ಕೋಟ್ಯಂತರ ರೂ. ಮೌಲ್ಯದ 2 ಕಿಲೋ ಎಂಡಿಎಂಎ ವಶ: ಬಂದ್ಯೋಡು ನಿವಾಸಿ ಸಹಿತ ಮೂವರ ಬಂಧನ: ಕಾರು, ಆಟೋ ರಿಕ್ಷಾ ಕಸ್ಟಡಿಗೆ
ಕುಂಬಳೆ: ಪಂಜಾಬ್‌ನಿಂದ ಕೊರಿಯರ್ ಮುಖಾಂತರ ತಲುಪಿಸಿದ ಕೋಟ್ಯಂತರ ರೂಪಾಯಿ ಮೌಲ್ಯದ ಎರಡು ಕಿಲೋ ಎಂಡಿಎಂಎ ಸಹಿತ ಮೂರು ಮಂದಿ ಸೆರೆಗೀಡಾಗಿದ್ದಾರೆ. ಬಂದ್ಯೋಡಿನ ಅಫೀಲ್, ಮಂಗಳೂರು ನಿವಾಸಿಗಳಾದ ಸಿಯಾವುಲ್ಲ, ಅಲ್ತಾಫ್ ಎಂಬಿವರು ಸೆರೆಗೀಡಾದವರಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ನಾರ್ಕೋಟಿಕ್ ಸೆಲ್ ಡಾನ್ಸಾಪ್ ಟೀಂಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ಮಂಗಳೂರು ಪೊಲೀ ಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕವಸ್ತು ಸಹಿತ ಮೂವರನ್ನು ಸೆರೆಹಿಡಿಯಾಗಿದೆ. ಇತ್ತೀಚೆಗೆ ಎಂಡಿಎಂಎ ಸಹಿತ ಸೆರೆಗೀಡಾದ ಓರ್ವನಿಂದ ಲಭಿಸಿದ ಮಾಹಿತಿಯ ಪ್ರಕಾರ ಈ ಮಾದಕವಸ್ತು ಬೇಟೆ …