ಬಾಲಕಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: 16ರ ಹರೆಯದ ಬಾಲಕಿ ಬೆಡ್‌ರೂಂನ ಕಿಟಿಕಿ ಸರಳಿಗೆ ನೇಣುಬಿಗಿದು ಸಾವಿಗೀಡಾದ  ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.   ಬೇಕಲ  ಪೊಲೀಸ್ ಠಾಣೆ ವ್ಯಾಪ್ತಿಯ ತಾಯೆ ಮವ್ವಲ್ ಎಂಬಲ್ಲಿ ಘಟನೆ ನಡೆದಿದೆ.ಇಲ್ಲಿನ ಇಸ್ಮಾಯಿಲ್ ಎಂಬವರ ಪುತ್ರಿ ರಿನ್‌ಶ (16) ಸಾವಿಗೀಡಾದ ಬಾಲಕಿ. ವಿಷಯ ತಿಳಿದು ಬೇಕಲ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಬಾಲಕಿ ತಚ್ಚಂಗಾಡ್ ಸರಕಾರಿ ಹೈಸ್ಕೂಲ್‌ನಿಂದ 10ನೇ ತರಗತಿ ಪರೀಕ್ಷೆಯಲ್ಲಿ ಉನ್ನತ ಶಿಕ್ಷಣಕ್ಕೆ  ಅರ್ಹತೆ ಪಡೆದಿದ್ದಳು. ಆದರೆ ಮೊದಲ ಎರಡು ಅಲಾಟ್ ಮೆಂಟ್‌ನಲ್ಲಿ ಈಕೆಗೆ ಸೀಟು ಲಭಿಸಿರಲಿಲ್ಲ. ಇದರಿಂದ ಮನ ನೊಂದು …

ಯುವತಿ ನಾಪತ್ತೆ: ಪ್ರಿಯತಮನ ಜೊತೆ ಹೋಗಿರುವುದಾಗಿ ಶಂಕೆ

ಕಾಸರಗೋಡು: ಕೆಲಸಕ್ಕೆಂದು ತಿಳಿಸಿ ಮನೆಯಿಂದ ಹೋದ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉದಿನೂರು ಮಾಚಿಕ್ಕಾಡ್‌ನ ಅನಾಮಿಕ (19) ನಾಪತ್ತೆಯಾಗಿದ್ದು ಈ ಸಂಬಂಧ ತಾಯಿ ನೀಡಿದ ದೂರಿನಂತೆ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ಅನಾಮಿಕ ನಿನ್ನೆ ಬೆಳಿಗ್ಗೆ ಮನೆಯಿಂದ  ತೆರಳಿದ್ದು, ರಾತ್ರಿಯಾ ದರೂ ಮರಳಿ ಬಂದಿಲ್ಲವೆನ್ನಲಾಗಿದೆ. ಇದೇ ವೇಳೆ ಯುವತಿ ಪ್ರಣವ್ ಎಂಬಾತನ ಜೊತೆ ಹೋಗಿರುವುದಾಗಿ ಸಂಶಯಿಸಲಾಗುತ್ತಿದೆಯೆಂದೂ ದೂರಿನಲ್ಲಿ ತಿಳಿಸಲಾಗಿದೆ.

ಎಕ್ಕೂರಿನಲ್ಲಿ ಟಿಪ್ಪರ್ ಲಾರಿ- ಬೈಕ್ ಢಿಕ್ಕಿ: ಎಸಿ ಮೆಕ್ಯಾನಿಕ್ ಮೃತ್ಯು

ಮಂಜೇಶ್ವರ: ಟಿಪ್ಪರ್ ಲಾರಿ ಹಾಗೂ ಬೈಕ್ ಮಧ್ಯೆ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಎಸಿ ಮೆಕ್ಯಾನಿಕ್ ಮೃತಪಟ್ಟ ಘಟನೆ ನಡೆದಿದೆ. ವರ್ಕಾಡಿ ಬಾಕ್ರಬೈಲ್ ಪಾತೂರು ನಿವಾಸಿ ಚಂದ್ರಹಾಸರ ಪುತ್ರ ಸುಧೀಶ್.ಸಿ.ಕೆ (26) ಮೃತಪಟ್ಟ ದುರ್ದೆÊವಿಯಾಗಿ ದ್ದಾರೆ. ಇವರು ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಎಸಿ ಮೆಕ್ಯಾನಿಕ್ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಸುಮಾರು 8.30ರ ವೇಳೆ ಮನೆಯಿಂದ ಮಂಗಳೂರಿಗೆ ಕೆಲಸಕ್ಕಾಗಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎಕ್ಕೂರಿನ ರೈಲ್ವೇ ಸೇತುವೆ ರಸ್ತೆಯಲ್ಲಿ ಬೈಕ್ ಅಪಘಾತ ಸಂಭವಿಸಿದೆ. ಇದರಿಂದ ಗಂಭೀರ ಗಾಯಗೊಂಡು ಸ್ಥಳದಲ್ಲೇ …

ಕ್ರೇನ್ ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ: ತಪ್ಪಿದ ಭಾರೀ ದುರಂತ

ಕಾಸರಗೋಡು: ಕ್ರೇನ್ ಹೇರಿ ಸಂಚರಿಸುತ್ತಿದ್ದ ಟ್ರಕ್‌ಗೆ  ಬೆಂಕಿ ಹತ್ತಿಕೊಂಡ ಘಟನೆ ಇಂದು ಮುಂಜಾನೆ 3 ಗಂಟೆಗೆ ಮೇಲ್ಪರಂ ಬದಲ್ಲಿ ಸಂಭವಿಸಿದೆ. ಆಂಧ್ರಪ್ರದೇಶ ನಿವಾಸಿಯಾದ ನಾರಾಯಣ ರೆಡ್ಡಿ ಎಂಬವರ ಮಾಲಕತ್ವದಲ್ಲಿರುವ 500 ಟನ್ ಭಾರ ಎತ್ತುವ ಸಾಮರ್ಥ್ಯವುಳ್ಳ ಕ್ರೇನ್  ಹಾಗೂ  ಟ್ರಕ್‌ಗೆ ಬೆಂಕಿ ತಗಲಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ಪಡನ್ನಕ್ಕಾಡ್ ರೈಲ್ವೇ ಮೇಲ್ಸೇತುವೆಯ ಗಾರ್ಡರ್ ಗಳನ್ನು ಎತ್ತುವ ಕೆಲಸ ಮುಗಿಸಿ ಟ್ರಕ್ ಕ್ರೇನ್‌ನೊಂದಿಗೆ ಮರಳುತ್ತಿತ್ತು. ಮೇಲ್ಪರಂಬಕ್ಕೆ ತಲುಪಿದಾಗ ಟ್ರಕ್‌ನ ಹಿಂಬದಿಯಲ್ಲಿ  ಬೆಂಕಿ ಕಾಣಿಸಿಕೊಂ ಡಿದೆ. ಕೂಡಲೇ ಚಾಲಕ ಲಾರಿಯನ್ನು …

ಅಕ್ರಮ ಅವಯವ ವ್ಯವಹಾರ: ಇ.ಡಿಗೆ ನಿರ್ಣಾಯಕ ದಾಖಲುಪತ್ರ ಲಭ್ಯ; ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಕ್ರಮ

ಕಾಸರಗೋಡು: ಎರ್ನಾಕುಳಂ ಮತ್ತು ಕೊಲ್ಲಂನ ಕೆಲವು ಆಸ್ಪತ್ರೆಗಳನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಅಕ್ರಮ ಅವಯವ ವ್ಯವಹಾರಕ್ಕೆ ಸಂಬಂಧಿಸಿ ನಡೆಸಲಾದ ತನಿಖೆಯಲ್ಲಿ ಡೈರೆಕ್ಟರೇಟ್ ಆಫ್ ಎನ್‌ಫೋರ್ಸ್‌ಮೆಂಟ್ (ಇ.ಡಿ)ಗೆ ಹಲವು ನಿರ್ಣಾಯಕ ದಾಖಲು ಪತ್ರಗಳು ಲಭಿಸಿದ್ದು ಅದರ ಆಧಾರದಲ್ಲಿ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಇದು ಮಾತ್ರವಲ್ಲದೆ, ಈ ಪ್ರಕರಣದ ಆರೋಪಿಗಳ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಇ ಡಿ ಮುಂದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜೂನ್ 18ರಂದು ಪ್ರಕರಣದ ಪ್ರಧಾನ ಸೂತ್ರಧಾರ ಎನ್ನಲಾಗಿರುವ ಮೊಹಮ್ಮದ್ ನಜೀಬ್ ಕಲ್ಲಟ್ರ ಕಳನಾಡು ಕಲ್ಲಟ್ರದಲ್ಲಿರುವ ಮನೆ, …

ಬಸ್‌ನಲ್ಲಿ ಸಾಗಿಸುತ್ತಿದ್ದ 595.68 ಗ್ರಾಂ ಚಿನ್ನ ವಶ: ಓರ್ವ ಸೆರೆ

ಉಪ್ಪಳ: ಬಸ್‌ನಲ್ಲಿ ಅನಧಿಕೃತ ವಾಗಿ ಸಾಗಿಸುತ್ತಿದ್ದ ಚಿನ್ನ ವಶಪಡಿಸಿ ಓರ್ವನನ್ನು ಬಂಧಿಸಲಾಗಿದೆ. ಪಶ್ಚಿಮಬಂ ಗಾಲ ನಿವಾಸಿಯಾದ ಸುರಜಿತ್ ಖೋರಾಯಿ ಎಂಬಾತ ಬಂಧಿತ ವ್ಯಕ್ತಿ. ಈತನ ಕೈಯಿಂದ 595.68 ಗ್ರಾಂ ಚಿನ್ನ ವಶಪಡಿಸ ಲಾಗಿದೆ. ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿ ಗಳು ನಡೆಸಿದ ಕಾರ್ಯಾಚರಣೆ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸುರಜಿತ್‌ನ ಕೈಯಲ್ಲಿ ಚಿನ್ನ ಪತ್ತೆಯಾಗಿತ್ತು. ಈಬಗ್ಗೆ ಮುಂದಿನ ತನಿಖೆಗಾಗಿ ಪ್ರಕರಣವನ್ನು ರಾಜ್ಯ ಸರಕು ಸೇವಾ ತೆರಿಗೆ ಇಲಾಖೆಯ ಎನ್‌ಫೋರ್ಸ್‌ಮೆಂಟ್‌ಗೆ ಹಸ್ತಾಂತರಿಸಲಾಗಿದೆ. ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನ …

ಸಹೋದರಿಯ ಕೊಲೆಗೆ ಯತ್ನಿಸಿದ ಪ್ರಕರಣ: ಯುವಕ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಸಹೋದರಿಯ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಸೆರೆಗೀಡಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಯುವಕ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅಡೂರು ಚಾಮೆಕೊಚ್ಚಿಯ ಶ್ರೀಕೃಷ್ಣ ನಿಲಯದ ರಘುರಾಮ ರಾವ್‌ರ ಪುತ್ರ ಕೃಷ್ಣ ಪ್ರಸಾದ್ (34) ಮೃತಪಟ್ಟ ವ್ಯಕ್ತಿ. ಮೊನ್ನೆ ಸಂಜೆ ಮನೆಯೊಳಗೆ ನೆಲದಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು. ಮನೆಯೊಳಗಿನಿಂದ ದುರ್ನಾತ ಬೀರುತ್ತಿರುವ ಅನುಭವಗೊಂಡು ಸ್ಥಳೀಯರು ಅಲ್ಲಿಗೆ ತಲುಪಿ ನೋಡಿದಾಗ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ವಾರ್ಡ್ ಸದಸೆ ವಿದ್ಯಾ ಮಹೇಶ್ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿ …

ಮನೆಯಿಂದ ನಗ-ನಗದು ಕಳವು ಕೆಲಸದಾಳು ವಿರುದ್ಧ ಕೇಸು

ಕಾಸರಗೋಡು: ಮನೆಯಿಂದ ಹಣ ಹಾಗೂ ಚಿನ್ನಾಭರಣ ಕಳವಿಗೀಡಾಗಿದ್ದು ಈ ಸಂಬಂಧ ಮನೆಯ ಕೆಲಸದಾಳು ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ನೀಲೇಶ್ವರ ಪೇರೂಲ್ ಆಲಪ್ಪಾಡ್ ಹೌಸ್‌ನ ಚಿನು ಮರಿಯ ಎಂಬವರ ಮನೆಯಿಂದ 21 ಗ್ರಾಂ ಚಿನ್ನ ಹಾಗೂ 17 ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಈ ಸಂಬಂಧ ನೀಲೇಶ್ವರ ನಿವಾಸಿಯಾದ ಸುಲೋಚನ ಎಂಬಾಕೆ ವಿರುದ್ಧ ಕೇಸು ದಾಖಲಿಸಲಾಗಿದೆ. 2022ರಿಂದ  2026ರ  ಎಪ್ರಿಲ್ ವರೆಗೆ ದೂರುದಾತೆಯ ತಂದೆ, ತಾಯಿ ವಾಸಿಸುವ ಮನೆಯಲ್ಲಿ ಸುಲೋಚನ ಕೆಲಸಕ್ಕಿದ್ದಳೆನ್ನಲಾಗಿದೆ. ಈ ಕಾಲಾವಧಿಯಲ್ಲಿ ಮನೆಯಿಂದ …

ಮನೀಶ್ ಕೀರ್ತೇಶ್ವರರ ಕುಟುಂಬಕ್ಕೆ ಲಾಟರಿ ಮಜ್ದೂರ್ ಸಂಘದಿಂದ ಸಹಾಯಹಸ್ತ

ಮಂಜೇಶ್ವರ: ಇತ್ತೀಚೆಗೆ ರೈಲು ಅಪಘಾತದಲ್ಲಿ ಮೃತಪಟ್ಟ ಮಂಜೇಶ್ವರ ಕೀರ್ತೇಶ್ವರ ನಿವಾಸಿ ಮನೀಶ್ ಸ್ಮರಣಾರ್ಥ ಕೇರಳ ಲಾಟರಿ ಮಜ್ದೂರ್ ಸಂಘ ತಲಪಾಡಿ ಘಟಕದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ತಲಪಾಡಿಯಲ್ಲಿ ನಡೆಯಿತು. ಬಿ.ಎಂ.ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಯಶವಂತಿ ಬೆಜ್ಜ, ಕೇರಳ ಲಾಟರಿ ಮಜ್ದೂರ್ ಸಂಘ ಜಿಲ್ಲಾ ಕಾರ್ಯ ದರ್ಶಿ ಬಾಬುಮೋನ್ ಚೆರ್ಕಳ ನುಡಿನಮನ ಸಲ್ಲಿಸಿದರು. ಪ್ರದೀಷ್ ತಲಪಾಡಿ ಅಧ್ಯಕ್ಷತೆ ವಹಿಸಿದ್ದರು. ಅಗಲಿದ ಮನೀಶ್‌ರ ಕುಟುಂಬಕ್ಕೆ ಕಾರ್ಮಿಕರು ಸಂಗ್ರಹಿಸಿದ ಮೊತ್ತ ವನ್ನು ಹಸ್ತಾಂತರಿಸಲಾಯಿತು. ಬಿ.ಎಂ.ಎಸ್ ಕೇರಳ ಲಾಟರಿ …

ಅಬ್ದುಲ್ ಗಫೂರ್ ನಿಧನ

ಮೊಗ್ರಾಲ್: ಅಸೌಖ್ಯ ತಗಲಿ ಕಣ್ಣೂರು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೊಪ್ಪಳಂ ಹೌಸ್ ನಿವಾಸಿ ಅಬ್ದುಲ್ ಗಫೂರ್ (55) ನಿಧನ ಹೊಂದಿದರು. ಮೃತರು ಪತ್ನಿ ಮಿಸ್ರಿಯ, ಪುತ್ರಿ ಇವಶೇಸ, ಸಹೋದರ ಮುನೀರ್, ಸಹೋ ದರಿಯ ರಾದ ಆಯಿಶಾ, ಸುಹ್ರ, ಶರೀಫ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.