಪೇಕ್ಷಿಸಿ ಹೊಳೆಗೆ ಹಾರಿ ತಪ್ಪಿಸಿಕೊಂಡಿದ್ದಾರೆ. ಇದೇ …

ಅನಂತಪುರದಲ್ಲಿ ದುರ್ಗಂಧ ಅಸಹನೀಯ: ಸ್ಥಳೀಯರಿಗೆ ಕುಡಿಯುವ ನೀರಿಗೂ ವಿಘ್ನ; ಸಂಸ್ಥೆ ಮುಚ್ಚಲು ಮತ್ತೆ ಜಿಲ್ಲಾಧಿಕಾರಿಯಿಂದ ನಿರ್ದೇಶ

ಕುಂಬಳೆ: ಪರಿಸರ ಹಾಗೂ  ಜನರಿಗೆ ತೀವ್ರ ಬೆದರಿಕೆ ಒಡ್ಡುತ್ತಿರುವ  ಅನಂತಪುರದ ವಿವಾದ ಕೈಗಾರಿಕೆಯನ್ನು ಮತ್ತೆ  ಮುಚ್ಚಲು ಜಿಲ್ಲಾಧಿಕಾರಿ ಮತ್ತೊಮ್ಮೆ ನಿರ್ದೇಶ ನೀಡಿದ್ದಾರೆ. ಜನರ ಆರೋಗ್ಯ ಸಮಸ್ಯೆಗಳಲ್ಲಿ, ಕುಡಿಯುವ ನೀರನ್ನು ಅಪಾಯಕರವಾದ ರೀತಿಯಲ್ಲಿ ಹಾನಿಗೊಳಿಸುವ ವಿಧದಲ್ಲಿರುವ ಕೈಗಾರಿಕೆಯ ಚಟುವಟಿಕೆ ತನಿಖೆಯಲ್ಲಿ ಖಚಿತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ತೀವ್ರ ಕ್ರಮಕ್ಕೆ ಮುಂದಾಗಿದೆ. ಕುಂಬಳೆ ಅನಂತಪುರ ಆಯಿಲ್ ಫ್ಯಾಕ್ಟ್ರಿಯಿಂದಿರುವ ದುರ್ಗಂಧದಿಂದ ಸಹಿಸಲು ಸಾಧ್ಯವಾಗದ ಸ್ಥಳೀಯರು, ಪರಿಸರ ನಿವಾಸಿಗಳು ಈ ಮೊದಲು ದೂರು ನೀಡಿದ್ದರು. ಮಕ್ಕಳಿಗೆ ಕೆಮ್ಮು, ಉಸಿರಾಟ ತೊಂದರೆ ಕಂಡುಬಂದಿರುವುದಾಗಿ ಮಕ್ಕಳನ್ನು …

ಕುಂಟಂಗೇರಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಸ್ಥಾಪಕಾಧ್ಯಕ್ಷರಿಗೆ ಗೌರವಾರ್ಪಣೆ

ಕುಂಬಳೆ: ಕುಂಟಂಗೇರಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷರು ಹಾಗೂ ಸುಮಾರು ೫೪ ವರ್ಷಗಳಿಂದ ಮಂದಿರದಲ್ಲಿ ಪೂಜೆ ನಿರ್ವಹಿಸುತ್ತಿದ್ದ ಕೃಷ್ಣ ಚೆಟ್ಟಿಯಾರ್‌ರನ್ನು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ   ಸನ್ಮಾನಿಸಿ ಗೌರವಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ  ಮಂದಿರದ ತಂತ್ರಿವರ್ಯರಾದ ಶ್ರೀ ಯೋಗೀಶ ಕಡಮಣ್ಣಾಯರು ಕೃಷ್ಣ ಚೆಟ್ಟಿಯಾರ್‌ರನ್ನು ಶಾಲು ಹೊದಿಸಿ  ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು. ಧಾರ್ಮಿಕ ಮುಂದಾಳು ಕೆ. ಶಂಕರ ಆಳ್ವ ಕೋಟೆಕ್ಕಾರು, ಮಂದಿರದ ಅಧ್ಯಕ್ಷ ವರುಣ್ ಕುಮಾರ್, ಮಹಿಳಾ ಸಮಿತಿ …

ಸಅದಿಯ ಗ್ರಾಂಡ್ ಮಸೀದಿ ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್‌ರಿಂದ ಉದ್ಘಾಟನೆ

ಕಾಸರಗೋಡು: ಜಾಮೀಯ ಸಅದಿಯ ಕ್ಯಾಂಪಸ್‌ನಲ್ಲಿ ನೂತನವಾಗಿ ನಿರ್ಮಿಸಿದ ಜಾಮಿಉ ಹಬೀಬ್ ಉಸ್ಮಾನ್ ಗ್ರಾಂಡ್ ಮಸೀದಿಯನ್ನು ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಿದರು. ಅಧ್ಯಕ್ಷ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್  ವಕ್ಫ್ ಕಾರ್ಯ ನೆರವೇರಿಸಿದರು. ಹಾಮೀದ್ ಇಂಬಿಚ್ಚಿಕೋಯ ಅಲ್‌ಬುಖಾರಿ ಪ್ರಾರ್ಥನೆ ನಡೆಸಿದರು. ಸಹಅದಿಯ ಕೋಶಾಧಿಕಾರಿ ಕಲ್ಲಟ್ರ ಮಾಹಿನ್ ಹಾಜಿ, ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಮಾಣಿಕೋತ್ ಮಾತನಾಡಿದರು. ಕರ್ನಾಟಕ ಸಚಿವ ಯು.ಟಿ. ಖಾದರ್, ಶಾಸಕ ಎ.ಕೆ.ಎಂ. ಅಶ್ರಫ್, ಮೊಹಮ್ಮದ್ ಅಲಿ ಹಬೀಬ್ ಉಸ್ಮಾನ್, ಹಬೀಬ್ ಅಹಮ್ಮದ್ ಉಸ್ಮಾನ್ ಮುಖ್ಯ ಅತಿಥಿಗಳಾಗಿದ್ದರು. …