ಯುಡಿಎಫ್ ಅಧಿಕಾರಕ್ಕೇರಿದ ಬಳಿಕ ಜನಜೀವನ ಅಸ್ತವ್ಯಸ್ಥ- ಡಿವೈಎಫ್‌ಐ
ಕಾಸರಗೋಡು: ರಾಜ್ಯದಲ್ಲಿ ಯುಡಿಎಫ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನಜೀವನ ಅಸ್ತವ್ಯಸ್ಥಗೊಂಡಿದೆಯೆಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ರತೀಶ್ ಎಂ.ವಿ ಆರೋಪಿಸಿದ್ದಾರೆ. ಸಿಪಿಎಂ ವಿಸ್ತರಣಾ ಜಿಲ್ಲಾ ಸಮಿತಿ ಅಂಗವಾಗಿ ಚೆಟ್ಟುಂಗುಳಿಯಲ್ಲಿ ನಡೆದ ಪಕ್ಷದ ರಾಮದಾಸನಗರ ಲೋಕಲ್ ಬಹುಜನ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯುಡಿಎಫ್ ಸರಕಾರ ಅಧಿಕಾರಕ್ಕೇರಿದ ಬಳಿಕ ನಿತ್ಯೋಪಯೋಗಿ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ವಿದ್ಯುತ್ ಕಡಿತದಿಂದ ಆಸ್ಪತ್ರೆಗಳು ಸಹಿತ ಎಲ್ಲಾ ವಲಯಕ್ಕೂ ಹೊಡೆತ ಬಿದ್ದಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರುಗಳ ಅಭಾವ ಹಾಗೂ ಔಷಧಿಗಳ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದಾರೆ. …
Read more “ಯುಡಿಎಫ್ ಅಧಿಕಾರಕ್ಕೇರಿದ ಬಳಿಕ ಜನಜೀವನ ಅಸ್ತವ್ಯಸ್ಥ- ಡಿವೈಎಫ್‌ಐ”