ಅಪರಿಮಿತ ವೇಗದಲ್ಲಿ ತಲುಪಿದ ಕಾರು ಢಿಕ್ಕಿ ಹೊಡೆದಿದ್ದ ಪ್ಲಸ್ ಟು ವಿದ್ಯಾರ್ಥಿನಿ ಮೃತ್ಯು: ಮುಳ್ಳೇರಿಯದಲ್ಲಿ ಶೋಕಸಾಗರ
ಮುಳ್ಳೇರಿಯ: ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಪ್ಲಸ್‌ಟು ವಿದ್ಯಾರ್ಥಿನಿ ಮೃತಪಟ್ಟಳು. ಮುಳ್ಳೇರಿಯ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ದೀಕ್ಷ (17) ನಿನ್ನೆ ಮಧ್ಯಾಹ್ನ ೨ ಗಂಟೆ ವೇಳೆ ಮೃತಪಟ್ಟಿದ್ದಾಳೆ. ಇಂದು ಬೆಳಿಗ್ಗೆ ಮುಳ್ಳೇರಿಯ ಶಾಲೆಯಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕಿರಿಸಿದ ಬಳಿಕ ಮುಳ್ಳೇರಿಯ ವಿವೇಕಾನಂದ ನಗರದ ಮನೆ ಬಳಿ ಅಂತ್ಯ ಸಂಸ್ಕಾರ ನಡೆಸಲಾಯಿತು. ವಿವೇಕಾನಂದ ನಗರ ನಿವಾಸಿ ಹಾಗೂ ಮುಳ್ಳೇರಿಯ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ …