ಪೊಲೀಸರನ್ನು ಕಂಡು ಪರಾರಿಯಾದ ಕಾರು ಅಂಗಡಿ ವರಾಂಡಕ್ಕೆ ಢಿಕ್ಕಿ: ಎಂಡಿಎಂಎ, ಗಾಂಜಾ ಸಹಿತ 3 ಮಂದಿ ಸೆರೆ

ಉಪ್ಪಳ: ಮಾದಕವಸ್ತು ಬೇಟೆಗಿಳಿದ ಪೊಲೀಸರನ್ನು ಕಂಡು ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ನಿಯಂತ್ರಣ ತಪ್ಪಿ ಅಂಗಡಿಯ ವರಾಂಡಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಬಳಿಕ ಪೊಲೀಸರು ಕಾರನ್ನು ತಪಾಸಣೆ ನಡೆಸಿದಾಗ ಗಾಂಜಾ, ಎಂಡಿಎಂಎ ಪತ್ತೆಯಾಗಿದ್ದು, ಈ ಸಂಬಂಧ ಕಾರಿನಲ್ಲಿದ್ದ ಮೂವರನ್ನು ಬಂಧಿಸಲಾಗಿದೆ. ಉಪ್ಪಳ ಮಜಲ್  ಅರಬ್ ಕೋಟೇಜ್‌ನ ಮೊಹಮ್ಮದ್ ಅಯಾಸ್ (35), ಉಪ್ಪಳ ಬಪ್ಪಾಯಿತೊಟ್ಟಿ ಬಾತಿಷ ಹೌಸ್‌ನ ಅಮೀರ್ ಬಿ.ಎಂ (43),  ಮಂಗಲ್ಪಾಡಿ ಅಡ್ಕ ಫಾರೂಕ್ ಮಂಜಿಲ್‌ನ ಉಮ್ಮರ್ ಫಾರೂಕ್ (35) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರು ಸಂಚರಿಸುತ್ತಿದ್ದ …

5 ಕೋಟಿ ರೂ. ಮೌಲ್ಯದ ಚರಸ್ ಪತ್ತೆ: ಕಾಸರಗೋಡು ನಿವಾಸಿ ಸೆರೆ

ಕಾಸರಗೋಡು: ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆಯೊಂದರಲ್ಲಿ ಐದು ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯವಾದ ಚರಸ್ಸ್ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನೀಲೇಶ್ವರ ಚಿರಪುರತ್ ನಿವಾಸಿ ವೆಳ್ಳಿಕ್ಕೋತ್ ಮುಹಮ್ಮದ್ ಸಿರಾಜುದ್ದೀನ್ (25) ಬಂಧಿತ ಆರೋಪಿ. ಎರ್ನಾಕುಳಂ ನೆಡುಂಬಾಶ್ಶೇರಿಯ ಹೋಟೆಲೊಂದರಲ್ಲಿ ಮೊಹಮ್ಮದ್ ಸಿರಾಜುದ್ದೀನ್ ಬಾಡಿಗೆ ಕೊಠಡಿ ಪಡೆದುಕೊಂಡಿದ್ದನು. ಆತ ಮಾದಕ ದ್ರವ್ಯ ಸಾಗಿಸುತ್ತಿರುವ ಬಗ್ಗೆ ಗುಪ್ತ ಮಾಹಿತಿ ಲಭಿಸಿದ ನೆಡುಂಬಾಶ್ಶೇರಿ ಪೊಲೀಸರು ಮತ್ತು ಡ್ಯಾನ್ಸಾಪ್ ತಂಡ ಜಂಟಿಯಾಗಿ ಹೋಟೆಲ್‌ನಲ್ಲಿ ನಿನ್ನೆ ನಡೆಸಿದ ಪರಿಶೀಲನೆಯಲ್ಲಿ ಆರೋಪಿ …

ನಗರದಲ್ಲಿ ಚರ್ಮರೋಗ ತಜ್ಞರ ಕ್ಲಿನಿಕ್‌ಗೆ ಕಳ್ಳರ ದಾಳಿ

ಕಾಸರಗೋಡು: ನಗರದಲ್ಲಿ ಕ್ಲಿನಿಕ್‌ವೊಂದಕ್ಕೆ ಕಳ್ಳರು ನುಗ್ಗಿ ಹಣ ಹಾಗೂ ಮೊಬೈಲ್ ಫೋನ್ ದೋಚಿದ್ದಾರೆ. ನಗರದ ನಾಯಕ್ಸ್ ರಸ್ತೆಯಲ್ಲಿರುವ ಚರ್ಮರೋಗ ತಜ್ಞ ಡಾ| ನರಹರಿಯವರ ಕ್ಲಿನಿಕ್‌ನಿಂದ ಕಳವು ನಡೆದಿದೆ. ಕ್ಲಿನಿಕ್‌ನ ಕಪಾಟಿನ ಲ್ಲಿಟ್ಟಿದ್ದ 25,000 ರೂಪಾಯಿ, ಒಂದು ಮೊಬೈಲ್ ಫೋನ್ ಹಾಗೂ ಸಿಸಿ ಟಿವಿಯ ಉಪಕರಣಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಇಂದು ಬೆಳಿಗ್ಗೆ ಕ್ಲಿನಿಕ್‌ನ ಶುಚೀಕರಣ ನೌಕರೆ ತಲುಪಿದಾಗ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ಅವರು ನೀಡಿದ ಮಾಹಿತಿಯಂತೆ ಡಾ| ನರಹರಿ ತಲುಪಿ ಪೊಲೀಸರಿಗೆ ದೂರು …

ಬೈಕ್‌ನಲ್ಲಿ ಸಾಗಿಸಿದ ಎಂಡಿಎಂಎ ಸಹಿತ ಇಬ್ಬರು ಬದಿಯಡ್ಕದಲ್ಲಿ ಸೆರೆ

ಬದಿಯಡ್ಕ: ಬದಿಯಡ್ಕ ಪೊಲೀಸ್ ಹಾಗೂ ಜಿಲ್ಲಾ ನಾರ್ಕೋಟಿಕ್ ಸೆಲ್ ಡಾನ್ಸಾಪ್ ಟೀಂ ನಡೆಸಿದ ಕಾರ್ಯಾಚರಣೆಯಲ್ಲಿ  ಎಂಡಿಎಂಎ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಕುಂಬ್ಡಾಜೆ ಏತಡ್ಕ ಮಲ್ಲಾರ ಎಂಬಲ್ಲಿನ ಎಂ. ವಿನೀತ್ (22), ಕುಂಬ್ಡಾಜೆ ಅಲ್‌ಅಮೀನ್ ಮಂಜಿಲ್‌ನ ಅಹಮ್ಮದ್ ಸನಾಫರ್ (30) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಬದಿಯಡ್ಕ ಎಸ್‌ಐ ಟಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಇವರನ್ನು ಬಂಧಿಸ ಲಾಗಿದೆ. ವಿನೀತ್‌ನ ಕೈಯಿಂದ 4 ಗ್ರಾಂ, ಅಹಮ್ಮದ್ ಸನಾಫರ್‌ನಿಂದ 0.50 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ …

ನಕಲಿ ಸೌಂದರ್ಯವರ್ಧಕ: ಆರಿಕ್ಕಾಡಿ ನಿವಾಸಿ ಮನೆಗೆ ಅಧಿಕಾರಿಗಳ ದಾಳಿ

 ಕುಂಬಳೆ: ಕುಂಬಳೆಯಲ್ಲಿ ಕಾರ್ಯಾಚರಿಸುತ್ತಿದ್ದ ಫೇಸ್ ಕ್ರೀಂ ವಿತರಣೆ ಕಂಪೆನಿಯ ಪಾಲುದಾರ ನೋರ್ವನ ಮನೆಗೆ ನಿನ್ನೆ ಡ್ರಗ್ಸ್ ಕಂಟ್ರೋಲ್ ಗುಪ್ತಚರ ದಳ ದಾಳಿ ನಡೆಸಿದೆ. ಆರಿಕ್ಕಾಡಿ ಛತ್ರಂಪಳ್ಳ  ನಿವಾಸಿಯ ಮನೆಗೆ ದಾಳಿ ನಡೆಸಿರುವುದಾಗಿಯೂ ಆತ ಈ ವೇಳೆ ಅಲ್ಲಿರಲಿಲ್ಲ. ಅಲ್ಲಿಂದ ಯಾವುದೇ ವಸ್ತುಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಕುಂಬಳೆ ಶಾಲೆ ರಸ್ತೆಯ ವ್ಯಾಪಾರ ಸಮುಚ್ಛಯದಲ್ಲಿ ಕಾರ್ಯಾಚರಿಸುತ್ತಿದ್ದ ಫೇಸ್ ಕ್ರೀಂ ವಿತರಣೆ ಕಂಪೆನಿಯ ಕುರಿತು ಹೆಚ್ಚಿನ ಮಾಹಿತಿ  ಸಂಗ್ರಹಕ್ಕಾಗಿ ತನಿಖೆ ಮುಂದುವರಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ …

ಮದ್ಯ ಬಾರ್‌ನಲ್ಲಿ ಹೊಡೆದಾಟ: ಗಾಯಗೊಂಡ ವ್ಯಕ್ತಿ ಸಾವು; ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲು

ಕಾಸರಗೋಡು: ಮದ್ಯ ಬಾರ್‌ನಲ್ಲಿ ನಡೆದ ಹೊಡೆದಾಟದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಚೆರುವತ್ತೂರು ತಿಮಿರಿ ಚಂಬ್ರಕಾನದ ಸಿ.ವಿ. ಮನ್ಸೂರ್ ಅಲಿ (50) ಸಾವನ್ನಪ್ಪಿದ ವ್ಯಕ್ತಿ. ಕಳೆದ ಶನಿವಾರ ಚೆರುವತ್ತೂರು ಞಾಣಕೈಯ ಬಾರ್‌ನಲ್ಲಿ ಮನ್ಸೂರ್ ಅಲಿ ಮದ್ಯ ಸೇವಿಸುತ್ತಿದ್ದ ವೇಳೆ ಹಣದ ವಿಷಯದಲ್ಲಿ ಅವರು ಮತ್ತು ಇತರ ನಾಲ್ಕು ಮಂದಿ ಮಧ್ಯೆ ಹೊಡೆದಾಟ ನಡೆದಿತ್ತು. ಅದಾದ ಮರು ದಿನ ಮನ್ಸೂರ್ ಅಲಿ ಅದೇ ಬಾರ್‌ನ ಎದುರುಗಡೆಯ ಚರಂಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಅವರನ್ನು …

ಮಲೆಯಾಳಿಗರ ವಿರುದ್ಧ  ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹರ ಆಕ್ಷೇಪ ಪರಾಮರ್ಶೆ ಖಂಡನೀಯ- ಶಾಸಕ ಎಕೆಎಂ ಅಶ್ರಫ್

ಕಾಸರಗೋಡು: ಕೇರಳೀಯರಿಗೆದುರಾಗಿರುವ ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹರ ಆಕ್ಷೇಪ ಪರಾಮರ್ಶೆಗಳು ಅತ್ಯಂತ ಖಂಡನೀಯ ಹಾಗೂ ಪ್ರತಿಭಟನಾರ್ಹವಾಗಿದೆ ಎಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಈ ರೀತಿಯಲ್ಲಿ ಪರಾಮರ್ಶಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಸು ದಾಖಲಿಸಬೇಕೆಂದು ಆಗ್ರಹಿಸಿ ಕರ್ನಾಟಕ ಮುಖ್ಯಮಂತ್ರಿ, ಗೃಹ ಸಚಿವರಿಗೆ ಇ-ಮೇಲ್ ಮೂಲಕ ದೂರು ನೀಡಿರುವುದಾಗಿ ಶಾಸಕರು ತಿಳಿಸಿದ್ದಾರೆ. ಕೇರಳೀಯರು ತಲುಪಿ ಕರ್ನಾಟಕದ ಸಂಸ್ಕೃತಿ ನಾಶಪಡಿಸುತ್ತಿದ್ದಾರೆಂದು, ಗುಂಡ್ಲುಪೇಟೆಯ ಅರ್ಧದಷ್ಟು ಕೇರಳೀಯರು ಸ್ವಾಧೀನಪಡಿಸಿರುವುದಾಗಿಯೂ, ಕೊಡಗು ಸಂಪೂರ್ಣವಾಗಿ ಮಲೆಯಾಳಿಗರ ಅಟ್ಟಹಾಸವಾಗಿದೆ ಎಂದು ದ್ವೇಷ …

ಕುಂಬಳೆ ಪಂಚಾಯತ್ ಕೇರಳೋತ್ಸವ: ಪಂಚಾಯತ್ ಅಧ್ಯಕ್ಷರ ನಿಲುವು ವಿರುದ್ಧ ಒಲಿವ್ ಕ್ಲಬ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಿಂದ ಸಂದೇಶ

ಕುಂಬಳೆ: ಕುಂಬಳೆ ಪಂಚಾಯತ್ ಕೇರಳೋತ್ಸವದಲ್ಲಿ ಆವೇಶ ಹೆಚ್ಚಿದಾಗ ಪಂಚಾಯತ್ ಅಧ್ಯಕ್ಷ ಮೈದಾನಕ್ಕಿಳಿದು ನಡೆಸಿದ ಪ್ರದರ್ಶನದಲ್ಲಿ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಎರಡು ವರ್ಷದ ಬಳಿಕ ಪಂಚಾಯತ್ ಅಧ್ಯಕ್ಷ ಎಂದು ತೀರ್ಮಾನಿಸಿರುವ ಎ.ಕೆ. ಆರೀಫ್‌ಗೆ ಯಾವುದೇ ಪಾಲು ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಸಂದೇಶದಲ್ಲಿ ಅವರು ತಿಳಿಸಿದ್ದಾರೆ. ತನಗೆ ಮಾತ್ರವಲ್ಲ, ಇತರ ಸ್ಥಾಯಿ ಸಮಿತಿ ಅಧ್ಯಕ್ಷರಿಗೂ ಈ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲವೆಂದು ಆರೀಫ್ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಓರ್ವ ಆಟಗಾರನ ವಿಳಾಸದ ಬಗ್ಗೆ ಉಂಟಾದ …

ಇಸ್ರೇಲ್‌ಗೆ ತೆರಳುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷೆ  ಎಂ.ಎಲ್. ಅಶ್ವಿನಿಗೆ ಬೀಳ್ಕೊಡುಗೆ

ಕಾಸರಗೋಡು: ಭಾರತದ ಯುವ ರಾಜಕೀಯ ನಾಯಕತ್ವದ ಪ್ರತಿನಿಧಿಯಾಗಿ ಇಸ್ರೇಲ್‌ಗೆ ಅಧಿಕೃತ ಪ್ರವಾಸ ಕೈಗೊಳ್ಳುತ್ತಿರುವ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿಯವರಿಗೆ ಬಿಜೆಪಿ ಕಾಸರಗೋಡು ಮಂಡಲ ಸಮಿತಿ ನೇತೃತ್ವದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಕೇರಳದಿಂದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೂಪ್ ಆಂಟನಿ, ರಾಜ್ಯ ಉಪಾಧ್ಯಕ್ಷ ಶೋನ್ ಜೋರ್ಜ್ ಅವರನ್ನೊಳಗೊಂಡ 16 ಮಂದಿಯ ನಿಯೋಗದ ಪ್ರತಿನಿಧಿಯಾಗಿ ಅಶ್ವಿನಿ ಇಸ್ರೇಲ್‌ಗೆ ತೆರಳುತ್ತಿದ್ದಾರೆ. ಡಿಸೆಂಬರ್ 7ರಂದು ತಂಡ ಭಾರತಕ್ಕೆ ಹಿಂತಿರುಗಲಿದೆ. ಪ್ರವಾಸದ ಅಂಗವಾಗಿ ನಿಯೋಗವು ಜೆರುಸಲೇಂ, ಟೆಲ್‌ಅವೀವ್, ಗಾಜಾ, ಹೈಫ ಮೊದ ಲಾದ …

ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳಿಗೆ ಇಂದು ಚಾಲನೆ: ಪೆರಿಯದಲ್ಲಿ ಗೆಜ್ಜೆ ಕಲರವ

ಕಾಸರಗೋಡು: ಪೆರಿಯ ಶಾಲೆಯಲ್ಲಿ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ಇಂದು ಆರಂಭಗೊಂಡಿತು. ಇನ್ನು ಮೂರು ದಿನ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸುವರು. ಒಪ್ಪನ, ವಟ್ಟಪ್ಪಾಟ್, ನಾಟಕ, ವೃಂದವಾದ್ಯ, ಭರತನಾಟ್ಯ, ಸಾಮೂಹಿಕ ನೃತ್ಯ, ಓಟ್ಟಂತುಳ್ಳಲ್, ಕೂಚುಪುಡಿ ಮೊದಲಾದ ನೃತ್ಯ ಸ್ಪರ್ಧೆಗಳು ಅಲ್ಲದೆ ಏಕಪಾತ್ರಾಭಿನಯ, ಭಾಷಣ, ಮಿಮಿಕ್ರಿ, ಬ್ಯಾಂಡ್ ಮೇಳ, ಶಾಸ್ತ್ರೀಯ ಸಂಗೀತ ಮೊದಲಾದ ಸ್ಪರ್ಧೆಗಳು ನಡೆಯಲಿದೆ. ಇಂದು ಸಂಜೆ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಕಲೋತ್ಸವವನ್ನು ಔಪಚಾರಿಕವಾಗಿ ಉದ್ಘಾಟಿಸುವರು. ಇದುವರೆಗೆ ನಡೆದ …